ಕರ್ನಾಟಕದಲ್ಲಿ ತಡವಾಗಿ ಆರಂಭವಾದ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿಯದೇ ಬರಗಾಲ ಸೃಷ್ಟಿಗೆ ಕಾರಣವಾಗಿದೆ. ಆಗಾಗ ಅಲ್ಲೊಮ್ಮೆ ಇಲ್ಲೊಮ್ಮೆ ಮಾತ್ರವೇ ಮಳೆ ಆಗುತ್ತಿದ್ದು, ರಾಜ್ಯದ ಬಹುತೇಕ ಭಾಗದಲ್ಲಿ ಬರಗಾಲ ಆವರಿಸಿದೆ. ಬೆಳೆ ಬಳೆದ ರೈತರು ಕಂಗಾಲಾಗಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ನಾಳೆ ಮಹತ್ವದ ಸಭೆ ನಡೆಸಲಿದ್ದು, ಹೇಳಿದಂತೆ ಅನೇಕ ತಾಲೂಕುಗಳನ್ನು ಬರಗಾಲ ಪ್ರದೇಶಗಳೆಂದು ಘೋಷಿಸಲಿದೆ.
ಮುಂಗಾರು ಈ ವರ್ಷ ತೀವ್ರವಾಗಿ ದುರ್ಬಲಗೊಂಡಿದೆ. ಮಳೆಯನ್ನೇ ನೆಚ್ಚಿಕೊಂಡು ಉಳುಮೆ ಮಾಡಿದ್ದವರ ಪೈಕಿ ಹಲವುರು ಈಗಾಗಲೇ ಬೆಳೆ ಒಣಗಿದ್ದಕ್ಕೆ, ರೋಗ ಉಂಟಾಗಿದ್ದಕ್ಕೆ ಟ್ರ್ಯಾಕ್ಟರ್ ಹೊಡೆಸಿದ್ದಾರೆ. ಬೀಜ, ಗೊಬ್ಬರಕ್ಕೆಲ್ಲ ಖರ್ಚು ಮಾಡಿದ ಹಣ ವ್ಯರ್ಥವಾಗಿದೆ. ರೈತರು ಪರಿಹಾರದ ಹಣಕ್ಕಾಗಿ ಸರ್ಕಾರತದತ್ತ ನೋಡುತ್ತಿದ್ದಾರೆ. ಮಳೆ ನಂಬಿದ ರೈತರಿಗೆ ಮೋಸವಾಗಿದ್ದು, ರಾಜ್ಯ ಸರ್ಕಾರ ತಾಲೂಕುಗಳಲ್ಲಿ ಸರ್ವೆ ನಡೆಸಿ ರಾಜ್ಯದ ಸಚಿವ ಸಂಪುಟ ಉಪಸಮಿತಿ ಸಭೆ ನಡೆಸಿದೆ. ಇದೀಗ ಸೋಮವಾರ ಮಹತ್ವದ ಸಭೆ ನಡೆಯಲಿದೆ. ಅಂದು ಸುಮಾರು 100ಕ್ಕೂ ಅಧಿಕ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಿದೆ. ಅಧಿಕೃತ ಮಾಹಿತಿಗೆ ಒಂದು ದಿನ ಕಾಯಬೇಕಿದೆ.
ಭೀಕರ ಬರ, ಬೆಳೆ ನಾಶ, ಪರಿಹಾರದತ್ತ ರೈತರ ಚಿತ್ತ
ಜೂನ್ ನಲ್ಲಿ ಬರಬೇಕಿದ್ದ ಮಳೆ ಜುಲೈನಲ್ಲಿ ಸಕ್ರಿಯವಾಗಿತ್ತು. ಎರಡು ವಾರದ ನಂತರ ಮರೆಯಾಗಿ ಮತ್ತೆ ಆಗಸ್ಟ್ ನಲ್ಲಿ ಆಗೋಮ್ಮೆ ಈಗೊಮ್ಮೆ ಬಂದು ಮರೆಯಾಗಿದ್ದು, ಬಿಟ್ಟರೆ ನಿರೀಕ್ಷೆಯಷ್ಟು ಮಳೆ ಆಗಿಲ್ಲ. ಇದರಿಂದ ಜಮೀನಿನಲ್ಲಿ ಮೊಣಕಾಲುದ್ದ ಪೈರಿಗೆ ನೀರಿಲ್ಲದೇ ನಾಶವಾಗಿದೆ. ಅನೇಕ ಕಡೆಗಳಲ್ಲಿ ರೈತರು ಒಣಗಿದ ಪೈರನ್ನು ನಾಶ ಪಡಿಸಿದ್ದಾರೆ, ಹರಗಿಸಿದ್ದಾರೆ. ಇನ್ನೂ ಕೆಲವರು ಧನಕರುಗಳು ಮೇಯಲಿ ಎಂದು ಬಿಟ್ಟು ಬಿಟ್ಟಿದ್ದಾರೆ. ಭೀಕರ ಬರ ಎದುರಿಸಿದ್ದಾರೆ. ಅವರೆಲ್ಲರಿಗೆ ಈಗ ಸರ್ಕಾರ ಆಸರೆಯಾಗಬೇಕಿದೆ. ಸೂಕ್ತ ಪರಿಹಾರ ಧನ ಒದಗಿದಬೇಕಿದೆ.
ಈ ಹಿಂದಿನ ಮೂರು ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಪ್ರಹಾಹ, ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ವಾಡಿಕೆ ಕೆಲವೊಮ್ಮೆ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಿತ್ತು. ಎಲ್ಲೆಡೆ ಅಂತರ್ಜಲ ಹೆಚ್ಚಾಗಿತ್ತು. ಕೆರೆ ಕಟ್ಟೆಗಳು ತುಂಬಿದ್ದವು. ಕಾವೇರಿ ನೀರು ಸಹ ಭರ್ತಿಯಾಗಿತ್ತು. ಆದರೆ ಈ ಬಾಗಿ ಮಳೆ ಕೈಕೊಟ್ಟಿದ್ದರಿಂದ ಉಚಿತ ಯೋಜನೆಗಳನ್ನು ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಗ್ರಾಮೀಣ ಭಾಗದಲ್ಲಿ ರೈತರು ಸಾಲಬಾಧೆ ತಾಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಸರ್ಕಾರ ತಾಲೂಕು ಮಟ್ಟದಲ್ಲಿ ಸಮೀಕ್ಷೆ ನಡೆಸಿತ್ತು, ಸಭೆಗಳನ್ನು ಮಾಡಿತ್ತು ಎಂದು ತಿಳಿದು ಬಂದಿದೆ.
ಕೇಂದ್ರ ಸರ್ಕಾರಕ್ಕೆ ಪರಿಹಾರ ಘೋಷಣೆಗೆ ಸಿಎಂ ಪತ್ರ
ಉಪಸಮಿತಿ ವರದಿ ನೋಡಿಕೊಂಡು ಸರ್ಕಾರ ಬರಗಾಲ ತಾಲೂಕುಗಳನ್ನು ಘೋಷಣೆ ಮಾಡಲಿದ್ದೇವೆ. ಕರ್ನಾಟಕದ ಜಲಾಶಯಗಳಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಈ ಭಾಗದಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ಕೃಷ್ಣ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆ ಹಿನ್ನೆಲೆಯಲ್ಲಿ 113 ತಾಲೂಕುಗಳನ್ನು ಬರಗಾಲ ಪ್ರದೇಶಗಳೆಂದು ಘೋಷಿಸಿದ್ದೇವೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪರಿಹಾರ ಘೋಷಣೆಗೆ ಮನವಿ ಪತ್ರೆ ಬರೆಯಲಿದ್ದೇನೆ ಎಂದು ಆಲಮಟ್ಟಿಯಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.
ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ.? ತಕ್ಷಣ ಈ ಕೆಲಸ ಮಾಡಿ.!
ಸೆಪ್ಟೆಂಬರ್ 3ರಿಂದ ರಾಜ್ಯದ ಈ ಭಾಗಗಳಲ್ಲಿ ಭಾರಿ ಮಳೆ
ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಪಡೆಯಬೇಕೆ.? ಹೀಗೆ ಮಾಡಿ
ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಲು ಹೀಗೆ ಮಾಡಿ