ಗೃಹಲಕ್ಷ್ಮಿ ಫಲಾನುಭವಿಗಳ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಚೆಕ್ ಮಾಡಲು ಹೀಗೆ ಮಾಡಿ

ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಾದ ಮಹಿಳೆಯರಿಗೆ 2,000 ರೂ. ಆರ್ಥಿಕ ನೆರವು ನೀಡುವ ಗೃಹಲಕ್ಷ್ಮೀ ಯೋಜನೆಗೆ ಆಗಸ್ಟ್ 30 ರಂದು ನಾಳೆ ಮೈಸೂರಿನಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಕಾಂಗ್ರೆಸ್ ಸರ್ಕಾರಕ್ಕೆ 100 ದಿನ ತುಂಬಿದ ಸಂದರ್ಭದಲ್ಲಿಯೇ ಸಿಎಂ ಮೈಸೂರು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಉದ್ಘಾಟನೆಗೊಳ್ಳಲಿದೆ.ನಾಳೆ ಸಿಎಂ ಸಿದ್ದರಾಮಯ್ಯ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ 2000 ಹಣ ವರ್ಗಾವಣೆ ಮಾಡಲಿದ್ದಾರೆ.

ಇದೀಗ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಲಿಸ್ಟ್ ನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಈ ವಿಧಾನದ ಮೂಲಕ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ..ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಬಹುದು.

ಚೆಕ್ ಮಾಡುವ ವಿಧಾನ

1) ಮೊದಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಡಬೇಕು. https://ahara.kar.nic.in/WebForms/Show_Village_List.aspx

2) ಮೆನು ಬಾರ್ ಅಲ್ಲಿ ‘E service’ ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ

3) ನಂತರ ಪೇಜ್ ನ ಎಡಭಾಗದಲ್ಲಿ ಎಲ್ಲಾ ಸೇವೆಗಳ ಲಿಸ್ಟ್ ಬರುತ್ತದೆ. ಅದರಲ್ಲಿ ಇ-ರೇಷನ್ ಕಾರ್ಡ್ ಎನ್ನುವುದನ್ನು ಸೆಲೆಕ್ಟ್ ಮಾಡಿ ಮತ್ತಷ್ಟು ಸೇವೆಗಳ ವಿವರ ಬರುತ್ತದೆ ಅದರಲ್ಲಿ ವಿಲೇಜ್ ಲಿಸ್ಟ್ ಎನ್ನುವುದನ್ನು ಕ್ಲಿಕ್ ಮಾಡಿ. ಅಲ್ಲಿ ಜಿಲ್ಲಾವಾರು ಲಿಂಕ್ ಇರುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್ ಸೆಲೆಕ್ಟ್ ಮಾಡಿ. ನಂತರ ತಾಲೂಕು, ಗ್ರಾಮ ಪಂಚಾಯತ್, ವಿಲೇಜ್ ಸೆಲೆಕ್ಟ್ ಮಾಡಿ ನಂತರ GO ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಊರಿನ ಫಲಾನುಭವಿಗಳ ಪಟ್ಟಿ ಬರುತ್ತದೆ. ಅಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಬಹುದು. ಒಂದು ವೇಳೆ ಪಟ್ಟಿ ಓಪನ್ ಆಗಿದ್ದರೆ ಸರ್ವರ್ ತೊಂದರೆ ಇರುತ್ತದೆ. ಸ್ವಲ್ಪ ಸಮಯದ ಬಳಿಕ ಸರ್ಚ್ ಮಾಡಿ.

ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಪಡೆಯಬೇಕೆ.? ಹೀಗೆ ಮಾಡಿ

ಗಮನಿಸಿ : ಈ ಮಹಿಳೆಯರಿಗೆ ಮಾತ್ರ ‘ಗೃಹಲಕ್ಷ್ಮಿ’ ಯೋಜನೆಯ ಹಣ ಬರಲ್ಲಾ | scheme cancelled

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಗೃಹಲಕ್ಷ್ಮಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಳ್ಳಲಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ನಾಳೆ ಐದು ಜಿಲ್ಲೆಯ ಫಲಾನುಭವಿಗಳ ಖಾತೆಗೆ 2 ಸಾವಿರ ರೂ. ಖಾತೆಗೆ ವರ್ಗಾವಣೆ ಮಾಡಲಿದ್ದಾರೆ. ರಾಹುಲ್ ಗಾಂಧಿ ದೆಹಲಿಯಿಂದ ಬುಧವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ಅಲ್ಲಿಂದ ಮೈಸೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ಚೆಕ್ ಮಾಡಿ

ಹಂತ 1: ಅಧಿಕೃತ ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿ: sevasindhuservices.karnataka.gov.in

ಹಂತ 2: Check Application/Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ

ಹಂತ 3: ನಿಮ್ಮ ಅಪ್ಲಿಕೇಶನ್‌ನ ರೆಫೆರೆನ್ಸ್ ನಂಬರ್ ಅಥವಾ ಇತರ ಸಂಬಂಧಿತ ಮಾಹಿತಿಯಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ.

ಹಂತ 4: ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು ವಿವರಗಳನ್ನು ಸಬ್‌ಮಿಟ್ ಮಾಡಿ, ನೀವು ಯೋಜನೆಯ ಫಲಾನುಭವಿಗಳ ಲೀಸ್ಟ್‌ನಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಿ.

ಅನಾವೃಷ್ಟಿಯಿಂದ ರೈತರಿಗೆ ಬೆಳೆ ಕಾಪಾಡಲು ಕೃಷಿ ಇಲಾಖೆಯಿಂದ ಸಲಹೆಗಳು

ಈ ಮಹಿಳೆಯರಿಗೆ 2000 ರೂ ಹಣ ಪಡೆಯುವ ಭಾಗ್ಯ ಇರಲ್ಲ :

1) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ಸಹಾಯಧನ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.

2) ನಾಲ್ಕು ಚಕ್ರದ ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಮಹಿಳೆಯರಿಗೆ 2000 ಹಣ ಸಿಗಲ್ಲ.
3) ಸರ್ಕಾರಿ ಹುದ್ದೆ ಹೊಂದಿರುವ ಮತ್ತು ಪೆನ್ಷನ್ ಪಡೆಯುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.
4) ಆದಾಯ ತೆರಿಗೆ, ಪ್ರೊಫೆಷನಲ್ ಟ್ಯಾಕ್ಸ್ , GST ರಿಟರ್ನ್ಸ್ ಪಾವತಿಸುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ

5) ಏಳು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.

ಕಬ್ಬಿನಲ್ಲಿ ಸಸಿ ಸುಳಿ ಕೊರಕದ ನಿಯಂತ್ರಣ ಹೇಗೆ?

ಕೃಷಿ ಸಿಂಚಾಯಿ ಯೋಜನೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

Spread positive news

Leave a Reply

Your email address will not be published. Required fields are marked *