ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಈಗ ಮತ್ತೆ ಅವಕಾಶ ನೀಡಲಾಗಿದೆ. ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಆಹಾರ ನಾಗರೀಕ ಸರಬರಾಜು ಇಲಾಖೆ ಅನುಮತಿ ನೀಡಿದೆ. ವೆಬ್ಸೈಟ್ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದು, ಅರ್ಹರು ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್ಗಳಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬಿಪಿಎಲ್ ಕಾರ್ಡ್ ಅರ್ಜಿಗೆ ಸಮಯ ನಿಗದಿ ಮಾಡಿದ್ದು, ಸಮಯ ಮಧ್ಯಾಹ್ನ 1 ರಿಂದ 3 ರ ವರೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
APL ಹಾಗೂ BPL ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದ್ದು, 01-05-2025 ರಿಂದ 05-05-2025 ರವರೆಗೆ ಸಮಯ ಮಧ್ಯಾಹ್ನ 1 ರಿಂದ 3 ರ ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಲು ಅರ್ಹತೆ
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವವರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಈಗಾಗಲೇ ಪಡಿತರ ಚೀಟಿ ಹೊಂದಿರದೇ ಇರೋರು ಅರ್ಜಿ ಸಲ್ಲಿಸಬಹುದು
ಹೊಸದಾಗಿ ಮದುವೆಯಾದ ದಂಪತಿಗಳು, ಹೊಸ ಪಡಿತರ ಚೀಟಿಗಾಗಿ ಅರ್ಜಿ ಹಾಕಬಹುದು
ಕುಟುಂಬದ ಆದಾಯದ ಮೇಲೆ ಪಡಿತರ ಚೀಟಿ ಬಿಪಿಎಲ್, ಎಪಿಎಲ್ ಎಂಬುದು ನಿರ್ಧರಿತವಾಗಿರಲಿದೆ.
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬೇಕಿರುವ ಅಗತ್ಯ ದಾಖಲೆಗಳು
- ವೋಟರ್ ಐಡಿ
- ಆಧಾರ್ ಕಾರ್ಡ್
- ವಯಸ್ಸಿನ ಪ್ರಮಾಣ ಪತ್ರ
- ಡ್ರೈವಿಂಗ್ ಲೈಸೆನ್ಸ್
- ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ಸಂಖ್ಯೆ
- ಸ್ವಯಂ ಘೋಷಿತ ಪ್ರಮಾಣ ಪತ್ರ
ಈ ಮೇಲ್ಕಂಡ ದಾಖಲೆಗಳಿದ್ದಲೇ, ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ನೀವು ಅರ್ಜಿಯನ್ನು ಸಲ್ಲಿಸಬಹುದು. ಹಾಗಾದ್ರೇ ಅರ್ಜಿ ಸಲ್ಲಿಸೋದು ಹೇಗೆ ಎನ್ನುವ ಹಂತ ಈ ಕೆಳಗಿದೆ.
ಹೊಸ ಪಡಿತರ ಚೀಟಿಗಾಗಿ ಈ ಹಂತಗಳನ್ನು ಅನುಸರಿಸಿ, ಅರ್ಜಿ ಸಲ್ಲಿಸಿ
kar.nic.in ಈ ಅಧಿಕೃತ ವೆಬ್ ಸೈಟ್ ತಾಣಕ್ಕೆ ಭೇಟಿ ನೀಡಬೇಕು.
ಈ ಜಾಲತಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀವು ಮುಖಪುಟದಲ್ಲಿನ ಇ-ಸೇವೆಗಳು ಎಂಬಲ್ಲಿ ಕ್ಲಿಕ್ ಮಾಡಿ.
ಇದಲ್ಲದೇ https://ahara.kar.nic.in/Home/EServices ತಾಣಕ್ಕೂ ನೇರವಾಗಿ ಕ್ಲಿಕ್ ಮಾಡಬಹುದಾಗಿದೆ.
ಈ ಜಾಲತಾಣದಲ್ಲಿ ಕ್ಲಿಕ್ ಮಾಡಿದ ನಂತ್ರ, ನೀವು ಇ-ಪಡಿತರ ಚೀಟಿ ಆಯ್ಕೆ. ಆ ಬಳಿಕ ಕೆಳಗಡೆ ಸ್ಕ್ರಾಲ್ ಮಾಡಿದ್ರೇ..
ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸೋ ಲಿಂಕ್ ಸಿಗಲಿದೆ. ಅಲ್ಲಿ ಕ್ಲಿಕ್ ಮಾಡಿ
ಈ ಬಳಿಕ ನೀವು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಭಾಷೆಯನ್ನು ಆಯ್ಕೆ ಮಡಿ, ಅಲ್ಲಿ ಕೇಳುವಂತ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
ನೀವು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿಕೊಂಡು ನಮೂದಿಸಿ.
ಈ ಬಳಿಕ ಅರ್ಜಿಯ ಜೊತೆಗೆ ಕೇಳುವಂತ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ ಲೋಡ್ ಮಾಡಿ, ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿ.
ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಯಾವೆಲ್ಲಾ ದಾಖಲೆಗಳು ಅಗತ್ಯ?
* ವೋಟರ್ ಐಡಿ
* ಆಧಾರ್ ಕಾರ್ಡ್
* ವಯಸ್ಸಿನ ಪ್ರಮಾಣ ಪತ್ರ
* ವಾಹನ ಚಾಲನಾ ಪರವಾನಗಿ
* ಇತ್ತೀಚಿನ ಪಾರ್ಸ್ ಪೋರ್ಟ್ ಅಳತೆಯ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಸ್ವಯಂ ಘೋಷಿತ ಪ್ರಮಾಣ ಪತ್ರ
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದೇಗೆ?
* kar.nic.in ಈ ಅಧಿಕೃತ ವೆಬ್ ಸೈಟ್ ತಾಣಕ್ಕೆ ಭೇಟಿ ನೀಡಿ
* ಮುಖಪುಟದಲ್ಲಿನ ಇ-ಸೇವೆಗಳು ಎಂಬುದರ ಮೇಲೆ ಕ್ಲಿಕ್ ಮಾಡಿ
* ಅಷ್ಟೇ ಅಲ್ಲದೆ, https://ahara.kar.nic.in/Home/EServices ವೆಬ್ಸೈಟ್ನಲ್ಲೂ ನೇರವಾಗಿ ಕ್ಲಿಕ್ ಮಾಡಬಹುದು.
* ನಂತರ ನೀವು ಇ-ಪಡಿತರ ಚೀಟಿ ಆಯ್ಕೆ ಮಾಡಿ.
* ನಂತರ ಕೆಳಗಡೆ ಸ್ಕ್ರಾಲ್ ಮಾಡಿದರೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಲಿಂಕ್ ಸಿಗಲಿದೆ
* ಅಲ್ಲಿ ಕ್ಲಿಕ್ ಮಾಡಿ ನೀವು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಭಾಷೆಯನ್ನು ಆಯ್ಕೆ ಮಡಿ.
* ಅಲ್ಲಿ ಕೇಳುವಂತ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ
* ನೀವು ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಾ ಎನ್ನುವುದನ್ನು ಆಯ್ಕೆ ಮಾಡಿಕೊಂಡು ನಮೂದಿಸಿ
* ಬಳಿಕ ಅರ್ಜಿಯ ಜೊತೆಗೆ ಕೇಳುವಂತಹ ದಾಖಲೆಗಳ ಸಾಫ್ಟ್ ಕಾಫಿಗಳನ್ನು ಅಪ್ಲೋಡ್ ಮಾಡಿ, ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಸ್ಥಗಿತವಾಗಿದ್ದೇಕೆ?:
ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಬಹುತೇಕ ಮಂದಿ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡ ಆರೋಪ ಕೇಳಿಬಂದಿತ್ತು. ಬಳಿಕ ಎಚ್ಚೆತ್ತ ಸರ್ಕಾರ ಹೊಸ ಕಾರ್ಡ್ ಅರ್ಜಿ ಸಲ್ಲಿಕೆಯನ್ನು ನಿಲ್ಲಿಸಿಬಿಟ್ಟಿತು. ಅರ್ಹರಲ್ಲದವರು ಸಹ ಬಿಪಿಎಲ್ ಕಾರ್ಡ್ಗಳನ್ನು ಪಡೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲಾಗಿದೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ನಾಗರೀಕ ಸರಬರಾಜು ಇಲಾಖೆ ಅನುಮತಿ ನೀಡಿದ್ದು, ಅರ್ಹರು ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್ಗಳಲ್ಲಿ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಲು ಇಲಾಖೆಯು ಅನುಮತಿ ನೀಡಿದ್ದು, ಅರ್ಹರು ಮೊಬೈಲ್, ಕಂಪ್ಯೂಟರ್, ಸೇವಾಸಿಂಧು ಪೋರ್ಟಲ್ಗಳಲ್ಲಿ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿ ಇನ್ನು ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಮಧ್ಯಾಹ್ನ 1 ರಿಂದ 3 ರ ವರೆಗೆ ಮಾತ್ರ ಸಮಯ ನಿಗದಿ ಮಾಡಲಾಗಿದೆ.
ಇನ್ನು ಈ ಬಾರಿ ಎಪಿಎಲ್ ಹಾಗೂ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದ್ದು, 01-05-2025 ರಿಂದ 05-05-2025 ರವರೆಗೆ ಸಮಯ ಮಧ್ಯಾಹ್ನ 1 ರಿಂದ 3 ರ ವರೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಲ್ಲದೇ ahara.kar.nic.in ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.