ಯುವ ರೈತರಿಗೆ 20ಲಕ್ಷ ಸಾಲ ಸೌಲಭ್ಯ! ಅರ್ಜಿ ಪ್ರಕ್ರಿಯೆ ಹೇಗಿದೆ ನೋಡಿ!

ಯುವ ರೈತರಿಗೆ 5 ರಿಂದ 20 ಲಕ್ಷದವರೆಗೆ ಉದ್ಯೋಗಕ್ಕೆ ಸಾಲ ಸೌಲಭ್ಯ ಇದೆಯೇ? ಹಾಗಾದರೆ ಬನ್ನಿ ಯಾವ ಯೋಜನೆ ಅಡಿಯಲ್ಲಿ ಹಣ ದೊರೆಯುತ್ತದೆ. ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯೋಣ.
ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು. ಈ ಲೇಖನದಲ್ಲಿ ಸರ್ಕಾರದಿಂದ ಯುವ ರೈತರಿಗೆ ಕೃಷಿ ಉದ್ಯಮ ಪ್ರಾರಂಭಿಸಲು ದೊರೆಯುವ ಸಹಾಯಧನ ಬಗ್ಗೆ ತಿಳಿಯೋಣ. ರೈತ ಬಾಂಧವರೇ ನಿರುದ್ಯೋಗ ಎಂಬುದು ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ ಹಾಗಾಗಿ ಸರ್ಕಾರವು ನಿರುದ್ಯೋಗವನ್ನು ಹೋಗಲಾಡಿಸಲು ಹಲವು ರೀತಿಯ ಪ್ರಯತ್ನವನ್ನು ಮಾಡುತ್ತಿದೆ.

ಯೋಜನೆ ಹೆಸರೇನು? ಎಷ್ಟು ಸಹಾಯಧನ ಸಿಗುತ್ತದೆ?

ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ರೀತಿಯ ಯೋಜನೆಗಳ ಅಡಿಯಲ್ಲಿ ಸರ್ಕಾರವು ಸಹಾಯಧನವನ್ನು ನೀಡುತ್ತಾ ಬಂದಿದೆ.
ಯುವ ರೈತರಿಗೆ 5 ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. ಸರ್ಕಾರವು ಆಯಾ ವರ್ಗದವರಿಗೆ ಅವರು ಪರಿಣಿತಿ ಹೊಂದಿರುವಂತಹ ಬಿಸಿನೆಸ್ ಶುರು ಮಾಡಿಕೊಳ್ಳಲು ಆಯಾ ಅಭಿವೃದ್ಧಿ ನಿಗಮಗಳಿಂದ ಹಾಗೂ ಸರ್ಕಾರದ ವತಿಯಿಂದ ಬಡ್ಡಿ ರಹಿತ ಸಹಾಯಧನವನ್ನು ನೀಡಲಾಗುತ್ತಿದೆ.

ಕೃಷಿಯಲ್ಲಿ ಇಚ್ಛೆ ಹಾಗೂ ಪರಿಣಿತಿ ಹೊಂದಿರುವ ಯುವ ರೈತರಿಗೆ ಸರ್ಕಾರವು ಕೃಷಿಯಲ್ಲಿ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಹಾಗೂ ಕೃಷಿ ಉತ್ಪನ್ನಗಳನ್ನು ಸಲಿಸಾಗಿ ಹಲವಾರು ವಿಭಾಗಗಳಿಗೆ ಹೆಚ್ಚಿನ ಪೂರೈಕೆ ಮಾಡಿ ಹೆಚ್ಚಿನ ಆದಾಯ ಪಡೆಯಬಹುದು.
ರೈತರೇ ನಿಮಗೆ ತಿಳಿದಿರಬಹುದು 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಕರೆಯಲಾಗುತ್ತದೆ. ಹಾಗಾಗಿ ಈ ವರ್ಷ ಸಿರಿಧಾನ್ಯ ಬೆಳೆಗಾರರಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಮಹತ್ವವನ್ನು ನೀಡಿದೆ. ದೆಹಲಿಯಲ್ಲಿ ನಡೆದಂತಹ ಸಿರಿಧಾನ್ಯಗಳ ಅಭಿವೃದ್ಧಿ ಸಭೆಯಲ್ಲಿ ಸಿರಿಧಾನ್ಯಗಳನ್ನು “ಶ್ರೀ ಅನ್ನ” ಎಂದು ಹೆಸರಿಸಲಾಗಿದೆ.

ಯಾವ ಸಂಸ್ಥೆ ಯುವಕರಿಗೆ ಸಾಲ ಸೌಲಭ್ಯ ಹಾಗೂ ಯಾವ ಉದ್ಯೋಗಕ್ಕೆ ನೀಡುತ್ತಾರೆ?

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಿಲ್ಲೆಟ್ ರಿಸರ್ಚ್ IIMR ಇದು ಸಿರಿಧಾನ್ಯಗಳ ಅಭಿವೃದ್ಧಿಗೆ ಭಾರತದಲ್ಲಿ ಇರುವ ರಿಸರ್ಚ್ ಸೆಂಟರ್ ಆಗಿದೆ. ನ್ಯೂಟ್ರಿ ಹಬ್(nutri hub) ಮೂಲಕ ಯಾವುದೇ ಯುವ ರೈತರು ಒಂದು ಹೊಸ ಸ್ಟಾರ್ಟ್ ಅಪ್ ಶುರು ಮಾಡಲು 5 ರಿಂದ 25 ಲಕ್ಷ ರೂಗಳ ಸಹಾಯಧನವನ್ನು IIMR ನೀಡುತ್ತಿದೆ.

ಸಹಾಯಧನವನ್ನು ಪಡೆದುಕೊಳ್ಳುವುದು ಹೇಗೆ ?

ಸಹಾಯಧನ ಪಡೆಯಲು ಇಚ್ಛಿಸುವ ಯುವಕರು ತಮ್ಮದೇ ಆದ ಒಂದು ಹೊಸ ಹಾಗೂ ಉತ್ತಮ ಸ್ಟಾರ್ಟ್ಅಪ್ ಐಡಿಯಾವನ್ನು ಹೊಂದಿರಬೇಕು.
ಸ್ಟಾರ್ಟ್ ಅಪ್ ಐಡಿಯಾವನ್ನು ಡಿಟೇಲ್ ಪ್ರಾಜೆಕ್ಟ್ ರಿಪೋರ್ಟ್ ಅಂದರೆ ಸಂಪೂರ್ಣವಾಗಿ ಒಂದು ವೈಜ್ಞಾನಿಕವಾಗಿ ಫೈಲ್ ರೀತಿ ತಯಾರು ಮಾಡಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್ ನ ನ್ಯೂಟ್ರಿ ಹಬ್ ಗೆ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನೀವು ಈ ಕೆಳಗೆ ನೀಡಿರುವ ನ್ಯೂಟ್ರಿ ಹಬ್ ವೆಬ್ ಸೈಟ್ ನ ಮೂಲಕ ಪಡೆದುಕೊಳ್ಳಬಹುದಾಗಿದೆ. ನ್ಯೂಟ್ರಿ ಹಬ್ ವೆಬ್ ಸೈಟ್ ಗೆ ಭೇಟಿ ನೀಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. https://www.nutrihubiimr.com

ಸಹಾಯಧನವನ್ನು ಹೇಗೆ ನೀಡಲಾಗುತ್ತದೆ ?

ನೀವು ಸಲ್ಲಿಸಿರುವ ಸ್ಟಾರ್ಟಪ್ ಐಡಿಯಾದ ಮೇಲೆ ನಿಮಗೆ ಸಹಾಯಧನವನ್ನು ನೀಡಲಾಗುತ್ತದೆ. ಭಾರತದಾದ್ಯಂತ ಸಲ್ಲಿಸಿರುವ ಸ್ಟಾಟ್ ಅಪ್ ಐಡಿಯಾಗಳಲ್ಲಿ ಒಂದಿಷ್ಟು ನಿಗದಿಪಡಿಸಿದ ಸಂಖ್ಯೆಯಲ್ಲಿ ಉತ್ತಮ ಸ್ಟಾರ್ಟ್ ಅಪ್ ಐಡಿಯಾಗಳನ್ನು ಆಯ್ಕೆ ಮಾಡಿ ಸಹಾಯಧನವನ್ನು ನೀಡಲಾಗುತ್ತದೆ.

ಮುಖ್ಯವಾಗಿ ಈ ಯೋಜನೆಯ ಅಡಿಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಮಹತ್ವದ ಉತ್ತೇಜನ ನೀಡಿದ್ದು ಯುವಕರಿಗೆ ಇದರಿಂದ ಬಹಳಷ್ಟು ಉಪಯೋಗ ಆಗಲಿದೆ. ಇದರ ಮುಖ್ಯ ಗುರಿ ಎಂದರೆ “ಮಾರುಕಟ್ಟೆಗಳನ್ನು ಸೃಷ್ಟಿಸುವ, ಪ್ರಸ್ತುತ ಮತ್ತು ಭವಿಷ್ಯದ ಆರ್ಥಿಕ ಬೇಡಿಕೆಗಳಿಗೆ ಪ್ರತಿಕ್ರಿಯಿಸುವ ಮತ್ತು ಕೃಷಿ ಸಂಪನ್ಮೂಲದ ಬೇಸ್‌ನ ದೀರ್ಘಕಾಲೀನ ಸಮರ್ಥನೀಯತೆಯನ್ನು ಕಾಪಾಡಿಕೊಳ್ಳುವ ಬಳಕೆಗೆ ಸಿದ್ಧವಾದ ತಂತ್ರಜ್ಞಾನಗಳನ್ನು ಉತ್ಪಾದಿಸುವ ಮತ್ತು ಪ್ರಸಾರ ಮಾಡುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.” ಕಾರ್ಯತಂತ್ರದ ಪ್ರಮುಖ ಉತ್ಪಾದನೆಯು ಐಐಎಂಆರ್ (ಐಸಿಎಆರ್) ಕೇಂದ್ರೀಕೃತ ಸಂಶೋಧನಾ ಕಾರ್ಯಕ್ರಮಗಳೊಂದಿಗೆ ಸುಸಂಬದ್ಧವಾಗಿದೆ, ಇದು ಆರ್ಥಿಕ ಅವಕಾಶಗಳಿಗೆ ಪ್ರತಿಕ್ರಿಯಿಸುವ ತಂತ್ರಜ್ಞಾನಗಳನ್ನು ಗುರಿಯಾಗಿಸುತ್ತದೆ ಆದರೆ ಉತ್ಪಾದಕರನ್ನು ಮಾರುಕಟ್ಟೆಗಳಿಗೆ ಲಿಂಕ್ ಮಾಡುತ್ತದೆ ಮತ್ತು ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳು ಮತ್ತು ತಂತ್ರಜ್ಞಾನ ಪೂರೈಕೆದಾರರನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತದೆ.

Spread positive news

One thought on “ಯುವ ರೈತರಿಗೆ 20ಲಕ್ಷ ಸಾಲ ಸೌಲಭ್ಯ! ಅರ್ಜಿ ಪ್ರಕ್ರಿಯೆ ಹೇಗಿದೆ ನೋಡಿ!

  1. ನಿರುದ್ಯೋಗ ಯುವಕ ಯುವತಿಯರು ಈ ಅವಕಾಶವನ್ನು ಬಳಸಿಕೊಂಡು ಉದ್ಯೋಗ ನಡೆಸುವುದು ಒಳ್ಳೆಯದು..

Leave a Reply

Your email address will not be published. Required fields are marked *