ಇನ್ನೂ2000 ರೂ ಹಣ ಬರದೇ ಇರುವವರು ಆತಂಕ ಪಡುವ ಅಗತ್ಯವಿಲ್ಲ. ಒಂದೇ ಬಾರಿಗೆ ಕೋಟ್ಯಾಂತರ ಮಹಿಳೆಯರಿಗೆ ಹಣ ಕಳುಹಿಸುತ್ತಿರುವುದರಿಂದ ಹಣ ಜಮಾ ಆಗಿರುವುದಿಲ್ಲ ಅಥವಾ ಇನ್ಯಾವುದೋ ತಾಂತ್ರಿಕ ತೊಂದರೆ ಕಾರಣ SMS ಬಂದಿರುವುದಿಲ್ಲ. ಮಾಹಿತಿ ಪ್ರಕಾರ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಹಲವಾರು ಮಂದಿ ಈ ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ.
1) KYC ಅಪ್ಡೇಟ್ ಮಾಡಿಸದವರು, ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮತ್ತು NPCI ಮ್ಯಾಪಿಂಗ್ ಮಾಡಿಸದವರಿಗೆ ಹಣ ಬರುವುದಿಲ್ಲ ಎಂದು ಹೇಳಲಾಗಿದೆ.
2) ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತಿದ್ದುಪಡಿ, ತೊಂದರೆ ಇದ್ದರೆ ಸರಿ ಮಾಡಿಸಿ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ ಅವರು ಮುಂದಿನ ತಿಂಗಳಿನಿಂದ 2000 ರೂ ಪಡೆಯಬಹುದು.
3) ಇದುವರೆಗೆ ಅರ್ಜಿ ಸಲ್ಲಿಸದವರು ಹಾಗೂ ತಾಂತ್ರಿಕ ತೊಂದರೆಯಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇರುವವರು ಎಲ್ಲವನ್ನು ಸರಿಮಾಡಿಕೊಂಡು ಅರ್ಜಿ ಸಲ್ಲಿಸಿದರೆ ಸೆಪ್ಟೆಂಬರ್ ನಿಂದ ಹಣ ಪಡೆಯಬಹುದು.
ಇದೀಗ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಲಿಸ್ಟ್ ನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಈ ವಿಧಾನದ ಮೂಲಕ ನಿಮ್ಮ ಹೆಸರು ಪಟ್ಟಿಯಲ್ಲಿ ಇದೆಯಾ..ಇಲ್ಲವಾ ಎಂದು ಚೆಕ್ ಮಾಡಿಕೊಳ್ಳಬಹುದು.
ಚೆಕ್ ಮಾಡುವ ವಿಧಾನ
1) ಮೊದಲು ನೀವು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿಕೊಡಬೇಕು. https://ahara.kar.nic.in/WebForms/Show_Village_List.aspx
2) ಮೆನು ಬಾರ್ ಅಲ್ಲಿ ‘E service’ ಎನ್ನುವ ಆಯ್ಕೆ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ
3) ನಂತರ ಪೇಜ್ ನ ಎಡಭಾಗದಲ್ಲಿ ಎಲ್ಲಾ ಸೇವೆಗಳ ಲಿಸ್ಟ್ ಬರುತ್ತದೆ. ಅದರಲ್ಲಿ ಇ-ರೇಷನ್ ಕಾರ್ಡ್ ಎನ್ನುವುದನ್ನು ಸೆಲೆಕ್ಟ್ ಮಾಡಿ ಮತ್ತಷ್ಟು ಸೇವೆಗಳ ವಿವರ ಬರುತ್ತದೆ ಅದರಲ್ಲಿ ವಿಲೇಜ್ ಲಿಸ್ಟ್ ಎನ್ನುವುದನ್ನು ಕ್ಲಿಕ್ ಮಾಡಿ. ಅಲ್ಲಿ ಜಿಲ್ಲಾವಾರು ಲಿಂಕ್ ಇರುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆ ಇರುವ ಲಿಂಕ್ ಸೆಲೆಕ್ಟ್ ಮಾಡಿ. ನಂತರ ತಾಲೂಕು, ಗ್ರಾಮ ಪಂಚಾಯತ್, ವಿಲೇಜ್ ಸೆಲೆಕ್ಟ್ ಮಾಡಿ ನಂತರ GO ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಊರಿನ ಫಲಾನುಭವಿಗಳ ಪಟ್ಟಿ ಬರುತ್ತದೆ. ಅಲ್ಲಿ ನಿಮ್ಮ ಹೆಸರನ್ನು ಸರ್ಚ್ ಮಾಡಬಹುದು. ಒಂದು ವೇಳೆ ಪಟ್ಟಿ ಓಪನ್ ಆಗಿದ್ದರೆ ಸರ್ವರ್ ತೊಂದರೆ ಇರುತ್ತದೆ. ಸ್ವಲ್ಪ ಸಮಯದ ಬಳಿಕ ಸರ್ಚ್ ಮಾಡಿ.
ನಾಳೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಗೃಹಲಕ್ಷ್ಮಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಳ್ಳಲಿದ್ದಾರೆ. ಗೃಹಲಕ್ಷ್ಮೀ ಯೋಜನೆಯಡಿ ನಾಳೆ ಐದು ಜಿಲ್ಲೆಯ ಫಲಾನುಭವಿಗಳ ಖಾತೆಗೆ 2 ಸಾವಿರ ರೂ. ಖಾತೆಗೆ ವರ್ಗಾವಣೆ ಮಾಡಲಿದ್ದಾರೆ. ರಾಹುಲ್ ಗಾಂಧಿ ದೆಹಲಿಯಿಂದ ಬುಧವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದು, ಅಲ್ಲಿಂದ ಮೈಸೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ಚೆಕ್ ಮಾಡಿ
ಹಂತ 1: ಅಧಿಕೃತ ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿ: sevasindhuservices.karnataka.gov.in.
ಹಂತ 2: Check Application/Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ನಿಮ್ಮ ಅಪ್ಲಿಕೇಶನ್‌ನ ರೆಫೆರೆನ್ಸ್ ನಂಬರ್ ಅಥವಾ ಇತರ ಸಂಬಂಧಿತ ಮಾಹಿತಿಯಂತಹ ಅಗತ್ಯವಿರುವ ವಿವರಗಳನ್ನು ನಮೂದಿಸಿ.
ಹಂತ 4: ನಿಮ್ಮ ಅರ್ಜಿಯ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಲು ವಿವರಗಳನ್ನು ಸಬ್‌ಮಿಟ್ ಮಾಡಿ, ನೀವು ಯೋಜನೆಯ ಫಲಾನುಭವಿಗಳ ಲೀಸ್ಟ್‌ನಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಿ.
ಈ ಮಹಿಳೆಯರಿಗೆ 2000 ರೂ ಹಣ ಪಡೆಯುವ ಭಾಗ್ಯ ಇರಲ್ಲ :
1) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರಿಗೂ ಗೃಹಲಕ್ಷ್ಮಿ ಯೋಜನೆ ಸಹಾಯಧನ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ.
2) ನಾಲ್ಕು ಚಕ್ರದ ವೈಟ್ ಬೋರ್ಡ್ ಕಾರು ಹೊಂದಿರುವ ಕುಟುಂಬದ ಮಹಿಳೆಯರಿಗೆ 2000 ಹಣ ಸಿಗಲ್ಲ.
3) ಸರ್ಕಾರಿ ಹುದ್ದೆ ಹೊಂದಿರುವ ಮತ್ತು ಪೆನ್ಷನ್ ಪಡೆಯುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.
4) ಆದಾಯ ತೆರಿಗೆ, ಪ್ರೊಫೆಷನಲ್ ಟ್ಯಾಕ್ಸ್ , GST ರಿಟರ್ನ್ಸ್ ಪಾವತಿಸುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ
5) ಏಳು ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಹಣ ಸಿಗಲ್ಲ.