ಕರ್ನಾಟಕ, ಸೆಪ್ಟೆಂಬರ್, 03 ಆಗಸ್ಟ್ ತಿಂಗಳ ಆರಂಭದಿಂದಲೂ ಇಲ್ಲಿಯವರೆಗೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆಗಾಗ ಜಿನುಗು ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಬರೀ ಬಿಸಿಲಿನ ವಾತಾರವಣವೇ ಮುಂದುವರೆದಿದೆ. ಇನ್ನು ಇಂದಿನಿಂದ ನಾಲ್ಕು ದಿನಗಳ ಕಾಲ ಅಬ್ಬರದ ಮಳೆಯಾಗಲಿದೆ ಎಂದಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗಾದರೆ ಯಾವ ಭಾಗಗಳಲ್ಲಿ ಮಳೆಯಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ದಕ್ಷಿಣ ಒಳನಾಡು ಸೇರಿದಂತೆ ಮಲೆನಾಡು ಹಾಗೂ ಕರಾವಳಿಯ ಕೆಲವು ಭಾಗದಲ್ಲಿ ಆಗಾಗ ಜಿನುಗು ಮಳೆಯಾಗುತ್ತಿದ್ದು, ಇನ್ನು ಕೆಲವೆಡೆ ಬಿಸಿಲಿನ ವಾತಾರಣವೇ ಮುಂದುವರೆದಿದೆ ಎನ್ನುವ ವರದಿಗಳು ಆಗುತ್ತಲೇ ಇವೆ. ಮತ್ತೊಂದೆಡೆ ರಾಜ್ಯದಲ್ಲಿ ಸೆಪ್ಟೆಂಬರ್ನಲ್ಲಿ ವಾಡಿಕೆಯಂತೆ ಮಳೆ ಸುರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆಯೇ ಇಂದು (ಸೆಪ್ಟೆಂಬರ್ 03) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿಯೂ ಅಲ್ಲಲ್ಲಿ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ನೀಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಹಲವೆಡೆ ಅಬ್ಬರದ ಮಳೆಯಿಂದ ಅವಾಂತರಗಳೇ ಸೃಷ್ಟಿಯಾಗಿದ್ದವು. ಇದೀಗ ಮತ್ತೇ ಮಳೆ ಚುರುಕು ಪಡೆಯುವ ಮುನ್ಸೂಚನೆ ಇದ್ದು, ಮತ್ತೇನು ಗತಿ ಕಾದಿದಿಯೋ ಎನ್ನುವ ಆತಂಕ ಇಲ್ಲಿನ ಜನರದ್ದಾಗಿದೆ.
Karnataka weather: ಸೆಪ್ಟೆಂಬರ್ 3ರಿಂದ ರಾಜ್ಯದ ಈ ಭಾಗಗಳಲ್ಲಿ ಮಳೆ
ಎರಡು ದಿನಗಳ ಹಿಂದೆ ದಾವಣಗೆರೆ, ಬೆಂಗಳೂರು, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿದಿತ್ತು. ಬಳಿಕ ಎರಡು ದಿನ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೇ ಈ ಭಾಗಗಳಲ್ಲಿ ಆರ್ಭಟ ಶುರು ಮಾಡಲಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನು ಎರಡು ವಾರಗಳಿಂದ ಬಿಸಿಲಿನ ಬೇಗೆಯಿಂದ ಬೆದಿದ್ದ ಕೋಲಾರದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಇದರಿಂದ ಇಲ್ಲಿನ ರೈತರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ. ಹಾಗೆಯೇ ಇಲ್ಲಿ ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.
ಜಿಲ್ಲಾವಾರು ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ (ಸೆಲ್ಸಿಯಸ್‌ಗಳಲ್ಲಿ)
ಬೆಂಗಳೂರು: 28-20,
ಚಿಕ್ಕಬಳ್ಳಾಪುರ: 29-19
ಕೋಲಾರ: 29-21
ಬೆಂಗಳೂರು ಗ್ರಾಮಾಂತರ: 28-20
ರಾಮನಗರ 30-21
ಮಂಡ್ಯ: 30-22
ಮೈಸೂರು: 31-21
ಚಾಮರಾಜನಗರ: 30-21
ಮಡಿಕೇರಿ: 24-17
ಹಾಸನ: 28-19
ಶಿವಮೊಗ್ಗ: 30-22
ಮಂಗಳೂರು: 31-25
ಬೆಳಗಾವಿ: 28-21
ವಿಜಯಪುರ: 28-22
ಧಾರವಾಡ: 29-21
ಚಿತ್ರದುರ್ಗ: 31-21
ಚಿಕ್ಕಮಗಳೂರು: 27-19
ಉಡುಪಿ: 31-25
ತುಮಕೂರು: 29-21
ಕಾರವಾರ: 30-26
ಕೊಪ್ಪಳ: 30-23
ದಾವಣಗೆರೆ: 31-22
ಬೀದರ್: 29-22
ಹುಬ್ಬಳ್ಳಿ: 31-22
ಕಲಬುರಗಿ: 29-33
ಹಾವೇರಿ: 31-22
ಗದಗ: 32-22
ರಾಯಚೂರು: 29-23
ಬಳ್ಳಾರಿ: 35-24
ಯಾದಗಿರಿ: 29-23
ಬಾಗಲಕೋಟೆ: 29-22
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಸುಮಾರು ಎರಡ್ಮೂರು ವಾರಗಳಿಂದ ಬಿಸಿಲಿನ ಧಗೆ ದಾಖಲೆ ಮಟ್ಟದಲ್ಲು ಹೆಚ್ಚಾಗುತ್ತಲೇ ಇದೆ. ಇನ್ನು ಮುಂಗಾರು ನಂಬಿಕೊಂಡು ಬಿತ್ತನೆ ಮಾಡಿದ ಬೆಳೆಗಳೆಲ್ಲವೂ ಸೂರ್ಯನ ಶಾಖಕ್ಕೆ ಸುಟ್ಟುಹೋಗುತ್ತಿವೆ. ನೀರಿನ ಮೂಲಗಳು ಕೂಡ ಬತ್ತಿಹೋಗುವ ಹಂತವನ್ನು ತಲುಪಿವೆ. ಇದಕ್ಕೆಲ್ಲ ಪರಿಹಾರ ಅಂದರೆ ಮಳೆ ಬರಬೇಕಿದ್ದು, ಸೆಪ್ಟೆಂಬರ್ 3ರಿಂದ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ಸೆಪ್ಟೆಂಬರ್ 3ರಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಮೈಸೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲೂ ಮಳೆಯಾಗುವ ಮುನ್ಸೂಚನೆ ಇದೆ.
ಜುಲೈ ತಿಂಗಳ ಮಧ್ಯಭಾಗದಲ್ಲಿ ಅಬ್ಬರದ ಮಳೆಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅನಾಹುತಗಳೇ ಸೃಷ್ಟಿಯಾಗಿದ್ದವು. ಅದರಲ್ಲೂ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕಾರವಾರದ ಹಲವೆಡೆ ಅಪಾರ ಹಾನಿ ಸಂಭವಿಸಿದ್ದವು. ಅಲ್ಲದೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೂ ಸಹ ರಜೆ ಘೋಷಣೆ ಮಾಡಲಾಗತ್ತು. ಆದರೆ ಆಗಸ್ಟ್ ತಿಂಗಳ ಆರಂಭದಿಂದಲೂ ಇಲ್ಲಿಯವರೆಗೂ ಈ ಭಾಗದಲ್ಲಿ ಆಗಾಗ ಜಿನುಗು ಮಳೆ ಮಾತ್ರ ಆಗುತ್ತಿದೆ.
ಮಂಗಳೂರು, ಉಡುಪಿ, ಕಾಫಿನಾಡು ಚಿಕ್ಕಮಗಳೂರು, ಹಾಸನ ಭಾಗಗಳಲ್ಲಿ ಮಾತ್ರ ಕೆಲ ದಿನಗಳ ಹಂದೆಯಷ್ಟೇ ಅಬ್ಬರದ ಮಳೆಯಾಗಿತ್ತು. ಆದರೆ ಇದೀಗ ಈ ಭಾಗಗಳಲ್ಲಿ ಆಗಾಗ ಮಾತ್ರ ಸಾಧಾರಣ ಮಳೆಯಾಗುತ್ತಿದೆ. ಇನ್ನುಳಿದಂತೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆದಿದೆ.
ಒಂದು ವೇಳೆ ಸೆಪ್ಟೆಂಬರ್ ಆರಂಭದಿಂದ ಮಳೆ ಬಾರದಿದ್ದರೆ ಬಹತೇಕ ಜಿಲ್ಲೆಗಳಲ್ಲಿ ಕೆರೆ, ಹಳ್ಳ, ಕೊಳ್ಳಗು ಬತ್ತಿಹೋಗಿ ಭರದ ಛಾಯೆ ಆವರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ದೇಶಾದ್ಯಂತ ಮುಂದಿನ ಕೆಲವು ದಿನಗಳ ಕಾಲ ತಾಪಮಾನದಲ್ಲಿ ಯಾವುದೇ ಗರಿಷ್ಠ ಬದಲಾವಣೆ ಇರದ ಹಿನ್ನೆಲೆ -ಸೆಪ್ಟೆಂಬರ್ 3ರಂದು ಪಶ್ಚಿಮ ಬಂಗಾಳ ಗಂಗಾತೀರ, ಒಡಿಶಾ, ಆಸ್ಸಾಂ ಮತ್ತು ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾ, ಮಧ್ಯ ಮಹಾರಾಷ್ಟ್ರ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ, ರಾಯಲಸೀಮಾ, ತೆಲಂಗಾಣ, ಕೇರಳ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಇದನ್ನು ಓದಿ- Rain Alert: ರಾಜ್ಯದ ಈ ಭಾಗದಲ್ಲಿ 2 ದಿನಗಳ ಕಾಲ ಭಾರೀ ವರ್ಷಧಾರೆ: ಬಿರುಗಾಳಿ ಸಹಿತ ಪ್ರವಾಹದ ಎಚ್ಚರಿಕೆ
ಅಲ್ಲದೆ, ಸೆಪ್ಟೆಂಬರ್ 4ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ, ಒಡಿಸಾ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾಣಂ, ತೆಲಂಗಾಣ, ಕೇರಳ ಪ್ರದೇಶಗಳು ಭಾರೀ ಮಟ್ಟದಲ್ಲಿ ಮಳೆಯಾಗಲಿದ್ದು, ಛತ್ತೀಸ್‌ಗಢ, ಮರಾಠವಾಡ, ರಾಯಲಸೀಮಾ ಮತ್ತು ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಅತಿ ಮಳೆಯಾಗುವ ನಿರೀಕ್ಷೆಯಿದೆ. ಸೆಪ್ಟೆಂಬರ್ 5ರಂದು ಒಡಿಸಾ, ತೆಲಂಗಾಣ, ಕೇರಳ ಈ ಸ್ಥಳಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೆ, ವಿದರ್ಭ, ಛತ್ತಿಸ್‌ಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮರಾಠಾವಾಡ, ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ ಅಲ್ಲಿ ಅತೀ ಮಳೆಯಾಗಲಿದೆ,.
ಇನ್ನು ಸೆಪ್ಟಂಬರ್ 6 ರಂದು ಕೇರಳ, ವಿದರ್ಭ, ಛತ್ತಿಸ್‌ಗಢ, ಒಡಿಸಾ ಮತ್ತು ಕರಾವಳಿ ಆಂಧ್ರ ಪ್ರದೇಶ ಮತ್ತು ಯಾನಂ ಪ್ರದೇಶಗಳಲ್ಲಿ ಭಾರೀ ಮಟ್ಟದಲ್ಲಿ ಮಳೆಯಾಗುವ ಮೂನ್ಸುಚನೆಯಿದೆ. ಭಾರತೀಯ ಹವಾಮಾನ ಇಲಾಖೆ ಪ್ರತ್ಯೇಕ ಸ್ಥಳಗಳನ್ನು ಸೂಚಿಸಿ, ಯಾವ ಸ್ಥಳಗಳಲ್ಲಿ ಎಷ್ಟು ಮಟ್ಟದಲ್ಲಿ ಮಳೆಯಾಗಲಿದೆ ಎಂದು ವಿವರವಾದ ಮಾಹಿತಿಯೊಂದಿಗೆ ಮೂನ್ಸುಚನೆ ನೀಡಿದೆ.
ಮುಂದಿನ ಕೆಲವು ದಿನಗಳ ಕಾಲ ದೇಶದಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸುಚನೆ ನೀಡಿದೆ. ಹರಿಯಾಣ, ಚಂಡೀಗಢ, ದೆಹಲಿ ಹಾಗೂ ಪಶ್ಚಿಮ ರಾಜಸ್ಥಾನ ರಾಜ್ಯಗಳ ವಾತಾವರಣ ಒಣ ಹವೆಯಿಂದ ಕೂಡಿರುವದರಿಂದ ಆ ರಾಜ್ಯಗಳನ್ನು ಹೊರತುಪಡಿಸಿ, ವಿವಿಧ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.