ದ್ರಾಕ್ಷಿ, ದಾಳಿಂಬೆ ನಿಂಬೆ ಬೆಳೆವಿಮೆ ಅರ್ಜಿ ಆಹ್ವಾನ.

ಕರ್ನಾಟಕ ಸರ್ಕಾರವು 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಅನುಮೋದಿಸಲಾದ ತೋಟಗಾರಿಕೆ ಬೆಳೆಗಳ ವಿಮಾ ಮೊತ್ತ, ವಿಮಾ ಕಂತಿನ ಹಾಗೂ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ.

ಸೂಚನೆಗಳುಪ್ರತಿ ವರ್ಷದಂತೆ ಈ ವರ್ಷವು ಮುಂಗಾರು ಬೆಳೆ ವಿಮೆ ಆರಂಭವಾಗಲಿದ್ದು ಸುರಕ್ಷತೆ ಮತ್ತು ರೈತರಿಗೆ ಯಾವುದೆ ಅನ್ಯಾಯವಾಗದಿರಲು ವಿಮಾ ಹಣ ನೇರವಾಗಿ ನಿಮ್ಮ ಖಾತೆಗೆ ಜಮೆ ಆಗಲು ಸರಕಾರ ಕೆಲವು ಮಹತ್ವ ಬದಲಾವಣೆ ತಂದಿರುತ್ತದೆ.

ಮುಂಗಾರು ಹಂಗಾಮು ಕೃಷಿ ಚಟುವಟಿಕೆ ಗರಿಗೆದರುತ್ತಿದೆ. ಮುಂಗಾರು ಕೃಷಿಗೆ ರೈತರು ಬೆಳೆ ವಿಮೆ ಭದ್ರತೆ ಮಾಡಿಸಿಕೊಳ್ಳಲು ಸರಕಾರ ಕರೆ ನೀಡಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಬೇರೆ ಬೇರೆ ಬೆಳೆಗಳಿಗೆ ಬೇರೆ ಬೇರೆ ದಿನಾಂಕ ನೋಂದಣಿಗೆ ಕೊನೆಯ ದಿನವಾಗಿದೆ.

ಮುಂಗಾರು ಕೃಷಿ ಖುಷಿಯಲ್ಲಿರುವ ರೈತರು ಮುಂಗಾರು ಹಂಗಾಮಿನ ವಿಮೆಗೆ ನೋಂದಣಿ ಮಾಡಿಸಿಕೊಂಡು ಬೆಳೆಗಳಿಗೆ ಭದ್ರತೆ ನೀಡಬೇಕು. ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ಕಾರಣದಿಂದ ಬೆಳೆ ಕೈಕೊಟ್ಟರೆ, ಕೈಗೆ ಬಂದ ಫಸಲು ನಷ್ಟ ಅನುಭವಿಸಿದರೆ ವಿಮೆ ಶ್ರೀರಕ್ಷೆಯಾಗಲಿದೆ.

ವಿಜಯಪುರ ಬೆಲೆಯಲ್ಲಿ ದಾಳಿಂಬೆ ಬೆಳೆಗೆ 200 (ಗ್ರಾಮ ಪಂಚಾಯಿತಿ / ನಗರ ಸ್ಥಳೀಯ ಸಂಸ್ಥೆಗಳು) ಲಿಂಬೆ ಬೆಳೆಗೆ 224 (ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳು) ಹಾಗೂ ದ್ರಾಕ್ಷಿ ಬೆಳೆಗೆ 221 (ಗ್ರಾಮ ಪಂಚಾಯಿತಿ / ನಗರ ಸ್ಥಳೀಯ ಸಂಸ್ಥೆಗಳು) ವಿಮಾ ಘಟಕವನ್ನು ಅಧಿಸೂಚಿಸಲಾಗಿದೆ.

ರೈತರು ಪಾವತಿಸಬೇಕಾದ ವಿಮಾ ಕಂತಿನ ದರ ಶೇ. 5 ರೂ.ಗಳಲ್ಲಿ –
ದ್ರಾಕ್ಷಿ – 14000.00 ರೂ
ದಾಳಿಂಬೆ – 6350.00 ರೂ
ಲಿಂಬೆ – 2800.00 ರೂ

ನಿಂಬೆ, ದಾಳಿಂಬೆ ಬೆಳೆಗೆ ವಿಮಾ ನೋಂದಣಿಗೆ ಕೊನೆಯ ದಿನಾಂಕ : 30-06-2025

ದ್ರಾಕ್ಷಿ ಬೆಳೆಗೆ ವಿಮಾ ನೋಂದಣಿಗೆ ಕೊನೆಯ ದಿನಾಂಕ : 15-09-2025

ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಹಾಗೂ ಪಾವತಿಸಬೇಕಾದ ವಿಮಾ ಕಂತಿನ ಮೊತ್ತವು ಒಂದೇ ಆಗಿರುತ್ತದೆ.

ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರು ಪ್ರಸಕ್ತ ಸಾಲಿನ ಪಹಣಿ ಪತ್ರಿಕೆ, ಆಧಾರ ಕಾರ್ಡ ಝರಾಕ್ಷ ಪ್ರತಿ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಗ್ರಾಮ-ಒನ್ ಕೇಂದ್ರ, ಅಥವಾ ಬ್ಯಾಂಕಗಳಲಿ ಅಥವಾ CSC Centre ಗಳಲಿ. ವಿಮಾ ಯೋಜನೆಯಡಿ ನೊಂದಾಯಿಸಿಕೊಳ್ಳಲು ಕೋರಿದೆ.

ಶ್ರೀ ರಾಮನಗೌಡ ಬಿರಾದಾರ ಆಗ್ನಿಕನ್ನರ ಇನ್ನು ರನ ಕಂಪನಿ (AIC) ವಿಮಾ ಸಂಸ್ಥೆಯ ಪ್ರತಿನಿಧಿ ಮೊಬೈಲ್ ನಂ : 8899887873‌
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ವಿಜಯಪುರ : 9535185999
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಇಂಡಿ :9008404041
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಬಬಾಗೇವಾಡಿ : 9845215362
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಸಿಂದಗಿ : 7795952653
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಮುದ್ದೇಬಿಹಾಳ : 9620578551
ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ವಿಜಯಪುರ ಜಿಲೆ…ಗೆ

Spread positive news

Leave a Reply

Your email address will not be published. Required fields are marked *