ಕೆಎನ್‌ಎನ್ ಡಿಜಿಟಲ್ ಡೆಸ್ಕ್: ರಾಜ್ಯದ ಜನರು ತುರ್ತು ಸಂದರ್ಭದಲ್ಲಿ, ಆರ್ಥಿಕ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ( CM Relief Fund Of Karnataka ) ಆರ್ಥಿಕ ನೆರವಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಆರ್ಥಿಕವಾಗಿ ಹಿಂದುಳಿದ ವ್ಯಕ್ತಿಗಳು ವಿವಿಧ ಸಂದರ್ಭದಲ್ಲಿ ಈ ನಿಧಿಯನ್ನು ಹಣವನ್ನು ಪಡೆದು, ತಮ್ಮ ಕಷ್ಟ ಕಾಲದಲ್ಲಿ ಸಹಾಯವನ್ನು ಪಡೆಯಬಹುದಾಗಿದೆ. ಹಾಗಾದ್ರೇ ಅರ್ಜಿ ಸಲ್ಲಿಕೆ ಹೇಗೆ.? ದಾಖಲೆಗಳು ಏನು ಬೇಕು ಸೇರಿದಂತೆ ಇತರೆ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.
ರಾಜ್ಯದಲ್ಲಿನ ಆರ್ಥಿಕವಾಗಿ ಹಿಂದುಳಿದಂತ ಜನರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತುರ್ತು ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಪಡೆಯಬಹುದಾಗಿದೆ. ಇಂತಹ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಆನ್ ಲೈನ್ ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ. ಆದ್ರೇ ಸೇವಾ ಶುಲ್ಕವಾಗಿ ರೂ.30 ಪಾವತಿಸಬೇಕಾಗಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಅರ್ಜಿ ಸಲ್ಲಿಸೋದು ಹೇಗೆ.?
ತುರ್ತು ಸಂದರ್ಭದಲ್ಲಿ, ಆರ್ಥಿಕ ನೆರವಿಗಾಗಿ ಹಿಂದುಳಿದ ವ್ಯಕ್ತಿಗಳು https://sevasindhu.karnataka.gov.in/ ಮೂಲಕ ಆನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆದ್ರೇ ಪೂರಕ ದಾಖಲೆಗಳಾಗಿ ಪರಿಹಾರ ಕೋರಿರುವವರು ಆ ಕಾರಣಕ್ಕೆ ಸಂಬಂಧಿಸಿದಂತೆ ನೈಜ ದಾಖಲೆಗಳನ್ನು ಸಲ್ಲಿಸಬೇಕಾಗಿದೆ.
ಅರ್ಜಿ ಪರಿಶೀಲನೆ ಹೇಗೆ.?
ಜನರು ಸಲ್ಲಿಸಿದಂತ ಅರ್ಜಿಯನ್ನು ಡಿಸಿ ಮೂಲಕ ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕ ಸಿಎಂ ಆರ್ ಎಫ್ ಕೇಸ್ ವರ್ಕರ್ ಅವರಿಂದ ಅಪ್ಲಿಕೇಶನ್ ಪರಿಶೀಲನೆ ಮಾಡಲಾಗುತ್ತದೆ.
ಈ ಬಳಿಕ ವಿಭಾಗದ ಅಧಿಕಾರಿಗಳು, ವಿಶೇಷಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತದೆ. ಆ ನಂತ್ರ ಅಂಡರ್ ಸೆಕ್ರೆಟರಿ, ವಿಶೇಷ ಅಧಿಕಾರಿ ಪರಿಶೀಲನೆ ನಡೆಸಿದ ನಂತ್ರ, ಜಂಟಿ ಕಾರ್ಯದರ್ಶಿಯಿಂದ ಕೂಡ ಪರಿಶೀಲನೆಗೊಂಡು, ಖಾತೆ ಅಧಿಕಾರಿ ಪರಿಶೀಲನೆಯ ಬಳಿಕ, ಮೊತ್ತ ವಿತರಣೆಗಾಗಿ ಜಂಟಿ ಕಾರ್ಯದ್ಶಿಗಳಿಂದ ಡಿಬಿಟಿಗೆ ಕಳುಹಿಸಲಾಗುತ್ತದೆ.
ಗಮನಿಸಿ : ಈ ಮಹಿಳೆಯರಿಗೆ ಮಾತ್ರ ‘ಗೃಹಲಕ್ಷ್ಮಿ’ ಯೋಜನೆಯ ಹಣ ಬರಲ್ಲಾ | scheme cancelled
ಚಿಕಿತ್ಸೆ ಪೂರ್ವದಲ್ಲಿ ಏನು ಮಾಡಬೇಕು.?
ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ಅರ್ಜಿ ಸಲ್ಲಿಸುವವರು ಬಡ ಕುಟುಂಬ ವರ್ಗದವರು ಆಗಿರಬೇಕು. ಅಂದರೇ ಬಿಪಿಎಲ್ ಕಾರ್ಡ್ ದಾರರಾಗಿರುವಂತವರು ಮಾತ್ರ ಈ ನಿಧಿಯಿಂದ ಆರ್ಥಿಕ ನೆರವಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ರೈತರಿಗಾಗಿ ಟ್ರ್ಯಾಕ್ಟರ್ ಟ್ರಾಲಿ ಖರೀದಿಗೆ ಸರ್ಕಾರದಿಂದ ಅರ್ಜಿ ಆಹ್ವಾನ!
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು.?
ಅರ್ಜಿದಾರರ ಭಾವಚಿತ್ರ.
ಚಿಕಿತ್ಸೆ ಪಡೆಯಬೇಕಾಗಿರುವ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿ
ಬಿಪಿಎಲ್ ಪಡಿತರ ಚೀಟಿಯ ನಕಲು ಪ್ರತಿ
ಆಧಾರ್ ಕಾರ್ಡ್
ಬ್ಯಾಕ್ ಪಾಸ್ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿ
ವಿಳಾಸ ದೃಢೀಕರಣ ದಾಖಲೆಗಳು.
ಅರ್ಜಿದಾರರ ಅಥವಾ ಅವರ ಕುಟುಂಬ ವರ್ದವರ ಬಳಕೆಯ ಮೊಬೈಲ್ ಸಂಖ್ಯೆ.
ಚಿಕಿತ್ಸೆಯ ನಂತ್ರ ಏನು ಮಾಡಲಾಗುತ್ತೆ.?
ಕೃಷಿ ಸಿಂಚಾಯಿ ಯೋಜನೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ
ಕಬ್ಬಿನಲ್ಲಿ ಸಸಿ ಸುಳಿ ಕೊರಕದ ನಿಯಂತ್ರಣ ಹೇಗೆ?
ಅರ್ಜಿದಾರರು ಸಲ್ಲಿಸಿರುವಂತ ಚಿಕಿತ್ಸಾ ವೆಚ್ಚದ ಮಾಹಿತಿಯನ್ನು ಪರಿಶೀಲನೆ ನಡೆಸಲಾಗುತ್ತದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಯ ವಿಷಯ ನಿರ್ವಾಹಕರು ಅಪ್ಲಿಕೇಷನ್ ಪರಿಶೀಲನೆ ಮಾಡಿ, ಆಸ್ಪತ್ರೆಯಿಂದಲೂ ಮಾಹಿತಿಯನ್ನು ಪಡೆಯುತ್ತಾರೆ.
ಆಗಸ್ಟ್ 21ರಿಂದ ಮೂರು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಎಲ್ಲೆಲ್ಲಿ?, ಇಲ್ಲಿದೆ ವಿವರ
ಈ ಬಳಿಕ ಶಾಖಾಧಿಕಾರಿಗಳು, ವಿಶೇಷ ಕರ್ತವ್ಯಾಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತದೆ. ಅಧೀನ ಕಾರ್ಯದರ್ಶಿ ಕೂಡ ಪರಿಶೀಲನೆ ನಡೆಸಲಿದ್ದಾರೆ. ಇದಾದ ನಂತ್ರ ಜಂಟಿ ಕಾರ್ಯದರ್ಶಿ, ಲೆಕ್ಕಾಧಿಕಾರಿಯಿಂದ ಪರಿಶೀಲನೆ ಬಳಿಕ, ಅರ್ಜಿ ಸಲ್ಲಿಕೆದಾರರು ಕೋರಿರುವ ಆರ್ಥಿಕ ನೆರವಿನ ಮೊತ್ತವನ್ನು ಜಂಜಿ ಕಾರ್ಯದರ್ಶಿಗಳಿಂದ ಡಿಬಿಟಿ ಮೂಲಕ ಪಾವತಿಸಲು ಕಳುಹಿಸಿಕೊಡಲಾಗುತ್ತದೆ.