ರೈತರೇ ಕಳೆದ ವರ್ಷಕ್ಕಿಂತ ಈ ವರ್ಷ ವರುಣನ ಆರ್ಭಟ ಜೋರಾಗಿದೆ. ಸದ್ದಿಲ್ಲದೆ ಪೂರ್ವ ಮುಂಗಾರು ಆರಂಭವಾಗಿದ್ದು ರೈತರು ಕೃಷಿ ಚಟುವಟಿಕೆಗಳಿಗೆ ಆರಂಭ ಮುಂಗಾರು ಪೂರ್ವ ಮಳೆಯಿಂದಾಗಿ ಮುಂಗಾರು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ರೈತರು ಬಿತ್ತನೆಗೆ ಮುಂದಾಗುವ ನಿರೀಕ್ಷೆಗಳು ಹೆಚ್ಚಾಗಿವೆ. ಕೃಷಿ ಇಲಾಖೆಯೂ 16,479 , 16851 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಿಕೊಂಡಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಎರಡು ದೊಡ್ಡ ಮಳೆಗಳಾಗಿದ್ದು, ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಜಮೀನುಗಳನ್ನು ಮುಂದಾಗಿದ್ದಾರೆ.
ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 2.81 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಕೃಷಿ ಇಲಾಖೆಯ ಆಂದಾಜಿಸಿದೆ. ಧಾರವಾಡದ ಜಿಲ್ಲೆಯಲ್ಲಿ ಹೆಸರು, ಸೋಯಾಬಿನ್, ಗೋವಿನಜೋಳ, ಶೇಂಗಾ ಹಾಗೂ ಉದ್ದು ಬಿತ್ತನೆ ಹೆಚ್ಚು ಮಾಡಲಿದ್ದು, ಹೆಚ್ಚು ಶೇಖರಣೆ ಮಾಡಿಕೊಂಡಿದೆ. ಬಿತ್ತನೆ ಬೀಜ ವಿತರಣೆ ಮಾಡಲು ಜಿಲ್ಲೆಯಲ್ಲಿ ಒಟ್ಟು 31 ಕೇಂದ್ರಗಳನ್ನು ಸ್ಥಾಪಿಸಿದೆ.
14 ರೈತ ಸಂಪರ್ಕ ಕೇಂದ್ರಗಳ 16851 ಟನ್ ರಸಗೊಬ್ಬರ ಜಿಲ್ಲೆಯಲ್ಲಿ ಈ ಬಾರಿ ಮೇ.12 ರಂತೆ ಒಟ್ಟು 16851.22 ಟನ್ ರಸಗೊಬ್ಬರವನ್ನು ಕೃಷಿ ಇಲಾಖೆ ಸಿದ್ಧವಾಗಿಟ್ಟುಕೊಂಡಿದೆ. ಏಪ್ರಿಲ್-25ರಿಂದ ಸೆಪ್ಟೆಂಬರ್ ತಿಂಗಳವರೆಗೆ ಎಲ್ಲ ಗೊಬ್ಬರ ಸೇರಿ ಒಟ್ಟು 49471 ಟನ್ ಗೊಬ್ಬರ ಬೇಡಿಕೆ ಇದೆ.
ಕಾಂಪ್ಲೆಕ್ಸ್ 9232 ಟನ್‌ಗಳಲ್ಲಿ 1147 ಟನ್ ಮಾರಾಟವಾಗಿ 8085 ಟನ್ ವಾಸ್ತಾನು ಇದೆ. ಯೂರಿಯಾ 9993 ಟನ್‌ಗಳಲ್ಲಿ 4088 ಟನ್ ಮಾರಾಟವಾಗಿ 5905ಟನ್ ಲಭ್ಯವಿದೆ. ಒಟ್ಟಾರೆ 306 ಜಿಲ್ಲೆಗಳಲ್ಲಿ 128 ಟನ್ ಮಾರಾಟವಾಗಿ 177 ಟನ್ ದಾಸ್ತಾನು ಇದೆ. ತಿಂಗಳ ಅಗತ್ಯಕ್ಕೆ ತಕ್ಕಂತೆ ಮತ್ತಷ್ಟು ರಸಗೊಬ್ಬರ ಬರಲಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ಬಾರಿಗಿಂತ ಹೆಚ್ಚು ಗುರಿ:
2023ರ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟು ಬರಗಾಲ ಎದುರಾದ ಕಾರಣ ಬಿತ್ತಿದ ಬೀಜ ಸಹ ಮೊಳಕೆಯೊಡೆದಿರಲಿಲ್ಲ. ಆದರೆ ಕಳೆದ ವರ್ಷ ಮುಂಗಾರು ಹಂಗಾಮು ಬೇಗ ಆರಂಭಗೊಂಡ ಪರಿಣಾಮ ಇಡೀ ಜಿಲ್ಲೆಯಲ್ಲಿ ಉತ್ತಮ ಮತ್ತನೆಯಾಗಿತ್ತು. 2.70 ಲಕ್ಷ ಹೆಕ್ಟರ್ ಗುರಿಯಲ್ಲಿ 2.63
ಧಾರವಾಡ: ಮಳೆಯಿಂದ ಹೊಲದ ತಗ್ಗು ಪ್ರದೇಶದಲ್ಲಿ ನೀರು ನಿಂತಿರುವುದು. ಲಕ್ಷ ಹೆಕ್ಟರ್ ಬಿತ್ತನೆಯಾಗಿ ಶೇ.97 ಬಿತ್ತನೆಯಾಗಿತ್ತು. ಈ ಸಲವೂ ವಾಡಿಕೆಗಿಂತ ಉತ್ತಮ ಮಳೆಯಾಗುತ್ತಿರುವ ಕಾರಣ 2.81 ಲಕ್ಷ ಹೆಕ್ಟರ್ ಬಿತ್ತನೆ ನಿರೀಕ್ಷೆ ಇದೆ.
ಕಳೆದ ವರ್ಷ ಹೆಸರು-ಸೋಯಾಬೀನ್ ಗುರಿಗಿಂತ ಹೆಚ್ಚು ಬಿತ್ತನೆಯಾಗಿತ್ತು. 67.150 ಹೆಕ್ಟರ್‌ನಲ್ಲಿ ಹೆಸರು ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ 4,749 ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿ ದಾಖಲೆ ಬರೆದಿತ್ತು. ಈ ಸಲ ಕಳೆದ ಬಾರಿಗಿಂತ ಹೆಚ್ಚಿನ ಬಿತ್ತನೆ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ 2.81 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಹೆಸರು 84,665 ಪೆಕ್ಟರ್, ಮುಸುಕಿನ ಜೋಳ 60,000.
ಈ ವರ್ಷವೂ ಚೆನ್ನಾಗಿ ಮಳೆಯಾಗುತ್ತಿದ್ದು ರೈತರು ಮುಂಗಾರು 2.81 ಲಕ್ಷ ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ. ಬೇಡಿಕೆಗೆ ತಕ್ಕಂತೆ ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡಿದ್ದು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
82.48 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಮುಂಗಾರು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ರಾಜ್ಯದಲ್ಲಿ 82.48 ಲಕ್ಷ ಹೆಕ್ಟೇರ್‌ಗಿಂತ ಅಧಿಕ ಪ್ರದೇಶಗಳಲ್ಲಿ ಬಿತ್ತನೆಯಾಗುವ ಗುರಿ ಇದೆ. ಕಳೆದ ವರ್ಷವೂ ಒಳ್ಳೆಯ ಮಳೆಯಾಗಿದ್ದ ಕಾರಣ 82 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆಯಾಗಿತ್ತು. 23.99 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶಗಳಾದರೆ, 58.49 ಲಕ್ಷ ಹೆಕ್ಟೇರ್ ಪ್ರದೇಶಗಳು ಮಳೆ ಅವಲಂಬಿಸಿವೆ.
ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಗೋಧಿ, ತೊಗರಿ, ಕಡಲೆ, ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಮಟಕಿ, ಶೇಂಗಾ, ಎಳ್ಳು, ಸೂರ್ಯಕಾಂತಿ, ಹರಳಿ, ಹಿಚ್ಚೆಳ್ಳು, ಸೋಯಾ ಅವರೆ, ಆಗಸೆ, ಹತ್ತಿ, ಕಬ್ಬು ಮತ್ತು ತಂಬಾಕು ಸೇರಿ ಏಕಧಾನ್ಯ, ದ್ವಿದಳ ಧಾನ್ಯ, ಎಣ್ಣೆ ಕಾಳುಗಳು ಮತ್ತು ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ.
ಜಗತ್ತಿನ ಆಹಾರ ಕೊರತೆ ನೀಗಿಸಲು ರೈತರು ದುಡಿಯುತ್ತಿದ್ದು ಅವರು ಬೆಳದ ರೈತರ ಹಿತಕ್ಕಾಗಿ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ,ಹಾಲಿಗೆ ಪ್ರತಿ ಲೀ 5 ರೂ ಗೆ ಸಬ್ಸಿಡಿ ನೀಡಲಾಗುತ್ತಿದೆ. ನಾವು ನೀಡಿದ್ದ ಗ್ಯಾರಂಟಿ ಯೋಜನೆಗಳೆಲ್ಲವನ್ನು 1 ವರ್ಷದೊಳಗೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು. ಈ ವರ್ಷವೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಭಾಗ್ಯ ಬೀದರ್ ಸೇರಿದಂತೆ ರಾಜ್ಯಾದ್ಯಂತ ವಿಸ್ತಾರಣೆಯಾಗಲಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬಿತ್ತನೆ ಬೀಜ ರಸಗೊಬ್ಬರ ಕೈ ಯಾವುದೇ ಕೊರತೆ ಇಲ್ಲದಂತೆ ವೇ ನಿಭಾಯಿಸಲಾಗುತ್ತಿದೆ ಎಂದರು.