ರೈತರಿಗೆ ಹಣ ಬರದೇ ಇರುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.

ಆತ್ಮೀಯ ರೈತ ಬಾಂಧವರೇ ಬೆಳೆ ಹಾನಿ ಪರಿಹಾರದ ಮೂರು ಕಂತಿನ ಹಣಗಳನ್ನು ಈಗಾಗಲೇ ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು ಸೇರಿ ನಿಮ್ಮ ಖಾತೆಗೆ ಜಮಾ ಮಾಡಿದ್ದು, ಇನ್ನು ಕೆಲವು ರೈತರಿಗೆ ಈ ಹಣ ಜಮಾ ಆಗಿಲ್ಲ. (NDRF)ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಸುಪ್ರೀಂಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಅದೇ ರೀತಿ ರೈತರು ಸಹ ಈ ಹಣ ಪಡೆಯಬೇಕಾದರೆ ಕೆಲವು ಮಾಹಿತಿ ಪಡೆಯುವ ಅವಶ್ಯಕತೆ ಇದೆ. ತಹಶೀಲ್ದಾರ್ ಕಡೆಯಿಂದ ವೆರಿಫೈಡ್ ಮಾಡಿಸಿಕೊಂಡು ಹಣ ಜಮಾ ಮಾಡಿಸಿಕೊಂಡೆ ರೈತರು ಸಾವಿರಾರು ಸಂಖ್ಯೆಯಲ್ಲಿದ್ದು, ಇನ್ನು ಲಕ್ಷಾಂತರ ರೈತರಿಗೆ ವೆರಿಫಿಕೇಶನ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಕೆಲವು ರೈತರಿಗೆ ವೆರಿಫಿಕೇಶನ್ ಮಾಡಿಸಿಕೊಂಡು ಬರಲು ಹೋದಾಗ ರಿಜೆಕ್ಟ್ ಮಾಡಿರುವ ಉದಾಹರಣೆಗಳನ್ನು ಕೂಡ ನಾವು ನೋಡಬಹುದು. ಯಾಕೆ ಈ ಸಮಸ್ಯೆ ರೈತರಿಗೆ ಉಂಟಾಗುತ್ತಿದೆ ಎಂದು ಈ ಕೆಳಗೆ ತಿಳಿಯೋಣ.

ಬೆಳೆಹಾನಿ ಪರಿಹಾರ ಜಮಾ ಆದವರ ಪಟ್ಟಿ ಬಿಡುಗಡೆ, ನಿಮ್ಮ ಊರಿನಲ್ಲಿ ಯಾರು ಯಾರಿಗೆ ಬೆಳೆ ಪರಿಹಾರ ಜಮಾ ಆಗಿದೆ!! ನಿಮ್ಮ ಹೆಸರನ್ನು ಚೆಕ್ ಮಾಡಿ ಪಹಣಿಗಳಿಗೆ ಆಧಾ‌ರ್ ಸೀಡಿಂಗ್ ಕಡ್ಡಾಯ ರೈತರಿಗೆ ನಿಗದಿತ ಸಮಯದಲ್ಲಿ ಸರಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆಧಾರ್ ಕಾಯ್ದೆಯ ಕಲಂ 4(4)(ಬಿ)(2)ರ ಅಡಿ ಪಹಣಿಗಳಿಗೆ ಆಧಾರ್ ಸೀಡಿಂಗ್ ಮಾಡಲು ಸರಕಾರದಿಂದ ಅನುಮತಿಯನ್ನು ನೀಡಲಾಗಿದ್ದು, ಜಿಲ್ಲೆಯ ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾ‌ರ್ ದಾಖಲಾತಿಗಳೊಂದಿಗೆ ಸ್ವಯಂ ಪ್ರೇರಣೆಯಿಂದ ಇಲಾಖೆಯ ವೆಬ್‌ಸೈಟ್(ಜಾಲತಾಣ) https://landrecords.karnataka.gov.in/service4 ನಲ್ಲಿ ಲಾಗಿನ್ ಮಾಡಿಕೊಂಡು ಆಧಾರ್‌ನೊಂದಿಗೆ ಲಿಂಕ್ ಮಾಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಹಣ ಬರದೇ ಇರುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ ನೋಡಿ.

* ಆಧಾರ್ ಕಾರ್ಡ್ ಲಿಂಕ್ ಕೆವೈಸಿ ಆಗಿದೆ ಇರುವುದು.
• ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ಕೆವೈಸಿ ಮಾಡದೇ ಇರುವುದಕ್ಕೆ.
• ಮುಖ್ಯವಾಗಿ ಹೇಳಬೇಕೆಂದರೆ ರೈತರು ಪೂರ್ವಜರ ಆಸ್ತಿ ತಮ್ಮ ಹೆಸರು ನೊಂದಾಯಿಸದೆ ಇರುವುದು.
• ಹಲವಾರು ರೈತರ ಆಸ್ತಿ ದಾಖಲೆ ಸಮಸ್ಯೆ ಇದೆ. ರಾಜ್ಯದಲ್ಲಿ ಭಾರಿ ಮಳೆ ಕೊರತೆ ಉಂಟಾಗಿದೆ.
• ಎರಡು ಮೂರು ಹೊಲದ ಸರ್ವೇ ನಂಬರ್ ಬೇರೆ ಆಗಿದ್ದು ಉತಾರ್ ಲಿಂಕ್ ಸಮಸ್ಯೆ ಸಹ ಆಗಿದೆ.
* ಬಹುತೇಕ ಕುಟುಂಬಗಳ ಆಸ್ತಿಯ ಮಾಲೀಕರು ಎಂದೋ ಮೃತರಾಗಿದ್ದಾರೆ.
* ಮುಂದಿನ ವಾರಸುದಾರರಿಗೆ ಆಸ್ತಿ ಹಂಚಿಕೆಯಲ್ಲಿ ಎಫ್ ಐಡಿ ಮಾಡಿಸದೇ ಇರುವುದು.
* ಪಹಣಿ (ಉತಾರ್) ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವುದು.

ಅಥವಾ ಪಹಣಿ ಹಾಗೂ ಆಧಾರ್ ದಾಖಲಾತಿಗಳೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿ ಪ್ರಕಟಣೆ ತಿಳಿಸಿದೆ. ಸಂಭವನೀಯ ಪ್ರವಾಹ ನಿರ್ವಹಣೆಗೆ ಎಲ್ಲ ಜಿಲ್ಲಾಡಳಿತಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ನದಿಯ ಒಳಹರಿವು ಹಾಗೂ ಮಳೆಯ ಪ್ರಮಾಣದ ಮೇಲೆ ನಿರಂತರ ನಿಗಾ ವಹಿಸುವ ಮೂಲಕ ಜನ ಹಾಗೂ ಜಾನುವಾರಿಗಳ ಜೀವಹಾನಿ ತಡೆಯಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಂಭವನೀಯ ಪ್ರವಾಹ ನಿರ್ವಹಣೆ, ನೈರುತ್ಯ ಮುಂಗಾರು ಸಿದ್ಧತೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶನಿವಾರ(ಜೂ.15) ನಡೆದ ಬೆಳಗಾವಿ ವಿಭಾಗದ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನಾಹುತ ಸಂಭವಿಸಿದಾಗ ರಕ್ಷಣಾ ತಂಡಗಳು ಯಾವ ರೀತಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂಬುದರ ಕುರಿತು ಕಂದಾಯ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ಸಂಬಂಧಿಸಿದ ಇಲಾಖೆಗಳು ಮುಂಚಿತವಾಗಿಯೇ ಸಮನ್ವಯತೆ ಸಾಧಿಸಬೇಕು.

Spread positive news

Leave a Reply

Your email address will not be published. Required fields are marked *