ತೊಗರಿ ಬೆಳೆ ಉತ್ಪನ್ನ ಹೆಚ್ಚಿಸಲು ಮುಖ್ಯವಾದ ಕಾರಣಗಳು

ರೈತರ ಭಾಂದವರ ಗಮನಕ್ಕೆ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಹಾಗೂ ರೈತರಿಗೆ ಇದರಿಂದ ಏನೆಲ್ಲಾ ಉಪಯೋಗ ಇದೆ ಎಂದು ತಿಳಿಯೋಣ. 2024 ನೇ ಸಾಲಿನ ಮುಂಗಾರು ಹಂಗಾಮಿನ ಮಳೆ ಆಶ್ರಿತ ತೊಗರಿ ಕೃಷಿಯಲ್ಲಿ ಹೆಚ್ಚಾಗಿ ಕೃಷಿ ಇಲಾಖೆ ರೈತರ ಹೊಲಗಳಿಗೆ ಭೇಟಿ ನೀಡಿ ಕೀಟ ಮತ್ತು ರೋಗಬಾಧೆಗಳ ಬಗ್ಗೆ ಉಪಯುಕ್ತ ಪೂರಕ ಮಾಹಿತಿ ಸಂಗ್ರಹಣೆ ಮಾಡುವುದು. ಬೆಳೆ ನಷ್ಟವನ್ನು ಅಂದಾಜಿಸಿ ಬೆಳೆ ವಿಮೆಯನ್ನು ಇತ್ಯರ್ಥಪಡಿಸುವ ಕೆಲಸ ಹಾಗೂ ಮೇವಿನ ಪ್ರಮಾಣ ಅಂದಾಜಿಸಲು, ಭೂ ಕಂದಾಯ ಮನ್ನಾ ಮಾಡಲು ಹಾಗೂ ಕೃಷಿ ಪ್ರಶಸ್ತಿ ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದೇ ರೀತಿ ಈಗ ಸ್ವಲ್ಪ ತೊಗರಿ ಬೆಳೆ ಉತ್ಪನ್ನ ಹೆಚ್ಚಿಸಲು ಏನೇನು ಮಾಡಬೇಕು ಎಂದು ತಿಳಿಯೋಣ.

ಮುಖ್ಯವಾಗಿ ಹೇಳಬೇಕೆಂದರೆ ಸರ್ಕಾರವು ಕೈಗೊಂಡಿರುವ ಎಲ್ಲಾ ಯೋಜನೆಯ ಈವರೆಗಿನ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು ಅಂದಿನ ಉದ್ದೇಶಗಳನ್ನು ತಲುಪಲು ಸಾಧ್ಯವಾಗಿರುತ್ತದೆ. ಆದರೆ, ಸಾವಯವ ಕೃಷಿ ಉತ್ಪನ್ನಗಳ ಬಗೆಗಿನ ಅರಿವಿನಿಂದಾಗಿ ಉಂಟಾಗಿರುವ ಬೇಡಿಕೆಯನ್ನು ಪೂರೈಸುವಲ್ಲಿ ಹಾಗೂ ಈ ಬೇಡಿಕೆಯಿಂದಾಗಿ ಉತ್ಪನ್ನಗಳ ಗುಣಮಟ್ಟ ಕಾಪಾಡುವಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಸೃಷ್ಟಿಸಿವೆ. ಈ ನ್ಯೂನ್ಯತೆಗಳನ್ನು ಸರಿಪಡಿಸಲು ಹಾಗೂ ಮಾರುಕಟ್ಟೆ ಆಧಾರಿತ ಕಾರ್ಯಕ್ರಮವನ್ನಾಗಿ ರೂಪಿಸಲು ಸದರಿ ನೀತಿಯನ್ನು ಮಾರುಕಟ್ಟೆ ಆಧಾರಿತ ಚಟುವಟಿಕೆಗಳ ಸೇರ್ಪಡೆಯೊಂದಿಗೆ ಪರಿಷ್ಕರಿಸಿ ಸಾವಯವ ಕೃಷಿ ನೀತಿ, 2017 ಹೊರತರಲಾಗಿದ್ದು, ಸದರಿ ನೀತಿಯಡಿ ಅನೇಕ ಮಾರುಕಟ್ಟೆ ಸಂಬಂಧಿತ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿರುತ್ತದೆ.

ತೊಗರಿ ಬೆಳೆಯ ಇಳುವರಿ ಹೆಚ್ಚಿಸಲು ಅಳವಡಿಸಬೇಕಾದ ಉತ್ಪಾದನಾ ತಾಂತ್ರಿಕತೆಗಳು –

• ಬಿತ್ತನೆ ಮಾಡುವ ಮೊದಲು ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡುವುದು ಹಾಗೂ ಪ್ರತಿ ಎಕರೆಗೆ 03 ಟನ್ ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಬಿತ್ತನೆಯ 2-3 ವಾರಗಳ ಮುಂಚೆ ಭೂಮಿಗೆ ಸೇರಿಸುವುದು.
• ಬಿತ್ತನೆ ಕಾಲ: ಜೂನ್ ದಿಂದ ಜುಲೈ 15 ರವರೆಗೆ
• ಸುಧಾರಿತ ಹಾಗೂ ರೋಗ ನಿರೋಧಕ ತಳಿಗಳ ಬಿತ್ತನೆ ಬೀಜಗಳನ್ನು ಬಳಸುವುದು. ໐໑: GRG-152, GRG-811
• ಬೀಜೋಪಚಾರ: ಬಿತ್ತನೆಗೆ ಮುಂಚಿತವಾಗಿ ಬೀಜಗಳಲ್ಲಿ ಬರ ನಿರೋಧಕತೆ ಹೆಚ್ಚಿಸಲು ಬೀಜಗಳನ್ನು ಶೇ. 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ ತಾಸು ನೆನೆಸಿ, ನಂತರ ನೆರಳಿನಲ್ಲಿ ಕನಿಷ್ಠ 7 ತಾಸು ಒಣಗಿಸಬೇಕು. ನಂತರ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 03 ಗ್ರಾಂ ಶಿಲೀಂದ್ರ ಮಿಶ್ರಣವಾದ ಕಾರ್ಬೆಂಡಜಿಂ ಶೇ.12 + ಮ್ಯಾಂಕೋಜೆಬ್ ಶೇ.64 ಅಥವಾ 10 ಗ್ರಾಂ ಜೈವಿಕ ಗೊಬ್ಬರಗಳಾದ ಟ್ರೈಕೋಡರ್ಮಾ, ಪಿ.ಎಸ್.ಬಿ ಹಾಗೂ ರೈಜೋಬಿಯಂಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು.
• ಯಾಂತ್ರೀಕೃತ ಬಿತ್ತನೆ ಅನ್ವಯ ಸರಿಯಾದ ಬೆಳೆ ಅಂತರ ಕಾಪಾಡುವುದು. 90 X 30 ಸೆ.ಮೀ (ಮಧ್ಯಮಾವಧಿ ತಳಿಗಳಿಗೆ), 150 X 20 ಸೆ.ಮೀ (ದೀರ್ಘಾವಧಿ ತಳಿಗಳಿಗೆ) ಅಂತರದಲ್ಲಿ ಬಿತ್ತನೆ ಮಾಡಬೇಕು. ಹೆಚ್ಚಿನ ಸಸಿಗಳನ್ನು ಕಿತ್ತು ಹಾಕಬೇಕು.

• ನೀರಾವರಿ ವ್ಯವಸ್ಥೆ ಇದ್ದಲ್ಲಿ ನಾಟಿ ಅಥವಾ ಉರುಗಾಳು ಪದ್ಧತಿಯಲ್ಲಿ ತೊಗರಿಯನ್ನು ಬೆಳೆಯಬಹುದು.
• ಬೆಳವಣಿಗೆ ಹಂತದಲ್ಲಿ (ಬೆಳೆ ಹಂತ: 45-55 ದಿನಗಳು) ತಪ್ಪದೇ ಕುಡಿ ಚಿವುಟುವುದು.
• ಬಿತ್ತಿದ 60 ದಿನದೊಳಗೆ ಬಂಜೆ/ಗೊಡ್ಡು ರೋಗ ಕಂಡುಬಂದಲ್ಲಿ ಪ್ರತೀ ಲೀ. ನೀರಿಗೆ ಒಬೆರಾನ್ 0.5 ಮಿ.ಲೀ ಮತ್ತು 19:19:19, 05 ಗ್ರಾಂ ಬೆರೆಸಿ ಸಿಂಪರಣೆ ಮಾಡಬೇಕು.
• ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು ಬಳಸುವುದು: ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ಎಕರೆಗೆ

ಯೂರಿಯಾ: 5 ಕಿ.ಗ್ರಾಂ ಹಾಗೂ ಡಿ.ಎ.ಪಿ 44 ಕಿ.ಗ್ರಾಂ ಅಥವಾ
✓ ಸಿ.ಎ.ಎನ್ 39 ಕಿ.ಗ್ರಾಂ ಹಾಗೂ ಎಸ್.ಎಸ್.ಪಿ 125 ಕಿ.ಗ್ರಾಂ ಅಥವಾ
* ಅಮೋನಿಯಂ ಸಲ್ವೇಟ್ 48 ಕಿ.ಗ್ರಾಂ ಹಾಗೂ ಎಸ್.ಎಸ್.ಪಿ 125 ಕಿ.ಗ್ರಾಂ
• ಮಳೆ ಕೊರತೆಯಾದಾಗ ಎಡೆಕುಂಟೆ ಮೂಲಕ ತೇವಾಂಶ ಕಾಪಾಡುವುದು ಮತ್ತು ಸಂದಿಗ್ಧ ಹಂತಗಳಲ್ಲಿ ನೀರು ಹಾಯಿಸುವುದು. (ಬೆಳೆಯ ಮುಖ್ಯ ಹಂತಗಳಾದ ಹೂ ಹಾಗೂ ಕಾಳುಕಟ್ಟುವ ಸಮಯದಲ್ಲಿ ಎರಡು ಬಾರಿ ನೀರು ಕೊಡುವುದರಿಂದ ಅಧಿಕ ಇಳುವರಿ ಪಡೆಯಬಹುದು.)

ತೊಗರಿಯಲ್ಲಿ ಮೊಗ್ಗು ಮತ್ತು ಹೂ ಉದುರುವುದನ್ನು ತಡೆಯಲು ನ್ಯಾಫ್ತಲೀನ್ ಅಸಿಟಿಕ್ ಆಸಿಡ್ 4.5% ಎಸ್. ಎಲ್. ಸಸ್ಯ ಪ್ರಚೋದಕ (0.5 ಮೀ. ಲೀ./ ಲೀಟರ್) ಮತ್ತು ಕಾರ್ಬನ್ ಡೈಜಿಮ್ ಶಿಲೀಂಧ್ರನಾಶಕವನ್ನು (1 ಗ್ರಾಂ/ ಲೀಟರ್), ತೊಗರಿ ಕಾಯಿ ಕೊರಕಕ್ಕೆ ಶಿಫಾರಸ್ಸು ಮಾಡಿದಂತಹ ಕೀಟ ನಾಶಕಗಳ ಜೊತೆ ಬೆರೆಸಿ ಎಲೆಚುಕ್ಕೆ ರೋಗದ ಲಕ್ಷಣ ಕಂಡಕೂಡಲೆ ಅಥವಾ ಸಂಪೂರ್ಣವಾಗಿ ಹೂ ಬಿಟ್ಟಾಗ 10-15 ದಿವಸಗಳ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು.

• ಪ್ರತಿ ಲೀಟರ ನೀರಿಗೆ 10 ಗ್ರಾಂ ಪಲ್ಸ್ ಮ್ಯಾಜಿಕ್ ಬೆರೆಸಿ, ಶೇ. 50 ರಷ್ಟು ಹೂವಾಡುವಾಗ ಹಾಗೂ 15 ದಿನಗಳ ನಂತರ ಸಿಂಪಡಿಸಬೇಕು. (ಒಟ್ಟು 02 ಬಾರಿ)
• ಕಾಯಿಕೊರಕ ಹುಳುವಿನ ಪರಿವೀಕ್ಷಣೆಗಾಗಿ ಎಕರೆಗೆ 4-5 ಮೋಹಕ ಬಲೆಗಳನ್ನು ಬಳಸುವುದು. 20 ದಿನಗಳಿಗೊಮ್ಮೆ ಮೋಹಕ ವಸ್ತು (ಲ್ಯೂರ್) ಬದಲಿಸುವುದು. ಬಲೆಗಳನ್ನು ವೀಕ್ಷಿಸಿದಾಗ ಒಂದು ದಿನಕ್ಕೆ ಒಂದು ಬಲೆಯಲ್ಲಿ 5 ಅಥವಾ ಹೆಚ್ಚಿನ ಪತಂಗಗಳು ಕಂಡುಬಂದರೆ ಸೂಕ್ತ ಹತೋಟಿಗೆ ಮುಂದಾಗುವುದು.

• ಬೆಳೆಯ ಸುತ್ತಲೂ ಗಡಿ ಚೆಂಡುಹೂವನ್ನು ಬಲೆ ಬೆಳೆಯಾಗಿ ಬೆಳೆಯುವುದರಿಂದ ತೊಗರಿಗೆ ಕೀಟಭಾದೆ ಕಡಿಮೆ ಮಾಡಬಹುದು. ಬೆಳೆಯಲ್ಲಿ ಪಕ್ಷಿಗಳನ್ನು ಆಕರ್ಷಿಸಲು ಮತ್ತು ಪಕ್ಷಿಗಳು ಕೂರಲು ಬೆಳೆಗಿಂತ ಎತ್ತರವಾಗಿ ಕವಲೊಡೆದ ರೆಂಬೆಗಳನ್ನು ಹೊಲದಲ್ಲಿ ನೆಡುವುದು.
• ಕಾಯಿಕೊರಕ ಹುಳು ಕಂಡುಬಂದರೆ ಪ್ರತೀ ಲೀ. ನೀರಿಗೆ 0.2 ಮಿ.ಲೀ. ಪ್ರೊಬೆಂಡಿಯಮೈಡ್ 39.35 ಎಸ್.ಸಿ. ಅಥವಾ 0.2 ಗ್ರಾಂ ಇಮಾಮೆಕ್ಸಿನ್ ಬೆಂಜೋಯೆಟ್ 05 ಎಸ್.ಜಿ ಅಥವಾ 0.15 ಮಿ.ಲೀ ಕ್ಲೋರೆಂಟ್ರಿನಿಲಿಪ್ರೋಲ 18.5 ಎಸ್.ಸಿ ಕೀಟನಾಶಕಗಳನ್ನು ಸಿಂಪಡಿಸುವುದು. ಒಂದು ಬಾರಿ ಉಪಯೋಗಿಸಿದ ರಸಾಯನಿಕ ಕೀಟನಾಶಕಗಳನ್ನು ಪದೇ ಪದೇ ಬಳಸಬಾರದು. ಶಿಫಾರಸ್ಸು ಮಾಡಿದ ಪ್ರಮಾಣದ ಕೀಟನಾಶಕಗಳ ಜೊತೆ ಪುಂಡಿ ಅಥವಾ ಎಳ್ಳೆಣ್ಣೆಯನ್ನು 1:1 ರ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು.

ಇಂದು ಖಾತೆಗೆ 2000ರೂ, ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಹೀಗೆ ಮಾಡಿ

Spread positive news

Leave a Reply

Your email address will not be published. Required fields are marked *