ಕೇಂದ್ರ ಸರ್ಕಾರ ಹೆಚ್ಚಿಸಿದ 14 ಬೆಳೆಗಳ ಬೆಂಬಲ ಬೆಲೆಯ ಕಂಪ್ಲೀಟ್ ರಿಪೋರ್ಟ್

ಸರ್ಕಾರವು ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಎಷ್ಟು ಮಾಡಿದೆ? ಬನ್ನಿ ಯಾವ ಯಾವ ಬೆಳೆಗಳು ಎಂದು ತಿಳಿಯೋಣ.
ಪ್ರೀಯ ರೈತರೇ ಸರ್ಕಾರವು ರೈತರ ಹಿತದೃಷ್ಟಿಯಿಂದ ಹಾಗೂ ರೈತರಿಗೆ ಉತ್ಪನ್ನಗಳ ಮೇಲೆ ಆಸಕ್ತಿ ತೋರಿಸಿ ರೈತರಿಗೆ ಕೃಷಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಆಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2024-25 ರ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೆಚ್ಚಿಸಲು ಅನುಮೋದಿಸಿದೆ. ಇದರಿಂದ ರೈತರಿಗೆ ಅವರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ಬೆಲೆ ಸಿಗುವುದರಿಂದ ರೈತರಿಗೆ ಆರ್ಥಿಕವಾಗಿ ಸಬಲೀಕರಣ ಹೊಂದಲು ಸಹಾಯ ಮಾಡುತ್ತದೆ.

ಎಷ್ಟು ಹಣದವರೆಗೆ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ?

ಮುಖ್ಯವಾಗಿ ಹೇಳಬೇಕೆಂದರೆ ಸರ್ಕಾರವು ಈಗಾಗಲೇ ಹಿಂಗಾರು ಬೆಳೆಗಳಿಗೆ ರೈತರಿಗೆ ಅನುಕೂಲ ಆಗುವಂತೆ ಅತಿಹೆಚ್ಚು ಹೆಚ್ಚಳವನ್ನು (ಮಸೂರ್) ರೂ.500/ ಕ್ವಿಂಟಲ್‌ಗೆ ಅನುಮೋದಿಸಲಾಗಿದೆ, ನಂತರ ರೇಪ್‌ಸೀಡ್ ಮತ್ತು ಸಾಸಿವೆ ರೂ.400/ ಕ್ವಿಂಟಲ್‌ಗೆ ಅನುಮೋದಿಸಲಾಗಿದೆ. ಕುಸುಬೆಗೆ ರೂ. 209/ ಕ್ವಿಂಟಲ್ ಅನುಮೋದಿಸಲಾಗಿದೆ. ಗೋಧಿ, ಬೇಳೆ ಮತ್ತು ಬಾರ್ಲಿಗೆ ರೂ.110/ ಕ್ವಿಂಟಲ್, ರೂ.100/ ಕ್ವಿಂಟಲ್ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಹೀಗೆ ಸರ್ಕಾರವು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಈಗ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಹಲವಾರು ರೈತರಿಗೆ ಇದರ ಸದುಪಯೋಗ ಪಡೆಯಬೇಕಾಗಿದೆ.

ಯಾವ ಬೆಳೆಗೆ ಎಷ್ಟು ಬೆಲೆ ಪರಿಷ್ಕರಣೆ? (ಪ್ರತಿ ಕ್ವಿಂಟಾಲ್ ರೂಪಾಯಿ)

• ಬೆಳೆಗಳು ಹಳೇ ದರ ಹೊಸ ದರ
• ಭತ್ತ -ಸಾಮಾನ್ಯ. 2040/ 2300/
• ಭತ್ತ-ದರ್ಜೆ ಎ 2060/ 2320/
• ಜೋಳ ಹೈಬ್ರಿಡ್ 2970/ 3371
• ಜೋಳ- ಮಾಲ್ದಂಡಿ 2999/ 3421/
• ಸಜ್ಜೆ – 2350/ 2625/
• ರಾಗಿ – 3578/ 4290/
• ಮೆಕ್ಕೆಜೋಳ – 1962/ 2225/
• ತೊಗರಿ ಬೇಳೆ – 6600/ 7550/
• ಹೆಸರು ಬೇಳೆ – 7755/ 8682/
• ಉದ್ದು – ‌ 6600/ 7400/
• ನೆಲಗಡಲೆ – 5850/ 6783/
• ಸೂರ್ಯಕಾಂತಿ ಬೀಜ – 6400/ 7280
• ಸೋಯಾಬೀನ್ (ಹಳದಿ) – 4300/ 4892l
• ಹತ್ತಿ – 6080/ 7521/

ಕೇಂದ್ರ ಸಚಿವ ಸಂಪುಟವು ಬುಧವಾರ ಖಾರಿಫ್ (ಬೇಸಿಗೆ) ಬಿತ್ತನೆ ಅವಧಿಗೆ ಮುಂಚಿತವಾಗಿ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಏರಿಕೆ ಮಾಡಿದೆ. ವೆಚ್ಚದ ಕನಿಷ್ಠ ಶೇ. 50ರಷ್ಟು ಎಂಎಸ್‌ಪಿ ಏರಿಕೆಗೆ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ರೈತರಿಗಾಗಿ ಮೂರನೇ ಅವಧಿಯಲ್ಲಿ ಮೊದಲ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು. ಇದೀಗ ಇಂದಿನ ಸಚಿವ ಸಂಪುಟ ಸಭೆಯಲ್ಲೂ ರೈತರ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಖಾರಿಫ್ ಹಂಗಾಮು ಆರಂಭವಾಗಿದ್ದು ಸಚಿವ ಸಂಪುಟವು ಹಂಗಾಮಿಗೆ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಅನುಮೋದನೆ ನೀಡಿದೆ,” ಎಂದು ವೈಷ್ಣವ್‌ ಹೇಳಿದ್ದಾರೆ.

Spread positive news

Leave a Reply

Your email address will not be published. Required fields are marked *