ರೈತರಿಗೆ ಬೇಸಿಗೆಯಲ್ಲಿ ಕೃಷಿಯ ನಿರ್ವಹಣೆಯ ಬಗ್ಗೆ ಉಚಿತ ತರಬೇತಿ

ಆತ್ಮೀಯ ರೈತ ಬಾಂಧವರೇ ವಿವಿಧ ಖಾಸಗಿ ಸಂಸ್ಥೆಗಳು ಕೃಷಿ ಹಾಗೂ ಕೃಷಿಯೇತರ ವಿಷಯಗಳ ಬಗ್ಗೆ ರೈತರಲ್ಲೇ ಅರಿವು ಮೂಡಿಸಲು ವಿವಿಧ ರೀತಿಯ ನೂತನ ಪದ್ದತಿಯ ತರಬೇತಿಗಳನ್ನು ನೀಡುತ್ತಾ ಬಂದಿದ್ದಾರೆ ಹಾಗೆ ಇಲ್ಲೊಂದು ಸುವರ್ಣ ಅವಕಾಶ ನಮ್ಮೆಲ್ಲ ರೈತ ಬಾಂಧವರಿಗೆ ಬಂದಿದೆ. ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ, ಕಾರ್ಯನಿರತ ಪತ್ರಕರ್ತರ ಸಂಘ, ಚಾಮರಾಜನಗರ ಜಿಲ್ಲೆ ಇವರ ಎಲ್ಲರ ಸಹಯೋಗದೊಂದಿಗೆ ರೈತ ಬಾಂಧವರಿಗೆ ಬರುವ 06 ಮಾರ್ಚ 2024ನೇ ಬುಧವಾರ, ಬೆಳಗ್ಗೆ ೧೦ ಗಂಟೆಗೆ ತರಬೇತಿಯನ್ನು ಆಯೋಜಿಸಲಾಗಿದೆ.

ಯಾವ ವಿಷಯದ ಮೇಲೆ ಈ ತರಬೇತಿಯು ನಡೆಯಲಿದೆ?
ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ, ಕಾರ್ಯನಿರತ ಪತ್ರಕರ್ತರ ಸಂಘ, ಚಾಮರಾಜನಗರ ಜಿಲ್ಲೆ ಇವರ ಎಲ್ಲರ ಸಹಯೋಗದಲ್ಲಿ ನಡೆಸುವ ಈ ತರಬೇತಿಯಲ್ಲಿ ಬೇಸಿಗೆಯಲ್ಲಿ ತೋಟಗಳ ನಿರ್ವಹಣೆಯ ಬಗ್ಗೆ ಮುಖ್ಯ ವಿಷಯವಾಗಲಿ ಹಾಗೂ ಇನ್ನಿತರ ಸಂಬಂಧ ಪಟ್ಟ
ವಿಷಯದ ಬಗ್ಗೆ ತರಬೇತಿಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಈ ತರಬೇತಿಯು ತೋಟಗಾರಿಕಾ ಬೆಳೆಗಳಿಗೆ ಮಾತ್ರ ಇರುವ ಉದ್ದೇಶವೇನು?
ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹಾಗೂ ಇತ್ತೀಚಿಗೆ ತೋಟಗಾರಿಕಾ ಬೆಳೆಗಳಿಗೆ ಅತ್ಯಂತ ಬೇಡಿಕೆ ಇದೆ. ಈ ಬೆಳೆಗಳನ್ನು ಬೆಳೆಯುವ ರೈತರಿಗೆ ತಮ್ಮ ತೋಟಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು ಹೇಗೆ, ನೀರಿನ ಕೊರತೆ ಹಾಗೂ ಬೇಸಿಗೆ ಕಾಲದಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳು ಹಾಗೂ ನಿರ್ವಹಣೆಯ ಕುರಿತು ಸಲಹೆ, ಸೂಚನೆಗಳನ್ನು ನೀಡುವುದು ಹಾಗೂ ತೋಟಗಾರಿಕಾ ಬೆಳೆಯ ಬೆಳೆಗಾರರ ಉತ್ಸುಕತೆಯನ್ನು ಹೆಚ್ಚಿಸುವುದು ಈ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ.

ಈ ತರಬೇತಿ ರೈತರಿಗೆ ಹಾಗೂ ಯುವ ಸಮುದಾಯಕ್ಕೆ ಹೇಗೆ ಪ್ರಯೋಜನವಾಗಲಿದೆ?
ದುಡಿಯುವ ಉದ್ದೇಶದಿಂದ ಹಳ್ಳಿಗಳನ್ನು ತೊರೆದು ಬೆಂಗಳೂರು ಮತ್ತಿತರ ನಗರಗಳಿಗೆ ವಲಸೆ ಹೋಗಿದ್ದ ಹೆಚ್ಚಿನ ಸಂಖ್ಯೆಯ ಯುವಕರು ಕೊರೊನಾ ಅಲೆ ಹಿನ್ನೆಲೆಯಲ್ಲಿ ಈಗ ಸ್ವಗ್ರಾಮಗಳಿಗೆ ಮರಳಿದ್ದಾರೆ. ಹೀಗೆ ಮರಳಿದವರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಹಲವರು ಹಣ್ಣು ಮತ್ತು ಇತರೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರುತ್ತಿರುವುದು ಕಂಡುಬಂದಿದೆ. ಇಂತಹ ಆಸಕ್ತ ಯುವ ಕೃಷಿಕರಿಗೆ ಹಣ್ಣಿನ ತೋಟಗಳನ್ನು ನಿರ್ಮಿಸುವುದು ಅಥವಾ ಬೆಳೆಸುವುದು ಹೇಗೆ ಮತ್ತು ಅವುಗಳ ನಿರ್ವಹಣೆ ಮಾಡುವುದು ಹೇಗೆ ಎಂಬುದರ ಕುರಿತು ಅಗತ್ಯವಿರುವ ಮಾಹಿತಿಯನ್ನು ತರಬೇತಿ ಕಾರ್ಯಾಗಾರದಲ್ಲಿ ನೀಡಲಾಗುತ್ತದೆ ಎಂದು ಸಂಸ್ಥೆಯು ತಿಳಿಸಿದೆ. ತೋಟಗಾರಿಕೆಯ ಸಂಪೂರ್ಣ ನಿರ್ವಹಣೆ ಹಾಗೂ ಯಾವ ಯಾವ ಕ್ರಮಗಳನ್ನು ಯಾವ ಯಾವ ಸಮಯಗಳಲ್ಲಿ ಶೀಘ್ರವಾಗಿ ತೆಗೆದುಕೊಳ್ಳಬೇಕೆಂಬ ಸಂಪೂರ್ಣ ಮಾಹಿತಿಯು ಇಲ್ಲಿ ಸಿಗಲಿದೆ.

ಮುಖ್ಯ ವಿಷಯ ಹೊರತುಪಡಿಸಿ ಯಾವ ರೀತಿಯ ಬೋಧನೆ ಇಲ್ಲಿ ಸಿಗಲಿದೆ?
ತೋಟಗಳ ವಿನ್ಯಾಸ, ಪ್ರಮುಖ ಹಣ್ಣು ಬೆಳಗಳ ಕಸಿ / ಬೀಜದ ಸಸಿಗಳ ಆಯ್ಕೆ, ನಾಟಿ ವಿಧಾನ, ತೋಟಗಳ ನಿರ್ಮಾಣ ಮತ್ತು ನಿರ್ವಹಣೆಯ ತಾಂತ್ರಿಕತೆಗಳ ಕುರಿತು ಕೃಷಿ ವಿಜ್ಞಾನಿಗಳು ಮತ್ತು ಅನುಭವಿ ಪ್ರಗತಿಪರ ಕೃಷಿಕರು ಮಾಹಿತಿ ನೀಡಲಿದ್ದಾರೆ. ಇದರೊಂದಿಗೆ
ನಂತರ ರೈತರ ಪ್ರಶ್ನೆಗಳಿಗೆ ಉತ್ತರಿಸಿ, ಅವರೊಂದಿಗೆ ಚರ್ಚಿಸಿ ಅನುಮಾನಗಳನ್ನು ದೂರಮಾಡಲಿದ್ದಾರೆ.
ವಿಷಯ ಬೋಧನೆ, ಪ್ರಶ್ನೋತ್ತರಗಳು ಹಾಗೂ ಚರ್ಚಾಸ್ಪದ ವಿಷಯಗಳ ಈ ಮೂರು ವಿಷಯಗಳನ್ನು ಈ ತರಬೇತಿಯು ಒಳಗೊಂಡಿರಲಿದೆ.

ತರಬೇತಿ ನಡೆಯುವ ದಿನಾಂಕ ಯಾವುದು?

ದಿನಾಂಕ : 06/03/2024, ಬುಧವಾರ ಈ ತರಬೇತಿ ಜರುಗಲಿದೆ.

ಈ ತರಬೇತಿ ನಡೆಯುವ ವಿಳಾಸ ಯಾವುದು?
ಸ್ಥಳ : ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿ, ಚಾಮರಾಜನಗರ.

ತರಬೇತಿ ಯಾವ ಸಮಯಕ್ಕೆ ನಡೆಯಲಿದೆ?
ಸಮಯ : ಬೆಳಗ್ಗೆ 10 ಗಂಟೆಯಿಂದ ಈ ತರಬೇತಿಗಳು ನಡೆಯಲಿದೆ.

ಈ ತರಬೇತಿ ಹಾಗೂ ಇನ್ನಿತರ ಯಾವುದೇ ಗೊಂದಲಗಳಿದ್ದರೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ:
ಮಾಹಿತಿಗಾಗಿ : 9880949689

ರೈತರಿಗೆ ಸುಲಭವಾಗಿ ಸ್ಥಳದ ನಿಖರ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರುವ ಸ್ಥಳದ ನಕ್ಷೆಯ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ನಿಖರ ಸ್ಥಳದ ಮಾಹಿತಿ ಸಿಗುತ್ತದೆ.
ಸ್ಥಳದ ನಕ್ಷೆ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:
https://maps.app.goo.gl/6YR1nUkpJkxeCWXGA

ತಪ್ಪದೇ ಭೇಟಿ ನೀಡಿ:
1.ಮಣ್ಣು ಪರೀಕ್ಷೆ ಹಾಗೂ ಅದರ ಸಂಪೂರ್ಣ ಮಹತ್ವ ಇಲ್ಲಿದೆ ನೋಡಿ.

2.ರೈತರಿಗೆ ಶಿಷ್ಯವೇತನ ಸಹಿತ ತೋಟಗಾರಿಕೆ ತರಬೇತಿ: ವಿಶೇಷ ಸುವರ್ಣಾವಕಾಶ

Spread positive news

Leave a Reply

Your email address will not be published. Required fields are marked *