ರೈತರಿಗೆ ಶಿಷ್ಯವೇತನ ಸಹಿತ ತೋಟಗಾರಿಕೆ ತರಬೇತಿ: ವಿಶೇಷ ಸುವರ್ಣಾವಕಾಶ

ಆತ್ಮೀಯ ರೈತ ಬಾಂಧವರೇ, ಇಲ್ಲೊಂದು ಸುವರ್ಣ ಅವಕಾಶ ನಿಮಗಾಗಿ ಕಾಯುತ್ತಿದೆ. ಬೆಂಗಳೂರಿನ ತೋಟಗಾರಿಕಾ ಕೇಂದ್ರ ನಿಮಗಾಗಿ ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್‍ಬಾಗ್, ಬೆಂಗಳೂರು ಇವರಿಂದ ಒಂದು ವಿನೂತನ ತರಬೇತಿಯನ್ನು ಏರ್ಪಡಿಸಿದ್ದಾರೆ. ಈ ಸ್ಥಳದಲ್ಲಿ ಮೇ 02, 2024 ರಿಂದ ಫೆಬ್ರವರಿ 28.2025 ರ ವರೆಗೆ ನಡೆಯುವ ಈ 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿಗೆ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆದರೆ ಈ ಸಂಸ್ಥೆಯಿಂದ ಕೆಲ ಷರತ್ತುಗಳು ಹಾಗೂ ಕೆಲ ಆಯ್ದ ಜಿಲ್ಲೆಗಳ ರೈತರಿಗೆ ಮಾತ್ರ ಈ ತರಬೇತಿಯ ಪ್ರಯೋಜನ ಸಿಗಲಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ತೋಟಗಾರಿಕಾ ತರಬೇತಿ ಕೇಂದ್ರದಿಂದ ಯಾವ ಜಿಲ್ಲೆಗಳ ರೈತರಿಗೆ ತರಬೇತಿ ನೀಡಲಾಗುವುದು?
1.ಬೆಂಗಳೂರು ಗ್ರಾಮಾಂತರ
2.ಬೆಂಗಳೂರು ನಗರ
3.ತುಮಕೂರು
4.ರಾಮನಗರ
5.ಚಿಕ್ಕಬಳ್ಳಾಪುರ
6.ಕೋಲಾರ
ಈ ಮೇಲ್ಕಂಡ ಜಿಲ್ಲೆಗಳಲ್ಲಿ ವಾಸವಾಗಿರುವ ಅರ್ಹ ರೈತರಿಂದ ಮಾತ್ರ ಅರ್ಜಿಯನ್ನು ಸ್ವೀಕರಿಸಲಾಗುವುದೆಂದು ಸಂಸ್ಥೆಯು ಕಡ್ಡಾಯವಾಗಿ ಖಚಿತಪಡಿಸಿದೆ.

ಈ ತರಬೇತಿಗೆ ಆಯ್ಕೆಯಾದ ರೈತರಿಗೆ ಎಷ್ಟು ಮಾಸಿಕ ವೇತನ ದೊರೆಯಲಾಗುವುದು?
ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್‍ಬಾಗ್, ಬೆಂಗಳೂರು ಇವರು ಆಯ್ಕೆಮಾಡಿದ ಅರ್ಹ ಅಭ್ಯರ್ಥಿಗಳಿಗೆ ರೂ.1,750/- ಗಳ ಮಾಸಿಕ ಶಿಷ್ಯ ವೇತನ (ಮಾಜಿ ಸೈನಿಕರನ್ನು ಹೊರತುಪಡಿಸಿ) ವನ್ನು ನೀಡಲಾಗುವುದು. ವಿಶೇಷ ಸೂಚನೆ: ಮಾಜಿ ಸೈನಿಕರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು ಆದರೆ ಆಯ್ಕೆಯಾದ ನಂತರ ಶಿಷ್ಯವೇತನವನ್ನು ಅವರು ಪಡೆಯಲು ಅರ್ಹರಿರುವುದಿಲ್ಲ. ಆದರೆ ಅವರು ತರಬೇತಿಯನ್ನು ಪಡೆದುಕೊಳ್ಳಬಹುದು.

ಈ ತರಬೇತಿಯು ಎಷ್ಟು ದಿನಗಳ ಕಾಲಗಳವರೆಗೆ ನಡೆಯಲಿದೆ?
ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್‍ಬಾಗ್, ಬೆಂಗಳೂರು ಇವರು ನಡೆಸುತ್ತಿರುವ ಈ ವಿಭಿನ್ನ ತೋಟಗಾರಿಕಾ ತರಬೇತಿಯು ಒಟ್ಟು 10 ತಿಂಗಳ ಅವಧಿಯ ತರಬೇತಿ ನೀಡಲಾಗುತ್ತದೆ.

ಈ ತರಬೇತಿಗೆ ಅರ್ಜಿ ಸಲ್ಲಿಸುವ ರೈತರಿಗೆ ಇರಬೇಕಾದ ಅರ್ಹಮಾಣದಂಡಗಳು ಈ ಕೆಳಗಿನಂತಿವೆ
*ಕನ್ನಡ ವಿಷಯಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷ

*ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ.

*ಇತರರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ಇರಬೇಕು.

ಈ ತರಬೇತಿಯ ವಿಶೇಷವೇನು?
*ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು

*ಈ ತರಬೇತಿಯ ಪಡೆಯುವ ಅಭ್ಯರ್ಥಿಯ ತಂದೆ ಅಥವಾ ಪೋಷಕರು ಸ್ವಂತ ಸಾಗುವಳಿ ಮಾಡುತ್ತಿರಬೇಕು.

*ಸ್ವಂತ ಸಾಗುವಳಿ ಮಾಡುವ ಭೂಮಿಯ ಪಹಣಿಯನ್ನು ಸಲ್ಲಿಸುವುದು ಕಡ್ಡಾಯ. ಸಂಕ್ಷಿಪ್ತವಾಗಿ ಈ ಬಗ್ಗೆ ಪಹಣಿ ನೀಡುವುದು ಕಡ್ಡಾಯವಾಗಿರುತ್ತದೆ.

ಈತೋಟಗಾರಿಕಾ ತರಬೇತಿಗೆ ಅರ್ಜಿ ಸಲ್ಲಿಸುವ ರೈತರು ಮಾಜಿ ಸೈನಿಕರಾಗಿದ್ದಾರೆ ಅವರಿಗೆ ವಿಶೇಷ ಕೆಲ ಷರತ್ತುಗಳಿವೆ!
*ಮಾಜಿ ಸೈನಿಕರು ಪ್ರವೇಶ ಪಡೆಯಲು ಇಚ್ಚಿಸಿದಲ್ಲಿ ಮೇಲೆ ತಿಳಿಸಿದ ವಿವರಗಳೊಂದಿಗೆ ಇತರೆ ದಾಖಲಾತಿಗಳಾದ
Discharge book copy,
personal pension order copy, Ex.serviceman ID card copy ಗಳನ್ನು ಸಲ್ಲಿಸಬೇಕು.

ಪಿಎಂ ಕಿಸಾನ್ 16ನೇಕಂತು ಜಮಾ ಆಗಿಲ್ಲವೇ? ಈಗಲೇ ಈ ಸಂಖ್ಯೆಗೆ ಕರೆ ಮಾಡಿ!

ಈ ಎಲ್ಲಾ ದಾಖಲಾತಿಗಳನ್ನು ನೀಡುವುದು ಕಡ್ಡಾಯ ಹಾಗೂ ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ಕಡ್ಡಾಯವಾಗಿ ದೃಢಕಾಯರಾಗಿರಬೇಕು.

ಈ ತೋಟಗಾರಿಕಾ ತರಬೇತಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಅರ್ಜಿಯನ್ನು ಆಫ್ಲೈನ್ ಅಥವಾ ಆನ್ಲೈನ್ ಮೂಲಕ ಸಲ್ಲಿಸಬಹುದು ಅಭ್ಯರ್ಥಿಗಳಿಗೆ ಯಾವುದು ಸರಳ ವಿಧಾನ ಅನಿಸುತ್ತದೆಯೋ ಅದರ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.

1.ಆಫ್ ಲೈನ್ ಅರ್ಜಿ ಸಿಗುವ ವಿಧಾನ:
ಅರ್ಜಿಗಳನ್ನು ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ರವರ ಕಛೇರಿಯಲ್ಲಿ ಅರ್ಜಿ ಸಿಗುತ್ತದೆ

2.ಆನಲೈನ್ ಅರ್ಜಿ ಸಿಗುವ ವಿಧಾನ:
ತೋಟಗಾರಿಕಾ ಇಲಾಖೆ ವೆಬ್‍ಸೈಟ್ ಅನ್ನು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡೋ ಮುಖಾಂತರ ಬೇಟಿ ನೀಡಬೇಕು. https://horticulturedir.karnataka.gov.in ನಲ್ಲಿ
ಬೇಟೆ ನೀಡುವುದರ ಮುಖಾಂತರ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ಅರ್ಜಿಯನ್ನು ಆಫ್ಲೈನ್ ಮುಖಾಂತರ ಸಲ್ಲಿಸಬೇಕಾಗುತ್ತದೆ

ಅಭ್ಯರ್ಥಿಗಳಿಗೆ ಅರ್ಜಿಸಲ್ಲಿಸಲು ಇರುವ ಕಾಲಾವಕಾಶ ಎಷ್ಟು?
ಈ ತರಬೇತಿಗೆ 2024 ನೇ ಮಾರ್ಚ್ 01 ರಿಂದ ಮಾರ್ಚ್ 30 ರವರೆಗೆ ಪಡೆಯಬಹುದಾಗಿರುತ್ತದೆ.

ಈ ತರಬೇತಿಗೆ ಅರ್ಜಿ ಸಲ್ಲಿಸಲು ಎಷ್ಟು ಶುಲ್ಕ ಪಾವತಿಸಬೇಕು?
ಸಾಮಾನ್ಯ ಅಭ್ಯರ್ಥಿಗಳಿಗೆ ರೂ.30/-
ಮಾಜಿ ಸೈನಿಕರು ಅಭ್ಯರ್ಥಿಗಳಿಗೆ ರೂ.15/-
ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ರೂ.15/-
ಅಭ್ಯರ್ಥಿಗಳು ಮೇಲ್ಕಂಡ ತಮ್ಮ ವರ್ಗಕ್ಕೆ ನೀಡಿದಂತಹ ಅರ್ಜಿ ಶುಲ್ಕವನ್ನು ಪಾವತಿಸಬೇಕು.

ಈ ತರಬೇತಿಗೆ ಅರ್ಜಿ ಶುಲ್ಕವನ್ನು ಪಾವತಿಸುವ ವಿಧಾನವೇನು?
ಆಯಾ ವರ್ಗದ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (ಐಪಿಒ), ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಅಥವಾ ಕೆ-2 ಪೇಮೆಂಟ್ ಚಲನ್ ಮೂಲಕ ಶುಲ್ಕವನ್ನು ಪಾವತಿಸಬಹುದು.

ಈ ತೋಟಗಾರಿಕಾ ತರಬೇತಿಗೆ ಅರ್ಜಿ ಶುಲ್ಕವನ್ನು ಎಲ್ಲಿ ಪಾವತಿಸಬೇಕು?
ಅಭ್ಯರ್ಥಿಗಳು ತಾವು ಯಾವ ಜಿಲ್ಲೆಯ ನಿವಾಸಿಗಳಾಗಿರುತ್ತಾರೋ ಆಯಾಯ ಜಿಲ್ಲೆಗಳ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ್) ರವರ ಹೆಸರಿನಲ್ಲಿ ಪಡೆದು, ಅರ್ಜಿ ಜೊತೆಗೆ ಲಗತ್ತಿಸಬೇಕು.

ಕೇಂದ್ರ ಸರ್ಕಾರದಿಂದ ಬೆಳೆವಿಮೆ ಹಣ ಬಿಡುಗಡೆ. ಕೂಡಲೇ ನೀವು ನೋಡಿ.

ಈ ತೋಟಗಾರಿಕಾ ತರಬೇತಿಗೆ ಅಭ್ಯರ್ಥಿಗಳನ್ನು ಯಾವ ವಿಧಾನದ ಮೇಲೆ ಆಯ್ಕೆ ಮಾಡುತ್ತಾರೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು, 2024 ನೇ ಏಪ್ರಿಲ್ 6 ರಂದು ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಯಾವ ದಿನಾಂಕವು ಕೊನೆಯದಾಗಿರುತ್ತದೆ?
ಅರ್ಹ ಅಭ್ಯರ್ಥಿಯೂ ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಿಸಿದ ದಾಖಲಾತಿಗಳೊಂದಿಗೆ ಏಪ್ರಿಲ್ 1, 2024 ರ ಸಂಜೆ 5.00 ಗಂಟೆಯೊಳಗೆ ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ), ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಛೇರಿಯಲ್ಲಿ ಸಲ್ಲಿಸಬೇಕು.

ರೈತರೇ ಸ್ವತಃ ಆಧಾರ್- ಪಹಣಿ ಜೋಡಣೆ ಮಾಡಿಕೊಳ್ಳುವ ವಿಧಾನ ಇಲ್ಲಿದೆ!

ಅಭ್ಯರ್ಥಿಗಳಿಗೆ ಯಾವುದಾದರೂ ವಿಷಯಗಳಲ್ಲಿ ಗೊಂದಲವಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ಯಾರನ್ನು ಸಂಪರ್ಕಿಸಬೇಕು?
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) / ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ವಿಚಾರಿಸಬೇಕು. ಅಥವಾ ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್ ಬಾಗ್, ಬೆಂಗಳೂರು ಹಾಗೂ ದೂರವಾಣಿ ಸಂ. 080-22240444 / 9535417149 / 9900768298 ರವರನ್ನು ಸಂಪರ್ಕಿಸಬಹುದಾಗಿದೆ.

ನಿರಂತರ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಇಲ್ಲಿದೆ ನೋಡಿ.

Spread positive news

Leave a Reply

Your email address will not be published. Required fields are marked *