ಕೃಷಿ ಇಲಾಖೆಯಿಂದ ಮಹತ್ವದ ಆದೇಶ ಜಾರಿ: ಎನ್. ಚೆಲುವ ನಾರಾಯಣಸ್ವಾಮಿ

ರೈತರೇ ಸರ್ಕಾರವು ರೈತರ ಪರ ನಿಲ್ಲಲು ಸದಾ ಹೊಸ ಹೊಸ ಯೋಜನೆಗಳನ್ನು ರೂಪಿಸಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರವು ಕೆಲಸ ಮಾಡುತ್ತಿದೆ. ಅದೇ ರೀತಿ ಕಾಂಗ್ರೆಸ್ ಸರ್ಕಾರವು 2 ವರ್ಷಗಳಲ್ಲಿ ಪಂಚ ‌ ಗ್ಯಾರಂಟಿಗಳ ಅಭಿವೃದ್ಧಿಯ ಗ್ಯಾರಂಟಿಯನ್ನೂ ಜನರಿಗೆ ನೀಡಿದೆ.

ಜೊತೆಗೆ ರಾಜ್ಯದ ಕೃಷಿ ಕ್ಷೇತ್ರವು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ರೈತರಿಗೆ ಸ್ವಾವಲಂಬನೆ ಜೀವನವನ್ನು ಒದಗಿಸಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ರೈತರ ಏಳಿಗೆ ಮತ್ತು ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ದೀರ್ಘಕಾಲೀನ ಗುರಿಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಕೃಷಿಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸುವ ಮೂಲಕ ರೈತರಿಗೆ ಸ್ಥಿರ ಆದಾಯವನ್ನು ಖಾತ್ರಿಪಡಿಸುವ ಗುರಿಯನ್ನು ಸರ್ಕಾರವು ಹೊಂದಿದೆ.

ಡಿಜಿಟಲ್ ಕೃಷಿ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ ಮತ್ತು ಡೋನ್ ಆಧಾರಿತ ಕೃಷಿವಿಧಾನಗಳನ್ನು ರೈತರಿಗೆ ಒದಗಿಸುವಮೂಲಕಉತ್ಪಾದಕತೆಯನ್ನು ಗುಷ್ಠಗೊಳಿಸಲು ಯೋಜನೆಗಳನ್ನು ರೂಪಿಸಲಾಗಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಕೃಷಿ ಎನ್. ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೂರದೃಷ್ಟಿಯ ನಾಯಕತ್ತ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾ‌ರ್ ಅವರ ಅವಿರತ ಬೆಂಬಲ ಮತ್ತು ನಿರಂತರ ಪ್ರೋತ್ಸಾಹವೇ ಕಾರಣ ಕೃಷಿ ಇಲಾಖೆಯನ್ನು ಮುನ್ನಡೆಸಲು ನನಗೆ ಸಿಕ್ಕಿರುವ ಅವಕಾಶದಲ್ಲಿ ಅವರಿಬ್ಬರ ಮಾರ್ಗದರ್ಶನಕ್ಕಾಗಿ ಮೊದಲನೆಯದಾಗಿ ಹೃತ್ತೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ.

ರೈತರ ಆರ್ಥಿಕ ಸ್ಥಿರತೆ, ಸಮೃದ್ಧ ಜೀವನ ಮತ್ತು ಕೃಷಿಯ ಆಧುನೀಕರಣವನ್ನು ಕೇಂದ್ರಬಿಂದುವಾಗಿಟ್ಟು ಕೊಂಡ ನಮ್ಮ ಸರ್ಕಾರವು, ಇಂದಿರಾ ಗಾಂಧಿಯವರ ರೈತ ಕಲ್ಯಾಣದ ಕನಸನ್ನು ನನಸಾಗಿಸ ನನಸಾಗಿಸಲು ಬದ್ಧವಾಗಿದೆ.

ರೈತರ ಸಮಸ್ಯೆ ಪರಿಹಾರಕ್ಕೆ ಸಿದ್ದ –

ರೈತರಿಗೆ ಕಾಂಗ್ರೆಸ್ ಸರ್ಕಾರವು ಸದಾಕಾಲ ರೈತರ ಪರ ನಿಲ್ಲುತ್ತಾ ಬಂದಿದೆ. ಅದೇ ರೀತಿ ಈಗ ಮಂಡ್ಯದಲ್ಲಿ ಸ್ಥಾಪನೆಯಾಗಲಿರುವ ಕೃಷಿ ವಿಶ್ವವಿದ್ಯಾನಿಲಯಕ್ಕೆ ಬಜೆಟ್ ಘೋಷಣೆಯ ಒಂದು ವರ್ಷದೊಳಗೆ ಚಾಲನೆ ದೊರೆತಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್‌ನಿಂದ ಅನುಮೋದನೆ ಪಡೆಯಲಾಗಿದೆ.ಈವಿಶ್ವವಿದ್ಯಾಲಯವು ಕೃಷಿ ಸಂಶೋಧನೆ, ಶಿಕ್ಷಣ, ಮತ್ತು ತರಬೇತಿಯ ಮೂಲಕ ರೈತರಿಗೆ ಆಧುನಿಕ ಜ್ಞಾನವನ್ನು ಒದಗಿಸಲಿದೆ, ಕರ್ನಾಟಕದ ಕೃಷಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿಯನ್ನು ಬೆಂಬಲಿಸುತ್ತದೆ.

ಜಿಲ್ಲಾ ಪ್ರವಾಸದ ಮೂಲಕ ರೈತರೊಂದಿಗೆ ನೇರ ಸಂವಾದವನ್ನು ನಡೆಸಿ, ಸಮಸ್ಯೆಗಳಿಗೆ ತಕ್ಷಣಪರಿಹಾರಕಲ್ಪಿಸಲಾಗಿದೆ.ಮಂಡ್ಯದಐತಿಹಾಸಿಕ ಮೈಶುಗರ್ ಕಾರ್ಖಾನೆಯ ಪುನಶ್ವೇತನಕ್ಕೆ 50 ಕೋಟಿಗಳ ಅನುದಾನವನ್ನು ಒದಗಿಸಲಾಗಿದ್ದು, 30 ಮೆಗಾವ್ಯಾಟ್ ಟರ್ಬೊ ಜನರೇಟರ್ ಪ್ರಾಯೋಗಿಕ ಚಾಲನೆಯನ್ನು ಮಾಡಲಾಗಿದೆ. ಈ ಕ್ರಮವು ಮಂಡ್ಯ ಜನತೆಗೆ ಆರ್ಥಿಕ ಸ್ಥಿರತೆಯನ್ನು ಒದಗಿಸಿದ್ದು, ಕಬ್ಬು ಬೆಳೆಗಾರರ ಆರ್ಥಿಕ ಪ್ರಗತಿಗೆ ಬೆಂಬಲವಾಗಿ ನಿಲ್ಲುವ ಸರ್ಕಾರದ ಗುರಿಗೆ ಸಾಕ್ಷಿಯಾಗಿದೆ.

ಹೊಸ‌ ಹೊಸ ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜನ –

ಬಜೆಟ್‌ನಲ್ಲಿ ಕೃಷಿಗೆ ಸಿಂಹಪಾಲು ಒದಗಿಸಲಾಗಿದೆ. 2023-24ರ ಬಜೆಟ್‌ನಲ್ಲಿ ಕೃಷಿ ಭಾಗ್ಯ ಯೋಜನೆಗೆ ₹100 ಕೋಟಿ, ಕೃಷಿ ನವೋದ್ಯಮಕ್ಕೆ ₹10 ಕೋಟಿ, ಅತ್ಯಾಧುನಿಕ ಕಟಾವು ಯಂತ್ರ ಕೇಂದ್ರಗಳಿಗೆ ಕ50 ಕೋಟಿ, ಮತ್ತು ಕೇಂದ್ರ ಪ್ರಕೃತಿ ನೀರು ಸಂರಕ್ಷಣಾ ಕೇಂದ್ರಗಳಿಗೆ ಭಾಗ್ಯಕ್ಕೆ 200 ಕೋಟಿ, ಸಮುದಾಯ ಬೀಜ ಬ್ಯಾಂಕ್‌ಗಳ ಸ್ಥಾಪನೆ, ಆಹಾರ ಬ್ಯಾಂಕ್ಗಳ ಸ್ಥಾಪನೆ, 5,000 ಸಣ್ಣ ಸರೋವರಗಳ ನಿರ್ಮಾಣ, ಸ್ಟಾರ್ಟ್‌ ಆಪ್ ಗಳಿಗೆ ಉತ್ತೇಜನ, ಮತ್ತು ಕೃಷಿ ಹಾಗೂ ಆರೋಗ್ಯ ವಿಜ್ಞಾನದ ಸುಧಾರಣೆಗೆ ಅಧುನಿಕ ಜೀನ್ ಎಡಿಟಿಂಗ್ ಮತ್ತು ಜೀನ್ ಥೆರಪಿ ಸಂಶೋಧನಾ ಸಂಸ್ಥೆಯ ಸ್ಥಾಪನೆಗೆ ಅನುದಾನವನ್ನು ಒದಗಿಸಲಾಗಿದೆ.

ಕಾಂಗ್ರೆಸ್ ಕೇವಲ ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳ ಜೊತೆಗೆ ಅಭಿ ವೃದ್ಧಿಯ ಗ್ಯಾರಂಟಿಯನ್ನೂ ನೀಡಿದೆ. ಸಿದ್ದರಾಮಯ್ಯ ಮಾರ್ಗದರ್ಶನ ದಲ್ಲಿ ಕೃಷಿಕ್ಷೇತ್ರವು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ರೈತರಿಗೆ ಸ್ವಾವಲಂಬನೆಯ ಜೀವನವನ್ನು ಒದಗಿಸಿದೆ. ರೈತರಿಗೆ ಸಮೃದ್ಧ ಭವಿಷ್ಯದ ಭರವಸೆಯನ್ನು ಮೂಡಿಸಿದೆ. ಸರ್ಕಾರವು ರೈತರ ಏಳಿಗೆ ಮತ್ತು ಕೃಷಿಯ ಸಮಗ್ರ ಅಭಿವೃದ್ಧಿಗಾಗಿ ದೀರ್ಘ ಕಾಲೀನ ಗುರಿಗಳನ್ನು ಹೊಂದಿದೆ. ಕೃಷಿಯನ್ನು ಸಂಪೂರ್ಣವಾಗಿ ಆಧುನೀಕರಣ ಗೊಳಿಸುವ ಮೂಲಕ ರೈತರಿಗೆ ಸ್ಥಿರ ಆದಾಯವನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಡಿಜಿಟಲ್ ಕೃಷಿ ತಂತ್ರಜ್ಞಾನ, ಕೃತಕ ಬುದ್ದಿಮತ್ತೆ, ಮತ್ತು ಡೋನ್ ಆಧಾರಿತ ಕೃಷಿ ವಿಧಾನಗಳನ್ನು ರೈತರಿಗೆ ಒದಗಿಸುವ ಮೂಲಕ ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ಯೋಜನೆಗಳನ್ನು ಜಾರಿಗೆ ತರುವುದು.

ಇ-ಸ್ಯಾಪ್‌ನಿಂದ ರೈತರಿಗೆ ಜ್ಞಾನ –

ಇ-ಸ್ಕಾಪ್ ಎನ್ನುವ ತಂತ್ರಜ್ಞಾನದ ಮೂಲಕ ಬೆಳೆಗಳ ಕೀಟ/ರೋಗ ಬಾಧೆಯನ್ನು ನಿಖರವಾಗಿ ಗುರುತಿಸಿ, ಸೂಕ್ತ ಪರಿಹಾರ ಕಂಡುಹಿಡಿಯಲಾಗಿದೆ. ಇದು ಕೃಷಿಯಲ್ಲಿ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ.

ಕೃಷಿ ಯಾರು ಕರಣವು ಕಾಂಗ್ರೆಸ್ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. 2023-24ರಲ್ಲಿ 3,53,349 ರೈತರಿಗೆ 49.22 ಕೋಟಿಗಳ ಸಹಾಯಧನವನ್ನು ವನ್ನು ಒದಗಿಸಲಾಗಿದ್ದು, ಜೈಟೆಕ್ ಹಾರ್ವೆಸ್ಟರ್‌ ಡಬ್‌ಗಳ ಸ್ಥಾಪನೆಗೆ 241.38 ಕೋಟಿ (2023-24) ಮತ್ತು 86.48 ಕೋಟಿ (2024-25) ಖರ್ಚು ಮಾಡಲಾಗಿದೆ. ಇವುರೈತರಕೃಷಿಕಾರ್ಯ ಸುಗಮಗೊಳಿಸಿ/ಉತ್ಪಾದಕತೆಯನ್ನು ಗಣನೀಯವಾಗಿ `ಹೆಚ್ಚಿಸಿವೆ.

ಕೃಷಿ ಭಾಗ್ಯ ಯೋಜನೆಯಡಿ 300 ಕೋಟಗಳನ್ನು (2023-24ರಲ್ಲಿ 100 ಕೋಟಿ, 2024-25ರಲ್ಲಿ 200 ಕೋಟಿ) ವಿವಿಧ ಅಭಿವೃದ್ಧಿಕಾರ್ಯಕ್ರಮಗಳಿಗೆ ಮೀಸಲಿಡಲಾಗಿದೆ, ನೀರಾವರಿ, ಯಾಂತ್ರೀಕರಣ ಮತ್ತು ಇತರ ಸಂಪನ್ಮೂ ಲಗಳನ್ನು ಒದಗಿಸಿದೆ. ಕೃಷಿ ನವೋದ್ಯಮ ಯೋಜನೆಯಡಿ 40ಕ್ಕೂ ಹೆಚ್ಚು ನವೋದ್ಯಮಗಳನ್ನು ಸ್ಥಾಪಿಸಲಾಗಿದ್ದು, ಯುವ ರೈತರಿಗೆ ಕೃಷಿ ಆಧಾರಿತ ಉದ್ಯಮಶೀಲತೆಯ ಅವಕಾಶಗಳನ್ನು ಸೃಷ್ಟಿಸಲಾಗಿದೆ.

ಸಿರಿಧಾನ್ಯ ಉತ್ಪಾದನೆ ಮತ್ತು ಬಳಕೆ ಉತ್ತೇಜಿಸಲು ಅಂತಾರಾಷ್ಟ್ರೀಯ ಮಟ್ಟದ ಮೇಳಗಳನ್ನು ಆಯೋಜಿಸಲಾಗಿದೆ. ಇದು ಕರ್ನಾಟಕದ ಕೃಷಿ ಉತ್ಪನ್ನಗಳನ್ನು ಜಾಗತಿಕೆ ಮಾರುಕಟ್ಟೆಯಲ್ಲಿ ಗುರುತಿಸುವಂತೆ ಮಾಡಿದೆ. ಈ ಮೇಳಗಳು ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆಯನ್ನು ಪಡೆಯಲು ಮತ್ತು ಹೊಸ ಮಾರುಕಟ್ಟೆ ಅವಕಾಶಗಳನ್ನು ತೆರೆಯಲು ಸಹಾಯ ಮಾಡಿವೆ.

Spread positive news

Leave a Reply

Your email address will not be published. Required fields are marked *