ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು? ಸಾಗುವಳಿ ವೆಚ್ಚ ಕಡಿಮೆಯಾಗುತ್ತದೆ
ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಪರೀಕ್ಷೆ ಅತ್ಯಂತ ಪ್ರಮುಖ ವಿಷಯವಾಗಿದ್ದು, ಬೆಳೆ ನೆಡುವ ಮೊದಲು ಮಣ್ಣಿನ ಪರೀಕ್ಷೆ ಮಾಡಲೇಬೇಕು. ಆಗ ಮಾತ್ರ ಅದರಲ್ಲಿ ಯಾವ ಪೋಷಕಾಂಶಗಳಿವೆ ಎನ್ನುವ ಸಂಪೂರ್ಣ ಮಾಹಿತಿ ನಮಗೆ ಸಿಗುತ್ತೆ. ನಾವು ಬೆಳೆಯಲ್ಲಿ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡರೆ, ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನ ಸಾಧಿಸಬಹುದು’ ಎಂದು ಮಣ್ಣು ಪರೀಕ್ಷಾ ತಜ್ಞರು ಹೇಳುತ್ತಾರೆ. ಸಂಶೋಧನೆಯ ಪ್ರಕಾರ, ಪ್ರತಿಯೊಂದು ಕೃಷಿ ಭೂಮಿಗೂ ಮಣ್ಣು ಪರೀಕ್ಷೆ ಶ್ರೀರಾಮರಕ್ಷೆ ಇದ್ದಂತೆ. ಕೃಷಿಗೆ ಭೂಮಿ, ಬಂಡವಾಳ ಮತ್ತು ನೀರು ಬೇಕು….