ರೈತರಿಗೆ ಸಂತಸದ ಸುದ್ದಿ ನೀಡುತ್ತಿದ್ದೇವೆ. ರೈತರ ತೊಂದರೆಗೆ ಇವತ್ತು ಪರಿಹಾರ ಸಿಕ್ಕಂತಾಗಿದೆ. ಕೇಂದ್ರ ಸರ್ಕಾರದಿಂದ ಬರ ಪರಿಹಾರ ಬಿಡುಗಡೆ ಸಮ್ಮತಿ ಸೂಚಿಸಿದೆ. ಕರ್ನಾಟಕ ರಾಜ್ಯಕ್ಕೆ ಶೀಘ್ರ ಬರ ಪರಿ ಹಾರ ಬಿಡುಗಡೆ ಮಾಡುವುದಾಗಿ ಕೇಂದ್ರ ಹೇಳಿರುವುದು ರೈತರು ಸಂತಸಪಡುವ ವಿಷಯವಾಗಿದೆ. ಕರ್ನಾಟಕದಲ್ಲಿ ಬರ ಪರಿಹಾರ ಕಾಮಗಾರಿಗಳಿಗಾಗಿ ಏ.29ರೊಳಗೆ ಹಣ ಬಿಡುಗಡೆ ಮಾಡು ವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸೋಮ ವಾರ ಮಾಹಿತಿ ನೀಡಿದೆ. ಅದೇ ರೀತಿ ಯಾವ ರೈತರಿಗೆ ಬರ ಪರಿಹಾರ ಹಣ ಬಂದಿದೆ ಅಥವಾ ಯಾವ ರೈತರಿಗೆ ಬರ ಪರಿಹಾರ ಬಂದಿಲ್ಲ ಎಂಬುದು ಈಗ ನೀವಾಗಿಯೇ ನಿಮ್ಮ ಗ್ರಾಮ ಪಂಚಾಯಿತಿ ಭೇಟಿ ನೀಡಿ ಪರಿಶೀಲನೆ ಮಾಡಬಹುದು.
ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಬಂದಾಗ ಪ್ರತಿ ಬಾರಿ ಕೇಂದ್ರಕ್ಕೆ ಪತ್ರ ಬರೆದು ಹೋರಾಟವು ಸಹ ಮಾಡುತ್ತಿದ್ದರು ಆದರೆ ಕೇಂದ್ರ ಸರ್ಕಾರ ತಡೆಹಿಡಿದಂತಾಗಿತ್ತು ಎಂದು ಆರೋಪಿಸಿದ ವೇಳೇಯಲ್ಲಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಪರಿಹಾರ ಬಿಡುಗಡೆ ಮಾಡುತ್ತೆವೆ ಎಂದು ತಿಳಿಸಿದೆ. ರಾಜ್ಯದ ರೈತರಿಗೆ ಸುಮಾರು 18 ಸಾವಿರ ಕೋಟಿ ರೂ. ಬಿಡುಗಡೆ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ ಹಿನ್ನೆಲೆ ರಾಜ್ಯ ಸರ್ಕಾರದಿಂದ ರೈತರಿಗೆ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಎನ್ ಡಿ ಆರ್ ಎಫ್ ಪರಿಹಾರ ನಿಧಿ ಅಡಿಯಲ್ಲಿ ಸರ್ಕಾರದಿಂದ 105 ಕೋಟಿ ರೂ. ಅನುದಾನ ನೀಡಲಾಗಿದ್ದು, ರೈತರಿಗೆ 2 ಸಾವಿರ ರೂಪಾಯಿ ಪರಿಹಾರ ಬಿಡುಗಡೆ ಮಾಡಲಾಗಿದೆ.
ಈ ಕೂಡಲೇ ನಿಮ್ಮ ಹೊಲದ ಪಹಣಿಯೊಂದಿಗೆ ಫ್ರೂಟ್ಸ್ ಐಡಿಯನ್ನು ಹಾಗೂ ಹೊಲದ ಪಹಣಿ ಜೊತೆ ಲಿಂಕ್ ಮಾಡಬೇಕು. ಇಲ್ಲವಾದಲ್ಲಿ ನಿಮಗೆ ಬರ ಪರಿಹಾರದ ಹಣ ಬರುವುದಿಲ್ಲ. ಹಾಗಾಗಿ ತಪ್ಪದೇ ನಿಮ್ಮ ಹೊಲದ ಪಹಣಿಯ ಜೊತೆ ಫ್ರೂಟ್ಸ್ ಐಡಿಯನ್ನು ಲಿಂಕ್ ಮಾಡಿ. ನಿಮ್ಮ ನಿಮ್ಮ ಹೊಲದ ಎಲ್ಲಾ ಸರ್ವೆ ನಂಬರನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿ. ತಪ್ಪದೇ ಬರ ಪರಿಹಾರವನ್ನು ಪಡೆಯಿರಿ.
ಒಂದು ವೇಳೆ ನಿಮ್ಮ ಹೊಲ 8 ಅಥವಾ 10 ಎಕರೆ ಇದ್ದು ನೀವು ಕೇವಲ ಎರಡು ಎಕರೆ ಹೊಲವನ್ನು ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ದಾಖಲಿಸಿದರೆ ನಿಮಗೆ ಕೇವಲ ಎರಡು ಎಕರೆಗೆ ಸೀಮಿತವಾದ ಬರ ಪರಿಹಾರದ ಹಣವನ್ನು ಹಾಕುತ್ತಾರೆ. ಆದಕಾರಣ ನಿಮ್ಮ ಸರ್ವೇ ನಂಬರ್ ಗಳನ್ನು ತಪ್ಪದೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿ. ನಿಮ್ಮ ಎಷ್ಟು ಸರ್ವೇ ನಂಬರ್ ಗಳು ಫ್ರೂಟ್ಸ್ ಅಡಿಯಲ್ಲಿ ದಾಖಲಾಗಿವೆ ಇಲ್ಲಿ ಚೆಕ್ ಮಾಡಿಕೊಳ್ಳಿ. ದಯವಿಟ್ಟು ಬರ ಪರಿಹಾರವನ್ನು ಪಡೆಯಿರಿ.
ಸರ್ಕಾರವು ರೈತರ ವಿಷಯದಲ್ಲಿ ಹಲವಾರು ತೊಂದರೆಗೆ ಸಿಲುಕಿಸುತ್ತಿದೆ. ಬೆಳೆ ವಿಮೆ ಸರಿಯಾಗಿ ಪಾವತಿಯಾಗದೆ ರೈತರಿಗೆ ಅನ್ಯಾಯವಾಗುತ್ತಿದ್ದು, ವಿಮೆ ಕಂಪನಿಗಳಿಗೆ ಲಾಭವಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಂದೇನು ಎಂಬ ಗೊಂದಲಕ್ಕೆ ರಾಜ್ಯ ಸರ್ಕಾರ ಸಿಲುಕಿದೆ. ಸರ್ಕಾರದಿಂದಲೇ ಸ್ವಂತ ಕಂಪನಿ ಮಾಡುವುದೋ, ಇರುವ ವ್ಯವಸ್ಥೆಯಲ್ಲಿಯೇ ಮುಂದುವರಿಯುವುದೋ ಅಥವಾ ಕಪ್ ಆ್ಯಂಡ್ ಕ್ಯಾಪ್ ಎಂಬ ನಿಯಮಕ್ಕೆ ಪರಿವರ್ತನೆಯಾಗುವುದೋ ಎಂಬ ಚರ್ಚೆ ಇದ್ದು ಸದ್ಯ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಅದೇ ರೀತಿ ಈಗ ರಾಜ್ಯದ ರೈತರಿಗೆ ಬರ ಪರಿಹಾರ ನೀಡಲು ಸರ್ಕಾರವು ಈಗ 2000 ರೂಪಾಯಿ ಬಿಡುಗಡೆ ಮಾಡಿದೆ.
ರಾಜ್ಯದ ರೈತರಿಗೆ ₹2000 ಬರ ಪರಿಹಾರ ನೀಡಿದ ರಾಜ್ಯ ಸರ್ಕಾರ. ಸಿದ್ದು ಸರ್ಕಾರ ಬಿಡುಗಡೆ ₹105 ಕೋಟಿ ಮಂಜೂರು ರೈತರ ಖಾತೆಗೆ ನೇರ ಜಮೆ ಮಾಡಲಾಗಿದೆ. ರಾಜ್ಯದಲ್ಲಿ 2023-24ನೇ ಸಾಲಿನಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಹಾಗೂ ಬರದಿಂದ ಉಂಟಾದ ಬೆಳೆಹಾನಿಗೆ ಘೋಷಿಸಲಾಗಿದ್ದ 2000 ವರೆಗಿನ ತಾತ್ಕಾಲಿಕ ಬೆಳೆ ಪರಿಹಾರವನ್ನು ಅರ್ಹ ರೈತರಿಗೆ ನೀಡಲು ರಾಜ್ಯ ಸರ್ಕಾರ ಶುಕ್ರವಾರ 105 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಿದ ರೈತರು ಬೆಳೆ ಪರಿಹಾರ ಮೊತ್ತಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದರೂ ಬೆಳೆ ವಿಮೆ ಮೊತ್ತದ ಲಾಭ ಸಿಗುತ್ತಿಲ್ಲ, ಆದರೆ ಇದೀಗ ರೈತರಿಗೆ ಬಾಕಿ ಇರುವ ಬೆಳೆ ಕ್ಲೇಮ್ ಮೊತ್ತವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಬರ ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡುವ ವಿಧಾನ ಹೇಗೆ?
ಮೊದಲಿಗೆ ಈ ಕೆಳಕಂಡ ಲಿಂಕ್ ಮೇಲೆ ಕ್ಲಿಕ್ ಮಾಡಿ
https://parihara.karnataka.gov.in/service87/
* ನಂತರ ಆ ಮುಖಪುಟದಲ್ಲಿ ಕಾಣುವ ಹಾಗೆ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ನಿಮ್ಮ ಗ್ರಾಮ, ವರ್ಷ, ಸೀಸನ್ (Kharif), ಹಾಗೂ calamity type (Flood)ಆಯ್ಕೆ ಮಾಡಿಕೊಂಡು. ನಂತರ Get report ಮೇಲೆ ಕ್ಲಿಕ್ ಮಾಡಿ.
* ನಂತರ ಮುಂದೆ ಕಾಣುವ ಮುಖಪುಟದಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ ಪರಿಹಾರ ಹಣ ಬರುತ್ತದೆ.