ಪ್ರೀಯ ರೈತರೇ ದೇಶದ ರೈತರಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಸರ್ಕಾರವು ಹೊಸ ಹೆಜ್ಜೆ ಇಡುತ್ತಾ ಬಂದಿದೆ. ಅದೇ ರೀತಿ ದೇಶಕ್ಕೆ ಗುಣಮಟ್ಟದ ಆಹಾರ ಪೂರೈಸುವ ನಿಟ್ಟಿನಲ್ಲಿ ಸರ್ಕಾರವು ರೈತರಿಗೆ ಹೊಸ ಹೊಸ ಸಾವಯವ ಕೃಷಿ ಯೋಜನೆಗಳಿಗೆ ಕೈ ಹಾಕುತ್ತಿದೆ. ಬನ್ನಿ ಹಾಗಾದರೆ ರೈತರಿಗೆ ಸಾವಯವ ಕೃಷಿ ಮಾಡಲು ಇರುವ ಯೋಜನೆ ಯಾವುವು? ಸಾವಯವ ಕೃಷಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಲಾಭ ಹೇಗೆ ಪಡೆಯುವುದು ಎಂದು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು ಕರ್ನಾಟಕ ರಾಜ್ಯ ಸರ್ಕಾರವು 2004-05 ನೇ ಸಾಲಿನಲ್ಲಿಯೇ ಸಾವಯವ ಕೃಷಿ ನೀತಿಯನ್ನು ಹೊರತಂದಿದ್ದು, ಈ ನೀತಿಯಡಿ ಅನೇಕ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಹಂತಹಂತವಾಗಿ ಅನುಷ್ಠಾನಗೊಳಿಸುತ್ತಾ ಬಂದಿದೆ. ಸಾವಯವ ಕೃಷಿ ನೀತಿ 2004 ರಡಿ ರಾಜ್ಯದಲ್ಲಿ ಈವರೆಗೂ ಅನುಷ್ಠಾನದಲ್ಲಿದ್ದ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು ಜೀವವೈವಿದ್ಯತೆ ಸಂರಕ್ಷಣೆ, ಮಿಶ್ರ ಬೇಸಾಯ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸ್ಥಳೀಯವಾಗಿ ಸಾವಯವ ಗೊಬ್ಬರ ಉತ್ಪಾದನೆ, ಭೂಮಿಯ ಪುನರುಜ್ಜೀವನ ಇತ್ಯಾದಿಗಳು ಸೇರಿದಂತೆ ಒಟ್ಟಾರೆಯಾಗಿ ಸಾವಯವ ಕೃಷಿ ಪದ್ಧತಿಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವುದರ ಜೊತೆಗೆ ಸಾವಯವ ಕೃಷಿಯು ಅತ್ಯುತ್ತಮ ಸುಸ್ಥಿರ ಉತ್ಪಾದನಾ ಪದ್ಧತಿಯೆಂದು ರೈತರಿಗೆ ಮನವರಿಕೆ ಮಾಡಿಕೊಡುವುದು ಯೋಜನೆಗಳ ಮುಖ್ಯ ಉದ್ದೇಶವಾಗಿತ್ತು.
ಮುಖ್ಯವಾಗಿ ಹೇಳಬೇಕೆಂದರೆ ಸರ್ಕಾರವು ಕೈಗೊಂಡಿರುವ ಎಲ್ಲಾ ಯೋಜನೆಯ ಈವರೆಗಿನ ಸಾವಯವ ಕೃಷಿ ಉತ್ತೇಜನ ಕಾರ್ಯಕ್ರಮಗಳು ಅಂದಿನ ಉದ್ದೇಶಗಳನ್ನು ತಲುಪಲು ಸಾಧ್ಯವಾಗಿರುತ್ತದೆ. ಆದರೆ, ಸಾವಯವ ಕೃಷಿ ಉತ್ಪನ್ನಗಳ ಬಗೆಗಿನ ಅರಿವಿನಿಂದಾಗಿ ಉಂಟಾಗಿರುವ ಬೇಡಿಕೆಯನ್ನು ಪೂರೈಸುವಲ್ಲಿ ಹಾಗೂ ಈ ಬೇಡಿಕೆಯಿಂದಾಗಿ ಉತ್ಪನ್ನಗಳ ಗುಣಮಟ್ಟ ಕಾಪಾಡುವಲ್ಲಿ ಕೆಲವೊಂದು ನ್ಯೂನ್ಯತೆಗಳನ್ನು ಸೃಷ್ಟಿಸಿವೆ. ಈ ನ್ಯೂನ್ಯತೆಗಳನ್ನು ಸರಿಪಡಿಸಲು ಹಾಗೂ ಮಾರುಕಟ್ಟೆ ಆಧಾರಿತ ಕಾರ್ಯಕ್ರಮವನ್ನಾಗಿ ರೂಪಿಸಲು ಸದರಿ ನೀತಿಯನ್ನು ಮಾರುಕಟ್ಟೆ ಆಧಾರಿತ ಚಟುವಟಿಕೆಗಳ ಸೇರ್ಪಡೆಯೊಂದಿಗೆ ಪರಿಷ್ಕರಿಸಿ ಸಾವಯವ ಕೃಷಿ ನೀತಿ, 2017 ಹೊರತರಲಾಗಿದ್ದು, ಸದರಿ ನೀತಿಯಡಿ ಅನೇಕ ಮಾರುಕಟ್ಟೆ ಸಂಬಂಧಿತ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗಿರುತ್ತದೆ.
ಸಿರಿಧಾನ್ಯ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸುಮಾರು 800 ರಿಂದ 1000 ಹೆಕ್ಟೇರ್ ಪ್ರದೇಶದಲ್ಲಿ ಈಗ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ, ಸಿರಿಧಾನ್ಯ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ತಿಳಿಸಿದರು. ಸಿರಿ ಧಾನ್ಯಗಳು ಅಂದ್ರೆ ರಾಗಿ ಸೇರಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ & ಜೋಳದ ಸಮೂಹ. ಇವು ಸುಮಾರು 5 ಸಾವಿರ ವರ್ಷ ಬೇಸಾಯದ ಇತಿಹಾಸ ಹೊಂದಿವೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ್ ಹೇಳಿದರು.
ಇವುಗಳಲ್ಲಿ ರೈತ ಸಿರಿ ಪ್ರಮುಖ ಯೋಜನೆ. ಯೋಜನೆ ಅಡಿ ಜಿಲ್ಲೆಯಲ್ಲಿ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿದೆ. ಈ ಬೆಳೆ ಬೆಳೆದ ರೈತರಿಗೆ ಪ್ರತಿ ಹೆಕ್ಟೆರ್‌ಗೂ 10,000 ರೂಪಾಯಿ ನೇರ ನಗದು ವರ್ಗಾವಣೆ ಅಂದ್ರೆ, ಡಿಬಿಟಿ ಮೂಲಕ ಪ್ರೋತ್ಸಾಹ ಧನ ಗರಿಷ್ಠ 2 ಹೆಕ್ಟೇರ್‌ಗೆ ಸೀಮಿತವಾಗುವಂತೆ ನೀಡಲಾಗುತ್ತಿದೆ ಎಂದರು. ಇಂದು ಕೃಷಿ ಇಲಾಖೆಯಿಂದ ಸಿರಿಧಾನ್ಯ ಬಳಕೆಯ ಕುರಿತು ಜಾಗೃತಿ ಮೂಡಿಸಲು ಸಿರಿಧಾನ್ಯಗಳ ಜಾಗೃತಿ ವಾಕ್‍ಥಾನ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಯೋಜನೆಯ ಲಾಭ ಪಡೆಯಲು ಇರಬೇಕಾದ ಅರ್ಹತೆಗಳು –
* ರೈತರ ಪ್ರಸ್ತಾವನೆಗಳಾಗಿದ್ದಲ್ಲಿ, ಜಮೀನು ಅವರ ಹೆಸರಿನಲ್ಲಿರಬೇಕು.
* ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು.
* ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮಲೆಕ್ಕಿಗರಿಂದ ದೃಢೀಕರಿಸಿ ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು.
* ಮಹಿಳೆಯ ಹೆಸರಿನಲ್ಲಿ ಖಾತೆ ಹೊಂದಿದ್ದಲ್ಲಿ ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸುವುದನ್ನು ಉತ್ತೇಜಿಸಬೇಕು.
* ರೈತ ಫಲಾನುಭವಿಗಳ ಪ್ರಸ್ತಾವನೆಗಳಾಗಿದ್ದಲ್ಲಿ ಕನಿಷ್ಠ 1.00 ಎಕರೆ ಹಿಡುವಳಿ ಪ್ರದೇಶ ಹೊಂದಿರಬೇಕು.
* ಸಂಘ – ಸಂಸ್ಥೆಗಳ ಪ್ರಸ್ತಾವನೆಯಾಗಿದ್ದಲ್ಲಿ ಗುಚ್ಚ ಮಾದರಿಯಲ್ಲಿ ಕನಿಷ್ಠ 50 ಎಕರೆ ಪ್ರದೇಶ ಇರಬೇಕು.
* ಫಲಾನುಭವಿಗಳು ಬಹು ಬೆಳೆಗಳನ್ನು ಬೆಳೆಯುವ ರೈತರಾಗಿರಬೇಕು ಅಥವಾ ಒಂದು ಅಥವಾ ಎರಡು ನಿರ್ದಿಷ್ಟ ಪ್ರಮುಖ ಬೆಳೆಗಳನ್ನು (ಸಾವಯವ ಕೃಷಿ ನೀತಿ 2017 ರನ್ವಯ) ಬೆಳೆಯುವ ಆಸಕ್ತಿ ಹೊಂದಿರಬೇಕು.
* ಯೋಜನೆಯ ಅನುಷ್ಠಾನದಲ್ಲಿ ಪ್ರತಿಯೊಂದು ಸಂಘ-ಸಂಸ್ಥೆಯನ್ನು ಒಂದು ಘಟಕವೆಂದು ಪರಿಗಣಿಸಲಾಗುವುದು. ಹಾಗೆಯೇ, ಸ್ವಯಂ ಇಚ್ಛೆಯಿಂದ ತಮ್ಮ ಸಂಪೂರ್ಣ ಕ್ಷೇತ್ರವನ್ನು ಸಾವಯವ ಕೃಷಿಗೆ ಪರಿವರ್ತಿಸಲು ಇಚ್ಚಿಸುವ ಫಲಾನುಭವಿಗಳನ್ನು ಸಹ ಪರಿಗಣಿಸುವುದು.
* ಈಗಾಗಲೇ ಸಾವಯವ ದೃಡೀಕರಣಕ್ಕೆ ಸರ್ಕಾರದಿಂದ ವಿವಿಧ ಯೋಜನೆಗಳಡಿಯಲ್ಲಿ ಹಾಲಿ ಸಹಾಯಧನ ಪಡೆಯುತ್ತಿರುವ ಸಂಘ/ಸಂಸ್ಥೆಗಳು/ಕೃಷಿಕರು ಈ ಯೋಜನೆಯಡಿ ಪುನಃ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿದಾರರಿಂದ ಕೇಂದ್ರ/ರಾಜ್ಯ ಸರ್ಕಾರದ ಇತರೆ ಯಾವುದೇ ಯೋಜನೆಯಡಿ ಈ ಕಾರ್ಯಕ್ರಮಕ್ಕೆ ಹಾಲಿ ಸಹಾಯಧನ ಪಡೆಯುತ್ತಿಲ್ಲ ಎಂಬ ದೃಢೀಕರಣ ಪತ್ರ ಪಡೆದುಕೊಳ್ಳುವುದು.
ಈ ಯೋಜನೆಯ ಅರ್ಜಿ ಫಾರ್ಮ್ ಇಲ್ಲಿದೆ ನೋಡಿ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ https://raitamitra.karnataka.gov.in/info-4/Scheme++Details/en
ಈ ಪೇಜ್ ಅನ್ನು ಕ್ಲಿಕ್ ಮಾಡಿ ನೀವು ಈ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.