3454 ಕೋಟಿ ರೂಪಾಯಿ ಬೆಲೆ ಪರಿಹಾರ ಯಾವ ರೈತರಿಗೆ ಜಮಾ ಆಗಲಿದೆ?

3454 ಕೋಟಿ ಬರ ಪರಿಹಾರ ಹಣ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ. ಯಾವ ಯಾವ ರೈತರಿಗೆ ಈ ಬಾರಿ ಪರಿಹಾರ ಹಣ ಬರುತ್ತೆ. ಹಾಗೂ ಯಾವ ರೈತರು ಇನ್ನೂ ಈ ಕೆಲಸ ಮಾಡಿಲ್ಲ. ಬರ ಪರಿಹಾರ ಹಣ ಬರಬೇಕಾದರೆ ಕೂಡಲೇ ಏನು ಮಾಡಬೇಕು?‌ ಮತ್ತು ಬರ ಪರಿಹಾರ ಹಣ ಸ್ಟೇಟಸ್ ಚೆಕ್ ಹೇಗೆ ಮಾಡುವುದು ಎಂದು ತಿಳಿಯೋಣ ಬನ್ನಿ.

ಹೌದು ರೈತರೇ ಈಗಾಗಲೇ ರಾಜ್ಯ ಸರ್ಕಾರದ ಕಡೆಯಿಂದ 2000 ಸಾವಿರ ಬರ ಪರಿಹಾರ ಹಣ ಬಿಡುಗಡೆ ಆಗಿದ್ದು, 2 ದಿನಗಳ ಹಿಂದೆ ಅಷ್ಟೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಘೋಷಣೆ ಎಂದರೆ ಬಾಕಿ ಉಳಿದ ಬರ ಪರಿಹಾರ ಹಣ ಬಿಡುಗಡೆ ಮಾಡುತ್ತೇವೆ ಎಂದು ಕೋರ್ಟ್ ಮೂಲಕ ಹೇಳಿತ್ತು ಅದೇ ರೀತಿ ಈಗ ಕೇಂದ್ರ ಸರ್ಕಾರ 3454 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಕೂಡಲೇ ನೀವು ಸಹ ನಿಮ್ಮ ಖಾತೆ ಚೆಕ್ ಮಾಡಿ ಹಣ ಬಂದಿದೆ ಅಥವಾ ಇಲ್ಲಾ ಎಂದು ಪರಿಶೀಲಿಸಿ ಕೊಳ್ಳಬೇಕು.

ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಒಂದೇ ಹಂಗಾಮಿನ ಬೆಳೆ ಹಾನಿ ಪರಿಹಾರಕ್ಕೆ 3,454 ಕೋಟಿ ರೂ. ನೆರವು ಗಮನ ಸೆಳೆಯುವಂತಿದೆ. ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು 223 ತಾಲೂಕುಗಳು ಬರಪೀಡಿತವಾಗಿವೆ. ಸರ್ಕಾರ ಮೊರೆ ಹೋದದ್ದು ಒಂದು ಒಳ್ಳೆಯ ನಿರ್ಧಾರ ಎನ್ನಲಾಗಿದೆ. NDRF ಅಡಿಯಲ್ಲಿ 3,454 ಕೋಟಿ ರೂ. ನೆರವು ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿರುವುದೂ ಹೊಸ ದಾಖಲೆಯಾಗಿದೆ. ಹಿಂದಿನ ಯಾವುದೇ ಸರ್ಕಾರ ಇಷ್ಟು ಮೊತ್ತದ ಅನುದಾನ ನೀಡಿರಲಿಲ್ಲ.

ರೈತರೇ ಮುಖ್ಯವಾಗಿ ಹೇಳಬೇಕೆಂದರೆ ಹಣ ಬರದೇ ಇರುವವರು ಸ್ವಲ್ಪ ಜಾಗರೂಕತೆಯಿಂದ ಓದಿ. ಹಣ ಬರದೆ ಇರುವುದಕ್ಕೆ ಕಾರಣ ಇಲ್ಲಿದೆ ನೋಡಿ. ನೀವು FID ಮಾಡಿಸದಿದ್ದರೆ, ಅಥವಾ ನಿಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಇರದಿದ್ದರೆ, ಅಥವಾ ಕುಟುಂಬದ ಆಸ್ತಿ ಭಾಗ ಆಗಿದೆ ತಂಟೆ ತಕರಾರು ಇದ್ದರೆ, ಆಸ್ತಿ ಹಕ್ಕುದಾರರಿಗಷ್ಟೇ ಪರಿಹಾರ ನೀಡಿಕೆ ಆಸ್ತಿ ಹಂಚಿಕೆಗಾಗಿ ಕುಟುಂಬದಲ್ಲಿ ಗಲಾಟೆ, ಹೀಗಾಗಿ ಹಲವರು ಫೂಟ್ಸ್ ಐಡಿ ಮಾಡಿಲ್ಲ ಯಾವುದೇ ಬರ ಪರಿಹಾರ ಹಣ ಬರುವುದಿಲ್ಲ. ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ಪರಿಶೀಲನೆ ಮಾಡಿ.

FID(ಎಫ್ ಐಡಿ) ಇರದೆ ಇದ್ದವರು ಈ ಕೆಲಸ ಮಾಡಿ.
ಮೊದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ https://fruits.karnataka.gov.in/OnlineUserLogin.aspx

* ನಂತರ ಈ ಕೆಳಗಿನಂತೆ ಪೇಜ್ ತೆರೆದುಕೊಳ್ಳುತ್ತದೆ.”Citizen Registration” ಮೇಲೆ ಕ್ಲಿಕ್ ಮಾಡಿ.

* ನಂತರ ನಿಮ್ಮ ಆಧಾರ ಕಾರ್ಡ್ ನಲ್ಲಿರುವಂತೆ ಹೆಸರು,ಆಧಾರ್ ನಂಬರ್ ಹಾಕಿ,l agree ಮೇಲೆ ಟಿಕ್ ಮಾಡಿ Submit ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಿ,Proceed ಮೇಲೆ ಕ್ಲಿಕ್ ಮಾಡಿ
* ನಂತರ ನಿಮ್ಮ ಮೊಬೈಲ್ ಗೆ ಬಂದಿರುವ ಒಟಿಪಿ OTP ಅನ್ನು ಅಲ್ಲಿ ಹಾಕಿ, ನಂತರ Submit ಮೇಲೆ ಕ್ಲಿಕ್ ಮಾಡಬೇಕು.
* ನಂತರ ನೀವು Password create ಮಾಡಿಕೊಂಡು ಮುಂದೆ ಲಾಗಿನ್ ಆಗಿ ಅಲ್ಲಿ ಕೇಳಲಾದ ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದರೆ ನಿಮ್ಮ FID (ಫ್ರೂಟ್ಸ್ ಐ ಡಿ) ನಿಮಗೆ ಸಿಗಲಿದೆ.

Spread positive news

Leave a Reply

Your email address will not be published. Required fields are marked *