ಶಾಕಿಂಗ್ ನ್ಯೂಸ್! ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲು ದುಪ್ಪಟ್ಟು ಹೆಚ್ಚಾಗಲಿದೆ.

ಈ ವರ್ಷ ಬಿಸಿಲು ಹೆಚ್ಚಾಗಲಿದೆ. ಗರಿಷ್ಠ ತಾಪಮಾನ ಹೆಚ್ಚಳ? ವಾಯವ್ಯ ಮತ್ತು ಪಶ್ಚಿಮ, ಮಧ್ಯ ಭಾರತದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ದೇಶದ ಬಹುತೇಕ ಭಾಗಗಳಲ್ಲಿ ನವೆಂಬರ್‌ನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ. ನವೆಂಬರ್‌ನಲ್ಲಿ ದೇಶದಾದ್ಯಂತ ಮಳೆ ಸಾಮಾನ್ಯವಾಗಿ ದೀರ್ಘಾವಧಿಯ ಸರಾಸರಿಯ 77 ರಿಂದ 123 ಪ್ರತಿಶತದಷ್ಟು ಇರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ. ಎಲ್ ನಿನೋ ಪರಿಸ್ಥಿತಿಗಳು ಈ ಅವಧಿಯಲ್ಲಿ…

Spread positive news
Read More

ರೈತರಿಗೆ ಸೋಲಾರ್ ಪಂಪ್ ಸೆಟ್ ಉಚಿತ.

ಉಚಿತ ಸೋಲಾರ್ ಪಂಪ್ ಸೆಟ್ ಬೇಕಾ? ಹಾಗಿದ್ದರೆ ಕೂಡಲೇ ಅದರ ಬಗ್ಗೆ ಸಂಪೂರ್ಣ ಮಾಹಿತಿ ನೋಡಿ. ಕೃಷಿ ಪಂಪ್‌ಸೆಟ್‌ಗಳಿಗೆ ಸೋಲಾರ್‌ ವಿದ್ಯುತ್‌ ಬೇಡಿಕೆ ಒತ್ತಡ ನಿವಾರಣೆ ಮಾಡಲು ಕೃಷಿ ಪಂಪ್ ಸೆಟ್‌ಗಳಿಗೆ ಸೋಲಾರ್ ಪ್ಯಾನಲ್ ಅಳವಡಿಕೆಗೆ ಆದ್ಯತೆ ನೀಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 36 ಲಕ್ಷ ರೈತರ ಕೃಷಿ ಪಂಪ್‌ಸೆಟ್‌ಗಳಿರಬಹುದು ಎಂದು ಅಂದಾಜಿಸಲಾಗಿದ್ದು, ಅದರಲ್ಲಿ ಅರ್ಧದಷ್ಟು ಪಂಪ್‌ಸೆಟ್‌ಗಳಿಗೆ ಸೋಲಾರ್ ಅಳವಡಿಕೆಗೆ ಪ್ರೋತ್ಸಾಹ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಒಂದು ಪಂಪ್‌ಸೆಟ್‌ಗೆ ಸೋಲಾ‌ ಅಳವಡಿಸಿಕೊಳ್ಳಲು 4 ಲಕ್ಷ ರೂ….

Spread positive news
Read More

ಆಧುನಿಕ ಕೃಷಿಯಲ್ಲಿ ಸದ್ದು ಮಾಡುತ್ತಿದೆ ಎರೆಜಲ! ಇಷ್ಟೊಂದು ಲಾಭಾನಾ?

ಎರೆಹುಳು ರೈತರ ಮಿತ್ರ ಎಂದೇ ಪ್ರಸಿದ್ಧಿ. ಎರೆಜಲವು ಎರೆಹುಳುಗಳಿಂದ ತಯಾರಾಗುವ ಬಹುಮುಖ್ಯ ಉತ್ಪನ್ನವಾಗಿದೆ. ಎರೆಹುಳುಗಳ ದೇಹದಿಂದ ತಯಾರಾಗುವ ಎರೆಜಲವು ಅಗತ್ಯ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಹಾರ್ಮೋನುಗಳು, ಕಿಣ್ವಗಳು, ಸೂಕ್ಷ್ಮಜೀವಿ ಪ್ರತಿರೋದಕ ಅಂಶಗಳು, ಬೆಳೆವಣಿಗೆ ನಿಯಂತ್ರಕ ಅಂಶಗಳು (ಆಕ್ಸಿನ್ ಹಾಗೂ ಸೈಟೊಕೈನಿನ್) ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳನ್ನು ಒಳಗೊಂಡಿದ್ದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಬಾಧೆಯನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ. ಎರೆಹುಳುಗಳ ದೇಹದ ಮೇಲಿನ ರಂಧ್ರಗಳಿಂದ ಬರುವ ಕೊಲೋಮಿಕ್ ದ್ರವವು ಶಿಲೀಂಧ್ರನಾಶಕ, ಅಣುಜೀವಿನಾಶಕ ಮತ್ತು ಕೀಟನಾಶಕ…

Spread positive news
Read More

ಮುಂಗಾರು ಬೆಳೆ ಸಮೀಕ್ಷೆ ವಿವರ ನಮೂದಿಸಲು ಈ ಕ್ರಮಗಳನ್ನು ಅನುಸರಿಸಿ

ಗೂಗಲ್ ಪ್ಲೇ-ಸ್ಟೋರ್‍ನಲ್ಲಿ “ಮುಂಗಾರು ರೈತರ ಬೆಳೆ ಸಮೀಕ್ಷೆ 2023” ಎಂದು ಹುಡುಕಿ ಡೌನ್‍ಲೋಡ್ ಮಾಡಿಕೊಂಡು ಆಧಾರ್ ವಿವರ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಿ ಸಕ್ರಿಯಗೊಳಿಸಲು ಓಟಿಪಿ ನಮೂದಿಸಬೇಕು. ಮೊಬೈಲ್ ಆಪ್‍ನಲ್ಲಿ ಮೊದಲು ಮಾಸ್ಟರ್ ವಿವರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಕು.ನಂತರ ತಮ್ಮ ಜಮೀನಿನ ಸರ್ವೆ ನಂಬರ್‍ಗಳನ್ನು ಸೇರಿಸಿಕೊಳ್ಳಬೇಕು. ಮುಂದಿನ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ದಾಖಲಿಸಬೇಕು. ಈ ಹಂತದಲ್ಲಿ ರೈತರು ತಮ್ಮ ಜಮೀನಿನಲ್ಲಿ ಪಾಳು ಬಿದ್ದಿರುವ ಪ್ರದೇಶ, ಈಗಾಗಲೇ ಕಟಾವಾದ ಪ್ರದೇಶ, ಕೃಷಿಯೇತರ ಬಳಕೆಗೆ…

Spread positive news
Read More

ಅನಾವೃಷ್ಟಿಯಿಂದ ರೈತರಿಗೆ ಬೆಳೆ ಕಾಪಾಡಲು ಕೃಷಿ ಇಲಾಖೆಯಿಂದ ಸಲಹೆಗಳು

ಈ ಬಾರಿ ನೈಋತ್ಯ ಮುಂಗಾರು ಮಳೆ ರೈತರಿಗೆ ನಿರಾಸೆ ಉಂಟು ಮಾಡಿದೆ. ಜೂನ್ ತಿಂಗಳಿನಲ್ಲಿ ಮಳೆಯಾಗದೇ ಮಳೆ ಕೊರತೆ ಉಂಟಾಗಿತ್ತು. ಜುಲೈ ತಿಂಗಳಿನಲ್ಲಿ ದಿನಗಳ ಕಾಲ ಮಾತ್ರ ಮಳೆಯಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ.ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಮಳೆಯು ಸರಿಯಾದ ಸಮಯಕ್ಕೆ ಬಾರದೆ ಇರುವುದರಿಂದ ಮುಂಗಾರು ಬೆಳೆಗಳ ಬಿತ್ತನೆಯನ್ನು ತಡವಾಗಿ ಜುಲೈ ತಿಂಗಳಿನಲ್ಲಿ ಮಾಡಲಾಗಿದೆ. ತಡವಾಗಿ ಬಿತ್ತನೆಯಾ ಕಾರಣದಿಂದಾಗಿ ಮುಂಗಾರು ಬೆಳೆಗಳಿಗೆ ಮುಂದಿನ ದಿನಗಳಲ್ಲಿ ಹಲವಾರು ಕೀಟ, ರೋಗಗಳು ಕಾಣಿಸಿಕೊಳ್ಳುವ ನಿರೀಕ್ಷೆ ಇದೆ….

Spread positive news
Read More

ಕೃಷಿ ಸಿಂಚಾಯಿ ಯೋಜನೆ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನ

2023-24 ಸಾಲಿನ ಕೇಂದ್ರ ಪುರಸ್ಕ್ರತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (ಪಿಎಂಕೆಎಸ್ವೈ) ಯಡಿಯಲ್ಲಿ ಪ್ರತಿ ಹನಿಗೆ ಅಧಿಕ ಬೆಳೆ ಕಾರ್ಯಕ್ರಮದಡಿ ಎಲ್ಲಾ ತೋಟಗಾರಿಕೆ ಬೆಳೆಗಳಿಗೆ (ಕಾಫಿ, ಟೀ, ರಬ್ಬರ್ ಹೊರತು ಪಡಿಸಿ) ಹನಿ ನೀರಾವರಿ ಅಳವಡಿಕೆಗಾಗಿ ಗರಿಷ್ಠ 5 ಹೆಕ್ಟೇರ್ ಪ್ರದೇಶದವರೆಗೆ ಸಹಾಯಧನವನ್ನು ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ರೈತರಿಗೆ 2 ಹೆ. ಪ್ರದೇಶದವರೆಗೆ ಶೇ.90ರ ಸಹಾಯಧನ ಮತ್ತು ಇತರೆ ರೈತರಿಗೆ ಶೆ. 75ರ ಸಹಾಯಧನವನ್ನು ನೀಡಲಾಗುವುದು. ಹಾಗೂ 2 ಹೆ. ರಿಂದ 5ಹೆ….

Spread positive news
Read More

ಆಗಸ್ಟ್‌ 21ರಿಂದ ಮೂರು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಭಾರೀ ಮಳೆ, ಎಲ್ಲೆಲ್ಲಿ?, ಇಲ್ಲಿದೆ ವಿವರ

ಆಗಸ್ಟ್‌ 21ರಿಂದ ಮುಂದಿನ ಮೂರು ದಿನಗಳ ಕಾಲ ಮಳೆರಾಯನ ಆರ್ಭಟ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಂದು (ಆಗಷ್ಟ್ 20) ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್‌ ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇಂದು ದಕ್ಷಿಣ ಮತ್ತು ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಆಗಷ್ಟ್ 21ರಿಂದ ಮೂರು ದಿನ ಕರಾವಳಿ…

Spread positive news
Read More

ಕಬ್ಬಿನಲ್ಲಿ ಸಸಿ ಸುಳಿ ಕೊರಕದ ನಿಯಂತ್ರಣ ಹೇಗೆ?

ಭಾರತದ ಉತ್ತರ ಪ್ರದೇಶ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಮುಖವಾಗಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಉತ್ತರ ಪ್ರದೇಶ ಅತಿ ಹೆಚ್ಚು ಕ್ಷೇತ್ರವನ್ನು ಹೊಂದಿದ್ದು, ಪ್ರತಿ ಹೆಕ್ಟೇರ ಇಳುವರಿಯು ಕಡಿಮೆ ಇರುತ್ತದೆ. ಉತ್ತರ ಪ್ರದೇಶಕ್ಕೆ ಹೊಲಿಸಿದರೆ ಇಳುವರಿ ಮತ್ತು ಸರಾಸರಿ ಸಕ್ಕರೆ ಅಂಶದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಮಂಚೂಣಿಯಲ್ಲಿವೆ. ಕಬ್ಬು ಬೆಳೆಯುವ ಎಲ್ಲಾ ರಾಜ್ಯಗಳಲ್ಲಿ ಕುಳೆ ಬೆಳೆಯುವುದು ಸಾಮಾನ್ಯವಾಗಿದೆ. ಆದರೆ, ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿಯಲ್ಲಿ ವಿಭಿನ್ನವಾಗಿರುತ್ತದೆ. ಕೆಲವೊಂದು ರಾಜ್ಯಗಳಲ್ಲಿ ನಾಟಿ ಕಬ್ಬು…

Spread positive news
Read More

ಪಿಎಂ ಕಿಸಾನ್ ಅನರ್ಹರ ಪಟ್ಟಿ ಬಿಡುಗಡೆ: ರೈತರಿಗೆ ಶಾಕ್?

ಪಿಎಂ ಕಿಸಾನ್ ಅನರ್ಹರ ಪಟ್ಟಿ ಬಿಡುಗಡೆ: ರೈತರಿಗೆ ಶಾಕ್ ಪಿಎಂ ಕಿಸಾನ್ ಯೋಜನೆಯ ಇನ್ನೂ ಮುಂದೆ ಈ ರೈತರಿಗೆ ಬರುವುದಿಲ್ಲ! ನಿಮ್ಮ ಹೆಸರು ಚೆಕ್ ಮಾಡಿ PM-Kisan Yojana ಅಡಿಯಲ್ಲಿ ನಿಮ್ಮ ಅರ್ಹತೆಯ ಸ್ಥಿತಿಯನ್ನು ಪರಿಶೀಲಿಸಲು, ನೀವು ಕೇಂದ್ರ ಸರ್ಕಾರದ ಅಧಿಕೃತ ವೆಬ್ https://pmkisan.gov.in/VillageDashboard_Portal.aspx ಗೆ ಭೇಟಿ ನೀಡಿ. ಒಮ್ಮೆ ನೀವು ವೆಬ್‌ಸೈಟ್‌ನಲ್ಲಿರುವಾಗ, “ಕರ್ನಾಟಕ” ರಾಜ್ಯವನ್ನು (State) ಆಯ್ಕೆಮಾಡಿ ಮತ್ತು ನಂತರ ಡ್ರಾಪ್‌ಡೌನ್ ಆಯ್ಕೆಗಳಿಂದ ನಿಮ್ಮ ಜಿಲ್ಲೆ (District), ಉಪ-ಜಿಲ್ಲೆ (Sub-District) ಮತ್ತು ಗ್ರಾಮವನ್ನು (Village) ಆಯ್ಕೆ…

Spread positive news
Read More

ಮಿಶ್ರ ಬೆಳೆ ಬೆಳೆದು ಯಶಸ್ಸು ಕಂಡ ಪ್ರಗತಿಪರ ರೈತ

ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎನ್ನುವಂತೆ ನೇಗಿಲ ನಂಬಿ ನಡೆದರೆ ನೌಕರಿಗಿಂತಲೂ ಹೆಚ್ಚು ಆದಾಯ ಗಳಿಸಲು ಸಾಧ್ಯವಿದ್ದು, ಮಿಶ್ರ ಬೆಳೆಯಲ್ಲಿ ನೆಮ್ಮದಿ ಕಾಣಬಹುದಾಗಿದೆ ಎಂಬುದಕ್ಕೆ ತಾಲೂಕಿನ ಕೊರವಿಕೊಪ್ಪ ಗ್ರಾಮದ ಸಾಮಾನ್ಯ ರೈತ ಸುರೇಶ ಮಲ್ಲಪ್ಪ ಹೊಳೆ ಸಾಕ್ಷಿಯಾಗಿದ್ದಾರೆ. ಮಲಪ್ರಭೆಯ ಮಡಿಲಲ್ಲಿನ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ತರಹೇವಾರಿ ಮಿಶ್ರ ಬೆಳೆಗಳನ್ನು ಬೆಳೆದು ಈ ಕ್ಷೇತ್ರದ ರೈತರಿಗೆ ಮಾದರಿಯಾಗಿದ್ದಾರೆ. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕೃಷಿಯಲ್ಲಿಯೇ ಸಂತೋಷ ಕಂಡು ಅಭಿವೃದ್ಧಿ ಪಥದತ್ತ ಸಾಗಿದ್ದಾರೆ. ಪಿಯುಸಿ ನಂತರ ಓದಿಗೆ…

Spread positive news
Read More