ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯವನ್ನು ಚರ್ಚೆ ಮಾಡೋಣ. ಎಲ್ಲಾ ರೈತರು ಈ ಮಾಹಿತಿ ತಿಳಿಯಬೇಕು. ಇದರಿಂದ ರೈತರು ತಮ್ಮ ಆನ್ಲೈನ್ ಸೇವೆಗಳನ್ನು ಪಡೆಯಲು ಸುಲಭ ಆಗುತ್ತದೆ. ಬನ್ನಿ ಆ ಹೊಸ ವಿಷಯವನ್ನು ಚರ್ಚಿಸೋಣ. ಹೌದು ರೈತರೇ ನಾವು ಕೆವೈಸಿ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಏನಿದು ಕೆವೈಸಿ? ಕೆವೈಸಿ ಉಪಯೋಗ ಏನು? ರೈತರಿಗೆ ಕೆವೈಸಿ ಇಂದು ಆಗುವ ಲಾಭವೇನು? ಎಲ್ಲವನ್ನೂ ತಿಳಿಯೋಣ.
KYC ಎಂದರೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳುವುದು ಇದು ಸಂಸ್ಥೆಯೊಂದು ಗ್ರಾಹಕರ ದೃಢೀಕರಣವನ್ನು ಖಚಿತಪಡಿಸಲು ಮತ್ತು ಪರಿಶೀಲಿಸಲು ಪರಿಣಾಮಕಾರಿ ಮಾರ್ಗವಾಗಿದೆ. ಇದಕ್ಕಾಗಿ, ಗ್ರಾಹಕರು ವಿವಿಧ ಸಾಧನಗಳಲ್ಲಿ ಹೂಡಿಕೆ ಮಾಡುವ ಮೊದಲು ಎಲ್ಲಾ KYC ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಯಾವುದೇ ಹಣಕಾಸಿನ ವಹಿವಾಟುಗಳನ್ನು ನಡೆಸುವ ಹಕ್ಕನ್ನು ನೀಡುವ ಮೊದಲು ಎಲ್ಲಾ ಗ್ರಾಹಕರಿಗೆ KYC ಪ್ರಕ್ರಿಯೆಯನ್ನು ಮಾಡಲು RBI ಎಲ್ಲಾ ಹಣಕಾಸು ಸಂಸ್ಥೆಗಳನ್ನು ಕಡ್ಡಾಯಗೊಳಿಸುತ್ತದೆ. ಗ್ರಾಹಕರು KYC ಆನ್‌ಲೈನ್ ಪರಿಶೀಲನೆಯನ್ನು ಬಳಸುತ್ತಿರಲಿ ಅಥವಾ ಆಫ್‌ಲೈನ್ KYC ಅನ್ನು ಆಯ್ಕೆ ಮಾಡಿಕೊಂಡಿರಲಿ, ಇದು ಸರಳವಾದ ಒಂದು-ಬಾರಿ ಪ್ರಕ್ರಿಯೆಯಾಗಿದೆ.
eKYC (ಎಲೆಕ್ಟ್ರಾನಿಕ್ KYC) ಎಂಬುದು ಡಿಜಿಟಲ್ ಗ್ರಾಹಕ KYC ಪರಿಶೀಲನಾ ವಿಧಾನವಾಗಿದ್ದು, ಇದರಲ್ಲಿ ಗ್ರಾಹಕರ ವಿವರಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪರಿಶೀಲಿಸಲಾಗುತ್ತದೆ.
ಹಣಕಾಸು ಸಂಸ್ಥೆಯ ಸೇವೆಗಳನ್ನು ಬಳಸಲು ಬಯಸುವ ಯಾರಿಗಾದರೂ ಇದು ಅಗತ್ಯವಾಗಿರುತ್ತದೆ.
ಇದು ಗ್ರಾಹಕರ ಗುರುತು ಮತ್ತು ವಿಳಾಸದ ಪುರಾವೆಗಳನ್ನು ಸೇವಾ ಪೂರೈಕೆದಾರರಿಗೆ ಒದಗಿಸಲು ಸಹಾಯ ಮಾಡುತ್ತದೆ, ಸಮಯ ತೆಗೆದುಕೊಳ್ಳುವ ವೈಯಕ್ತಿಕ ಪರಿಶೀಲನೆಯ ಅಗತ್ಯವನ್ನು ನಿವಾರಿಸುತ್ತದೆ.
ಇ -ಕೆವೈಸಿ ಮಾಡಿಸುವುದು ಕಡ್ಡಾಯ: ಇನ್ನು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಬರುವ ರೈತರು ಕಡ್ಡಾಯವಾಗಿ ಈ ಬಾರಿ (ಮಾಡಿಸದೆ ಇರುವವರು) ಇ- ಕೆವೈಸಿ ಮಾಡಿಸಬೇಕು. ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರು ಆರ್ಥಿಕ ನೆರವನ್ನು ಪಡೆಯಬೇಕಾದರೆ, ಇ – ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಇ -ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಕೂಡಲೇ ಇ – ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಪಿಎಂ ಕಿಸಾನ್‌ಗೆ ಇ- ಕೆವೈಸಿ ಮಾಡಿಸುವುದು ಹೇಗೆ ?
ಒಟಿಪಿ ಆಧಾರಿತ ಇ -ಕೆವೈಸಿ: ಒಟಿಪಿ (otp) ಆಧಾರಿತ ಇ -ಕೆವೈಸಿಯು (e-kyc) ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಪೋರ್ಟಲ್ (pm -kisan portal) ನಲ್ಲಿ ಹಾಗೂ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಲಭ್ಯವಿರುತ್ತದೆ. (https://pmkisan.gov.in).
ಬಯೋಮೆಟ್ರಿಕ್:
ಬಯೋಮೆಟ್ರಿಕ್ (Biometric) ಆಧಾರಿತ ಇ -ಕೆವೈಸಿಯನ್ನೂ ನೀವು ಮಾಡಿಸಬಹುದಾಗಿದೆ. ನಿಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.
ಫೇಸ್ ಸ್ಕ್ಯಾನ್:
ಫೇಸ್ ಸ್ಕ್ಯಾನ್‌ನ ಮೂಲಕವೂ ಇ – ಕೆವೈಸಿ ಮಾಡಿಸಬಹುದಾಗಿದೆ. ಮುಖ (Face authentication) ದೃಢೀಕರಣದ ಮೂಲಕವೂ ಇದು ಸಾಧ್ಯವಿದೆ. ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಈ ಸೌಲಭ್ಯ ಲಭ್ಯವಿದೆ. ರೈತರು ಈ ಮೇಲಿನ ಯಾವುದಾದರೂ ಒಂದು ಆಯ್ಕೆಯ ಮೂಲಕ ಇ – ಕೆವೈಸಿ ಮಾಡಿಸಬಹುದಾಗಿದೆ.