ಇವತ್ತು ನಾವು ಕೃಷಿ ವಿಜ್ಞಾನಿಗಳ ನೇಮಕದ ಕುರಿತು ಚರ್ಚೆ ಮಾಡೋಣ. ಕೃಷಿ ವಿಜ್ಞಾನಿಯಾಗಲೂ ಇರಬೇಕಾದ ಅರ್ಹತೆಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಜಿ ಸಲ್ಲಿಸಲು ಮುಖ್ಯವಾಗಿ ಬೇಕಾಗಿರುವ ದಾಖಲೆಗಳು ಎಲ್ಲಾದರ ಬಗ್ಗೆ ಚರ್ಚೆ ಮಾಡೋಣ.
ICAR ASRB (ಎಎಸ್ರ್ಆಬಿ) 2025ನೇ ಸಾಲಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಸೂಚನೆಯನ್ನು ಫೆಬ್ರವರಿಯಲ್ಲಿ ಪ್ರಕಟಿಸಿದ್ದು, ಇದೀಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಎಎಸ್ಆರ್ಬಿ ವೆಬ್ಸೈಟ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಮೇ 21 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.
ಯಾವ ಯಾವ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ –
ಎಎಸ್ಆರ್ಬಿ ನಡೆಸುವ ನೆಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ), ಅಗ್ರಿಕಲ್ಚರಲ್ ರಿಸರ್ಚ್ ಸರ್ವೀಸ್ (ಎಆರ್ ಎಸ್), ಸಬ್ಜೆಕ್ಟ್ ಮ್ಯಾಟರ್ ಸ್ಪೆಷಲಿಸ್ಟ್ (ಎಸ್ಎಂಎಸ್) ಮತ್ತು ಸೀನಿಯರ್ ಟೆಕ್ನಿಕಲ್ ಆಫೀಸರ್ (ಎಸ್ ಟಿಒ) ಹುದ್ದೆಗಳ ನೇಮಕಾತಿಗೆ ರಾಷ್ಟ್ರೀಯ ಮಟ್ಟದಲ್ಲಿ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಆಧರಿತ ಪರೀಕ್ಷೆ ಇದಾಗಿದ್ದು, ಪೂರ್ವಭಾವಿ ಪರೀಕ್ಷೆ ಈ ವರ್ಷದ ಸೆಪ್ಟೆಂಬರ್ನಲ್ಲಿ ಮತ್ತು ಮುಖ್ಯ ಪರೀಕ್ಷೆ ಡಿಸೆಂಬರ್ನಲ್ಲಿ ನಡೆಯಲಿದೆ. ಈ ಪರೀಕ್ಷೆ ಮೂಲಕ ಒಟ್ಟಾರೆ 582 ಹುದ್ದೆಗಳಿಗೆ ನೇಮಕ.
ಅರ್ಹತೆಗಳೇನು?: ಅಭ್ಯರ್ಥಿಗಳ ಆಯ್ಕೆಗಾಗಿ
ಒಟ್ಟು 60 ವಿವಿಧ ವಿಷಯಗಳನ್ನು ನೀಡಲಾಗಿದೆ. ಅದರಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದಾಗಿದೆ. ಆದರೆ, ಸರಕಾರದಿಂದ ಅನುಮೋದನೆ ಪಡೆದ ಶಿಕ್ಷಣ ಸಂಸ್ಥೆಯಿಂದ ಅಭ್ಯರ್ಥಿಗಳು ನಿಗದಿತ ವಿದ್ಯಾರ್ಹತೆ ಹೊಂದಿರಬೇಕು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನೆಟ್ ಗೆ 60 ವಿಷಯಗಳಲ್ಲೂ ಪರೀಕ್ಷೆ ಬರೆಯಬಹುದು. ಉಳಿದಂತೆ ಎಸ್ ಎಂಎಸ್ಗೆ ಅವುಗಳಲ್ಲಿ ಆಯ್ದ 18 ವಿಷಯಗಳು, ಎಸ್ಟಿಒಗೆ 29 ಹಾಗೂ ಎಆರ್ಎಸ್ಗೆ 55 ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.
ವಯೋಮಿತಿ: ಅಭ್ಯರ್ಥಿಗಳು ನೆಟ್ ಪರೀಕ್ಷೆ ಬರೆಯಬೇಕಾದರೆ ಕನಿಷ್ಠ 21 ವರ್ಷ (2025ರಸೆಪ್ಟೆಂಬರ್ 9ರಂದು) ತುಂಬಿರಬೇಕು, ಆದರೆ, ಈ ಪರೀಕ್ಷೆ ಬರೆಯಲು ಯಾವುದೇ ಗರಿಷ್ಠ మికి ಇರುವುದಿಲ್ಲ. ಎಸ್ಎಂಎಸ್/ಎಸ್ಟಿಒ ಪರೀಕ್ಷೆ ಬರೆಯಬೇಕಾದರೆ 2100 35 ವರ್ಷದೊಳಗಿನವರಿಗೆ ಮಾತ್ರ ಅವಕಾಶ. ಎಆರ್ ಎಸ್ ಪರೀಕ್ಷಾರ್ಥಿಗಳು 21ರಿಂದ 32 ವರ್ಷದೊಳಗಿನವರಾಗಿರಬೇಕು.
ಶೈಕ್ಷಣಿಕ ಅರ್ಹತೆ –
ಅಭ್ಯರ್ಥಿಯು ಅರ್ಜಿ ಸಲ್ಲಿಸುತ್ತಿರುವ ನಿರ್ದಿಷ್ಟ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ.
ಪದವಿಯು ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾನಿಲಯದಿಂದ ಕೇಂದ್ರ ಅಥವಾ ರಾಜ್ಯ ಶಾಸಕಾಂಗ ಅಥವಾ ಸಂಸತ್ತಿನ ಯಾವುದೇ ಇತರ ಕಾಯಿದೆಯಿಂದ ಸಂಯೋಜಿಸಲ್ಪಟ್ಟಿರಬೇಕು ಅಥವಾ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕಾಯಿದೆ, 1956 ರ ಸೆಕ್ಷನ್ 3 ರ ಅಡಿಯಲ್ಲಿ ವಿಶ್ವವಿದ್ಯಾನಿಲಯವೆಂದು ಪರಿಗಣಿಸಬೇಕು.
ವಯಸ್ಸಿನ ಮಿತಿ:
ಕನಿಷ್ಠ ವಯಸ್ಸು: 21 ವರ್ಷಗಳು.
ASRB NET ಗೆ ಹೆಚ್ಚಿನ ವಯಸ್ಸಿನ ಮಿತಿಯಿಲ್ಲ.
ಪ್ರಯತ್ನಗಳ ಸಂಖ್ಯೆ: ಯಾವುದೇ ಮಿತಿಯಿಲ್ಲ ASRB NET ಗಾಗಿ ಪ್ರಯತ್ನಗಳ ಸಂಖ್ಯೆ.
ಇತರೆ ಹುದ್ದೆಗಳು (ARS, SMS, STO): ASRB NET ಸಾಮಾನ್ಯ ಅರ್ಹತಾ ಪರೀಕ್ಷೆಯಾಗಿದ್ದರೂ, ಇದು ಕೃಷಿ ಸಂಶೋಧನಾ ಸೇವೆ (ARS), ವಿಷಯದ ತಜ್ಞರು (SMS), ಮತ್ತು ಹಿರಿಯ ತಾಂತ್ರಿಕ ಅಧಿಕಾರಿ (STO) ನಂತಹ ಇತರ ಹುದ್ದೆಗಳಿಗೆ ಪ್ರವೇಶ ಪರೀಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಹುದ್ದೆಗಳು NET ಜೊತೆಗೆ ನಿರ್ದಿಷ್ಟ ವಯಸ್ಸಿನ ಮಿತಿಗಳನ್ನು ಮತ್ತು ಅರ್ಹತಾ ಅವಶ್ಯಕತೆಗಳನ್ನು ಹೊಂದಿರಬಹುದು. ಉದಾಹರಣೆಗೆ, ARS ಗಾಗಿ ವಯಸ್ಸಿನ ಮಿತಿಯು ಆಗಸ್ಟ್ 1, 2025 ರಂತೆ 21 ರಿಂದ 32 ವರ್ಷಗಳು, ಕಾಯ್ದಿರಿಸಿದ ವರ್ಗಗಳಿಗೆ ಸಡಿಲಿಕೆಗಳೊಂದಿಗೆ. ಅದೇ ರೀತಿ, SMS/STO ಗೆ ವಯಸ್ಸಿನ ಮಿತಿಯು ಮೇ 21 ರಂತೆ 21 ರಿಂದ 35 ವರ್ಷಗಳು.
ಅರ್ಜಿ ಸಲ್ಲಿಸಲು ಕೊನೆ ದಿನ – ಮೇ 21, 2025
ಪೂರ್ವಭಾವಿ ಪರೀಕ್ಷೆ ಸೆಪ್ಟೆಂಬರ್ 2-4, 2025
ಮುಖ್ಯ ಪರೀಕ್ಷೆ ಡಿಸೆಂಬರ್ 27, 2025
ರಾಜ್ಯದಲ್ಲಿ ಪರೀಕ್ಷಾ ಕೇಂದ್ರ – ಬೆಂಗಳೂರು
ಹೆಚ್ಚಿನ ಮಾಹಿತಿಗೆ: https://asrb.org.in