ತೊಗರಿ ಬೇಳೆಗೆ ಸರ್ಕಾರದಿಂದ ರೂ.450 ಪ್ರೋತ್ಸಾಹಧನ ಘೋಷಣೆ
ತೊಗರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರದ ನಿಗದಿತ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಬೋನಸ್ 450 ರೂ.ಗಳ ಸಹಾಯಧನ ನೀಡಲು ನಿರ್ಧರಿಸಿದ್ದು. ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದೆ. ಬರದಿಂದ ತತ್ತರಿಸಿದ್ದ ತೊಗರಿ ಬೆಳೆಗಾರರಿಗೆ ದರ ಕೈ ಹಿಡಿದಿರುವುದು ಈ ಬಾರಿಯ ವಿಶೇಷ. ರಾಜ್ಯದಲ್ಲಿಅತ್ಯಂತ ಹೆಚ್ಚಿನ ತೊಗರಿಯನ್ನು ಜಿಲ್ಲೆಯಲ್ಲಿಬೆಳೆಯಲಾಗುತ್ತದೆ. ಆದರೆ, ಈ ಬಾರಿ ಬರದ ಹಿನ್ನೆಲೆ ಗರಿಷ್ಠ ಪ್ರಮಾಣದಲ್ಲಿ ತೊಗರಿ ಹಾಳಾಗಿತ್ತು. ಇದು ತೊಗರಿ ನಾಡಿನ ರೈತರಿಗೆ ಗಾಯದ ಮೇಲೆ ಬರೆ…

