ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಗೆ ಹೊಸದಾಗಿ ಸೇರುವವರು, ಫಲಾನುಭವಿಯಾಗಲು ಬಯಸುವವರು ‘ಕೃಷಿಕರ ಗುರುತಿನ ಚೀಟಿ’ ಹೊಂದುವುದು ಕಡ್ಡಾಯವಾಗಿದೆ. ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಪಿಎಂ-ಕಿಸಾನ್ ರೈತರ ವಿಶಿಷ್ಟ ಗುರುತಿನ ಚೀಟಿಗಳು
ಅರ್ಜಿದಾರರು ಕೃಷಿ ಭೂಮಿ ಹೊಂದಿದ್ದಾರೆ ಎಂಬುದನ್ನು ರೈತರ ಗುರು ತಿನ ಚೀಟಿ ದೃಢಪಡಿಸುತ್ತದೆ. ಆದ ಕಾರಣ, ಹೊಸದಾಗಿ ಅರ್ಜಿ ಸಲ್ಲಿಸುವವರು ಕೃಷಿಕರ ಗುರುತಿನ ಚೀಟಿ ಹೊಂದಬೇಕಿದೆ. ಗುರುತಿನ ಚೀಟಿ ಇದ್ದಲ್ಲಿ ನೋಂದಣಿ ಪ್ರಕ್ರಿಯೆ ಸುಲಭ. ಹಾಗಾಗಿ, ಹೊಸ ಅರ್ಜಿದಾರರೆಲ್ಲರೂ ‘ಫಾರ್ಮಸ್್ರ ರಿಜಿಸ್ಟ್ರಿ’ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. 10 ರಾಜ್ಯಗಳಲ್ಲಿ ಈ ವ್ಯವಸ್ಥೆ ಜ.1ರಿಂದಲೇ ಜಾರಿಗೆ ಬಂದಿದೆ. ಮುಂಬರುವ ದಿನಗ ‘ಳಲ್ಲಿ ಉಳಿದ ರಾಜ್ಯಗಳಿಗೂ ಇದು ವಿಸ್ತರಣೆಯಾಗಲಿದೆ ಎಂದು ಇಲಾಖೆ ಪ್ರಕಟಣೆಯ್ಲಿ ಹೇಳಲಾಗಿದೆ. ‘ಕಿಸಾನ್ ಪೆಹಚಾನ್ ಪತ್ರ’ ಅಥವಾ ‘ರೈತ ಗುರುತಿನ ಚೀಟಿ’ ಎನ್ನುವುದು ರಾಜ್ಯಗಳ ಭೂ ದಾಖಲೆಗಳ ಜತೆಗೆ ಲಿಂಕ್ ಆಗಿರುವ ಆಧಾರ್ ರೀತಿಯ ವಿಶಿಷ್ಟ ಡಿಜಿಟಲ್ ಗುರುತಿನ ಸಂಖ್ಯೆಯಾಗಿದೆ. ಇದರಲ್ಲಿ ರೈತನ ಹೆಸರು, ಕೃಷಿಭೂಮಿ ಮಾಹಿತಿ, ಆ ಭೂಮಿಯಲ್ಲಿ ಬೆಳೆಯುತ್ತಿರುವ ಬೆಳೆಗಳ ವಿವರಗಳಿರುತ್ತವೆ.
ರಾಜ್ಯ ಸರ್ಕಾರದ ಕಡೆಯಿಂದ ಮಹತ್ವದ ಆದೇಶ ಹೊರ ಬರುತ್ತಿದೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು ರೈತರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಸರ್ಕಾರ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್ಗಳನ್ನು ನಡೆಸುತ್ತಿದೆ. ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್ಲೈನ್ ಮುಖಾಂತರ ನಿರ್ವಹಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಮಂಡಲ ಕಲಾಪದಲ್ಲಿ ತಿಳಿಸಿದ್ದಾರೆ.
ಇ -ಕೆವೈಸಿ ಮಾಡಿಸುವುದು ಕಡ್ಡಾಯ: ಇನ್ನು ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಬರುವ ರೈತರು ಕಡ್ಡಾಯವಾಗಿ ಈ ಬಾರಿ (ಮಾಡಿಸದೆ ಇರುವವರು) ಇ- ಕೆವೈಸಿ ಮಾಡಿಸಬೇಕು. ಪಿಎಂ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರು ಆರ್ಥಿಕ ನೆರವನ್ನು ಪಡೆಯಬೇಕಾದರೆ, ಇ – ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಇ -ಕೆವೈಸಿ ಮಾಡಿಸಲು ಬಾಕಿ ಇರುವ ರೈತರು ಕೂಡಲೇ ಇ – ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಪಿಎಂ ಕಿಸಾನ್‌ಗೆ ಇ- ಕೆವೈಸಿ ಮಾಡಿಸುವುದು ಹೇಗೆ ?
ಒಟಿಪಿ ಆಧಾರಿತ ಇ -ಕೆವೈಸಿ: ಒಟಿಪಿ (otp) ಆಧಾರಿತ ಇ -ಕೆವೈಸಿಯು (e-kyc) ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಪೋರ್ಟಲ್ (pm -kisan portal) ನಲ್ಲಿ ಹಾಗೂ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಲಭ್ಯವಿರುತ್ತದೆ. (https://pmkisan.gov.in).
ಬಯೋಮೆಟ್ರಿಕ್:
ಬಯೋಮೆಟ್ರಿಕ್ (Biometric) ಆಧಾರಿತ ಇ -ಕೆವೈಸಿಯನ್ನೂ ನೀವು ಮಾಡಿಸಬಹುದಾಗಿದೆ. ನಿಮ್ಮ ಹತ್ತಿರದ ನಾಗರಿಕ ಸೇವಾ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಮಾಡಿಸಬಹುದಾಗಿರುತ್ತದೆ.
ಫೇಸ್ ಸ್ಕ್ಯಾನ್:
ಫೇಸ್ ಸ್ಕ್ಯಾನ್‌ನ ಮೂಲಕವೂ ಇ – ಕೆವೈಸಿ ಮಾಡಿಸಬಹುದಾಗಿದೆ. ಮುಖ (Face authentication) ದೃಢೀಕರಣದ ಮೂಲಕವೂ ಇದು ಸಾಧ್ಯವಿದೆ. ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಈ ಸೌಲಭ್ಯ ಲಭ್ಯವಿದೆ. ರೈತರು ಈ ಮೇಲಿನ ಯಾವುದಾದರೂ ಒಂದು ಆಯ್ಕೆಯ ಮೂಲಕ ಇ – ಕೆವೈಸಿ ಮಾಡಿಸಬಹುದಾಗಿದೆ.
ಅದೇ ರೀತಿ ನೀವು ಅಧಿಕೃತ PM ಕಿಸಾನ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು eKYC ಆಯ್ಕೆಯನ್ನು ಆಯ್ಕೆ ಮಾಡಬಹುದು. ನೀವು ತೊಂದರೆಗಳನ್ನು ಎದುರಿಸಿದರೆ, ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿ (CSC) ಸಹಾಯ ಲಭ್ಯವಿದೆ.ಪಿಎಂ ಕಿಸಾನ್ ಹಣವನ್ನು ನೇರ ಲಾಭ ವರ್ಗಾವಣೆ (ಡಿಬಿಟಿ) ವ್ಯವಸ್ಥೆಯ ಮೂಲಕ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗಾಯಿಸಲಾಗುತ್ತದೆ.