ಪ್ರೀಯ ರೈತರೇ ನಿಮ್ಮ ಮಕ್ಕಳಿಗೆ ಗುಡ್ ನ್ಯೂಸ್! ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ ಬನ್ನಿ. ರೈತರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಜೀವನಾಡಿಯೆಂದೇ ಪರಿಗಣಿತವಾಗಿದೆ. ಪ್ರತಿವರ್ಷ, ಅನೇಕ ಇಲಾಖೆಗಳು ಮತ್ತು ನಿಗಮಗಳು ವಿದ್ಯಾರ್ಥಿ ವೇತನವನ್ನು ವಿವಿಧ ಸ್ಥರಗಳಲ್ಲಿ ವಿತರಿಸುತ್ತವೆ. ಈ ವಿದ್ಯಾರ್ಥಿ ವೇತನಗಳನ್ನು ಬಳಸಿಕೊಂಡು ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷ, ಲಕ್ಷಾಂತರ ವಿದ್ಯಾರ್ಥಿಗಳ ಬದುಕನ್ನು ಈ ವಿದ್ಯಾರ್ಥಿ ವೇತನಗಳು ಬದಲಾಯಿಸುತ್ತವೆ. ಜೊತೆಗೆ ವಿದೇಶಗಳಲ್ಲಿ ಉನ್ನತ ಅಧ್ಯಯನ ನಡೆಸಲು ಕೂಡ ಈ ವಿದ್ಯಾರ್ಥಿ ವೇತನಗಳು ಅವಕಾಶ ಒದಗಿಸಿಕೊಡುತ್ತವೆ.
ವಿದ್ಯಾರ್ಥಿ ವೇತನ ಹೇಗೆ ಪಡೆಯುವುದು?
ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ https://ssp.postmatric.karnataka.gov.in/ ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ. ನಂತರ ಅಲ್ಲಿ ಈಗಾಗಲೇ ನಿಮ್ಮ ಖಾತೆಯನ್ನು ತೆರೆದಿದ್ದರೆ ವಿದ್ಯಾರ್ಥಿ ಲಾಗಿನ್ ಆಗುವುದರ ಮೂಲಕ ಅರ್ಜಿ ಸಲ್ಲಿಸಬಹುದು.
• ಒಂದು ವೇಳೆ ನೀವು ಯಾವುದೇ ವಿದ್ಯಾರ್ಥಿ ಖಾತೆ ತೆರೆಯದಿದ್ದರೆ ಹೊಸ ಖಾತೆಯನ್ನು ಸೃಜಿಸಲು ಇಲ್ಲಿ
ಕ್ಲಿಕ್ ಮಾಡಿ. ಇಲ್ಲಿಯವರೆಗೂ ಎಸ್.ಎಸ್.ಪಿ ತಂತ್ರಾಂಶದಲ್ಲಿ ಖಾತೆ ಸೃಜಿಸದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಖಾತೆ ಸೃಜಸಬೇಕು.
ಇದು ಮೆಟ್ರಿಕ್ ಪೂರ್ವ
ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಬ್ಬರಿಗೂ ಅನ್ವಯಿಸುತ್ತದೆ.
• ನಂತರ ನಿಮ್ಮ ಖಾತೆಯನ್ನು ತೆರೆದು https://ssp.postmatric.karnataka.gov.in/2425_sa/signin.aspx ನೀವು ಮೆಟ್ರಿಕ್ ಪೂರ್ವ ಅಥವಾ ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆ ಮೂಲಕ ಅರ್ಜಿ ಸಲ್ಲಿಸಬಹುದು.
• ಅದರ ಜೊತೆಗೆ ಕುಟುಂಬದ ಐಡಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಈ ವಿದ್ಯಾರ್ಥಿವೇತನದ ಮುಖ್ಯ ಉದ್ದೇಶವೆಂದರೆ, ಶೈಕ್ಷಣಿಕವಾಗಿ ಹೆಚ್ಚು ಪ್ರತಿಭಾನ್ವಿತರಾಗಿದ್ದರೂ, ಪ್ರತಿಕೂಲವಾದ ಆರ್ಥಿಕ ರಚನಾತ್ಮಕ ಪರಿಸ್ಥಿತಿಗಳಿಂದಾಗಿ ಅಧ್ಯಯನ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು.
ಎಸ್‌ಎಸ್‌ಪಿ ಮೆಟ್ರಿಕ್ ನಂತರದ (SSP post matric Scholarship) ಪಡೆಯಲು ಕರ್ನಾಟಕ ರಾಜ್ಯದ ನಿವಾಸಿಗಳ ಆಗಿರಬೇಕು.
* SC/ST ಮತ್ತು OBC ವರ್ಗದಲ್ಲಿ ಬರಬೇಕು.
* SC ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆಯಿರಬೇಕು.
* ಎಸ್‌ಸಿ ಅಭ್ಯರ್ಥಿಗಳಿಗೆ (SC students) ಕಳೆದ ಪರೀಕ್ಷೆಯಲ್ಲಿ ಶೇಕಡಾ 50 ರಷ್ಟು ಅಂಕ ಗಳಿಸಿರಬೇಕು.
* ಕುಟುಂಬದ ವಾರ್ಷಿಕ ಆದಾಯವು ST ಅಭ್ಯರ್ಥಿಗೆ 2 ಲಕ್ಷ ಮತ್ತು OBC ಅಭ್ಯರ್ಥಿಗೆ 1 ಲಕ್ಷಕ್ಕಿಂತ ಕಡಿಮೆಯಿರಬಾರದು.
ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಖಾತೆ ಸೃಜಿಸಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಮಾಹಿತಿ /ದಾಖಲೆಗಳು –
* ವಿದ್ಯಾರ್ಥಿಗಳ ಆಧಾರ್ ಸಂಖ್ಯೆ ಮತ್ತು ಅಧಾರ್ ನಲ್ಲಿ ಇರುವ ಹಾಗೆ ಹೆಸರು.
* ವಿದ್ಯಾರ್ಥಿಗಳ ಇ-ಮೇಲ್ ಐ.ಡಿ.
* ವಿದ್ಯಾರ್ಥಿಗಳ ಎಸ್ ಎಸ್ ಎಲ್ ಸಿ ನೋಂದಣಿ.
* ವಿದ್ಯಾರ್ಥಿಯ ಹೆಸರಿನಲ್ಲಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆ.
* ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ.
* ವಿದ್ಯಾರ್ಥಿಯು ವಾಸವಿರುವ ಜಿಲ್ಲೆ, ತಾಲ್ಲೂಕು ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
* ಸಂಬಂದಪಟ್ಟ ದಾಖಲೆಗಳ ಈ ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ)
* ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ)
ವಿದ್ಯಾರ್ಥಿ ವೇತನ ಪಡೆಯಲು ಕೊನೆಯ ದಿನಾಂಕ ಪಟ್ಟಿ –
ರಾಜ್ಯ ವಿದ್ಯಾರ್ಥಿವೇತನ ವ್ಯವಸ್ಥೆಯಲ್ಲಿ ಅರ್ಜಿ ಸಲ್ಲಿಸಲು, ವಿದ್ಯಾರ್ಥಿಗಳು ಕುಟುಂಬ ಬೆಂಬಲ ವ್ಯವಸ್ಥೆಯಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು, ಹಿಂದಿಯಲ್ಲಿ ಕುಟುಂಬ ಬೆಂಬಲ ಸಂಖ್ಯೆಯನ್ನು ಕೆಳಗೆ ನೋಡಿ. https://kutumba-services karnataka.gov.in/KutumbaServices
ವಿದ್ಯಾರ್ಥಿಯ ಕುಟುಂಬ ಗುರುತಿನ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಕುಟುಂಬ ತಂತ್ರಾಂಶದಲ್ಲಿ ನೋಂದಣಿಯಾಗಲು ಇಲ್ಲಿ ಕ್ಲಿಕ್ ಮಾಡಿ
https://kutumba karnataka.gov.in/mykutumba