ಪ್ರೀಯ ವಿದ್ಯಾರ್ಥಿಗಳೇ ನಿಮಗೊಂದು ಸಂತಸದ ಸುದ್ದಿ ತಂದಿದ್ದೇವೆ. ನೀವು ಕಲಿತ ಶಿಕ್ಷಣದಲ್ಲಿ ನಿಮ್ಮ ಫಲಿತಾಂಶ ಆಧಾರದ ಮೇಲೆ ನಿಮ್ಮ ಕೈ ಸೇರಲಿದೆ ಸರ್ಕಾರದ ಹಣ ನಿಮ್ಮ ಭವಿಷ್ಯದ ಶಿಕ್ಷಣದಲ್ಲಿ ಈ ಹಣ ಎಷ್ಟು ಮುಖ್ಯ ಎಂಬುದರಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ ಬನ್ನಿ. ರೈತರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಜೀವನಾಡಿಯೆಂದೇ ಪರಿಗಣಿತವಾಗಿದೆ. ಪ್ರತಿವರ್ಷ, ಅನೇಕ ಇಲಾಖೆಗಳು ಮತ್ತು ನಿಗಮಗಳು ವಿದ್ಯಾರ್ಥಿ ವೇತನವನ್ನು ವಿವಿಧ ಸ್ಥರಗಳಲ್ಲಿ ವಿತರಿಸುತ್ತವೆ. ಈ ವಿದ್ಯಾರ್ಥಿ ವೇತನಗಳನ್ನು ಬಳಸಿಕೊಂಡು ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಅದೇ ರೀತಿ ಈಗ ಸರ್ಕಾರವು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ತಾವು ಕಲಿತ ಶಿಕ್ಷಣದಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಫಲಿತಾಂಶ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹ ಧನ ನೀಡಲು ಸರ್ಕಾರವು ಈಗ ಅರ್ಜಿ ಆಹ್ವಾನ ನೀಡಿದ್ದಾರೆ. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಬೇಗನೆ ಪ್ರೋತ್ಸಾಹ ಧನ ಪಡೆಯಬೇಕು ಎಂದು ನಮ್ಮ ವಾಹಿನಿ ಮೂಲಕ ವಿನಂತಿಸಿಕೊಳ್ಳುತ್ತೇವೆ.
ವಿದ್ಯಾರ್ಥಿ ಪ್ರೋತ್ಸಾಹ ಧನ ಹೇಗೆ ಪಡೆಯುವುದು?
ವಿದ್ಯಾರ್ಥಿಗಳು ಎಸ್ಸಿ ಎಸ್ಟಿ ಸದಸ್ಯತ್ವ ಹೊಂದಿದ್ದರೆ ಮಾತ್ರ ಈ ಪ್ರೋತ್ಸಾಹಧನ ಪಡೆಯಬಹುದು. ನೀವು ಈ ಪ್ರೋತ್ಸಾಹಧನವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವೆಬ್ಸೈಟ್ https://swdservices.karnataka.gov.in/swprizemoney/Home.aspx ಇಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶವೆಂದರೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ ಸೈಟ್ ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ/ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡುವುದು. ನಿಮ್ಮ ಕಾಲೇಜನ್ನು ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಪಟ್ಟಿ ಮಾಡದಿದ್ದರೆ ದಯವಿಟ್ಟು ಪ್ರೈಜ್‌ಮನಿ ವೆಬ್‌ಸೈಟ್‌ನಲ್ಲಿ ಕಾಲೇಜನ್ನು ಸೇರಿಸಲು ಜಿಲ್ಲಾ ಸಮಾಜ/ಗಿರಿಜನ ಕಲ್ಯಾಣ ಕಚೇರಿಗೆ ಭೇಟಿ ನೀಡಿ.
ಪ್ರೋತ್ಸಾಹಧನ ಯಾರಿಗೆ ಎಷ್ಟು?
ಬಹುಮಾನದ ಹಣ (ರೂ.ಗಳಲ್ಲಿ)
* II PUC, 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೋಮಾ-20000.00
* ಪದವಿ-25000.00
* M.A., M.Sc., ಇತ್ಯಾದಿ ಯಾವುದೇ ಸ್ನಾತಕೋತ್ತರ ಕೋರ್ಸ್‌ಗಳು -30000.00
* ಕೃಷಿ, ಇಂಜಿನಿಯರಿಂಗ್, ವೆಟರ್ನರಿ, ಮೆಡಿಸಿನ್ – 35000.00
ಕರ್ನಾಟಕ ಸರ್ಕಾರವು ಬಹುಮಾನ ಹಣ ವಿದ್ಯಾರ್ಥಿವೇತನ ಎಂಬ ಕಾರ್ಯಕ್ರಮಕ್ಕೆ ಹಣವನ್ನು ಒದಗಿಸುತ್ತದೆ. ಅರ್ಹ ಎಸ್‌ಸಿ ಮತ್ತು ಒಬಿಸಿ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆಯಲು ಪ್ರೇರೇಪಿಸುವುದು ಇದರ ಗುರಿಯಾಗಿದೆ. ಅರ್ಹ ಅರ್ಜಿದಾರರಿಗೆ ನೀಡಲಾಗುವ ಹಣಕಾಸಿನ ಮೊತ್ತವು ಅವರು ಸೇರುವ ಕೋರ್ಸ್‌ಗೆ ಅನುಗುಣವಾಗಿ ಬದಲಾಗುತ್ತದೆ ಮತ್ತು INR 20,000 ದಿಂದ 35,000 ವರೆಗೆ ಇರಬಹುದು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ವೃತ್ತಿಪರ ಕೋರ್ಸ್‌ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನದ ಮೂಲಕ ಬೆಂಬಲ ದೊರೆಯುತ್ತದೆ. ಬಹುಮಾನ ಹಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು, ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ sw.kar.nic.in ಮೂಲಕ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಥಿಗಳಿಗೆ ಎಚ್ಚರಿಕೆ ಸಂದೇಶ – OGPA/CGPA ಕೋರ್ಸುಗಳ ಶೇಕಡವಾರು ಅಂಕಗಳನ್ನು ನಿರ್ಧರಿಸಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸಂಬಂಧಪಟ್ಟ ಉಪಕುಲಸಚಿವರು/ರಿಜಿಸ್ಟ್ರಾರ್/ಪ್ರಾಂಶುಪಾಲರಿಂದ ಸ್ಪಷ್ಟಿಕರಣ ತೆಗೆದುಕೊಳ್ಳುವುದು ಮತ್ತು ಅದರಂತೆ ಅರ್ಜಿಗಳನ್ನು ಮಂಜೂರು ಮಾಡುವುದು ಅಥವಾ ತಿರಸ್ಕರಿಸುವುದು. OGPA/CGPA ಅಂಕಗಳ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸಲು, ಜಿಲ್ಲಾ ಅಧಿಕಾರಿಗಳು ಸಂಬಂಧಪಟ್ಟ ವಿಶ್ವವಿದ್ಯಾಲಯ/ಕಾಲೇಜಿನ VC/ರಿಜಿಸ್ಟ್ರಾರ್/ಪ್ರಾಂಶುಪಾಲರಿಂದ ಲಿಖಿತ ಸ್ಪಷ್ಟೀಕರಣವನ್ನು ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಅರ್ಜಿಗಳನ್ನು ಮಂಜೂರು/ತಿರಸ್ಕರಿಸಬೇಕು.