ರೆಡ್‌’ನಿಂದ ‘ಯೆಲ್ಲೋ’ ಅಲರ್ಟ್‌ಗೆ ಮರಳಿದ ಕರ್ನಾಟಕದ 6 ಜಿಲ್ಲೆಗಳಿಗೆ ಭಾರೀ ಮಳೆ ಎಚ್ಚರಿಕೆ

ಜೂನ್ ಮೊದಲವಾರವೇ ರೈತರು ಮೆಕ್ಕೆ ಜೋಳ, ಹೆಸರು, ತೊಗರಿ, ಶೇಂಗಾ ಇನ್ನಿತರ ಖಾರೀಫ್ ಬೆಳೆ ಬಿತ್ತಿದ್ದಾರೆ. ಸದ್ಯ ಒಂದು ಅಡಿಯಷ್ಟು ಎತ್ತರ ಬೆಳೆದ ಪೈರಿಗೆ ನೀರಿನ ಅಗತ್ಯವಿದೆ. ಸಕಾಲಕ್ಕೆ ಮಳೆ ಆಗದೇ ಇದೇ ವಾತವರಣ ಮುಂದುವರಿದರೆ, ಬೆಳೆ ಒಣಗುವ ಭಯದಲ್ಲಿ ರೈತರಿದ್ದಾರೆ. ಕರ್ನಾಟಕದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವೆಡೆ ಮಳೆಯಾಗಲಿದೆ.

ಕರ್ನಾಟಕ ರಾಜ್ಯದಲ್ಲಿ ಒಂದು ವಾರದಿಂದ ಆರ್ಭಟಿಸಿದ್ದ ಮುಂಗಾರು ಮಳೆ ಇನ್ನೂ ಕೆಲವೆಡೆ ಸಕ್ರಿಯವಾಗಿದೆ. ಅರ್ಧ ರಾಜ್ಯದಲ್ಲಿ ಸಾಧಾರಣದಿಂದ ಅತ್ಯಧಿಕ ಪ್ರಮಾಣದಲ್ಲಿ ಆಗಿದ್ದ ಮಳೆ ಅಲ್ಪ ಮಟ್ಟಿಗೆ ತಣ್ಣಗಾದಂತೆ ಕಂಡು ಬರುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ 48 ಗಂಟೆಗಳಲ್ಲಿ ಒಟ್ಟು ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಬರುವ ಮುನ್ಸೂಚನೆ ಇದೆ. ಅದರಲ್ಲೂ ಉತ್ತರ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಚಾಮರಾಜನಗರ, ತುಮಕೂರು, ದಾವಣಗೆರೆ, ಹಾಸನ, ಚಿಕ್ಕಮಗಳೂರಲ್ಲಿ ಒಂದಷ್ಟು ಕಡೆಗಳಲ್ಲಿ ಅಲ್ಲಲ್ಲಿ ಹಗುರ ಮಳೆ ದಾಖಲಾಗುತ್ತಿದೆ.

ಬೀಜ, ಗೊಬ್ಬರ ವಿತರಣೆ ಮೈಸೂರು ಜಿಲ್ಲೆಯಲ್ಲಿ 33 ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಸಬ್ಸಡಿ ದರದಲ್ಲಿ ವಿತರಣೆ ಮಾಡಲಾಗುತ್ತಿದೆ. ಮಳೆ ಇಲ್ಲದೆ ತಂಬಾಕು ಪಟಗಳನ್ನು ಮಾಡಿ ಸಸಿಗಳನ್ನು ಜಮೀನಿನಲ್ಲಿ ನೆಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಶುಕ್ರವಾರ ಬಿದ್ದ ಮಳೆಯಿಂದಾಗಿ ರೈತರು ಸಸಿಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ಕೃಷಿಕ ಸಮಾಜ ರಾಜ್ಯದಲ್ಲಿ ಎಲ್ಲಾ ಜಿಲ್ಲೆ, ತಾಲ್ಲೂಕುಗಳಲ್ಲಿ ಉತ್ತಮ ಕೆಲಸ ಮಾಡುತ್ತಿದೆ ಸನ್ಮಾನ್ಯ .ರಾಜ್ಯ ಸರ್ಕಾರವೂ ಇದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದರು. ರಾಜ್ಯದಲ್ಲಿ ಜಿಲ್ಲಾ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ 5.54 ಕೋಟಿ ರೂ.ತಾಲ್ಲೂಕು ಕಟ್ಟಡಗಳಿಗೆ 8.14 ಕೋಟಿ ರೂ ಅನುದಾನ ಒದಗಿಸಲಾಗಿದೆ ಎಂದು ಕೃಷಿ ಸಚಿವರು ಹೇಳಿದರು. ಜಗತ್ತಿನ ಆಹಾರ ಕೊರತೆ ನೀಗಿಸಲು ರೈತರು ದುಡಿಯುತ್ತಿದ್ದು ಅವರು ಬೆಳದ ರೈತರ ಹಿತಕ್ಕಾಗಿ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ,ಹಾಲಿಗೆ ಪ್ರತಿ ಲೀ 5 ರೂ ಗೆ ಸಬ್ಸಿಡಿ ನೀಡಲಾಗುತ್ತಿದೆ. ನಾವು ನೀಡಿದ್ದ ಗ್ಯಾರಂಟಿ ಯೋಜನೆಗಳೆಲ್ಲವನ್ನು 1 ವರ್ಷದೊಳಗೆ ಈಡೇರಿಸಿ ನುಡಿದಂತೆ ನಡೆದಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು. ಈ ವರ್ಷವೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೃಷಿ ಭಾಗ್ಯ ಬೀದರ್ ಸೇರಿದಂತೆ ರಾಜ್ಯಾದ್ಯಂತ ವಿಸ್ತಾರಣೆಯಾಗಲಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬಿತ್ತನೆ ಬೀಜ ರಸಗೊಬ್ಬರ ಕೈ ಯಾವುದೇ ಕೊರತೆ ಇಲ್ಲದಂತೆ ನಿಭಾಯಿಸಲಾಗುತ್ತಿದೆ ಎಂದರು.

ಅದೇ ರೀತಿ ಇನ್ನೊಂದು ಮುಖ್ಯ ವಿಷಯ ಏನೆಂದರೆ ಸಾಲ ಯಾರಿಗೆ ಇಲ್ಲ. ಪ್ರತಿಯೊಬ್ಬರಿಗೂ ಸಾಲ ಇದೆ. ಹೀಗಂತ ಎಲ್ಲರೂ ಆತ್ಮಹತ್ಯೆ ಮಾಡಿ ಕೊಂಡರೆ ಹೇಗೆ? ಸಾಲಕ್ಕೆ ಆತ್ಮಹತ್ಯೆ ಪರಿಹಾರ ಅಲ್ಲ. ಅದನ್ನು ಧೈರ್ಯ ದಿಂದ ಎದುರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ರೈತರಿಗೆ ಆತ್ಮಸ್ಥೆರ್ಯ ತುಂಬಿದರು. ಜಿಲ್ಲೆಯಲ್ಲಿ ಶೇ.75ರಷ್ಟು ಜನ ಕೃಷಿ ಮೇಲೆ ಅವಲಂ ಬಿತರಾ ಗಿದ್ದಾರೆ. ಇಲ್ಲಿ ಫಲವತ್ತಾದ ಮಣ್ಣು ಇದೆ. ಕಾರಂಜಾ, ಮಂಜ್ರಾ ನದಿ ಇದೆ. ಎಲ್ಲ ಬೆಳೆಗಳು ಬೆಳೆಯ ಲಾಗುತ್ತಿದೆ. ರೈತರ ಸರ್ವಾಂಗೀಣ ಅಭಿವೃದ್ಧಿ ಸರಕಾರ ಬದ್ದ ಎಂದು ತಿಳಿಸಿದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ದಾವಣಗೆರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಗಾಳಿಯ ವೇಗ ಗಂಟೆಗೆ 30-40ಕಿ.ಮೀ ಇರಲಿದೆ. ಕೆಲ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಉತ್ತರ ಕನ್ನದ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.‌ ಹಾಸನ, ಧಾರವಾಡ, ಬೆಳಗಾವಿ, ಮೈಸೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ವೇಳೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಮಳೆ ಬಿಡುವು ನೀಡುತ್ತಿದ್ದಂತೆ ಜಿಲ್ಲಾದ್ಯಂತ ಗರಿಷ್ಠ ಉಷ್ಣಾಂಶ ಏರಿಕೆ ಕಂಡಿದ್ದು, ಸೆಕೆಯ ವಾತಾವರಣ ಇತ್ತು. ಮಂಗಳೂರಿನಲ್ಲಿ 30.2 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಮತ್ತು 25 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.7 ಡಿ.ಸೆ. ನಷ್ಟು ತಾಪಮಾನ ಏರಿಕೆ ಕಂಡಿತ್ತು.

ಪುತ್ತೂರು -ಪಾಣಾಜೆ ರಸ್ತೆಯ ದೇವಸ್ಯ ದಿಂದ ಚೆಲ್ಯಡ್ಕ ಮೂಲಕ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಮುಂದಿನ ಆದೇಶದವರೆಗೆ ಘನವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪುತ್ತೂರು ದೇವಸ್ಯ ಕಡೆಯಿಂದ ಪಾಣಾಜೆ ಕಡೆಗೆ ಸಂಚರಿಸುವ ಘನ ವಾಹನಗಳು ಚೆಲ್ಯಡ್ಕವರೆಗೆ ಸಂಚರಿಸಬಹುದು. ಪುತ್ತೂರು ಆರ್ಯಾಪು, ಸಂಪ್ಯ, ಸಂಟ್ಯಾರ್‌, ಬೆಟ್ಟಂಪಾಡಿ ಮುಖ್ಯ ರಸ್ತೆಯ ಮೂಲಕ ಪಾಣಾಜೆ ಕಡೆಗೆ ಘನ ವಾಹನಗಳು ಸಂಚರಿಸುವಂತೆ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್‌ ಎಂ.ಪಿ ಅವರು ಆದೇಶಿಸಿದ್ದಾರೆ.

ಉಡುಪಿಯಲ್ಲಿ ಮೋಡ ಕವಿದ ವಾತಾವರಣ
ಉಡುಪಿ: ಜಿಲ್ಲಾದ್ಯಂತ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗಿದೆ. ಬೆಳಗ್ಗಿನಿಂದ ಮಧ್ಯಾಹ್ನದ ವೇಳೆ ತುಸು ಮಳೆ ಸುರಿಯಿತಾದರೂ ಬಳಿಕ ಇಳಿಮುಖವಾಯಿತು. ಮಧ್ಯಾಹ್ನದ ಬಳಿಕ ಮಳೆ ಸುರಿಯಲಿಲ್ಲ. ಸಂಜೆ ಮೋಡ ಕವಿದ ವಾತಾವರಣ ಇತ್ತು.

2.45 ಲ.ರೂ.ಹಾನಿ
ಉಡುಪಿ ತಾಲೂಕಿನ ತೆಂಕನಿಡಿಯೂರಿನಲ್ಲಿ ಸುಂದರ ಪೂಜಾರಿ ಹಾಗೂ ವೈಲೆಟ್‌ ವಾಜ್‌ ಅವರ ಮನೆಗೆ ಮರಬಿದ್ದು 45 ಸಾವಿರ ರೂ.ನಷ್ಟ ಉಂಟಾಗಿದೆ. ಕುಂದಾಪುರದ ಕೊರ್ಗಿ ಮೂಡುಬೆಟ್ಟಿನ ಸುಶೀಲಾ ಆಚಾರಿ ಹಾಗೂ ಕನಕ ಕುಲಾಲ್‌ ಅವರ ಮನೆ ಹಾಗೂ ಅಡಿಕೆ ತೋಟಕ್ಕೆ ಸಿಡಿಲು ಬಡಿದು 90 ಸಾವಿರ ರೂ.ನಷ್ಟ ಉಂಟಾಗಿದೆ. ಕಾಪು ಪಡು ಇಲ್ಲಿನ ಜಾವೇದ್‌ ಅವರ ವಾಸ್ತವ್ಯದ ಮನೆಗೆ ಮರಬಿದ್ದು 80 ಸಾವಿರ ರೂ.ನಷ್ಟ ಉಂಟಾಗಿದೆ. ಬ್ರಹ್ಮಾವರ ಹೊಸೂರಿನ ರಮೇಶ್‌ ಆಚಾರ್ಯ ಅವರ ಮನೆ ಗಾಳಿ ಮಳೆಗೆ ಹಾನಿಯಾಗಿ 30 ಸಾವಿರ ರೂ.ನಷ್ಟವಾಗಿದೆ. ಹೀಗೆ ಜಿಲ್ಲೆಯಲ್ಲಿ ಒಟ್ಟು 2.45 ಲ.ರೂ.ನಷ್ಟ ಉಂಟಾಗಿದೆ.

ಕಾರ್ಕಳದಲ್ಲಿ 32.3, ಕುಂದಾಪುರ 51.7, ಉಡುಪಿ 28.8, ಬೈಂದೂರು 35.6, ಬ್ರಹ್ಮಾವರ 34.6, ಕಾಪು 23.5, ಹೆಬ್ರಿ 44.8 ಮಿ.ಮೀ. ಸಹಿತ ಜಿಲ್ಲೆಯಲ್ಲಿ ಒಟ್ಟು 35.9 ಮಿ.ಮೀ.ಸರಾಸರಿ ಮಳೆ ಸುರಿದಿದೆ.

Spread positive news

Leave a Reply

Your email address will not be published. Required fields are marked *