18 ಲಕ್ಷ ರೈತರಿಗೆ 500 ಕೋಟಿ ರೂ.ಪರಿಹಾರ ವಿತರಣೆ : ಸಚಿವ ಕೃಷ್ಣ ಬೈರೇಗೌಡ

ಪ್ರೀಯ ರೈತರೇ ಸರ್ಕಾರವು ರೈತರಿಗೆ ಮತ್ತೊಂದು ಸಂತಸದ ಸುದ್ದಿ ನೀಡುತ್ತಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬರದ ಛಾಯೆಯಿಂದ ರೈತರ ಬೆಳೆ ಹಾನಿಗೊಳಗಾಗಿದ್ದು ಹಾನಿಗೊಳಗಾದ 18 ಲಕ್ಷ ರೈತರಿಗೆ ಒಟ್ಟು 500 ಕೋಟಿ ರೂ.ಗಳ ಬರ ಪರಿಹಾರದ ಹಣವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ.

ಬರಗಾಲ ಬಾಧಿತ ಪ್ರದೇಶದ ರೈತರಿಗೆ ಮೊದಲ ಕಂತಿನಲ್ಲಿ ತಲಾ ಎರಡು ಸಾವಿರ ರೂ. ಪರಿಹಾರ ವಿತರಣೆಗೆ ತಾಂತ್ರಿಕ ವಿಘ್ನ ಎದುರಾಗಿದ್ದು, ರಾಜ್ಯ ಸರ್ಕಾರ ಸಂದಿಗ್ಧಕ್ಕೆ ಸಿಲುಕಿದೆ.
ರೈತರಿಗೆ ಪರಿಹಾರ ಧನ ಲಭ್ಯವಾಗಿಲ್ಲ. ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಸರ್ಕಾರ ಚುರುಕಾಗಿ ಕ್ರಮ ಕೈಗೊಂಡಿದ್ದು, ಮುಂದಿನ ಒಂದು ವಾರದಲ್ಲಿ ಎಲ್ಲ ರೈತರಿಗೂ ಪರಿಹಾರ ಧನ ಲಭ್ಯವಾಗುವ ನಿರೀಕ್ಷೆಯಿದೆ.

ಬರದಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡುವ ಸಲುವಾಗಿ ಸುಮಾರು 18 ಲಕ್ಷ ರೈತರ ಪಟ್ಟಿ ಮಾಡಲಾಗಿದೆ. ಆದರೆ, ಮಳೆ ಇಲ್ಲದ ಕಾರಣ ಬರ ಪರಿಹಾರ ಪಟ್ಟಿಯಲ್ಲಿ ಸೇರಿಸಲಾಗಿರದ ಹಲವಾರು ತಾಲ್ಲೂಕುಗಳಲ್ಲಿ ಬೆಳೆ ಹಾನಿಗೊಳಗಾಗಿರುವ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ನಿರ್ಧರಿಸಿದೆ.

ಈ ಯೋಜನೆಯಡಿ, ಸುಮಾರು 18 ಲಕ್ಷ ಅರ್ಹ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಅಂದಾಜಿಸಲಾಗಿದೆ. ಈ ಯೋಜನೆಯು ಒಟ್ಟು ಎರಡು ಲಕ್ಷ ಹೆಕ್ಟೇ‌ರ್ ನೀರಾವರಿ ಪ್ರದೇಶವನ್ನು ಒಳಗೊಂಡಿರುತ್ತದೆ. ಪ್ರತಿ ಹೆಕ್ಟೇರಿಗೆ 3000 ರೂಪಾಯಿ ಅಂತೆ ರೈತರು ಖಾತೆಗೆ ಜಮಾ ಮಾಡಲಾಗುವುದು.

18 ಲಕ್ಷ ರೈತರಿಗೆ ಮತ್ತೆ ಬರ ಪರಿಹಾರ? ಯಾವ ಜಿಲ್ಲೆಗೆ ಎಷ್ಟು ಹಣ ಬಂದಿದೆ ಎಂದು ತಿಳಿಯೋಣ ಬನ್ನಿ.

ಸರ್ಕಾರದಿಂದ ಬರ ಪರಿಹಾರ ಹಣ ಮತ್ತಷ್ಟು ಬಿಡುಗಡೆ ಆಗುವ ಮೂನ್ಸೂಚನೆ ರಾಜ್ಯ ಸರ್ಕಾರ ನಿಡಿದ್ದು ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಬರ ಪರಿಹಾರ ಸದ್ಯಕ್ಕೆ ಬಿಡುಗಡೆ ಮಾಡಿದ್ದು ಬಹಳ ಉಪಯುಕ್ತ ಆಗಿದೆ. ಬರ ಪರಿಸ್ಥಿತಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಜ್ಯದ 18 ಲಕ್ಷದ ರೈತರ ಖಾತೆಗೆ ತಲಾ 3 ಸಾವಿರ ರೂ.ಗಳ ಪರಿಹಾರ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ ವರ್ಷ ಬರಗಾಲ ಕಾರಣ ಸಣ್ಣ-ಅತೀ ಸಣ್ಣ ರೈತರು ವಾರ್ಷಿಕ ಬೆಳೆ ನಷ್ಟದಿಂದ ಸಂಕಷ್ಟಕ್ಕೆ ಒಳಗಾಗಿದ್ದರು. ಅವರ ಜೀವನೋಪಾಯ ನಷ್ಟ ಭರಿಸಲು ಸುಮಾರು 18 ಲಕ್ಷ ರೈತರಿಗೆ ತಲಾ 3,000 ರೂ.‌ಗಳಂತೆ 500 ಕೋಟಿ ರೂ. ಪರಿಹಾರ ವಿತರಣೆಗೆ ರಾಜ್ಯ ಸರಕಾರ ಮುಂದಾಗಿದ್ದು, ಮುಂದಿನ ಒಂದು ವಾರದಲ್ಲಿ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಕಳೆದ ಬಾರಿ ಬರಗಾಲದಿಂದ ತತ್ತರಿಸಿದ 40 ಲಕ್ಷ ರೈತರಿಗೆ ವಿಪತ್ತು ಪರಿಹಾರವಾಗಿ ₹ 4,100 ಕೋಟಿ ಪರಿಹಾರ ನೀಡಲಾಗಿದೆ. ಇದೇ ಮೊದಲ ಬಾರಿಗೆ ಸಣ್ಣ ರೈತರ ಜೀವನೋಪಾಯಕ್ಕಾಗಿ ತಲಾ ₹ 3 ಸಾವಿರದಂತೆ 18 ಲಕ್ಷ ರೈತರಿಗೆ ₹ 500 ಕೋಟಿ ಪರಿಹಾರ ನೀಡಲಾಗಿದೆ. ನಾವು ಸಮರ್ಥವಾಗಿ ಬರ ಪರಿಹಾರ ಪಾವತಿ ಮಾಡಿದ ಕ್ರಮವನ್ನು ಶ್ಲಾಘಿಸಿರುವ ಕೇಂದ್ರ ಸರ್ಕಾರ ಕರ್ನಾಟಕದ ಮಾದರಿ ಅನುಸರಿಸುವಂತೆ ಇತರೆ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Spread positive news

Leave a Reply

Your email address will not be published. Required fields are marked *