ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಅರ್ಜಿ ಆಹ್ವಾನ! ಯಾವುದಕ್ಕೆ ಸಹಾಯಧನ ಇದೆ ಎಂದು ಇಲ್ಲಿದೆ ನೋಡಿ.
ಪ್ರೀಯ ರೈತರೇ ಸರ್ಕಾರವು ರೈತರ ಹಿತದೃಷ್ಟಿಯಿಂದ ಹಾಗೂ ರೈತರಿಗೆ ಉತ್ಪನ್ನಗಳ ಮೇಲೆ ಆಸಕ್ತಿ ತೋರಿಸಿ ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ರೈತರಿಗೆ ಕೃಷಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಆಗಬಾರದು ಎಂಬ ದೃಷ್ಟಿಯಿಂದ ಸರ್ಕಾರವು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2024-25 ರ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (MSP) ಹೆಚ್ಚಿಸಲು ಅನುಮೋದಿಸಿದೆ. ಇದರಿಂದ ರೈತರಿಗೆ ಅವರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಂಬಲ ಬೆಲೆ ಸಿಗುವುದರಿಂದ ರೈತರಿಗೆ ಆರ್ಥಿಕವಾಗಿ ಸಬಲೀಕರಣ ಹೊಂದಲು ಸಹಾಯ ಮಾಡುತ್ತದೆ. ಅದೇ ರೀತಿ ಈಗ ತೋಟಗಾರಿಕೆ ಇಲಾಖೆ ವತಿಯಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನ ಕರೆದಿದ್ದಾರೆ.
ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೆಗಾ ಮೈಕ್ರೋ ಯೋಜನೆಯಡಿ ಅಗ್ರಿ ಕಲ್ಚರಲ್ ಸಿಸ್ಟಮ್ ಅಭಿವೃದ್ಧಿ ಪಡಿಸಲು ಸಹಾಯಧನ ನೀಡಲು ಉದ್ದೇಶಿಸಿದೆ. ಹೀಗಾಗಿ ಅರ್ಹ ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲ್ಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹನಿ ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಟ 5.00 ಹೆಕ್ಟೇರ್ ಪ್ರದೇಶಕ್ಕೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂವು ಬೆಳೆಗಳಿಗೆ ಗರಿಷ್ಟ 2.00 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುತ್ತದೆ.
ಮೊದಲ 2.00 ಹೆಕ್ಟೇರ್ ಪ್ರದೇಶಕ್ಕೆ ಇತರೆ ವರ್ಗದ ರೈತರಿಗೆ ಶೇ. 75 ಹಾಗೂ ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಂಡ ರೈತರಿಗೆ ಶೇ. 90 ರಷ್ಟು ಮತ್ತು ನಂತರದ 3.00 ಹೆಕ್ಟೇರ್ ಪ್ರದೇಶಕ್ಕೆ ಎಲ್ಲಾ ವರ್ಗದ ರೈತರಿಗೆ ಶೇ 45 ರ ಭಾರತ ಸರ್ಕಾರದ ಮಾರ್ಗಸೂಚಿಯನ್ವಯ ಸಹಾಯಧನ ನೀಡಲಾಗುತ್ತದೆ.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನದ ಅಡಿ ಮಾವು, ಸೀತಾಫಲ, ಸೀಬೆ, ಗೇರು, ಹುಣಸೆ, ನೇರಳೆ, ಬೆಣ್ಣೆ ಹಣ್ಣು, ಎಳೆ ನೀರು, ತೆಂಗಿನಕಾಯಿಗಳ ಪ್ರದೇಶ ವಿಸ್ತರಣೆ, ತರಕಾರಿ, ಹೂ ಬೆಳೆ ಪ್ರದೇಶ ವಿಸ್ತರಣೆ, ಜೀವಸಾರ ಘಟಕ ಸ್ಥಾಪನೆ, ಅರಣ್ಯ ಬೆಳೆ ಮುಂತಾದ ಘಟಕಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ. ತರಕಾರಿ ಬೆಳೆಯಲ್ಲಿ ಪ್ಲಾಸ್ಟಿಕ್ ಹೊದಿಕೆಗೆ ಸಹಾಯಧನವನ್ನುಗರಿಷ್ಠ ರೂ.0.16 ಲಕ್ಷಗಳು ಪ್ರತಿ ಹೆಕ್ಟೇರ್ ನಂತೆ, ಪ್ರತಿ ರೈತರಿಗೆ ಗರಿಷ್ಠ 2 ಹೆಕ್ಟೇರ್ ಪ್ರದೇಶಕ್ಕೆ ನೀಡಲಾಗುತ್ತದೆ (ಘಟಕ ವೆಚ್ಚ ರೂ.32.00 ಲಕ್ಷಗಳು/ಹೆ). ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08392-278177 ಗೆ ಸಂಪರ್ಕಿಸಬಹುದು.
ಎಷ್ಟು ಹಣದವರೆಗೆ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ?
ಮುಖ್ಯವಾಗಿ ಹೇಳಬೇಕೆಂದರೆ ಸರ್ಕಾರವು ಈಗಾಗಲೇ ಹಿಂಗಾರು ಬೆಳೆಗಳಿಗೆ ರೈತರಿಗೆ ಅನುಕೂಲ ಆಗುವಂತೆ ಅತಿಹೆಚ್ಚು ಹೆಚ್ಚಳವನ್ನು (ಮಸೂರ್) ರೂ.500/ ಕ್ವಿಂಟಲ್‌ಗೆ ಅನುಮೋದಿಸಲಾಗಿದೆ, ನಂತರ ರೇಪ್‌ಸೀಡ್ ಮತ್ತು ಸಾಸಿವೆ ರೂ.400/ ಕ್ವಿಂಟಲ್‌ಗೆ ಅನುಮೋದಿಸಲಾಗಿದೆ. ಕುಸುಬೆಗೆ ರೂ. 209/ ಕ್ವಿಂಟಲ್ ಅನುಮೋದಿಸಲಾಗಿದೆ. ಗೋಧಿ, ಬೇಳೆ ಮತ್ತು ಬಾರ್ಲಿಗೆ ರೂ.110/ ಕ್ವಿಂಟಲ್, ರೂ.100/ ಕ್ವಿಂಟಲ್ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಹೀಗೆ ಸರ್ಕಾರವು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಈಗ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದ್ದು, ಹಲವಾರು ರೈತರಿಗೆ ಇದರ ಸದುಪಯೋಗ ಪಡೆಯಬೇಕಾಗಿದೆ.
ಸರ್ಕಾರ ರೈತರ ಕೃಷಿ ಭೂಮಿ ಮತ್ತು ಮಣ್ಣಿನ ಸಂರಕ್ಷಣೆ ಮಾಡುವ ಉದ್ದೇಶದಿಂದ ವಿಶ್ವ ಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ಪ್ರಾಯೋಗಿಕ ಹಂತವಾಗಿ ತಾಲೂಕಿನ ತೇಲಸಂಗ, ಹಾಲಳ್ಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳ 4800 ಹೆಕ್ಟೇರ್ ಕೃಷಿ ಭೂಮಿಯನ್ನು ಆಯ್ಕೆ ಮಾಡಿಕೊಂಡು ಸುಮಾರು ₹9 ಕೋಟಿ ವೆಚ್ಚದಲ್ಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಅಳವಡಿಸಲಾಗುತ್ತಿದೆ. ನಂತರದ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ಈ ಯೋಜನೆ ಒದಗಿಸಲಾಗುವುದು.
ರೈತರಿಗೆ ಫ್ರುಟ್ ಐಡಿ ಏಕೆ ಬೇಕು ಎಂಬುದನ್ನು ತಿಳಿಯೋಣ. ಮುಖ್ಯವಾಗಿ ಫ್ರುಟ್ ಐಡಿ ಇದ್ದರೆ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ರೈತರು ಎಷ್ಟು ಸರ್ಕಾರದ ಯೋಜನೆ ಹಾಗೂ ಸರ್ಕಾರದ ಕಡೆಯಿಂದ ಯಾವ ಯಾವ ಬೀಜ, ಗೊಬ್ಬರ, ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಸುಲಭವಾಗಿ ನೋಡಬಹುದು. ಅದೇ ರೀತಿ ಫ್ರುಟ್ ಐಡಿಯಿಂದ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸ್ಕಾಲರ್ಶಿಪ್ ಅನ್ನು ಅಂದರೆ ರೈತ ವಿದ್ಯಾನಿಧಿ ಹಣವನ್ನು ರೈತರ ಮಕ್ಕಳಿಗೆ ಅವರ ಫ್ರುಟ್ ಐಡಿ ಮೂಲಕ ಹಾಕುತ್ತಾರೆ.