ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಈಗಾಗಲೇ ಬಹಳಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಈಗ ಒಂದು ಮುಖ್ಯವಾದ ವಿಷಯ ಎಂದರೆ ತಂದೆಯಿಲ್ಲದ ಮಗುವಿಗೆ ವರ್ಷಕ್ಕೆ 24 ಸಾವಿರ ರೂ. ಸ್ಕಾಲರ್ ಶಿಪ್ ನೀಡಲಾಗುತ್ತದೆ ಎಂಬ ಸುದ್ದಿಯೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು, ಪೋಷಕರು ಗೊಂದಲದ ಜತೆ ಅರ್ಜಿ ಹಿಡಿದು ಅಲೆಯುತ್ತಿದ್ದಾರೆ. ಈ ಸಂದೇಶ ಕಿಡಿಗೇಡಿ ಮಧ್ಯವರ್ತಿಗಳಿಗೆ ಸುಗ್ಗಿಯಂತಾಗಿದ್ದು, ಕೆಲಸ ಮಾಡಿಕೊಡುವುದಾಗಿ ಹೇಳಿ ಜನರಿಂದ ಹಣ ವಸೂಲಿ ಮಾಡುವ ಪ್ರಕರಣ ಕೂಡ ಕೇಳಿ ಬರುತ್ತಿದೆ. ಗ್ರಾಪಂ, ಗ್ರಾಂ ಒನ್ ಸೆಂಟರ್, ಇತರೆ ಕಂಪ್ಯೂಟರ್ಗಳಲ್ಲಿ ಹೋಗಿ ಅರ್ಜಿ ಸಲ್ಲಿಸಲು ರೈತರು ಮುಗಿಬಿದ್ದಿದ್ದಾರೆ. ಆದರೆ ಇದು ಒಂದು ಸುಳ್ಳು ಸುದ್ದಿಗಳು ಎಂದು ರೈತರಿಗೆ ಮನವರಿಕೆ ಮಾಡಬೇಕಿದೆ.
ಈಗಾಗಲೇ ಕೆಲವು ಜಿಲ್ಲಾಧಿಕಾರಿಗಳು ಈ ಯೋಜನೆ ಸುಳ್ಳು ಈ ತರಹದ ತಂದೆ ಇಲ್ಲದ ಮಕ್ಕಳಿಗೆ ಯಾವುದೇ ಹಣ ನೀಡುವ ಯೋಜನೆ ಸರ್ಕಾರದಲ್ಲಿ ಇಲ್ಲ ಎಂದು ಮನವಿ ಮಾಡಿವೆ. ಸಾಮಾಜಿಕ ಜಾಲತಾಣ ಹರಿದ ವದಂತಿಗಳಿಂದ ರೈತರು ಕಂಗಾಲಾಗಿದ್ದಾರೆ. ಎಷ್ಟೋ ಮಹಿಳೆಯರು ಕಂಪ್ಯೂಟರ್ ಮುಂದೆ ಕುಳಿತು ಕಾಯುತ್ತಿದ್ದಾರೆ. ಕೆಲ ದಿನಗಳಿಂದ ವಾಟ್ಸಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣದಲ್ಲಿ ತಂದೆ ಇಲ್ಲದ ಮಕ್ಕಳಿಗೆ ಸರಕಾರ ಪ್ರತಿ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ರೂ. ಸ್ಕಾಲರ್ ಶಿಪ್ ನೀಡುತ್ತದೆ, ಆದರೆ ಬಹಳಷ್ಟು ಜನಕ್ಕೆ ಇದು ತಂದೆ ಇಲ್ಲದ ಮಕ್ಕಳಿಗೆ ಈ ಯೋಜನೆಯ ಲಾಭ ಪಡೆದುಕೊಳ್ಳಿ ಎಂಬ ಸಂದೇಶ ಹರಿದಾಡಲು ಆರಂಭಿಸಿತ್ತು. ಕೆಲ ದಿನ ಈ ಸಂದೇಶಕ್ಕೆ ಯಾವುದೇ ಪ್ರತಿಕ್ರಿಯೆಗಳು ಇರಲಿಲ್ಲ. ಜನ ಕೂಡ ನಿರ್ಲಕ್ಷಿಸಿದ್ದರು. ಆದರೆ ಈ ಸಂದೇಶ ಎಲ್ಲ ಹೆಚ್ಚು ಹರಿದಾಡಿ ಇತ್ತೀಚೆಗೆ ಜನರ ಪ್ರತಿಕ್ರಿಯೆ ಹೆಚ್ಚುತ್ತಿದೆ.
ತಂದೆಯಿಲ್ಲದ ಮಕ್ಕಳ ಮನೆಯವರು ಗ್ರಾಪಂ, ಜಿಲ್ಲಾಧಿಕಾರಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. ಮಕ್ಕಳ ರಕ್ಷಣಾಧಿಕಾರಿ ಕಚೇರಿ ಜತೆ ಕಂಪ್ಯೂಟರ್ ಸೆಂಟರ್ಗಳಲ್ಲೂ ಅರ್ಜಿ ಹಾಕಲು ಅಲೆದಾಡುತ್ತಿದ್ದಾರೆ. ಇದನ್ನೆ ಬಂಡವಾಳ ಮಾಡಿಕೊಂಡು ಕೆಲ ಮಧ್ಯವರ್ತಿಗಳು ಗ್ರಾಮೀಣ ಪ್ರದೇಶದಲ್ಲಿ ಇಂತ ಒಂಟಿ ಪೋಷಕರ ಬಳಿ ಹಣ ವಸೂಲಿಗೆ ನಿಂತಿರುವ ಪ್ರಕರಣಗಳು ಕೂಡ ಕೇಳಿ ಬರುತ್ತಿವೆ.ವರದಿಗಾರರಿಗೂ ಈ ಸುದ್ದಿ ನಿಜವಾ, ಎಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಕೇಳಿಕೊಂಡು ಕರೆಗಳು ಬರುತ್ತಿವೆ.
ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು ಈ ತರಹದ ಯಾವುದೇ ಯೋಜನೆ ಇಲ್ಲ, ಜನರು ಯಾಮಾರ ಬಾರದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸ್ಪಷ್ಟನೆ.
ಇದು ಶುದ್ದ ಸುಳ್ಳು ಸುದ್ದಿ !
ಹೌದು ರೈತರೇ ಈ ತರಹದ ತಂದೆಯಿಲ್ಲದ ಒಂಟಿ ಪೋಷಕರ ಮಕ್ಕಳಿಗೆ ತಿಂಗಳಿಗೆ 2 ಸಾವಿರದಂತೆ ವರ್ಷಕ್ಕೆ 24 ಸಾವಿರ ನೀಡಲಾಗುವುದು ಎಂಬುದು ಸುಳ್ಳು ಸುದ್ದಿ, ಈ ತರಹದ ಯಾವುದೇ ಯೋಜನೆ ಇಲ್ಲ ಎಂದು ಡಿಸಿ ಗಂಗಾಧರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ ರೈತರು ಯಾರು ಮೋಸ ಹೋಗಬೇಡಿ. ರೈತರಿಗೆ ಜಾಲತಾಣದ ಸುದ್ದಿ ನಿಜ ಎನ್ನುವಂತೆ ಹಲವಾರು ಸೋಶಿಯಲ್ ಮೀಡಿಯಾ ಆ್ಯಪ್ ಗಳಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಆದರೆ ಈ ರೀತಿಯ ಯಾವುದೇ ಯೋಜನೆಯನ್ನು ಸರಕಾರ ರೂಪಿಸಿಲ್ಲ, ಮಕ್ಕಳಿಗೆ ಹಣಕಾಸಿನ ನೆರವು ಒದಗಿಸಲು ಪ್ರಯೋಜಕತ್ವ ಯೋಜನೆಯೊಂದು – ಜಾರಿಯಲ್ಲಿದೆ ಎಂದವರು ತಿಳಿಸಿದ್ದಾರೆ.
ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ ಬಂದಿದ್ದು, ರೈತರಲ್ಲಿ ಸಂತಸ ತಂದಿದೆ. ಕೋಳಿಯ ಆಹಾರ ಸೇರಿ ಕೆಲವು ಉದ್ಯಮಗಳಿಗೆ ಮಾತ್ರ ಸೀಮಿತವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದ್ದು, ಇದರ ಪರಿಣಾಮ ಮೆಕ್ಕೆಜೋಳಕ್ಕೆ ಭಾರಿ ಬೇಡಿಕೆ ಬಂದಿದೆ.ಕೊಪ್ಪಳ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳ 2950 ರೂ.ವರೆಗೂ ಮಾರಾಟವಾಗಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿದೆ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ರೈತರು ಒತ್ತಾಯಿಸುತ್ತಿದ್ದರು. ಪ್ರಸ್ತುತ ಕೇಂದ್ರ ಸರ್ಕಾರ 2330 ರೂ. ಬೆಂಬಲ ಬೆಲೆ ಘೋಷಿಸಿದ್ದು, ಇದಕ್ಕಿಂತಲೂ ಮಾರುಕಟ್ಟೆಯಲ್ಲಿ ದರ ಹೆಚ್ಚಳವಾಗಿದೆ.
ಮೆಕ್ಕೆಜೋಳಕ್ಕೆ ಬೇಡಿಕೆ ಬಂದಿರುವುದರಿಂದ ಹಿಂದಿಗಿಂತಲೂ ಉತ್ತಮ ದರ ಬಂದಿದೆ. ಬೇರೆ ಉದ್ಯಮಗಳಿಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಬೆಲೆ ನಿಯಂತ್ರಣ ಮಾಡಲಾಗಿದೆ. 2700 ರಿಂದ 2950 ರೂ.ಗೆ ಮೆಕ್ಕೆಜೋಳ ಮಾರಾಟವಾಗುತ್ತಿದೆ. ಕೋಳಿ ಸಾಕಾಣಿಕೆಗೆ ಮೆಕ್ಕೆಜೋಳವೇ ಪ್ರಮುಖ ಆಹಾರವಾಗಿದ್ದು, ದರ ಏರಿಕೆಯಿಂದ ಮೊಟ್ಟೆ, ಕೋಳಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.