ರೈತ ಬಾಂಧವರೇ ಮುಖ್ಯವಾಗಿ ನಿಮಗೆ ಒಂದು ಉಪಯುಕ್ತ ಮಾಹಿತಿ ಬಗ್ಗೆ ಸಂಪೂರ್ಣ ತಿಳಿಯೋಣ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ರೈತರಿಗೆ ಎಷ್ಟು ಸಿಗುತ್ತೀವೆ, ಸರ್ಕಾರದ ಅನುದಾನ ಎಷ್ಟು, ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ಧನ ಎಷ್ಟು ಎಂಬುದರ ಬಗ್ಗೆ ಹಾಗೂ ರೈತರಿಗೆ ಇದರಿಂದ ಏನೂ ಲಾಭ? ಯಾವ ರೈತರು ಇದರ ಲಾಭ ಪಡೆಯಬಹುದು ಎಂದು ತಿಳಿಯೋಣ ಬನ್ನಿ.
ಪಂಚಾಯಿತಿ ವತಿಯಿಂದ ರೈತರಿಗೆ ಸಿಗುವ ಯೋಜನೆಗಳ ಪಟ್ಟಿ –
1. ರಸ್ತೆಗಳು-80ಲಕ್ಷ,
2. ಮನೆಗಳು-1ಕೋಟಿ,
3. ಚರಂಡಿ- 20ಲಕ್ಷ,
4. ಕುಡಿಯುವ ನೀರು -20ಲಕ್ಷ,
5. ಕೆರೆಗಳು-50ಲಕ್ಷ,
6. ದನದ ಕೊಟ್ಟಿಗೆ ನಿರ್ಮಾಣ-20ಲಕ್ಷ,
7. ಬೀದಿ ದೀಪಗಳು-10ಲಕ್ಷ,
8. ಕೌಶಲ್ಯ ತರಬೇತಿ-50ಲಕ್ಷ,
9. ಶಾಲೆಗಳು-50ಲಕ್ಷ,
10. ಆಟದ ಮೈದಾನ- 50ಲಕ್ಷ,
11. ಕಂಪ್ಯೂಟರ್ ಲ್ಯಾಬ್-20ಲಕ್ಷ,
12. ಗ್ರಂಥಾಲಯ-20ಲಕ್ಷ,
13. ಶೌಚಲಯ-30ಲಕ್ಷ,
14. ನಾಗರಿಕ ಕೇಂದ್ರ-10ಲಕ್ಷ,
15. ಮಿನಿ ಮಾರುಕಟ್ಟೆ-50ಲಕ್ಷ,
16. ಸಮುದಾಯ ಭವನ-50ಲಕ್ಷ,
17. ಹೈಸ್ಪಿಡ್ ಇಂಟರ್ನೆಟ್-10ಲಕ್ಷ,
18. ಧಾನ್ಯಗಳ ಶೇಖರಣಾ ಕೇಂದ್ರ-50ಲಕ್ಷ,
19. ಸ್ಮಶಾನ ಅಭಿವೃದ್ಧಿ-20ಲಕ್ಷ, ಒಟ್ಟು ಅನುದಾನ-7.20ಕೋಟಿ
ಹೀಗೆ ರೈತರಿಗೆ ಸಿಗುವ ಸಂಪೂರ್ಣ ಯೋಜನೆ ಇದಾಗಿದೆ.
ಸ್ನೇಹಿತರೇ ಇಷ್ಟೆಲ್ಲಾ ಅನುದಾನಗಳು ನೇರವಾಗಿ ನಮ್ಮ ಗ್ರಾಮ ಪಂಚಾಯಿತಿಗೆ ಬರುತ್ತವೆ.ಆದರೆ ನಾವು 5 ವರ್ಷಕ್ಕೆ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪಂಚಾಯಿತಿಗೆ ಕಳುಹಿಸುತ್ತೆವೆ ಆದರೆ ಪ್ರಯೋಜನ ಇಲ್ಲ, ಆದ್ದರಿಂದ ನಾವು ವಿದ್ಯಾವಂತರು, ಬುದ್ದಿ ಜೀವಿಗಳನ್ನು ಈ ಬಾರಿ ಯೋಚಿಸಿ ಮತ ಚಲಾಯಿಸಿ ಕಳುಹಿಸಿದರೆ ಈ ಎಲ್ಲ ಯೋಜನೆಗಳನ್ನು ಪಡೆದುಕೊಂಡು ಗ್ರಾಮಗಳ ಉದ್ದಾರ ಮಾಡ ಬಹುದು, ಜನಗಳ ಸೇವೆಯನ್ನು ಮಾಡುವಂತಹ ಅಭ್ಯರ್ಥಿಯನ್ನು ಗೆಲ್ಲಿಸಿ ಪಂಚಾಯಿತಿಗೆ ಕಳುಹಿಸುತ್ತೇವೆ ಆದರೆ ಅವರು ನಿರ್ಲಕ್ಷ್ಯತೆಯಿಂದ ರೈತರಿಗೆ ಯಾವುದೇ ಯೋಜನೆಯ ಲಾಭ ಸಿಗುತ್ತಿಲ್ಲ.
ಏನಿದು ಗಿರಿಜನ ಯೋಜನೆ?
ಗಿರಿಜನ ಉಪಯೋಜನೆಯಡಿ ಜನಗಣತಿಯ ಅನುಪಾತಕ್ಕೆ ಅನುಗುಣವಾಗಿ ಎಲ್ಲಾ ಸಂಬಂಧಿತ ಅಭಿವೃದ್ಧಿ ಕ್ಷೇತ್ರಗಳಿಂದ ಹಣವನ್ನು ಖಾತರಿಪಡಿಸುವ ಮೂಲಕ ಪರಿಶಿಷ್ಟ ಪಂಗಡದ ಜನರಿಗೆ ಪ್ರಯೋಜನಗಳನ್ನು ಒದಗಿಸಲು ಉದ್ದೇಶಿಸಲಾಗಿದೆ. ಬುಡಕಟ್ಟು ಉಪ ಹಂಚಿಕೆ ಯೋಜನೆಯಡಿ, ಕರ್ನಾಟಕ ಅರಣ್ಯ ಇಲಾಖೆಯು ಹಲವಾರು ಚಟುವಟಿಕೆಗಳನ್ನು ಜಾರಿಗೊಳಿಸುತ್ತದೆ. ಇದು ಪರಿಶಿಷ್ಟ ಪಂಗಡದ ಕುಟುಂಬಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉನ್ನತೀಕರಿಸುವುದಲ್ಲದೇ ಅರಣ್ಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಚಟುವಟಿಕೆಗಳಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳ ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕ, ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆ, ಸೋಲಾರ್ ವಾಟರ್ ಹೀಟರ್, ಸೋಲಾರ್ ದೀಪಗಳು, ಜೇನುಸಾಕಾಣಿಕೆ ಪೆಟ್ಟಿಗೆ ವಿತರಣೆ ಮತ್ತು ಸರಳ ಒಲೆ ಸೇರಿವೆ. ಅಲ್ಲದೆ, ಪರಿಶಿಷ್ಟ ಪಂಗಡಗಳ ಹಾಡಿಗಳನ್ನು ಸಂಪರ್ಕಿಸುವ ರಸ್ತೆಬದಿಗಳಲ್ಲಿ ನೆಡುತೋಪು ನಿರ್ಮಾಣ ಮಾಡುವುದು.
ಈ ಯೋಜನೆಯ ಉದ್ದೇಶ –
ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದವರ ರೈತರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ಘಟಕ ಯೋಜನೆ ಹಾಗೂ ಪರಿಶಿಷ್ಟ ಪಂಗಡ ರೈತರ ಏಳಿಗೆಗಾಗಿ ಗಿರಿಜನ ಉಪಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ರೈತರಿಗೆ ದೊರೆಯುವ ಸೌಲಭ್ಯಗಳು –
1. ಬೆಳೆ ಪ್ರಾತ್ಯಕ್ಷಿಕೆಗಳಿಗೆ ಕೃಷಿ ಪರಿಕರಗಳ (ಉತ್ತಮ ಗುಣಮಟ್ಟದ ಅತ್ತನೆ ಬೀಜ, ರಾಸಾಯನಿಕ ಗೊಬ್ಬರಗಳು, ಸಸ್ಯ ಸಂರಕ್ಷಣಾ ಔಷಧಿಗಳು) ಪೂರೈಕೆ: (ಶೇ.100 ಸಹಾಯಧನದಲ್ಲಿ ರೂ.4000 ಹೆಕ್ಟೇರಿಗೆ ಗರಿಷ್ಠ ಮಿತಿಯಲ್ಲಿ ಪ್ರತಿ 1 ಹೆಕ್ಟೇರ್ ಕ್ಷೇತ್ರಕ್ಕೆ)
2. ಧಾನ್ಯ ಸಂಗ್ರಹಣಾ ಕಣಜಗಳ ಪೂರೈಕೆ (ಶೇ.90ರ ಸಹಾಯಧನದಲ್ಲಿ ರೂ.2500 ಗರಿಷ್ಠ ಮಿತಿಯಲ್ಲಿ)
3. ಆಧುನಿಕ ಕೃಷಿ ಉಪಕರಣಗಳ ಪೂರೈಕೆ (90 ಸಹಾಯಧನದಲ್ಲಿ ರೂ.100000 ಗರಿಷ್ಠ ಮಿತಿಯಲ್ಲಿ (ಬಹುಬೆಳೆ ಒಕ್ಕಣೆ ಯಂತ್ರ, ರಾಶಿಯಂತ್ರ, ಭತ್ತನಾಟಯಂತ್ರ, ಕಳೆ ತೆಗೆಯುವ ಯಂತ್ರ ಹಾಗೂ ಡ್ರಮ್ ಸೀಡರ್ ನಂತಹ ಯಂತ್ರಚಾಲಿತ ಅಥವಾ ಮಾನವ ಚಾಲತ ಅಥವಾ ಎತ್ತುಗಳಿಂದ ಎಳೆಯುವ ಕೃಷಿ ಉಪಕರಣಗಳ ವಿತರಣೆ) ಸ್ಟ್ಯಾಂಡರ್ಡ್ ಸ್ಲಾಟ್ ವಾಂಡ್ ಮೈ ಸ್ಟ್ಯಾಂಡ್ ಅನ್ನು ಧರಿಸುತ್ತಾರೆ.
4. ಕೈಚಾರಿತ ಸಸ್ಯ ಸಂರಕ್ಷಣಾ ಉಪಕರಣಗಳ ಪೂರೈಕೆ (ಶೇ. 90 ಸಹಾಯ ಧನದಲ್ಲಿ ರೂ.3000 ಗರಿಷ್ಠ ಮಿತಿಯಲ್ಲಿ)
5. ಡೀಸೆಲ್/ ಸೀಮೆಎಣ್ಣೆ ಪಂಪುಸೆಟ್ಟುಗಳ ಪೂರೈಕೆ (ಶೇ. 90 ಸಹಾಯಧನದಲ್ಲಿ ರೂ.20000 ಗರಿಷ್ಠ ಮಿತಿಯಲ್ಲಿ)
6. ಪವರ್ ಟಿಲ್ಲರ್‌ಗಳ ಪೂರೈಕೆ (ಶೇ.90 ಸಹಾಯಧನದಲ್ಲಿ ರೂ.100000 ಗರಿಷ್ಟ ಮಿತಿಯಲ್ಲಿ)
7. ಬೋರವೆಲ್ ಮೋಟಾರ್ ಪೂರೈಕೆಗೆ (ಶೇ.90) ಸಹಾಯಧನದಲ್ಲಿ ನೀಡಲಾಗುವುದು.
8. ಲಘು ನೀರಾವರಿ ಘಟಕಗಳ ವಿತರಣೆ (ಶೇ.90 ಸಹಾಯ ಧನದಲ್ಲಿ ತುಂತುರು ನೀರಾವರಿ ಘಟಕಕ್ಕಾಗಿ ರೂ.24550/- ಹಾಗು ಹನಿ ನೀರಾವರಿ ಘಟಕಕ್ಕಾಗಿ ರೂ.98550/-ಗಳ ಮಿತಿಯಲ್ಲಿ ಒದಗಿಸುವುದು.
9. ಒಕ್ಕಣೆ ಕಣ ನಿರ್ಮಾಣ (ಶೇ. 90ರ ಸಹಾಯಧನದಲ್ಲಿ ಸಮುದಾಯ ಒಕ್ಕಣೆ ಕಣಕ್ಕಾಗಿ ಗರಿಷ್ಠ ರೂ 90000 ಹಾಗು ವೈಯಕ್ತಿಕ ಒಕ್ಕಣೆ ಕಣಕ್ಕೆ: ಶೇ.90 ಅಥವಾ ಗರಿಷ್ಠ ರೂ.45000 ಗಳ ಮಿತಿಯಲ್ಲಿ)
10. ಟಾರ್ಪಾಲಿನ್‌ಗಳ ವಿತರಣೆ : ಶೇ. 90 ರ ಸಹಾಯಧನದಲ್ಲಿ ನೀಡಲಾಗುವುದು.