ಈ ರೈತರಿಗೆ 475 ಕೋಟಿ ರೂ. ಬೆಳೆ ವಿಮೆ ಹಣ ಜಮಾ: ಎನ್ ಚಲುವರಾಯಸ್ವಾಮಿ

ಆತ್ಮೀಯ ರೈತ ಬಾಂಧವರೇ ಕೃಷಿ ತಾನ ಸಾಮಾಜಿಕ ಜಾಲತಾಣಕ್ಕೆ ತಮ್ಮೆಲ್ಲರಿಗೂ ಸುಸ್ವಾಗತ ರೈತ ಪರ ಹಾಗೂ ಸರ್ಕಾರದ ಜನಪರ ಯೋಜನೆಗಳನ್ನು ನಾವು ಪ್ರತಿನಿತ್ಯವೂ ನಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದು ನೀವು ನಮ್ಮ ಟೆಲಿಗ್ರಾಂ ಗ್ರೂಪಿಗೆ ಜಾಯಿನ್ ಆಗಿ ದೈನಂದಿನ ಮಾಹಿತಿಗಳನ್ನು ಪಡೆದುಕೊಳ್ಳಬೇಕಾಗಿ ವಿನಂತಿ.

ರಾಜ್ಯದಲ್ಲಿ ಈ ವರ್ಷ ಈಗಾಗಲೇ 7 ಲಕ್ಷ ಕೃಷಿಕರಿಗೆ 475 ಕೋಟಿ ರೂ ಬೆಳೆ ವೆಮೆ ಪರಿಹಾರ ಒದಗಿಸಲಾಗಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಹಣವು ಡಿಬಿಟಿ ಮುಖಾಂತರ ರೈತರಿಗೆ ಜಮೆ ಅಗಿದೆ. ರಾಜ್ಯದಲ್ಲಿ ಶೇ 2% ಅಂದರೆ ಸುಮಾರು 20 ಲಕ್ಷ ರೈತರು ಮಾತ್ರ ಬೆಳೆ ವಿಮೆ ಮಾಡಿಸಿದ್ದಾರೆ.
ಈ ವರ್ಷ ಬರ ಪರಿಸ್ಥಿತಿ ಹೆಚ್ಚಿರುವ ಕಾರಣ ಇನ್ನೂ 1000 ಕೋಟಿ ರೂ ವಿಮೆ ಹಣ ರೈತರಿಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಕೃಷಿಕರು ಸದೃಢವಾಗಬೇಕು ಆಗ ಮಾತ್ರ ದೇಶದ ಸಂಪೂರ್ಣ ಏಳಿಗೆ ಸಾಧ್ಯ ಎಂದ ಸಚಿವರು ಸಾಂಪ್ರದಾಯಿಕ ಕೃಷಿ ಪದ್ದತಿ ಜೊತೆಗೆ ಯಾಂತ್ರೀಕರಣ, ನವ ಸಂಶೋಧನೆಗಳ ಫಲವೂ ರೈತಗೆ ಸುಲಭವಾಗಿ ತಲುಪಬೇಕು .

ರಾಜ್ಯ ಸರ್ಕಾರವು ಮೊದಲ ಹಂತದಲ್ಲಿ ಈ ವರ್ಷದ ಬೇಸಿಗೆ ಕಾಲದಲ್ಲಾದ ನಷ್ಟಕ್ಕೆ ಪರಿಹಾರ ನೀಡಲು ಮುಂದಾಗಿದ್ದು ಮೊದಲ ಹಂತದಲ್ಲಿ ರೈತರ ಖಾತೆಗೆ 2000 ರೂಪಾಯಿ ಹಣವನ್ನು ಈಗಾಗಲೇ ಸರ್ಕಾರವು ಜಮಾ ಮಾಡಿದೆ ಈ ಜಮಾ ಮಾಡಿದ ರೈತರ ಪಟ್ಟಿಯನ್ನು ಸರ್ಕಾರವು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಅಥವಾ ಇಲ್ಲದಿದ್ದರೆ ಯಾವ ಕಾರಣಕ್ಕೂ ಹೆಸರನ್ನು ನಮೂದಿಸಲಿಲ್ಲ ಎಂಬ ಎಲ್ಲ ಮಾಹಿತಿಗಳನ್ನು ನಾವು ಇಂದು ನಿಮಗೆ ನೀಡಲಿದ್ದೇವೆ. ರೈತರು ಈ ಪಟ್ಟಿಯಲ್ಲಿ ಹೆಸರು ಇರಲು ಮೊದಲು ಮುಖ್ಯ ಅರ್ಹತೆಯು ರೈತರು ತಮ್ಮ ಫ್ರೂಟ್ ಖಾತೆಯನ್ನು ಹೊಂದಿರಬೇಕು. ಹಾಗಿದ್ದಲ್ಲಿ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೆಂಬುದನ್ನು ಯಾವ ರೀತಿ ಚೆಕ್ ಮಾಡಬೇಕೆಂದು ನಾವು ಕೆಳಗಡೆ ತಿಳಿಸಿದ್ದೇವೆ. ರೈತರಿಗೆ ಬೆಳೆ ನಷ್ಟ ಪರಿಹಾರದ 2000ರೂ ಹಣವನ್ನು ಮೊದಲ ಹಂತವಾಗಿ ರಾಜ್ಯ ಸರ್ಕಾರವು ಬಿಡುಗಡೆ ಮಾಡಿದೆ.

ಫಸಲ್ ಭೀಮಾ ಯೋಜನೆ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್ ಮಾಡಿಕೊಳ್ಳುವ ವಿಧಾನ ಕೆಳಗಿನಂತಿದೆ

1.PMFBY ಯ ಅಧಿಕೃತ ವೆಬ್‌ಸೈಟ್‌ಗೆ ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಭೇಟಿ ನೀಡಬೇಕು https://pmfby.gov.in

2. ಫಸಲ್ ಭೀಮಾ ಯೋಜನೆಯ ಮುಖಪುಟವು ಕಾಣಿಸಿಕೊಳ್ಳುತ್ತದೆ ಮತ್ತು ನೀವು ಅಪ್ಲಿಕೇಶನ್ ಸ್ಥಿತಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

3.ಚೆಕ್ ಅಪ್ಲಿಕೇಶನ್ ಸ್ಥಿತಿ ನಿಮಗೆ ಕಾಣಿಸುತ್ತದೆ.
ಇಲ್ಲಿ ನೀವು ನಿಮ್ಮ ಬೆಳೆ ವಿಮೆಯ ರಶೀದಿ ಸಂಖ್ಯೆ ಮತ್ತು “ಕ್ಯಾಪ್ಚಾ ಕೋಡ್” ಅನ್ನು ನಮೂದಿಸಬೇಕು ಮತ್ತು “ಸ್ಥಿತಿಯನ್ನು ಪರಿಶೀಲಿಸಿ” ಬಟನ್ ಅನ್ನು ಕ್ಲಿಕ್ ಮಾಡಬೇಕು.

4.ಕ್ಲಿಕ್ ಮಾಡಿದ ನಂತರ ನೀವು ಯಶಸ್ವಿಯಾಗಿ PMFBY ಪೋರ್ಟಲ್‌ಗೆ ಲಾಗ್ ಇನ್ ಆಗುತ್ತೀರಿ.

ಈ ಪ್ರಕ್ರಿಯೆಯ ಮೂಲಕ, ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಸ್ಥಿತಿಯನ್ನು ಪರಿಶೀಲಿಸಬಹುದು. ನೀವು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಫಲಾನುಭವಿಗಳ ಪಟ್ಟಿ 2023 ರಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬೇಕು.

ಬೆಳೆ ನಷ್ಟ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವ ವಿಧಾನ:

ಹಂತ:1
ರೈತರ ಮೊದಲಗೆ ಗೂಗಲ್ ನಲ್ಲಿ ಹೋಗಿ ಬೆಳೆ ಪರಿಹಾರ ಎಂದು ಟೈಪ್ ಮಾಡಿ ಸರ್ಚ್ ಕೊಡಿ. ಅಥವಾ ನಾವು ಇಲ್ಲಿ ಕೊಟ್ಟಿರುವ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಬಹುದು.
https://parihara.karnataka.gov.in/Pariharahome/

ಕ್ಲೀಕ್ ಮಾಡಿದ ನಂತರ ಈ ರೀತಿಯ ಮುಖಪುಟ ಕಾಣಿಸಿಕೊಳ್ಳುತ್ತದೆ.

ಹಂತ:2
ಇಲ್ಲಿ ಮೇಲುಗಡೆ ನೀವು ಕನ್ನಡ ಅಥವಾ ಇಂಗ್ಲೀಷ್ ಎರಡು ಭಾಷೆಗಳಲ್ಲಿ ಒಂದನ್ನು ನೀವು ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದಿನ ಹಂತಗಳಲ್ಲಿ ಸಾಗಬಹುದು.

ಹಂತ:3
ಇಲ್ಲಿ ಪರಿಹಾರ ಸೇವೆಗಳು ಎಂಬ ಪಟ್ಟಿ ನಿಮಗೆ ಕಾಣುತ್ತದೆ ಅಲ್ಲಿರುವ ಕಾಲನ್ನಲ್ಲಿ ಡೇಟಾ ಎಂಟ್ರಿ ಪ್ರಗತಿ ವರದಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕೆಳಗಡೆ ತೋರಿಸುವ ಫೋಟೋ ದಲ್ಲಿ ಇರುವಂತೆ ನಿಮ್ಮ ಮೊಬೈಲ್ ನಲ್ಲಿ ಈ ಆಪ್ಷನ್ ಇರುತ್ತದೆ.

ಹಂತ: 4
ಇಲ್ಲಿ ಕ್ಲಿಕ್ ಮಾಡಿದ ನಂತರ ಕ್ಲಿಕ್ ಮಾಡಿದ ನಂತರ ವಿವಿಧ ಆಯ್ಕೆಗಳನ್ನು ನಿಮಗೆ ಕೇಳುತ್ತದೆ ಅಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ನಿಮ್ಮ ಪಾರ್ಟಿಯನ್ನು ನೀವು ಪಡೆದುಕೊಳ್ಳಬಹುದು.

ಇದೇ ರೀತಿ ರೈತ ಪರ ಹಾಗೂ ಜನಪರ ಯೋಜನೆಗಳ ಸೌಲಭ್ಯಗಳು ಹಾಗೂ ಅವುಗಳ ಭರ್ತಿ ಮಾಡುವ ವಿಧಾನಕ್ಕಾಗಿ ನಮ್ಮ ಕೃಷಿ ತಾಣದ ಟೆಲಿಗ್ರಾಂ ಗ್ರೂಪಿಗೆ ಈ ಕೆಳಗಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವ ಮುಖಾಂತರ ಜಾಯಿನ್ ಆಗಿ:
https://telegram.me/krishimahaiti

Spread positive news

Leave a Reply

Your email address will not be published. Required fields are marked *