ಈ ತಳಿ ಹಸುಗಳು ಕೋಟಿ ಕೋಟಿಗೆ ಮಾರಾಟ

ಬ್ರೆಜಿಲ್‌ನಲ್ಲಿ ದಾಖಲೆಯ ಮೊತ್ತಕ್ಕೆ ಮಾರಾಟ ದುಬಾರಿ ಗೋವು ಎಂಬ ಖ್ಯಾತಿ ನೆಲ್ಲೂರು ತಳಿ ಹಸು ಬೆಲೆ ₹40 ಕೋಟಿ ಸಾಮಾನ್ಯವಾಗಿ ಒಂದು ಉತ್ತಮ ಹಸುವಿನ ಬೆಲೆ 30 ರಿಂದ 40 ಸಾವಿರ ರೂ. ಇದ್ದು, ದೇಶೀಯ ತಳಿಗಳು ಸ್ವಲ್ಪ ದುಬಾರಿಯಾಗಿರುತ್ತವೆ. ಆದರೆ, ಇಲ್ಲೊಂದು ಹಸು ಬರೋಬ್ಬರಿ 40 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ವಿಶ್ವದ ಅತ್ಯಂತ ದುಬಾರಿ ಗೋವು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಆಂಧ್ರಪ್ರದೇಶದ ನೆಲ್ಲೂರು ಮೂಲದ ತಳಿ ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ ಲೈವ್‌ಸ್ಟಾಕ್ ಹರಾಜಿನಲ್ಲಿ 4.8 ಮಿಲಿಯನ್ ಡಾಲರ್‌ಗೆ (40 ಕೋಟಿ ರೂ.) ಮಾರಾಟವಾಗಿದ್ದು, ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿ ಪ್ರಕ್ರಿಯೆ ನಡೆದಿರುವುದು ಇದೇ ಮೊದಲಾಗಿದೆ. ಬ್ರೆಜಿಲ್‌ನ ಪಶುಸಂಗೋಪನೆಯಲ್ಲಿ ವೈಜ್ಞಾನಿಕವಾಗಿ ‘ಬಾಸ್ ಇಂಡಿಕಸ್’ ಎಂದು ಪ್ರಖ್ಯಾತವಾಗಿರುವ ಈ ತಳಿ ಜಗತ್ತಿನ ದುಬಾರಿ ಹಸುವಾಗಿ ಹೊರಹೊಮ್ಮಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗಿದೆ. ನೆಲ್ಲೂರು ತಳಿಯ ಹಸು ಬಿಳಿ ತುಪ್ಪಳ ಮತ್ತು ಭುಜದ ಮೇಲೆ ವಿಶಿಷ್ಟವಾದ ಬಲ್ಬಸ್ ಗೂನುಗಳನ್ನು ಹೊಂದಿರುತ್ತದೆ. ನೋಡಲು ಕಟ್ಟು ಮಸ್ತಾದ ದೇಹ ಮತ್ತು ಉನ್ನತ ಅನುವಂಶಿಕ ಗುಣಗಳಿಗೆ ಇದು ಹೆಸರುವಾಸಿಯಾಗಿದೆ. ನೆಲ್ಲೂರು ಹಸುವಿನ ಮೊದಲ ಜೋಡಿಯನ್ನು 1868ರಲ್ಲಿ ಬ್ರೆಜಿಲ್‌ಗೆ ರವಾನಿಸಲಾಯಿತು. ನಂತರ 1876ರಲ್ಲಿ ಹ್ಯಾಂಬರ್ಗ್ ಮೃಗಾಲಯದಿಂದ ಇನ್ನೂ ಎರಡು ಹಸುಗಳನ್ನು ತರಲಾಯಿತು. 1960ರಲ್ಲಿ ನೂರು ನೆಲ್ಲೂರು ಹಸುಗಳನ್ನು ಕಳುಹಿಸಲಾಯಿತು. ಪ್ರಸ್ತುತ ಬ್ರೆಜಿಲ್‌ನಲ್ಲಿ ಶೇ.80 ಹಸುಗಳು ನೆಲ್ಲೂರು ತಳಿಗಳಾಗಿವೆ.

ಆಂಧ್ರಪ್ರದೇಶದ ನೆಲ್ಲೂರು ನಗರದ ಹೆಸರಿಡಲಾದ ಹಸುಗಳು ಬಿಸಿ ತಾಪಮಾನವನ್ನು ತಡೆದುಕೊಳ್ಳುತ್ತವೆ. ಇದಕ್ಕೆ ಯಾವುದೇ ಪರಾವಲಂಬಿ ಸೋಂಕು ತಗಲುವುದಿಲ್ಲ. ಆದ್ದರಿಂದ ಸುಲಭವಾಗಿ ಸಾಕಬಹುದು. ಇದನ್ನು ವಯಾಟಿನಾ-19 ಎಫ್‌ಐವಿ ಮಾರಾ ಇಮೋವೆಸ್ ಎಂದು ಕರೆಯಲಾಗುತ್ತದೆ. ಈ ಹಸುವಿನ ಅನುವಂಶಿಕ ವಸ್ತು- ಭ್ರೂಣ ಮತ್ತು ವೀರ್ಯದ ರೂಪದಲ್ಲಿ ಸಂತತಿಯನ್ನು ಉತ್ಪಾದಿಸುವ ಭರವಸೆ ಒದಗಿಸುತ್ತದೆ. ಪರಿಸರಕ್ಕೆ ಅನುಗುಣವಾಗಿ ಸ್ಥಿತಿಸ್ಥಾಪಕತ್ವ ಮತ್ತು ಹೊಂದಿಕೊಳ್ಳುವ ಗುಣವಿದ್ದು, ಬ್ರೆಜಿಲ್‌ನ ವೈವಿಧ್ಯಮಯ ಹವಾಮಾನದಲ್ಲಿ ಕೃಷಿ ಮಾಡುವ ರೈತರಿಗೆ ಈ ಜಾನುವಾರು ಪ್ರಮುಖ ಆಯ್ಕೆಯಾಗಿದೆ.

ಗೋವುಗಳ ಉಪಯೋಗ? ಸಾವಯವ ಕೃಷಿಯಲ್ಲಿ ಅದರ ಮಹತ್ವ ಏನು?

ಮುಖ್ಯವಾಗಿ ಹೇಳಬೇಕೆಂದರೆ ಗೊಬ್ಬರ ಸಿದ್ದಗೊಳಸಲು ಅಗತ್ಯವಿರುವ ಗೋಮೂತ್ರ ಮತ್ತು ಸಗಣಿಗಾಗಿಯೇ 5 ದೇಸಿ ಆಕಳು, 8 ಕುರಿಗಳು, 2 ಎತ್ತುಗಳು ಮತ್ತು 20 ಕೋಳಿಗಳನ್ನು ಸಾಕಲಾಗಿದೆ. ಇವುಗಳಿಂದ ಬೆಳೆಗಳಿಗೆ ಅಗತ್ಯವಿರುವ ಔಷಧ, ಗೊಬ್ಬರ ಸಿದ್ಧಗೊಳಿಸಲಾಗುತ್ತದೆ. ಇದರ ಜೊತೆಗೆ ಮನೆಗೆ ಅಗತ್ಯವಿರುವಷ್ಟು ಹಾಲು ಸಿಗುತ್ತದೆ ಎಂದು ತಿಳಿಸಿದರು. ಪ್ರತಿ ವರ್ಷ 5 ಎಕರೆ ದ್ರಾಕ್ಷಿಯಿಂದ 20 ಟನ್ ಒಣದ್ರಾಕ್ಷಿ, 9 ಎಕರೆ ಕಬ್ಬಿನಿಂದ ಔಷಧ, ಇನ್ನಿತರ 500 ರಿಂದ 550 ಟನ್ ಕಬ್ಬು, 3 ಎಕರೆ ಕಡಲೆಯಿಂದ 20 ಕ್ವಿಂಟಲ್ ಕಡಲೆ ಹೀಗೆ ಹಲವಾರು ಲಾಭದಾಯಕ ಉದ್ಯಮ ಮಾಡಲು ಇದು ಪ್ರೋತ್ಸಾಹಿಸುತ್ತದೆ.

ಸಾವಯವ ಕೃಷಿ ಹೇಗೆ ಮಾಡುತ್ತಾರೆ? ಯಾವ ಯಾವ ಕ್ರಮ ಕೈಗೊಳ್ಳಬೇಕು?

ಸಾವಯವ ಕೃಷಿ ಮಾಡಿ ಹೆಚ್ಚಿನ ಆದಾಯ ತೆಗೆಯಲು ಸರಳ ಉಪಾಯವೆಂದರೆ ತೋಟದಲ್ಲಿಯೇ ಸಿಗುವ ಕಚ್ಚಾ ಪದಾರ್ಥಗಳಾದ 10 ಜಾತಿಯ ಗಿಡಗಳ ಎಲೆಗಳು, ಗೋಮೂತ್ರ, ಸಗಣಿ, ಮೆಣಸಿನಕಾಯಿ, ಅದರಕ, ಬೆಳ್ಳುಳ್ಳಿ, ತಿನ್ನುವ ತಂಬಾಕು ಮುಂತಾದವುಗಳನ್ನು ಬಳಸಿ ‘ದಶವರ್ಣಿ ಅರ್ಕ’ ಎನ್ನುವ ಔಷಧ ಸಿದ್ಧಗೊಳಿಸಿ ರೋಗ ಬರುವ ಬೆಳೆಗಳಿಗೆ ಸಿಂಪರಣೆ ಮಾಡುವುದು ಎನ್ನುತ್ತಾರೆ ಅವರು. ಬೆಳೆಗಳಿಗೆ ಬರುವ ರೋಗ ನಿಯಂತ್ರಣಕ್ಕಾಗಿ ಸ್ವಾಭಾವಿಕವಾಗಿ ಸಿಗುವ ನೀಮಾಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಅಸ್ತ್ರ ಇಂತಹ ಔಷಧಗಳನ್ನು ಸಿದ್ಧಗೊಳಿಸಿ ಬೆಳೆಗಳಿಗೆ ರೋಗ ಬಂದರೆ ಸಿಂಪರಣೆ ಮಾಡಿ, ರೋಗ ನಿಯಂತ್ರಣ ಮಾಡಲಾಗುತ್ತದೆ ಎನ್ನುತ್ತಾರೆ ಈರಣ್ಣ ಅವರು.

ರೈತರೇ ಸದ್ಯದ ಸ್ಥಿತಿಯಲ್ಲಿ ರೈತರು ತುಂಬಾ ಹೈನುಗಾರಿಕೆ ಕಡೆ ಒಲವು ತೋರಿದ್ದಾರೆ. ಅದೇ ರೀತಿ ರೈತರು ಸಹ ಹೈನುಗಾರಿಕೆ ಬಗ್ಗೆ ಮಾಹಿತಿ ಪಡೆದು ಹೊಸ ಉದ್ಯಮದ ಕಡೆಗೆ ಹೆಜ್ಜೆ ಹಾಕುತ್ತಾ ರೈತರು ಹಾಲಿನ ಉತ್ಪನ್ನ ಹೆಚ್ಚಿಸಲು ಮುಂದಾಗಿದ್ದಾರೆ. ಆದರೆ ರೈತರು ಹೈನುಗಾರಿಕೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿ ಕಾಲು ಬಾಯಿ ರೋಗವು ವೈರಸ್ ನಿಂದ ಹರಡುವ ತೀವ್ರ ಸಾಂಕ್ರಾಮಿಕ ರೋಗವಾಗಿದ್ದು, ಹಸು, ಎಮ್ಮೆ. ಕುರಿ, ಮೇಕೆ, ಹಂದಿ ಮತ್ತು ಇತರ ಗೊರಸು ಕಾಲಿನ ಪ್ರಾಣಿಗಳಲ್ಲಿ ಕಂಡುಬರುತ್ತದೆ.

1) ಕಾಲು ಬಾಯಿ ರೋಗ ಕಂಡು ಹಿಡಿಯುವ ವಿಧಾನ –

* ಬಾಯಿ, ಗೊರಸು ಮತ್ತು ಕೆಚ್ಚಲಿನ ತೊಟ್ಟಿನ ಮೇಲೆ ಹುಣ್ಣುಗಳು.

* ಹಾಲಿನ ಇಳುವರಿ ಕುಂಠಿತವಾಗುವುದು.

* ದೇಹದ ತೂಕ ಕಡಿಮೆಯಾಗುವುದು.

* ಮೇವು ತಿನ್ನದಿರುವುದು.

* ಕಂದ ಹಾಕುವ ರೋಗ.

* ಕಾಲು ಕುಂಟುವುದು.

* ಜ್ವರ ಇವು ಈ ರೋಗದ ಲಕ್ಷಣಗಳು ಇವೆ.

ರಾಷ್ಟ್ರೀಯ ಜಾನುವಾರುಗಳ ರೋಗ ನಿಯಂತ್ರಣ ಕಾರ್ಯಕ್ರಮ (NADCP)

ಈ ಕಾರ್ಯಕ್ರಮದ ವೈಶಿಷ್ಟ್ಯತೆಗಳು : ಪ್ರತಿ ಆರು ತಿಂಗಳಿಗೊಮ್ಮೆ ಎಲ್ಲಾ ಜಾನುವಾರುಗಳಿಗೆ (ಹಸು, ಎಮ್ಮೆ, ಕುರಿ, ಮೇಕೆ ಮತ್ತು ಹಂದಿ) ತಪ್ಪದೇ ಲಸಿಕೆ ಹಾಕಿಸುವುದರಿಂದ ಕಾಲು ಬಾಯಿ ರೋಗವನ್ನು ತಡೆಗಟ್ಟಬಹುದು.

Spread positive news

Leave a Reply

Your email address will not be published. Required fields are marked *