ಗೃಹಲಕ್ಷ್ಮಿ ಹಣ ಪಡೆಯಲು ಇನ್ನೂ ಮುಂದೆ ಈ ಕೆಲಸ ಕಡ್ಡಾಯ. ಕೂಡಲೇ ಮಾಡಿ

ರಾಜ್ಯದ ಮಹಿಳೆಯರಿಗೆ ಇದೊಂದು ಮಹತ್ವದ ವಿಷಯವಾಗಿದೆ. ಮಹಿಳೆಯರು ನೋಡಲೇಬೇಕಾದ ಮಹತ್ವದ ಸುದ್ದಿಯಾಗಿದೆ. ಜನರು ಸರ್ಕಾರದ ಚಟುವಟಿಕೆಗಳತ್ತ ಕಾದು ನೋಡುತ್ತಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಹಾಗೂ ಬಹುತೇಕ ಜನಸಾಮಾನ್ಯರು ಕಾತರದಿಂದ ಕಾಯುತ್ತಿರುವ ಈಗ ಸರ್ಕಾರವು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ರೇಷನ್ ಕಾರ್ಡ್ ಪಡೆಯಲು ಹೊಸದಾಗಿ ಅರ್ಜಿ ಸಲ್ಲಿಸಿದ ಹಾಗೂ ಹಳೆಯ ರೇಷನ್ ಕಾರ್ಡ್ ಅರ್ಹರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅದೇ ರೀತಿ ಯಾರಿಗೆ ಇನ್ನೂ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತವರಿಗೆ ಮತ್ತೊಂದು ಅವಕಾಶ ನೀಡುತ್ತಿದೆ.

ಈ ಕೆಲಸವನ್ನು ಕೂಡಲೇ ಮಾಡಿದ್ರೆ ಮುಂದಿನ ಕಂತಿನ ಗೃಹಲಕ್ಷ್ಮೀ ಹಣ ಸುಲಭವಾಗಿ ಪಡೆಯಬಹುದಾಗಿದೆ. ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ತಲುಪುತ್ತಿಲ್ಲ. ಜೊತೆಗೆ ಅರ್ಜಿ ಸಲ್ಲಿಸಿದ ಸಾವಿರಾರ ಮಹಿಳೆಯರು ಇಂದಿಗೂ ಒಂದೇ ಒಂದು ಕಂತಿನ ಹಣವನ್ನೂ ಪಡೆದುಕೊಂಡಿಲ್ಲ. ಯಾವ ಕಾರಣಕ್ಕೆ ಇಂತಹ ಮಹಿಳೆಯರಿಗೆ ಹಣ ಸಿಗುತ್ತಿಲ್ಲ ಅನ್ನೋದು ಚಿಂತೆಯಾಗಿದೆ.

ರಾಜ್ಯ ಸರಕಾರ ಈಗಾಗಲೇ ಗೃಹಲಕ್ಷ್ಮೀ ಯೋಜನೆಯನ್ನು ಪ್ತತೀ ಯಜಮಾನಿಗೂ ತಲುಪಿಸಬೇಕು ಅನ್ನೋ ಉದ್ದೇಶದಿಂದಲೇ ಅದಾಲತ್‌ ನಡೆಸಲಾಗಿದೆ. ಅಧಿಕಾರಿಗಳನ್ನು ಮನೆ ಮನೆಗೆ ಕಳುಹಿಸಿ ಸರ್ವೆ ಕಾರ್ಯವನ್ನೂ ನಡೆಸಲಾಗಿತ್ತು. 👉ಜೊತೆಗೆ ಆಧಾರ್‌ ಸೀಡಿಂಗ್‌ (Aadhaar Seeding Process), ರೇಷನ್‌ ಕಾರ್ಡ್‌ ಈ ಕೆವೈಸಿ (Ration Card ekyc) ಕಾರ್ಯವನ್ನೂ ಮಾಡಿಸಲಾಗಿತ್ತು.👈

ಆದರೂ ಹಲವು ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಯಾಗಿಲ್ಲ. ಬಹುತೇಕ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಅರ್ಹತೆ ಪಡೆಯಲು ಸಾಧ್ಯವಾಗದೇ ಇರೋದಕ್ಕೆ ತಾಂತ್ರಿಕ ಕಾರಣ ಎನ್ನಲಾಗಿತ್ತು. ಆದ್ರೀಗ ಮತ್ತೊಂದು ಕಾರಣ ಪತ್ತೆಯಾಗಿದ್ದು, ಸರಕಾರ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಲು ಮತ್ತೊಂದು ಅವಕಾಶವನ್ನು ಮಾಡಿಕೊಟ್ಟಿದೆ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ ಇರಲೇಬೇಕು ಎಂಬ ನಿಯಮವಿದೆ. ಹಲವಾರು ಮಂದಿ ರೇಷನ್ ಕಾರ್ಡ್ ಅನ್ನು ಮಾಡಿಸಿಯೇ ಇಲ್ಲ. ಇನ್ನೂ ಕೆಲವರ ರೇಷನ್ ಕಾರ್ಡ್ ನಲ್ಲಿ ಮೃತರ ಹೆಸರುಗಳೇ ಮನೆ ಯಜಮಾನತಿ ಹೆಸರಿನಲ್ಲಿದೆ. ಇವರ ಹೆಸರುಗಳನ್ನು ಪರಿಷ್ಕರಿಸಬೇಕಿದೆ. ಗೃಹ ಲಕ್ಷ್ಮಿಯೇ ಅಲ್ಲದಿದ್ದರೂ ವಿಳಾಸ ದೃಢೀಕರಣ ಸೇರಿದಂತೆ ನಾನಾ ಕಾರಣಗಳಿಗಾಗಿ ರೇಷನ್ ಕಾರ್ಡ್ ಬೇಕೇಬೇಕು. ಕೆಲವು ಕಡೆಗಳಲ್ಲಿ ಆಧಾರ್ ಕಾರ್ಡ್ ಇದ್ದರೂ ರೇಷನ್ ಕಾರ್ಡ್ ಬೇಕು ಅಂತ ಕೇಳುವುದುಂಟು. ಹಾಗಾಗಿ, ರೇಷನ್ ಕಾರ್ಡ್ ಮಾಡಿಸಲು ಜನರು ಕಾತುರರಾಗಿದ್ದಾರೆ.

Spread positive news

Leave a Reply

Your email address will not be published. Required fields are marked *