ಪ್ರೀಯ ರೈತರೇ ಸರ್ಕಾರವು ರೈತರಿಗೆ ಮತ್ತೊಂದು ಸಂತಸದ ಸುದ್ದಿ ನೀಡುತ್ತಿದೆ. ರೈತರಿಗೆ ಬರ ಪರಿಹಾರ ಈಗಾಗಲೇ ಮೊದಲನೇ ಕಂತು ಹಣ ಬಿಡುಗಡೆ ಮಾಡಿದ್ದು ರೈತರಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಸರ್ಕಾರವು ಒಂದು ಹೆಜ್ಜೆ ಇಟ್ಟಿದೆ. ಅದೇ ರೀತಿ ಯಾವ ರೈತರಿಗೆ ಬರ ಪರಿಹಾರ ಹಣ ಬಂದಿದೆ ಅಥವಾ ಯಾವ ರೈತರಿಗೆ ಬರ ಪರಿಹಾರ ಬಂದಿಲ್ಲ ಎಂಬುದು ಈಗ ನೀವಾಗಿಯೇ ನಿಮ್ಮ ಗ್ರಾಮ ಪಂಚಾಯಿತಿ ಭೇಟಿ ನೀಡಿ ಪರಿಶೀಲನೆ ಮಾಡಬಹುದು. ಹಾಗಾದರೆ ಬನ್ನಿ ಬರ ಪರಿಹಾರ ಬಿಡುಗಡೆ ಬಗ್ಗೆ ಎಲ್ಲಿ ಹೋಗಿ ಚರ್ಚೆ ಮಾಡಬೇಕು ಎಂದು ತಿಳಿಯೋಣ ಬನ್ನಿ.
ಅದೇ ರೀತಿ ಸರ್ಕಾರವು ಈಗಾಗಲೇ ಅರ್ಹ ರೈತರಿಗೆ ಬರ ಪರಿಹಾರ ತಲುಪಿಸಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಕುರಿತ ಪಟ್ಟಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ,” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿಧಾನಸೌಧದಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, “ರೈತರು ಸಂಬಂಧಿ ಸಿದ ಗ್ರಾಮ ಪಂಚಾಯಿತಿಗಳಲ್ಲಿ ಪಟ್ಟಿ ಪರಿಶೀಲಿಸ ಬಹುದು. ಹೆಸರು ಬಿಟ್ಟು ಹೋಗಿದ್ದರೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕಂದಾಯ ಇಲಾಖೆಯ ಸ್ಥಳೀಯ ಕಚೇರಿಗೆ ಭೇಟಿ ನೀಡಿ ಸೇರ್ಪಡೆ ಮಾಡಿಸಿಕೊಳ್ಳಬೇಕು,” ಎಂದು ಮನವಿ ಮಾಡಿದರು.
ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು, ಹಳ್ಳಿವಾರು ರೈತರ ಎಫ್.ಐ.ಡಿ ಈಗಾಗಲೇ ಆಗಿದೇ ಇದ್ದವರ ಲಿಸ್ಟ್ ಆಯಾ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ನೋಟಿಸ್ ಬೋರ್ಡ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ನೀವು ಸಹ ನಿಮಗೆ ಎಫ್ ಐಡಿ ಆಗದೆ ಇರುವವರ ಲಿಸ್ಟ್ ಸಿಕ್ಕಿದ್ದರೆ ನಿಮ್ಮ ಹೆಸರು ಚೆಕ್ ಮಾಡಿ ಪರಿಶೀಲನೆ ನಡೆಸಿ. ಒಂದು ವೇಳೆ ನಿಮಗೆ ಸಂಬಂದಿಸಿದ ಎಲ್ಲಾ ಸರ್ವೇ ನಂಬರ್‌ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ, ಜಂಟಿ ಖಾತೆದಾರರಾಗಿದ್ದಲ್ಲಿ ಪ್ರತಿಯೊಬ್ಬ ಖಾತೆದಾರರು ಪ್ರತ್ಯೇಕವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು.
“ಕುಡಿಯುವ ನೀರು, ಮೇವು, ಇತರ ಸೌಲಭ್ಯ ಒದಗಿಸಲು ಜಿಲ್ಲಾಧಿ ಕಾರಿಗಳ ಖಾತೆಗೆ 870 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಪರಿಹಾರದ ಹಣವನ್ನು ಸಮರ್ಪಕವಾಗಿ ಬಳಸಲು ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗಿದೆ. ಈ ಕಾರ್ಯಪಡೆಗಳಿಂದ ಈವರೆಗೆ 431 ಸಭೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಟಾಸ್ಕ್‌ಫೋರ್ಸ್ ಸಮಿತಿಗಳಿಂದ 236 ಸಭೆಗಳಾಗಿವೆ. 156 ಹಳ್ಳಿಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ಬಾಡಿಗೆ ಆಧಾರದ ಮೇಲೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. 46 ಗ್ರಾಮಗಳಲ್ಲಿ ಮತ್ತು ನಗರ ಪ್ರದೇಶದ 46 ವಾರ್ಡ್‌ಗಳಲ್ಲಿ ಟ್ಯಾಂಕರ್‌ನಿಂದ ಕುಡಿಯುವ ನೀರು ಪೂರೈಸಲಾಗುತ್ತಿದೆ,” ಎಂದರು.
ಸರ್ಕಾರವು ಕೂಡ ಈ ವರ್ಷದ ಬೇಸಿಗೆಗೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು ಉತ್ತಮ ಕೆಲಸವಾಗಿದೆ. “ಕಳೆದ 5 ವರ್ಷದ ಅಂಕಿ, ಅಂಶಗಳ ಆಧಾರದಲ್ಲಿ ಮುಂಜಾಗ್ರತಾ ಕ್ರಮವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗುವ 782 ಗ್ರಾಮಗಳು ಹಾಗೂ 1,193 ವಾರ್ಡ್ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಳವೆಬಾವಿ ಅವಶ್ಯಕತೆಯಿದ್ದರೆ ಕೊರೆಯುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಿಎಂ ಸೂಚಿಸಿದ್ದಾರೆ. ಮೇವಿನ ಸಮಸ್ಯೆ ನೀಗಿಸಲು 2023ರ ನವೆಂಬರ್‌ನಲ್ಲಿ ಮೊದಲ ಹಂತದ ಕ್ರಮವಾಗಿ 7 ಲಕ್ಷ ಮೇವಿನ ಬಿತ್ತನೆ ಬೀಜದ ಕಿಟ್ ನೀಡಲಾಗಿದೆ. ಎರಡನೇ ಹಂತದಲ್ಲಿ ಮತ್ತೆ 7 ಲಕ್ಷ ಕಿಟ್ ವಿತರಿಸಲು ಹಣ ಬಿಡುಗಡೆ ಮಾಡಲಾಗಿದೆ. 3 ಕಡೆ ಗೋಶಾಲೆ ತೆರೆಯಲಾಗಿದೆ. ಮೇವಿನ ದಾಸ್ತಾನಿಗೂ ಕ್ರಮ ಕೈಗೊಳ್ಳಲಾಗಿದೆ,” ಎಂದು ಕಂದಾಯ ಸಚಿವರು ತಿಳಿಸಿದರು.