ಯಾವ ಬೆಳೆಗೆ ಯಾವ ಕಳೆನಾಶಕ ಉಪಯೋಗ? ಎಂದು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಪ್ರೀಯ‌ ರೈತರೇ ನಾವು‎‫ ಇವತ್ತು ಕೃಷಿಗೆ ಸಂಬಂಧಿಸಿದ ಮುಖ್ಯ ವಿಷಯದ ಬಗ್ಗೆ ಚರ್ಚಿಸೋಣ. ಸಸ್ಯ ಸಂರಕ್ಷಣಾ ರಾಸಾಯನಿಕಗಳ ಹೊಂದಾಣಿಕೆ ಪಟ್ಟಿ

ಮೈಸ್ಟರ್ ಪಬ್ಲಿಷಿಂಗ್ ಕಂಪನಿ, ವಿಲೋಬಿ. ಓಹಿಯೋ ಅವರು ಪ್ರಕಟಿಸಿದ ಸಿಂಪರಣಾ ಹೊಂದಾಣಿಕೆ ಪಟ್ಟಿಯ ಆಧಾರದ ಮೇಲೆ ಈ ಪಟ್ಟಿಯನ್ನು ತಯಾರಿಸಲಾಗಿದೆ. ಕೆಲವೊಂದು ಕರಗುವ ದ್ರವವಸ್ತುಗಳು ಹೊಂದಾಣಿಕೆಯನ್ನು ಬದಲಾಯಿಸಬಹುದು. ಇಲ್ಲಿ ನಮೂದಿಸಿರುವ ಸಿಂಪರಣಾ ಹೊಂದಾಣಿಕೆಯು ಭೌತಿಕ, ರಾಸಾಯನಿಕ ಹಾಗೂ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದೆ. ಇದು ಅವಶೇಷಗಳಿಗೂ ಮತ್ತು ಅವಶೇಷಗಳನ್ನು ಸಹಿಸಿಟ್ಟುಕೊಳ್ಳುವ ಶಕ್ತಿಗೂ ಸಂಬಂಧಿಸಿಲ್ಲ. ಇಲ್ಲಿ ಕೊಟ್ಟಿರುವ ಮಾಹಿತಿ ಮೊದಲಿನ ಸಿದ್ಧತೆಗೆ ಸಹಾಯವಾಗುತ್ತದೆ. ಆದರೆ ಸಿಂಪರಣೆಗೆ ಮೊದಲು ತಯಾರಕರು ಸಿಂಪರಣೆ ಮತ್ತು ರಾಸಾಯನಿಕ ಬಳಕೆಯ ಬಗ್ಗೆ ಸೂಚಿಸಿದ ಮಾಹಿತಿಯ ಆಧಾರದ ಮೇಲೆಯೇ ಸಿಂಪರಣಾ ದ್ರಾವಣ ತಯಾರಿಸಬೇಕು.

ದುಂಡಾಣು ನಾಶಕಗಳು: ಸೈಪ್ಪೋಮೈಸಿನ್ ಮತ್ತು ಅಗ್ರಿಮೈಸಿನ್ ಇವನ್ನು ಲೆಡ್ ಆರ್‌ನೇಟ್. ಕ್ಯಾಪ್ಟಾನ್, ಸ್ಕಿರೀಕರಿಸಿದ ತಾಮ್ರ. ಪ್ಯಾರಾಥಿಯಾನ್, ನೀರಿನಲ್ಲಿ ಕರಗುವ ಗಂಧಕ, ಮ್ಯಾನಬ್ ಮತ್ತು ಜೈನೆಬ್ ಗಳೊಂದಿಗೆ ನಿರಪಾಯಕಾರಿಯಾಗಿ ಬೆರೆಸಬಹುದು. ಆದರೆ ಇವುಗಳನ್ನು ಬೊರ್ಡೋ ಮಿಶ್ರಣ ಹಾಗೂ ಕ್ಷಾರ ಪ್ರತಿಕ್ರಿಯೆಯುಳ್ಳ ರಾಸಾಯನಿಕಗಳೊಂದಿಗೆ ಬೆರೆಸಬಾರದು.

ಯೂರಿಯಾ: ಸಾಮಾನ್ಯವಾಗಿ ಸುಣ್ಣ, ಗಂಧಕ, ಹಾಗೂ ಸೆವಿನ್ ಹೊರತು ಇತರ ರಾಸಾಯನಿಕಗಳೊಡನೆ ಇದರ ಹೊಂದಾಣಿಕ ಇದೆ.

ಪೋಷಕ ಸಿಂಪರಣೆ : ಬೊರಾನ್. ಮೆಗ್ನಿಷಿಯಂ, ಮ್ಯಾಂಗನೀಸ್, ಕಬ್ಬಿಣ, ಸತು. ಯೂರಿಯಾ, ಮುಂತಾದುವುಗಳನ್ನು ಪ್ರತ್ಯೇಕವಾಗಿಯೇ ಸಿಂಪರಿಸಿ ಹೊಂದಾಣಿಕೆ ಯಿದ್ದಾಗ ಮಾತ್ರ ಇತರ ರಾಸಾಯನಿಕಗಳೊಡನೆ ಬೆರೆಸಿ.

ಗೋಧಿ

ಕಸಗಳು – ಕಾಡುಜವೆ ಗೋದಿ, ಗಜ್ಜರಿ ಕಸ, ಜೇಕು, ಅಣ್ಣಿಕಸ, ಕರಿಕೆ. ಕಾಡುರಾಗಿ. ಪಸಲೆ ಸೊಪ್ಪು, ಕಾಡು ಕುಸುಬೆ.

ಕಳೆನಾಶಕಗಳು – 24-ಡಿ, ಐಸೊಪೋಟುರಾನ್, ಸಲ್ಲೋಸಲ್ಫುರಾನ್ – ಇದನ್ನು ಚಿತ್ತದ 25-30 ದಿನಗಳೊಳಗಾಗಿ

 

ಜೋಳ, ಗೋವಿನಜೋಳ :

ಕಸಗಳು -ಜೇಕು, ಕರಿಕೆ. ಕಾಡುರಾಗಿ. ಬಿಳಿಕಸ. ಕಾಡು ಜೋಳ, ಕಾಡು ಗುರೆಳ್ಳು

ಕಳೆನಾಶಕದ ಹೆಸರು – 2,4-D

ಕಳೆ ನಾಶಕ ಬಳಸುವ ಸಮಯ – ಜೋಳಕ್ಕೆ ಬಿತ್ತಿದ 24 ತಾಸಿನೊಳಗಾಗಿ, ಗೋವಿನ ಜೋಳಕ್ಕೆ – Tynzer (ಟೆಪರಮ್ಯಾಜೋನ್) ಬಿತ್ತಿದ 25-30 ದಿನಗಳ ನಂತರ.

ಶೇಂಗಾ ಸೂರ್ಯಕಾಂತಿ/ ಸೋಯಾಅವರೆ/ಹೆಸರು/ ಉದ್ದು/ತೊಗರಿ :

ಕಸಗಳು – ಅಲಬು. ಜೇಕು, ಹಸರಾಣಿ ಸೊಪ್ಪು, ಕರಿಕೆ. ಇಗಳಿ, ಕಾಂಗೋ ಹುಲ್ಲು, ಉತ್ತರಾಣಿ, ಕ್ಯಾನರಿ ಹುಲ್ಲು, ಕಾಡು ಕುಸುಬೆ. ನಾಯಿ ಶೇಂಗಾ, ಕಾಡು’ ರಾಗಿ, ಗಜ್ಜರಿ ಕಸ.

ಕಳೆನಾಶಕಗಳು – ಅಲಾಕ್ಲೋರ್, ಬ್ಯೂಟಾಕ್ಸರ್, ಪೆಂಡಿಮೆಥಾಲಿನ್, ಆಕ್ಸಿಪ್ಲೋರೋಫೇನ್.

ಕಳೆ ನಾಶಕ ಬಳಸುವ ಸಮಯ – ಬಿತ್ತಿದ 24 ತಾಸಿನೊಳಗಾಗಿ ಅಥವಾ

ಇಮ್ಯಾಜಥಾಫಾಯರ್‌ (weed block) – ಬಿತ್ತದ 25-30 ದಿನಗಳ ನಂತರ.

 

ಹತ್ತಿ :

ಕಸಗಳು – ಇಗಳಿ, ಮುದ್ರೆ ಗಿಡ, ಜೇಕು. ಕರಿಕೆ. ಉತ್ತರಾಣಿ,

ಕಳೆನಾಶಕಗಳು – ಡೈಯುರಾನ್, ಪುಕ್ಲೋರಾಲಿನ್, ಟ್ರಿಕ್ಲೋರಾಲಿನ್

ಕಳೆ ನಾಶಕ ಬಳಸುವ ಸಮಯ – ಬಿತ್ತಿದ 24 ತಾಸಿನೊಳಗಾಗಿ

ಗ್ಲೈಪೋಸೈಟ್ – ಬಿತ್ತಿದ 20-30 ದಿನಗಳ ನಂತರ

 

ಕಬ್ಬು : –

ಕಸಗಳು- ಕರಿಕೆ, ಜೆಕು, ಇಗಳಿ, ಕಾಡುಜೋಳ, ಬಿಳಿಕಸ, ಗಜ್ಜರಿ ಕಸ, ಗೋಳಿ ಪಲ್ಲೆ, ಹಾತರಕಿ, ಗೋರ್ಜಿ, ಕುಂಕ್, ಸಿಂಪಗೆನ ಹುಲ್ಲು, ಇತರೆ,

 

ಕಳೆನಾಶಕಗಳು

ಅಟ್ರಾಜಿನ್, 24-ಡಿ ಇದನ್ನು ನಾಟಿ ಮಾಡಿದ 24 ತಾಸಿನೊಳಗಾಗಿ ಸಿಂಪಡಿಸಬೇಕು.

* ಮೆಟ್ರಿಬ್ಯುಜಿನ ಮತ್ತು 2,4-ಡಿ ಮಿಶ್ರಣ- ನಾಟಿ ಮಾಡಿದ 30-40 ದಿನಗಳ ನಂತರ ಉಪಯೋಗಿಸಬೇಕು. ಅಥವಾ ಟಿಂಜರ್ (ಟೆಪರಮ್ಯಾಜೋನ್) ಬಿತ್ತಿದ 25-30 ದಿನಗಳ ನಂತರ

Spread positive news

Leave a Reply

Your email address will not be published. Required fields are marked *