ಫ್ರೂಟ್ಸ್ ಐಡಿ (FID) ಹೆಸರು ಪಡೆಯಲು ಹೊಸ ಅವಕಾಶ ಕೂಡಲೇ ಭೇಟಿ ನೀಡಿ.

ರಾಜ್ಯದ ‘ರೈತ’ರಿಗೆ ಗುಡ್ ನ್ಯೂಸ್! ‘ಪ್ರೊಟ್ಸ್ ತಂತ್ರಾಂಶ’ದಲ್ಲಿ ನಮೂದಿಸಲು ಅವಕಾಶ. ಬರ ಪರಿಹಾರವನ್ನು ಪಡೆಯೋದಕ್ಕೆ ಪ್ರೊಟ್ಸ್ ತಂತ್ರಾಂಶದಲ್ಲಿ ರೈತರು ಮಾಹಿತಿಯನ್ನು ನಮೂದಿಸೋದು ಕಡ್ಡಾಯ. ಒಂದು ವೇಳೆ ನಮೂದಿಸದೇ ಇದ್ರೆ ಅಂತಹ ರೈತರಿಗೆ ಬರ ಪರಿಹಾರ ಸಂದಾಯವಾಗೋದಿಲ್ಲ. ಈ ಹಿನ್ನಲೆಯಲ್ಲಿ ಡಿ.22ರವರೆಗೆ ಫೂಟ್ಸ್ ತಂತ್ರಾಂಶದಲ್ಲಿ ನಮೂದಿಸೋದಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ತಿಳಿಸಿಸುವುದೇನಂದರೆ ಸರ್ಕಾರದ ಸೌಲಭ್ಯ ಹಾಗೂ ಪರಿಹಾರ ಮತ್ತು ಬೆಳೆ ವಿಮೆ ಪಡೆದುಕೊಳಲು

FID *farmer information details* ಮಾಡಿಸುವುದು *ಕಡ್ಡಾಯವಾಗಿದ್ದು* ಈ ಕೂಡಲೇ ಹತ್ತಿರದ *ರೈತ ಸಂಪರ್ಕ ಕೇಂದ್ರ ಅಥವಾ ನಿಮ್ಮ ಗ್ರಾಮ ಲೆಕ್ಕಿಗ (ತಲಾಟಿ) ಕಚೇರಿಗೆ ಭೇಟಿ ನೀಡಿ* ನಿಮ್ಮ ಎಲ್ಲಾ ಪಹಣಿ/RTC (ಉತಾರಿ) ನಿಮ್ಮ FID ಗೇ ಲಿಂಕ್ ಆಗಿದಿಯೋ ಇಲ್ಲವೋ ಎಂದ ಖಚಿತ ಪಡಿಸಿಕೊಳ್ಳಿ.

ಒಂದು ವೇಳೆ ನಿಮ್ಮ ಹೊಲ 7 ಎಕರೆ ಇದ್ದಲ್ಲಿ ನೀವು ಕೇವಲ ಎರಡು ಎಕರೆ ನೊಂದಣಿ ಮಾಡಿದರೆ ನಿಮಗೆ ಬರ ಪರಿಹಾರವಾಗಿ ಎರಡು ಎಕರೆಗೆ ಸೀಮಿತವಾದ ಹಣ ಅಷ್ಟೇ ಬರುತ್ತದೆ. ಹಾಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ನೀವು ತಪ್ಪದೆ ನಿಮ್ಮ ಹೊಲದ ಸಂಪೂರ್ಣ ಮಾಹಿತಿಯನ್ನು ನೋಂದಣಿ ಮಾಡಬೇಕು. 

* ಹೀಗೆ ಬಂದಿರುವ FID ಯನ್ನು ಕೃಷಿ ಇಲಾಖೆ,ರೇಷ್ಮೆ, ಅಥವಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಪರೀಶಿಲಿಸಿ Approve ಕೊಡಬೇಕು.

* ನಂತರ FID ಯನ್ನು ಪಿ ಎಂ ಕಿಸಾನ್ ಯೋಜನೆ, ಬೆಳೆಸಾಲ, ಬೆಳೆವಿಮೆ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ನೀವು ಈ FID ಅನ್ನು ಬಳಸಬಹುದು.

➡️ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ನಿಮಗೆ ಜಮೆ ಆಗುತ್ತದೆ.

ಬರ ಪರಿಹಾರದ ಹಣ ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಲೇಬೇಕು. ಒಂದು ವೇಳೆ ಎಫ್‌ಐಡಿ ಮಾಡಿಸದಿದ್ದರೆ ಹಣ ಬರುವುದಿಲ್ಲ. ಎಫ್‌ಐಡಿ ಮಾಡದೆ ಇರುವ ಕೂಡಲೇ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರಕ್ಕೆ ಅಥವಾ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಎಫ್‌ಐಡಿ ಮಾಡಿಸಬೇಕು.

ನಿಮ್ಮ ಪರಿಹಾರ ಹಣ ಜಮಾ ಆಗಿದ್ದರೆ ಸ್ಟೇಟಸ್ ಅನ್ನು ಹೀಗೆ ಚೆಕ್ ಮಾಡಿಕೊಳ್ಳಿ ಮೊದಲಿಗೆ ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ..👇🏻

https://landrecords.karnataka.gov.in/PariharaPayment/

ಈ ಮೇಲಿನ ಲಿಂಕನ್ನು ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕಾಣಿಸುವ ಹಾಗೆ ಮೊದಲು ಆಧಾರ್ ನಂಬರನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ calamity type ಇದ್ದಲಿ drought ಎಂದು ಹಾಕಿ ವರ್ಷವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಪಡೆಯಲು ವರ್ಷವನ್ನು ಆಯ್ಕೆ ಮಾಡಿ ಅಲ್ಲಿ ಕೊಟ್ಟಿರುವ ಕ್ಯಾಪ್ಚ ಎಂಟ್ರಿ ಮಾಡಿ ನಿಮ್ಮ ಪರಿಹಾರದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿಯೇ ಚೆಕ್

ಮಾಡಿಕೊಳ್ಳಿ.

Spread positive news

Leave a Reply

Your email address will not be published. Required fields are marked *