ವೃದ್ದಾಪ್ಯ (ಪೆನ್ಶನ್) ವೇತನ ಪಡೆಯಲು ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಹೇಗೆ ಸಲ್ಲಿಸುವುದು ಎಂದು ಇಲ್ಲಿದೆ ನೋಡಿ.

ವೃದ್ಧರಿಗೆ ಆರ್ಥಿಕವಾಗಿ ಸಹಾಯ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ನಿರ್ಗತಿಕರು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. ವೃದ್ಧರು ವೃದ್ಧಾಪ್ಯದಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಬೇರೆಯವರ ಮೇಲೆ ಅವಲಂಬಿತರಾಗಿ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಸರಕಾರ ಇಂತವರಿಗೆ ಆರ್ಥಿಕ ನೆರವು ನೀಡಿ ಸ್ವಾವಲಂಬಿಗಳಾಗುವಂತೆ ಮಾಡಿದೆ. ವೃದ್ಧಾಪ್ಯ ಪಿಂಚಣಿ ಯೋಜನೆ ಉತ್ತರಾಖಂಡವನ್ನು ಪ್ರಾರಂಭಿಸಲಾಗಿದೆ ಇದರಿಂದ ಹೆಚ್ಚು ಹೆಚ್ಚು ವೃದ್ಧರಿಗೆ ಆರ್ಥಿಕ ಸಹಾಯ ಮಾಡಬಹುದು. ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರೀಕರಿಗೆ ಈ ಯೋಜನೆಯಡಿ ಮಾನಾಶನವನ್ನು ನೀಡಲಾಗುತ್ತಿದೆ.

ಈ ಪಿಂಚಣಿ ಹಣ ಪಡೆಯಲು ಅರ್ಹತೆಗಳು – 

* ಫಲಾನುಭವಿಗಳು 60 ವರ್ಷ ಹಾಗೂ ಮೇಲ್ಪಟ್ಟ ವಯಸ್ಸುಳ್ಳವರಾಗಿರಬೇಕು. ಅವರು ಬಡತನ ರೇಖೆಗಿಂತ (ಬಿಪಿಎಲ್) ಕೆಳಗಡೆ ಇರಬೇಕು.

* ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂ.32,000/- ಕ್ಕಿಂತ ಕಡಿಮೆ ಇರಬೇಕು.

* ಅಂತಹ ವ್ಯಕ್ತಿಯು ವಿಧನಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆಯಡಿ ಯಾವುದೇ ತರಹದ ಪಿಂಚಣಿ ಇತ್ಯಾದಿಗಳನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.

* ಫಲಾನುಭವಿಗಳಿಗೆ ಗಂಡು ಮಕ್ಕಳು ಇದ್ದಾಗ್ಯೂ ಅವರು ಫಲಾನುಭವಿಗಳನ್ನು ಘೋಷಿಸದೇ ಇದ್ದಲ್ಲಿ ಈ ಮಾಸಾಶನವನ್ನು ಪಡೆಯಬಹುದಾಗಿದೆ.

* ಜನನ ಪ್ರಮಾಣ ಶಾಸ್ತ್ರಜ್ಞ ದೃದರಾಯ ದೃಢಶರಣ ಪಶ್ಚ ಅಧವ ಭಾರತ ಜುನವನ ಅಯೋಗವು ನಿದಿರುವ ಮತದಾರ ಗುರುತನ ಪೊಜಯಲ್ಲಿರುವ ಜನ್ನ ದಿನಾಂಕವು ವಯಸ್ಸಿಗೆ ಸಂಬಂಧಿಸಿದ ದಾಖಲೆಯ.

ಪಿಂಚಣಿ ಮೊತ್ತ:

1. 60 ಬೋಡ್ 64 ಎಲ್ & 500

2. 65 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ 1200

ಅರ್ಜಿ ಸಲ್ಲಿಸುವುದು ಎಲ್ಲಿ?

ಅರ್ಜಿದಾರರು ವಾಸಸ್ಥಳ ವ್ಯಾಪ್ತಿಯ ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

 

ಈ ಯೋಜನೆ ಪಡೆಯಲು ಅವಶ್ಯವಿರುವ ದಾಖಲಾತಿಗಳು (61 ವರ್ಷ ಮೇಲ್ಪಟ್ಟವರಿಗೆ ಮಾತ್ರ) –

1)ವೈದ್ಯಕೀಯ ಪ್ರಮಾಣ ಪತ್ರ.

2)ಆಧಾರ್ ಕಾರ್ಡನ ನಕಲು ಪ್ರತಿ.

3)ಪಡಿತರ ಚೀಟಿಯ ನಕಲು ಪ್ರತಿ.

4)ಮತದಾರರ ಗುರುತಿನ ಚೀಟಿ.

5) ಪಾಸ್ ಬುಕ್ (ಜೆರಾಕ್ಸ್ ಪ್ರತಿ).

6) 5 ಐಡೆಂಟಿಟಿ ಸೈಜಿನ ಫೋಟೋಗಳು

ಕರ್ನಾಟಕದಲ್ಲಿ ವೃದ್ಧಾಪ್ಯ ವೇತನ ಹೆಚ್ಚಳ ಮಾಡುವುದಕ್ಕೆ ಭಾರಿ ಬೇಡಿಕೆಯಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಿರಿಯ ನಾಗರಿಕಗರಿಗೆ ಪ್ರಸ್ತುತ 1,200 ರೂ. ವೃದ್ಧಾಪ್ಯ ವೇತನವನ್ನು ನೀಡುತ್ತಿದ್ದೇವೆ. ಅದನ್ನು ಮುಂದಿನ 2024-25ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ನಾಡಿನ ಎಲ್ಲಾ ಹಿರಿಯ ನಾಗರಿಕರಿಕರಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಶುಭಾಶಯ ಕೊರುತ್ತೇನೆ. ವೃದ್ಧಾಪ್ಯ ವೇತನ ಹೆಚ್ಚಳಕ್ಕೆ ಮನವಿ ಮಾಡಲಾಗಿದೆ. ಇದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಮುಂದಿನ ಬಜೆಟ್ ನಲ್ಲಿ ವೃದ್ಧಾಪ್ಯದ ವೇತನ ಹೆಚ್ಚಳ ಮಾಡಿ ಘೋಷಣೆ ಮಾಡುತ್ತೇನೆ. ಆದ್ರೆ, ಎಷ್ಟು ಅಂತ ಈಗಲೇ ಹೇಳುವುದಿಲ್ಲ. ಈಗಿರೋದಕ್ಕಿಂತ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದರು

ಹಿರಿಯ ನಾಗರಿಕರ ಸಹಾಯವಾಣಿ-1090

ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ತುರ್ತು ಸೇವೆಯನ್ನು ನೀಡುವ ಸಲುವಾಗಿ ಬೆಂಗಳೂರು, ಮೈಸೂರು,ಹುಬ್ಬಳಿ, ಧಾರವಾಡ, ಗುಲ್ಬರ್ಗಾ, ಬೆಳಗಾಂ, ಮಂಗಳೂರು,ಬಳ್ಳಾರಿ,ಚಿತ್ರದುರ್ಗ,ಶಿವಮೊಗ್ಗ, ಬಾಗಲಕೋಟೆ, ಕೋಲಾರ, ತುಮಕೂರು,ಬೀದರ್,ಬಿಜಾಪುರಗಳಲ್ಲಿ ಹಿರಿಯ ನಾಗರಿಕರ ಸಹಾಯವಾಣಿಯನ್ನು ಜಿಲ್ಲಾ ಪೋಲಿಸ್ ಆಯುಕ್ತರು/ಆರಕ್ಷಕ ಅಧೀಕ್ಷಕರ ಸಹಯೋಗದೊಂದಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದೆ.

 

Spread positive news

Leave a Reply

Your email address will not be published. Required fields are marked *