ಪ್ರೀಯ ರೈತರೇ ಈಗಾಗಲೇ 15 ಕಂತು ಮುಗಿದಿದ್ದು ಈಗ 16 ನೇ ಕಾಂತಿಗೆ ರೈತರು ಕಾಯುತ್ತಿದ್ದಾರೆ. ಅದೇ ರೀತಿ ಕೇಂದ್ರ ಸರಕಾರವು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಕಿಸಾನ್ ನಿಧಿ’ ಯೋಜನೆಯಡಿ ರೈತರಿಗೆ ನೀಡುವ ವಾರ್ಷಿಕ ಮೊತ್ತವನ್ನು ಈಗಿನ 6,000 ರಿಂದ 8,000 ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ. ಏಪ್ರಿಲ್-ಮೇ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತಿದೆ.
ಏನಿದು ಇ-ಕೆವೈಸಿ? ಇದನ್ನು ಎಲ್ಲಿ ಮಾಡಿಸಬೇಕು? ಹಾಗೂ ಇದರ ಮಹತ್ವವೇನು?
ರೈತ ಬಾಂಧವರಿಗೆ ವಿಶೇಷ ಸೂಚನೆ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಕಂತುಗಳು ನಿಮಗೆ ಜಮೆ ಆಗಬೇಕಾದರೆ *e-KYC* ಮಾಡಿಸಿಕೊಳ್ಳುವುದು ಖಡ್ಡಾಯ. ಬೇಗನೆ ರೈತರು ಕಡ್ಡಾಯವಾಗಿ e-KYC ಮಾಡಿಸಿಕೊಳ್ಳಬೇಕು. ಈ ಕೆವೈಸಿ ಮಾಡಿಸದಿದ್ದರೆ ರೈತರಿಗೆ ಮುಂದಿನ ಕಂತಿನ ಹಣ ಬರುವುದಿಲ್ಲ. ರೈತರು ಬೇಗನೆ ಇದನ್ನು ಸಂಪೂರ್ಣ ಮುಗಿಸಿಕೊಂಡು ಯೋಜನೆಯ ಲಾಭ ಪಡೆಯಬೇಕು. ಇಲ್ಲಿಯವರೆಗೆ E-KYC ಮಾಡಿಸದ ರೈತರು ಈ ಕೂಡಲೇ ಹತ್ತಿರದ CSC/ಗ್ರಾಮ ಒನ್ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಈ-ಕೇವೈಸಿ ಮಾಡಿಸಿಕೊಳಲ್ಲು ತಿಳಿಸಲಾಗಿದೆ.
ಹಣ ಬಂದಿರುವುದನ್ನು ಹೇಗೆ ಚೆಕ್ ಮಾಡಬೇಕು?
• ಗೂಗಲ್ ನಲ್ಲಿ ಕೆ ಕಿಸಾನ್ ಎಂದು ಸರ್ಚ್ ಮಾಡಬೇಕು.
• ಅಲ್ಲಿ ಫ್ರೂಟ್ಸ್ ಐಡಿ ಮೂಲಕ ಲಾಗಿನ್ ಆಗಬೇಕು.
• ಇಲ್ಲದಿದ್ದರೆ ಫ್ರೂಟ್ಸ್ ಐಡಿ ಮಾಡಿಕೊಳ್ಳಬೇಕು.
• https://fruits.karnataka.gov.in/ ಇದನ್ನು ಕ್ಲಿಕ್ ಮಾಡಬೇಕು.
• ನಂತರ ಅಲ್ಲಿ ಸರ್ಚ ಮಾಡಬೇಕು.
• ಅಲ್ಲಿ ಪ್ರಿಮಿಯಂ calculation ಅಲ್ಲಿ ಹೋಗಿ ಸರ್ಚ್ ಮಾಡಬೇಕು.
• ನಂತರ ಅಲ್ಲಿ ನಿಮಗೆ ಹಣ ಬಂದಿರುವುದನ್ನು ಕಾಣಬಹುದು.
ಏನಿದು ಹೊಸದಾಗಿ ನೊಂದಣಿ? ಹಾಗೂ ಈ ಯೋಜನೆ ಪಡೆಯಲು ಹೊಸ ನೊಂದಣಿಗೆ ಬೇಕಾಗುವ ಮಾಹಿತಿ?
ಹೊಸದಾಗಿ ನೊಂದಣಿ ಮಾಡಲು ಸಹ ಸರ್ಕಾರವು ಚಾಲನೆ ನೀಡಿದೆ. ದಿನಾcಕ: 01.02,2019 ರ ನಂತರ ಪೌತಿ ಕಾರಣದಿಂದಾಗಿ ಭೂಹಿಡುವಳಿ ಮಾಲೀಕ ಪಡೆದ ರೈತರು KKISAN ಯೋಜನೆಯಡಿ fruits id ನೋಂದಾಯಿಸಿಕೊಳ್ಳಲು ಅರ್ಹರಾಗಿರುತ್ತಾರೆ.
ಹೊಸದಾಗಿ ನೊಂದಣಿ ಮಾಡಲು ಎಲ್ಲಿ ಸಂಪರ್ಕಿಸಬೇಕು? ಹೇಗೆ ನೊಂದಣಿ ಮಾಡಿಕೊಳ್ಳಬೇಕು?
ಮುಖ್ಯವಾಗಿ ಹೇಳಬೇಕೆಂದರೆ ರೈತರು ತಮ್ಮ ಹೊಸದಾಗಿ ಈ ಯೋಜನೆಗೆ ನೊಂದಣಿ ಮಾಡಲು ಜಂಟಿ ಖಾತೆದಾರರಾಗಿದ್ದಲ್ಲಿ FRUITS ನಲ್ಲಿ ಎಲ್ಲಾ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಸಮಸ್ಯೆಯಿಂದಾಗಿ ಖಾತೆದಾರರು ತಮ್ಮ ಪಾಲಿನ ಜಮೀನಿನ ವಿಸ್ತೀರ್ಣ ಸೇರ್ಪಡೆ ಆರ್ಥಿಕ ನೆರವು ವರ್ಗಾವಣೆಯಾಗದಿರುವ ರೈತರು ತಮ್ಮ ಮಾಡಿಸಲು ಕ್ರಮ ಕೈಗೊಂಡು PMKISAN ಯೋಜನೆಗೆ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳಲು ಕೋರಿದೆ. ನೋಂದಣಿ ಮಾಡಿಸಿಕೊಳ್ಳಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆ ಕಛೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ವಿನಂತಿಸಿದೆ.