ಪಹಣಿಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಜುಲೈ ಗೆ ಅಂತ್ಯ: ಕೃಷ್ಣ ಬೈರೇಗೌಡ

ಪ್ರೀಯ ರೈತರೇ ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ನೀವು ನಿಮ್ಮ ಜಮೀನಿನ ಮಾಹಿತಿ ಪಡೆಯಲು ಸರ್ಕಾರದಿಂದ ಒಂದು ಕೆಲಸ ಮಾಡಬೇಕಾಗಿದೆ. ಅದೇನೆಂದರೆ ಉತಾರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಅದು ಜುಲೈ ಅಂತ್ಯದೊಳಗೆ ಮಾತ್ರ ಮಾಡಿಸಬೇಕು. ಜುಲೈ ಮುಗಿದ ನಂತರ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಸರ್ಕಾರವು ನಿಲ್ಲಿಸಲಿದೆ. ಅದೇ ರೀತಿ ದೊಡ್ಡ ಮತ್ತು ಸಣ್ಣ ರೈತರ ಮಾಹಿತಿ ದಾಖಲಿಸುವುದರ ಜತೆಗೆ, ಭೂ ಸಂಬಂಧಿತ ವಂಚನೆ ತಡೆಯಲು ಈಗ ಸರ್ಕಾರವು ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜಮೀನು ಮಾಲೀಕರ ಭಾವಚಿತ್ರದೊಂದಿಗೆ ಆರ್ (ಪಹಣಿ) ಆಧಾರ್ ಜೋಡಣೆ ಕಡ್ಡಾಯಗೊಳಿಸಲಾಗಿದೆ. ಸರ್ಕಾರ ಆಧಾರ್ ಕಾರ್ಡ್ ಲಿಂಕ್ ಮಾಡಲು ಜುಲೈ ಅಂತ್ಯದೊಳಗೆ ಗಡುವು ನೀಡಿದೆ.

ರೈತರ ಜಮೀನುಗಳಿಗೆ ಆಧಾ‌ರ್ ಲಿಂಕ್ ಜುಲೈ ಅಂತ್ಯಕ್ಕೆ ಪೂರ್ಣ “ಯಾರದೋ ಜಮೀನನ್ನು ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು, ಬೆಳೆ ನಷ್ಟ ಮತ್ತಿತರ ಸಂದರ್ಭಗಳಲ್ಲಿ ದೊರೆಯುವ ಪರಿಹಾರವನ್ನು ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ! ಕೃಷ್ಣ ಬೈರೇಗೌಡ, ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಆಧಾರ್ ಕಾರ್ಡ್ ಲಿಂಕ್ ಏಕೆ ಮಾಡಬೇಕು?

ಹೌದು ರೈತರೇ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಹಲವಾರು ಲಾಭಗಳು ಇವೆ. ಅದೇ ರೀತಿ ರೈತರಿಗೆ ಸವಲತ್ತುಗಳು ಸಹ ಸಂಪೂರ್ಣ ದೊರೆಯುತ್ತದೆ. ಭೂ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮ ಕಡ್ಡಾಯ‌ ರೈತರ ಮಾಹಿತಿ ದಾಖಲಿಸುವ ಜೊತೆಗೆ ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಕಂದಾಯ ಇಲಾಖೆ ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ.

ನಿಮ್ಮ NPCI ಸ್ಥಿತಿಯನ್ನು ಹೀಗೆ ಪರಿಶೀಲಿಸಬಹುದು:

* https://fruits.karnataka.gov.in/ ಗೆ ಭೇಟಿ ನೀಡಿ.
* ಸಿಟಿಜನ್ ರಿಜಿಸ್ಟ್ರೇಷನ್(Citizen Registration ” ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ.
* ಮುಂದುವರಿಯಿರಿ” ಕ್ಲಿಕ್ ಮಾಡಿ.
*ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ನಮೂದಿಸಿ.
*OTP ಯನ್ನು ನಮೂದಿಸಿ ಮತ್ತು “ಸಲ್ಲಿಸಿ” ಕ್ಲಿಕ್ ಮಾಡಿ.
*ಪಾಸ್‌ವರ್ಡ್ ರಚಿಸಿ (Create password) ಮತ್ತು ಲಾಗಿನ್ ಮಾಡಿ.

ಇಷ್ಟು ಮಾಡಿದರೆ ನಿಮ್ಮ ಆರ್.ಟಿ.ಸಿ ಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತ. ಈ ಪ್ರಕ್ರಿಯೆ ಉಚಿತ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಪಹಣಿ ಯಲ್ಲಿರುವ ಹೆಸರು ಒಂದೇ ಆಗಿರಬೇಕು. ನಮ್ಮ ಅಕ್ಕಪಕ್ಕದಲ್ಲಿ ಇರುವ ಜಮೀನಿನ ಮಾಹಿತಿ ಪಡೆಯುವುದು ಎಂಬುದು ನಿಖರವಾಗಿ ತಿಳಿದಿಲ್ಲ, ಅದಕ್ಕೆ ಸರ್ಕಾರವು ಈಗ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಏನೆಂದರೆ ಆಧಾರ್ ಕಾರ್ಡ್ ಅನ್ನು ನಿಮ್ಮ ಪಹಣಿ(ಉತಾರ್) ಲಿಂಕ್ ಮಾಡುವುದು. ಒಂದು ವೇಳೆ ನಿಮ್ಮ ಪಹಣಿಗೆ (ಉತಾರಿಗೆ) ಆಧಾರ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಯಾವುದೇ ಮಾಹಿತಿ ನಿಖರವಾಗಿ ತಿಳಿಯುವುದಿಲ್ಲ. ಅದಕ್ಕಾಗಿ ಸರ್ಕಾರವು ರೈತರಿಗೆ ಸಿಗುವ ಸಂಪೂರ್ಣ ಯೋಜನೆ ಹಾಗೂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಈ ಕೆಲಸಕ್ಕೆ ಕೈ ಹಾಕುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಅದೆಷ್ಟೋ ಸಮಸ್ಯೆಗಳಿಂದ ಪಾರಾಗಬಹುದು.

ಪಹಣಿಗೆ ಆಧಾರ್ ಜೊತೆ ಮಾಲೀಕನ ಫೋಟೋ ಕಡ್ಡಾಯ! ಡೈರೆಕ್ಟ ಲಿಂಕ್ ಇಲ್ಲಿದೆ

ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ರೈತರ ಮಾಹಿತಿ ದಾಖಲೆ ಜೊತೆಗೆ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಭೂ ಸಂಬಂಧಿತ ವಂಚನೆ ತಡೆಯುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಕಂದಾಯ ಇಲಾಖೆಯು ‘ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ’ ಆರಂಭಿಸಿದೆ. ಈ ಯೋಜನೆಯ ನಿಯಮಗಳು ಹಾಗೂ ಮಾಹಿತಿಗಾಗಿ ಸಂಪೂರ್ಣವಾಗಿ ಓದಿ.

ಇದುವರೆಗೆ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಅಡಿಯಲ್ಲಿ 15 ಲಕ್ಷ ಆಧಾರ್ ಜೋಡಣೆ ಪೂರ್ಣಗೊಳಿಸಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಎಷ್ಟು ಮಂದಿ ಇದ್ದಾರೆ. ಸರ್ಕಾರದ ಸೌಲಭ್ಯ ಪಡೆಯಲು ಅರ್ಹತೆ ಇರುವವರು ಎಷ್ಟು ಮಂದಿ ಎನ್ನುವ ಮಾಹಿತಿ ಸಂಗ್ರಹಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಸಕ್ರಮದ ಬಗ್ಗೆಯೂ ಇಲ್ಲಿ ಗಮನ ಹರಿಸಿಲಾಗಿದೆ.

ಒಬ್ಬ ರೈತ ಬೇರೆ ಬೇರೆ ಸರ್ವೆ ನಂಬರ್ ಗಳಲ್ಲಿ ಭೂಮಿ ಹೊಂದಿದ್ದರೆ ಆಧಾರ್ ಜೋಡಣೆಯಿಂದ ಎಲ್ಲಾ ಮಾಹಿತಿಗಳು ಒಂದೇ ಕಡೆ ಸಿಗುತ್ತವೆ. ಒಟಿಪಿ ಆಧಾರಿತ ಇ-ಕೆವೈಸಿ, ಕೃಷಿ ಜಮೀನು ಮಾಲೀಕರ ಭಾವಚಿತ್ರವನ್ನು ಹಳ್ಳಿಹಳ್ಳಿಗೂ ತೆರಳಿ ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿಗಳು ಸೆರೆ ಹಿಡಿಯುತ್ತಾರೆ. ಆದ್ದರಿಂದ ಯೋಜನೆಗಳು ಸರಳವಾಗಿ ಅನುಷ್ಠಾನಗೊಳ್ಳುತ್ತವೆ. ಮತ್ತು ಕಾನೂನು ಅಡಿಯಲ್ಲಿ ದಾಖಲೆಗಳು ಸಿಗುತ್ತವೆ.

ಪಹಣಿಯಲ್ಲಿ ಈಗಾಗಲೇ ರಾಜ್ಯ ಸರ್ಕಾರ ನಿಯಮ ಜಾರಿಗೊಳಿಸಿದ ಹಾಗೇ ಆಧಾರ್ ಸಂಖ್ಯೆ ನಮೂದಾಗಿರುತ್ತದೆ. ಈಗ ಪಡೆಯುವ ಫೋಟೋ ಮಾಲೀಕರ ಆಸ್ತಿ ವಿವರಗಳೊಂದಿಗೆ ಸಂಗ್ರಹವಾಗಿರುತ್ತದೆ. ಒಂದೇ ಸರ್ವೇ ನಂಬರ್ ನ ಭೂಮಿಯನ್ನು ಅಣ್ಣಾ, ತಂಗಿಯರು ಹಂಚಿಕೊಂಡಿದ್ದು, ಜಂಟಿ ಖಾತೆ ಹೊಂದಿದ್ದರೆ ಎಷ್ಟು ಜನ ವಾರಸುದಾರರು ಇರುತ್ತಾರೇ ಅಷ್ಟು ಮಂದಿ ಪ್ರತ್ಯೇಕವಾಗಿ ಆಧಾರ್ ಮತ್ತು ಫೋಟೋ ನೀಡುವುದು ಕಡ್ಡಾಯ. ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

ಬರುವ ದಿನಗಳಲ್ಲಿ ಸರ್ಕಾರದಿಂದ ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಡಲಾಗಿದೆ. ನೋಂದಣಿ ಮಾಡುವಾಗ ರೈತರ ಖುದ್ದು ಫೋಟೋ ಕೇಳುತ್ತದೆ. ನಿಧನರಾಗಿದ್ದವರ ಮಾಹಿತಿ ಸಂಗ್ರಹಿಸುವುದಿಲ್ಲ. ಬೇರೆ ಉದ್ದೇಶಕ್ಕೆ ಕೃಷಿ ಭೂಮಿ ಬಳಕೆಯಾಗಿದ್ದಲ್ಲಿ ಅದನ್ನು ಪರಿಗಣಿಸುವುದಿಲ್ಲ. ಕೃಷಿ ಭೂಮಿ ಮಾತ್ರ ಈ ಯೋಜನೆ ಅಡಿ ಪರಿಗಣಿಸಲಾಗುತ್ತದೆ. ಪಹಣಿಯಲ್ಲಿ ಜಮೀನು ಮಾಲೀಕರ ಮಾಹಿತಿ, ಪ್ರದೇಶ, ಮಣ್ಣಿನ ಪ್ರಕಾರ, ಭೂಮಿಯ ಸ್ವರೂಪ, ಬೆಳೆ ಮೊದಲಾದ ಮಾಹಿತಿ ಇರುತ್ತದೆ. ಆಧಾರ್ ಸಂಖ್ಯೆ ಕೂಡ ಇಲ್ಲಿ ನಮೂದಿಸಲಾಗಿರುತ್ತದೆ.

ಪಹಣಿ ತಿದ್ದುಪಡಿಯನ್ನು ಹೇಗೆ ಮಾಡಬೇಕು?

ಅದರ ಪ್ರಕ್ರಿಯೆ ಏನು?

• ಭೂಮಿ ಕೇಂದ್ರದಲ್ಲಿರುವ ಅಧಿಕಾರಿಗಳು ನಿಮ್ಮ ಸದರಿ ದಾಖಲೆಗಳನ್ನು ನಿಮಗೆ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಳುಹಿಸುತ್ತಾರೆ.
• ಗ್ರಾಮ ಲೆಕ್ಕಾಧಿಕಾರಿಗಳು ತಮಗೆ ಬಂದಿರುವ ಅರ್ಜಿಯನ್ನು ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ.
• ದಾಖಲೆಗಳು ತಪ್ಪಾಗಿದ್ದಲ್ಲಿ ಅದನ್ನು ತಿರಸ್ಕರಿಸುವ ಹಕ್ಕನ್ನು ಹೊಂದಿರುತ್ತಾರೆ. ಒಂದು ವೇಳೆ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪಹಣಿ ತಿದ್ದುಪಡಿ ಮಾಡಲು ಭೂಮಿ ಕೇಂದ್ರಕ್ಕೆ ಆದೇಶಿಸುವ ಹಕ್ಕನ್ನು ಹೊಂದಿರುತ್ತಾರೆ.

• ಗ್ರಾಮ ಲೆಕ್ಕಾಧಿಕಾರಿಗಳ ಆದೇಶದ ಮೇಲೆ ಭೂಮಿ ಕೇಂದ್ರದ ಅಧಿಕಾರಿಗಳು ನಿಮ್ಮ ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡುತ್ತಾರೆ. ಸುಮಾರು ದಿನಗಳ ನಂತರ ತಿದ್ದುಪಡಿ ಆಗಿರುವ ಹೊಸ ಪಹಣಿ ನಿಮ್ಮ ಕೈ ಸೇರುತ್ತದೆ.

ಈ ರೀತಿಯಾಗಿ ನೀವು ಪಹಣಿಯಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬಹುದು.

Spread positive news

Leave a Reply

Your email address will not be published. Required fields are marked *