ಪ್ರಿಯ ಓದುಗರೇ ಸರ್ಕಾರವು ಸಾರ್ವಜನಿಕರ ಪರವಾಗಿ ನಿಂತು ಹಾಗೂ ದೇಶದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸರ್ಕಾರ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಹಲವಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅದೇ ರೀತಿ ಸರ್ಕಾರವು ಕೂಡ ಮಹಿಳೆಯರಿಗೆ ಮಹಿಳೆಯರು ಸಹ ಈ ಎಲ್ಲ ಯೋಜನೆಗಳ ಸಂಪೂರ್ಣ ಲಾಭ ಪಡೆಯಲು ಸರ್ಕಾರವು ಕಾರ್ಯಕ್ರಮ ಜಾರಿಗೊಳಿಸಿದೆ. ಯಾವ ಯಾವ ಯೋಜನೆಗಳು ಎಂದು ತಿಳಿಯೋಣ ಬನ್ನಿ.
ಉದ್ಯೋಗಿನಿ ಯೋಜನೆ –
ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
ಉದ್ಯೋಗಿನಿ ಯೋಜನೆಯಡಿಯಲ್ಲಿ ಅರ್ಹ ಮಹಿಳಾ ಉದ್ಯಮಿಗಳಿಗೆ ಉದ್ಯಮ ಸ್ಥಾಪಿಸಲು ಮತ್ತು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಗರಿಷ್ಠ ರೂ. 1,00,000/-ಗಳವರೆಗೆ ಬ್ಯಾಂಕ್ ಗಳ ಮೂಲಕ ಸಾಲ ನೀಡುವ ಕಾರ್ಯಕ್ರಮ ರೂಪಿಸಿದೆ. ಹಣಕಾಸು ಸಂಸ್ಥೆಗಳು ಅಥವಾ ಬ್ಯಾಂಕ್ ಗಳು ಮಂಜೂರು ಮಾಡುವ ಸಾಲದ ಮೊತ್ತಕ್ಕೆ ನಿಗಮದಿಂದ ಸಹಾಯಧನ ಮಂಜೂರು ಮಾಡಲು ಅವಕಾಶವಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು –
* ಅರ್ಜಿದಾರರು ಮಹಿಳೆಯಾಗಿರಬೇಕು.
* ಸಾಮಾನ್ಯ ಮತ್ತು ವಿಶೇಷ ವರ್ಗಗಳಿಗೆ ಸೇರಿದ ಮಹಿಳೆಯರಿಗೆ ಅರ್ಜಿದಾರರ ಕುಟುಂಬದ ಆದಾಯವು ₹ 1,50,000/- ಕ್ಕಿಂತ ಕಡಿಮೆಯಿರಬೇಕು.
* ವಿಧವೆ ಅಥವಾ ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯದ ಮೇಲೆ ಮಿತಿಯಿಲ್ಲ.
* ಎಲ್ಲಾ ವರ್ಗಗಳಿಗೆ ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.
* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
* ಅರ್ಜಿದಾರರು ಯಾವುದೇ ಹಣಕಾಸು ಸಂಸ್ಥೆಯಲ್ಲಿ ಹಿಂದಿನ ಯಾವುದೇ ಸಾಲವನ್ನು ಡೀಫಾಲ್ಟ್ ಮಾಡಬಾರದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ:
ಘಟಕ ವೆಚ್ಚ: ಕನಿಷ್ಟ ರೂ. 1.00 ಲಕ್ಷದಿಂದ ಗರಿಷ್ಠ ರೂ. 3.00 ಲಕ್ಷಗಳು ಸಹಾಯಧನ ಶೇ. 50 ರಷ್ಟು.
ಚೇತನ ಯೋಜನೆ:
ಈ ಯೋಜನೆಯು 2014-15ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ, ಈ ಯೋಜನೆಯಡಿ ಲೈಂಗಿಕ ಕಾರ್ಯಕರ್ತೆಯರು ಅಥವಾ ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರು ತಮ್ಮ ವೃತ್ತಿ ಜೀವನದಿಂದ ಹೊರಬಂದು ಸ್ವಾವಲಂಬಿಗಳಾಗಿ ಇಚ್ಚಿಸುವಂತಹವರಿಗೆ ಪುನರ್ವಸತಿ ಕಲ್ಪಿಸುವ ದೃಷ್ಠಿಯಿಂದ ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆರ್ಥಿಕ ಸ್ವಾವಲಂಬನೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಆಯ್ಕೆ ಆಗುವ ಪ್ರತಿ ಅಭ್ಯರ್ಥಿಗೆ ಇಡಿಪಿ ತರಬೇತಿ ನೀಡಿ ರೂ. 20,000/- ಗಳ ಸಹಾಯಧನವನ್ನು ವಿತರಿಸಲಾಗುವುದು. 2017-18ನೇ ಸಾಲಿನಿಂದ ವೈಯಕ್ತಿಕವಾಗಿ ರೂ. 25,000/-ಗಳ ಸಾಲ ಮತ್ತು ರೂ.25,000/-ಗಳ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. ಸಾಲದ ಮೊತ್ತ ರೂ. 25,000/-ಗಳನ್ನು ಫಲಾನುಭವಿಗಳು 25 ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿಸಬೇಕಿರುತ್ತದೆ.
ಧನಶ್ರೀ ಯೋಜನೆ:
ಈ ಯೋಜನೆಯು 2016-17ನೇ ಸಾಲಿನಿಂದ ಜಾರಿಗೆ ಬಂದಿರುತ್ತದೆ. ಈ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ 18-60 ವಯೋಮಿತಿಯ ಹೆಚ್.ಐ.ವಿ ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಪ್ರೇರೇಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಪ್ರತಿ ಫಲಾನುಭವಿಗೆ ರೂ. 40,000/-ಗಳ ನೇರ ಸಾಲ ಹಾಗೂ ರೂ.10,000/-ಗಳ ಸಹಾಯಧನ ಒಟ್ಟು ರೂ. 50,000/-ಗಳ ಅನುದಾನವನ್ನು ಈ ಯೋಜನೆಯಡಿ ನೀಡಲಾಗುವುದು. ಸಾಲದ ಮೊತ್ತ ರೂ. 40,000/-ಗಳನ್ನು ಫಲಾನುಭವಿಗಳು 36 ಕಂತುಗಳಲ್ಲಿ ಶೇಕಡ 4ರ ಬಡ್ಡಿಯೊಂದಿಗೆ ನಿಗಮಕ್ಕೆ ಮರುಪಾವತಿಸಬೇಕಿರುತ್ತದೆ. 2017-18ನೇ ಸಾಲಿನಿಂದ ವೈಯಕ್ತಿಕವಾಗಿ ರೂ. 25,000/-ಗಳ ಸಾಲ ಮತ್ತು ರೂ.25,000/-ಗಳ ಪ್ರೋತ್ಸಾಹಧನವನ್ನು ವಿತರಿಸಲಾಗುವುದು. ಸಾಲದ ಮೊತ್ತ ರೂ. 25,000/-ಗಳನ್ನು ಫಲಾನುಭವಿಗಳು 25 ಕಂತುಗಳಲ್ಲಿ ನಿಗಮಕ್ಕೆ ಮರುಪಾವತಿಸಬೇಕಿರುತ್ತದೆ.
ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ರೂ. 30,000/-ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ವಯೋಮಿತಿ 18 ರಿಂದ 60 ಇರುತ್ತದೆ.