ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ ತಂದಿದ್ದೇನೆ. ಬನ್ನಿ ಸ್ವಯಂ ಉದ್ಯೋಗ ಮಾಡಿ ಹೇಗೆ ಹೆಚ್ಚು ಅಭಿವೃದ್ಧಿ ಹೊಂದುವುದು ಎಂದು ಸಂಪೂರ್ಣ ಮಾಹಿತಿ ತಿಳಿಯೋಣ.
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ 20000 ಕುರಿಗಾಹಿ ಸದಸ್ಯರಿಗೆ 20+1 ಕುರಿ / ಮೇಕೆ ಘಟಕಗಳನ್ನು ರೂ.1.75.000/- ಗಳ ವೆಚ್ಚದಲ್ಲಿ ಒದಗಿಸುವುದರ ಮೂಲಕ ಆರ್ಥಿಕವಾಗಿ ರಾಜ್ಯದಲ್ಲಿನ ಕುರಿಗಾಹಿಗಳನ್ನು ಸದೃಢಗೊಳಿಸುವುದು ಮತ್ತು ರಾಜ್ಯದಲ್ಲಿ ಸಮಗ್ರವಾಗಿ ಕುರಿ / ಮೇಕೆ ಅಭಿವೃದ್ಧಿಗೊಳಿಸುವ ಯೋಜನೆಯಾಗಿದೆ. ಸದರಿ ಯೋಜನೆಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳ ರವರುಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವುದು.
ಅದೇ ರೀತಿ ಮುಖ್ಯವಾಗಿ ಹೇಳಬೇಕೆಂದರೆ ಸ್ವಲ್ಪ ಪ್ರಮಾಣದ ಕೃಷಿಯ ತರ ಚಟುವಟಿಕೆಗಳಲ್ಲಿ ಲಾಭ ತುಂಬಾ ಇರುತ್ತದೆ ಅದನ್ನು ರೈತರು
ಯಾವ ರೀತಿಯಾಗಿ ಮಾಡಿಕೊಂಡು ಹೋಗುತ್ತಾರೆ ಮತ್ತು ತಮ್ಮ ಜಮೀನಿನ ಜೊತೆಗೆ ಅದೊಂದು ಖುಷಿಯನ್ನು ಮಾಡಿದರೆ ಸಾಕು ಕೈ ತುಂಬಾ ದಿನನಿತ್ಯ ಆದಾಯ ಬರುವಂತಹ ಅಥವಾ ವಾರಕ್ಕೊಮ್ಮೆ ಕೈ ತುಂಬಾ ಹಣ ಬರುವಂತಹ ಕೆಲವೊಂದು ಕೃಷಿ ಉದ್ಯಮಗಳಿವೆ ಅವುಗಳನ್ನು ಸಹ ನೀವು ಪ್ರಾರಂಭಿಸಿಕೊಂಡು ನಿಮ್ಮ ಆದಾಯದ ಜೊತೆಗೆ ಅದು ಕೂಡ ಆದಾಯ ಮಾಡಿಕೊಂಡು ಒಟ್ಟಾರೆ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸುಲಭವಾದ ದಾರಿಗಳಿವೆ.
ರಾಜ್ಯದಲ್ಲಿ ಅಮೃತ ಸ್ವಾಭಿಮಾನ ಕುರಿಗಾಹಿ ಯೋಜನೆ?
ಈ ಯೋಜನೆ ತುಂಬಾ ಫೇಮಸ್ ಯೋಜನೆಯಾಗಿದ್ದು ಕಳೆದ ವರ್ಷದಂತೆ ಈ ವರ್ಷವೂ ಕೂಡ 2024ನೇ ಸಾಲಿನ ಅಮೃತ ಸ್ವಾಭಿಮಾನ ಕುರಿಗಾಗಿ ಯೋಜನೆಗೆ ಅರ್ಜಿಯನ್ನು ಕರೆಯಲಾಗಿದೆ ಅರ್ಹರು ಅರ್ಜಿಯನ್ನು ಸಲ್ಲಿಸಬಹುದು, ಮೊಟ್ಟಮೊದಲಿಗೆ ಇದನ್ನು ಅರ್ಜಿಯನ್ನು ಸಲ್ಲಿಸಬೇಕಾದರೆ ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮಕ್ಕೆ ನೀವು ಭೇಟಿ ನೀಡಬೇಕು ಮತ್ತು ಸದಸ್ಯತ್ವವನ್ನು ಪಡೆದಿರಬೇಕು ಯಾರು ಸದಸ್ಯರು ಇರುತ್ತಾರೆ ಪ್ರತಿ ಸದಸ್ಯರಿಗೂ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.
ಯಾವ ಸಂಸ್ಥೆಯಿಂದ ಎಷ್ಟು ಹಣ?
* NCDC ವತಿಯಿಂದ 5೦% ಸಬ್ಸಿಡಿಯಲ್ಲಿ 87500 ರೂ ದೊರೆಯುತ್ತದೆ.
* ರಾಜ್ಯ ಸರ್ಕಾರದ ಕಡೆಯಿಂದ 25% ಸಬ್ಸಿಡಿಯಲ್ಲಿ 43570 ರೂ ದೊರೆಯುತ್ತದೆ.
* ಬ್ಯಾಂಕ್ ಸಾಲ 25% ಸಬ್ಸಿಡಿಯಲ್ಲಿ 43570 ರೂ ದೊರೆಯುತ್ತದೆ.
ಈ ಯೋಜನೆಯ ಲಾಭ ಪಡೆಯಲು ಇರಬೇಕಾದ ಅರ್ಹತೆಗಳು –
* ರಾಜ್ಯದ ನಿವಾಸಿಯಾಗಿರಬೇಕು.
* ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯಲ್ಲಿ ನೋಂದಣಿ ಯಾಗಿರಬೇಕು.
* ಸಂಘವು, ತನ್ನ ಸಭೆಗಳನ್ನು ನಿರಂತರವಾಗಿ ನಡೆಸಿರಬೇಕು. ಹಾಗೂ ವಾರ್ಷಿಕ ಸಾಮಾನ್ಯ ಸಭೆ (AGM) ಹಾಗೂ ಚುನಾವಣಾ ಬೈಲಾ ಹಾಗೂ ಕಾಯ್ದೆಗನುಗುಣವಾಗಿ ನಡೆಸಿರತಕ್ಕದ್ದು. ಸಂಘದ ಇತ್ತೀಚಿನ ಮೂರು ವರ್ಷಗಳ ಲೆಕ್ಕ ಪರಿಶೋಧನೆ ಆಗಿರಬೇಕು ಹಾಗೂ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಸಹಕಾರ ಇಲಾಖೆ ದೃಢೀಕರಣ ಹೊಂದಿರಬೇಕು.
* ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದೊಂದಿಗೆ ಸಂಯೋಜನೆಗೊಂಡಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ ಕುರಿಗಾಹಿ ಸದಸ್ಯರಿಗೆ ಮಾತ್ರ ಅವಕಾಶ.
* ಕರ್ನಾಟಕ ಸಹಕಾರ ಕುರಿ ಮತ್ತು ಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಳಗಳ ಜೊತೆಗೆ ಷೇರುದಾರರಾಗಿ ನೋಂದಣಿಯಾಗಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ ಕುರಿಗಾಹಿ ಸದಸ್ಯರಿಗೆ ಮಾತ್ರ.
* ಸಂಘವು ತನ್ನ ಎಲ್ಲಾ ಸದಸ್ಯರ ಹಾಗೂ ಅವರು ಹೊಂದಿರುವ ಕುರಿ / ಮೇಕೆಗಳ ಕುರಿತಂತೆ ಎಲ್ಲಾ ವಿವರಗಳನ್ನು ಇಲಾಖೆಯು ಒದಗಿಸುವ ನಿಗದಿತ ನಮೂನೆಯಲ್ಲಿ ನೀಡತಕ್ಕದ್ದು.
* ಸದರಿ ಕಾರ್ಯಕ್ರಮದಲ್ಲಿ ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ (ಶೇ.33.3), ವಿಶೇಷ ಚೇತನರಿಗೆ (ಶೇ.3) ಆದ್ಯತೆ ನೀಡಲಾಗುವುದು.
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು (ಪ್ರಮಾಣ ಪತ್ರದಲ್ಲಿ ಆರ್ ಡಿ ನಂ: ಇರಬೇಕು)
* ಅರ್ಜಿದಾರರು ಕಡ್ಡಾಯವಾಗಿ FRUITS ತಂತ್ರಾಂಶದಲ್ಲಿ ನೋಂದಾಯಿಸಿರಬೇಕು.
ಈ ಯೋಜನೆಯ (20+1) ಕುರಿ / ಮೇಕೆ ಘಟಕ ವೆಚ್ಚದ ವಿವರಗಳು:-
* 20 ಹೆಣ್ಣು ಕುರಿ/ಮೇಕೆಗಳಿಗೆ (ಪ್ರತಿ ಹೆಣ್ಣು ಕುರಿ/ಮೇಕೆಗೆ-ರೂ.7,500) ರೂ.1.50,000 (ಕನಿಷ್ಟ 9 ತಿಂಗಳಿಂದ 18 ತಿಂಗಳ ವಯಸ್ಸು)
2. ಒಂದು ಸುಧಾರಿತ ತಳಿ ಬಗರು / ಹೋತಕ್ಕೆ (ಕನಿಷ್ಟ 18 ತಿಂಗಳ ವಯಸ್ಸು)
3. 50 / 2. ( ) (2.75% of animal cost GST) ಗರಿಷ್ಟ ಮೊತ್ತದಲ್ಲಿ ನೀಡಲಾಗುವುದು.