ಪ್ರೀಯ ಕಾರ್ಮಿಕರೇ ಸರ್ಕಾರವು ರೈತ ಕಾರ್ಮಿಕರಿಗೆ ಮತ್ತೋಂದು ಸಹಾಯ ಮಾಡಲು ಮುಂದಾಗಿದ್ದು ಕಾರ್ಮಿಕರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಈಗಾಗಲೇ ಹಲವಾರು ಕಾರ್ಮಿಕರು ಪಿಂಚಣಿ ಯೋಜನೆ ಪಡೆಯಲು ಅರ್ಹರಾಗಿದ್ದು, ಅದರಲ್ಲಿ ಸ್ವಲ್ಪ ಬದಲಾವಣೆ ಮಾಡಲು ಸರ್ಕಾರವು ನಿರ್ಧರಿಸಿದೆ. ಮುಖ್ಯವಾಗಿ ಹೇಳಬೇಕೆಂದರೆ ಪಿಂಚಣಿ (ತಿದ್ದುಪಡಿ) ಯೋಜನೆ -2014 ಅನ್ನು ಶುಕ್ರವಾರ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಅದರಲ್ಲಿ ವಿಶೇಷವಾಗಿ ಈ ಯೋಜನೆಗೆ ಸೇರಲು ಗರಿಷ್ಠ 15,000 ರೂ. ಮಾಸಿಕ ವೇತನದ ಮಿತಿಯನ್ನು ರದ್ದು ಮಾಡಿದೆ. ಮಾಸಿಕ ಪಿಂಚಣಿ ಯೋಜನೆ ಪಡೆಯಲು ಮಾಸಿಕ ಗರಿಷ್ಠ ವೇತನಕ್ಕೆ ನಿರ್ಭಂಧನೆ ಹಾಕಿದ್ದು ಪಿಂಚಣಿ ಪಡೆಯಲು ಇರಬೇಕಾದ ಅರ್ಹತೆಗಳು ಜೋಡಣೆ ಮಾಡಲಾಗಿದೆ.
ಮುಖ್ಯವಾಗಿ ಹೇಳಬೇಕೆಂದರೆ ಈ ಪಿಂಚಣಿ ಯೋಜನೆಯ ಕೆಲವು ನಿಬಂಧನೆಗಳನ್ನು ಸಡಿಲಿಸಿದ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ, ಆ ನಿಬಂಧನೆಗಳು ಯಾವುವು ಎಂದು ನೋಡೋಣ. ಈ ಯೋಜನೆಗೆ ಅರ್ಹರಾದ ER ನೌಕರರು ಗಡುವಿನೊಳಗೆ ಸೇರ್ಪಡೆ ಆಗಿರದಿದ್ದರೆ, ಅಂತಹವರಿಗೆ ಆರು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಬೇಕು ಎಂದು ಸೂಚಿಸಿದೆ. ಪಿಂಚಣಿಗೆ ವೇತನ ಮಿತಿ ರದು ಕಾರ್ಮಿಕರ ಪಿಂಚಣಿ ತಿದ್ದುಪಡಿ ಯೋಜನೆಯನ್ನು ರದ್ದು ಪಡಿಸಿದ ಕೇರಳ, ರಾಜಸ್ಥಾನ ಮತ್ತು ದೆಹಲಿ ಹೈಕೋರ್ಟ್‌ಗಳ ತೀರ್ಪನ್ನು ಪ್ರಶ್ನಿಸಿ ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮತ್ತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಹತ್ತಿರ ಹೋಗಿ ವಿಚಾರಣೆ ವ್ಯಕ್ತಪಡಿಸಿದರು.
ಅದೇ ರೀತಿ ಈ ಯೋಜನೆಯನ್ನು 2014 ರ ಪಿಂಚಣಿ ಯೋಜನೆಗೆ ಅರ್ಹರಾಗಬೇಕಾದರೆ ಗರಿಷ್ಠ 15,000 ರೂ. ಮಾಹೆಯಾನ ಮೂಲವೇತನ ಮತ್ತು ತುಟ್ಟಿಭತ್ಯೆ ಸಂಬಳ ಇರಬೇಕು ಎಂದು ತಿದ್ದುಪಡಿ ಮಾಡಲಾಗಿತ್ತು 15,000 ರೂ.ಗಿಂತ ಹೆಚ್ಚಿನ ವೇತನದ ನೌಕರರು ಶೇ .1.16 ರಷ್ಟು ಹೆಚ್ಚುವರಿ ಕಂತನ್ನು ಪಿಂಚಣಿ ಯೋಜನೆಗೆ ನೀಡಬೇಕು ಎಂಬ ಷರತ್ತನ್ನು ಪೀಠ ಅಮಾನ್ಯಗೊಳಿಸಿದೆ. ಈ ರೀತಿಯ ಷರತ್ತು ಅಧಿಕಾರಕ್ಕೆ ಹೊರತಾದ ಕ್ರಮ ಎಂದು ಅಭಿಪ್ರಾಯಪಟ್ಟಿದೆ. ಆದರೆ , ನಿಧಿ ವ್ಯುತ್ಪತ್ತಿಗಾಗಿ ಈ ಅದೇಶವು ಆರು ತಿಂಗಳು ಅಮಾನತಿನಲ್ಲಿ ಇರಲಿದ್ದು , ನಂತರ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಈ ಯೋಜನೆಯ ಸದುಪಯೋಗ ಪಡೆಯಲು ಕಾರ್ಮಿಕರ ಮಾಸಿಕ ವೇತನ 15000ಗೆ ಸೀಮಿತ ಇದ್ದ ನಿಯಮವನ್ನು ಸುಪ್ರೀಂ ಕೋರ್ಟ್ ಅಮಾನ್ಯಗೊಳಿಸಿ ಕಾರ್ಮಿಕರ ಪರವಾಗಿ ನಿಂತು ಕೆಲಸ ಮಾಡುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಉತ್ತಮ ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ. ಸರ್ಕಾರವು ರೈತರ ಹಿತ ಕಾಪಾಡಲು ಸಹಾಯ ಮಾಡಲು ಮುಂದಾಗಿದ್ದು ಕಾರ್ಮಿಕರ ಪರವಾಗಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದೆ.