ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳಿಗೆ ಚಾಲನೆ ಕೂಡಲೇ ಯಾವೆಲ್ಲಾ ಯೋಜನೆ ಎಂದು ನೋಡಿ ಅರ್ಜಿ ಸಲ್ಲಿಸಿ.

ರೈತ‌ ಮಿತ್ರರೇ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ರೈತರ ಮನೆ ಬಾಗಿಲಿಗೆ ತಲುಪುವ ನಿಟ್ಟಿನಲ್ಲಿ ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ. ಅದೇ ರೀತಿ ರೈತರು ಸರ್ಕಾರರ ಯೋಜನೆ ಪಡೆದುಕೊಳ್ಳಲು ಕೆಲವು ನಿಯಮಗಳನ್ನು ಸರ್ಕಾರವು ರೂಪಿಸಿದೆ. ಸರ್ಕಾರವು ಕೃಷಿ ಹಾಗೂ ಹಲವಾರು ಯೋಜನೆಗಳನ್ನು ರೂಪಿಸಿದ್ದು ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರ ಸಂಘಗಳ, ಹಾಗೂ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಅದೇ‌ ರೀತಿ ರೈತರು ಯಾವುದೇ ಸರ್ಕಾರದ ಸೌಲಭ್ಯ ಅಥವಾ ಸರ್ಕಾರದ ಕಡೆಯಿಂದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಮುಖ್ಯವಾಗಿ ದಾಖಲೆಗಳ ಅವಶ್ಯಕತೆ ಇದೆ. ಹಾಗೂ ರೈತರು ಕೃಷಿಯಲ್ಲಿ ಉಪಕರಣಗಳ ಸಬ್ಸಿಡಿ ಪಡೆಯಲು ಈಗ ಆಧಾರ್ ಕಾರ್ಡ್ ಹಾಗೂ ಫ್ರುಟ್ಸ್ ಐಡಿ ಬಗ್ಗೆ ತಿಳಿದಿರಬೇಕು.

ಅದೇ ರೀತಿ ಈಗ ರಾಜ್ಯದಲ್ಲಿ ಹವಾಮಾನ, ಮಳೆ ಮತ್ತು ಗಾಳಿ ಸಕಾಲಕ್ಕೆ ದೊರಕದೇ ಇರುವುದರಿಂದ ಬರಗಾಲದಂತ ಪರಿಸ್ಥಿತಿ ಎದುರಿಸುತ್ತಿರುವ ರೈತರು ಈಗ ಹಲವಾರು ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ. ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಗೆ ಚಾಲನೆ ಹಾಗೂ ಕೃಷಿ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ, ತಂತ್ರಜ್ಞಾನ ಬೆಳದಂತೆ ಯಾಂತ್ರಿಕ ಕೃಷಿ ಅಧಿಕವಾಗಿದ್ದು, ದಿನನಿತ್ಯ ಓಡಾಡಲು ವಾಹನಗಳು ಕೂಡ ಅಧಿಕವಾಗಿರುವುದರಿಂದ ನಮ್ಮ ನಿಸರ್ಗ ಮತ್ತು ಕೃಷಿಯ ಮೇಲೆ ದುಷ್ಪರಿಣಾಮ ಬೀರಿದೆ. ಹಾಗೆಯೇ ಕೃಷಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯಿಂದ ನಮ್ಮೆಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲಾ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ರೈತರ ಭೂಮಿಗಳು ಮತ್ತು ಫಲವತ್ತಾದ ಮಣ್ಣು ಹಾಳಾಗದಂತೆ ಸಂರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಅದೇ ರೀತಿ ಈಗಿನ ಸದ್ಯದ ಕೃಷಿಯಲ್ಲಿ ಅತಿಯಾದ ನೀರಿನ ಬಳಕೆಯಿಂದ ಸವಳು ಜವಳು ಸಮಸ್ಯೆ ಕಾಡುತ್ತದೆ. ಅದೇ ರೀತಿ ಭೂಮಿಯಲ್ಲಿ ನಿರಂತರ ನೀರು ನಿಲ್ಲುವುದರಿಂದ ಮಣ್ಣಿನ ಗುಣಮಟ್ಟ ಪೂರ್ತಿ ಹಾಳಾಗುತ್ತಿದೆ. ಅದಕ್ಕಾಗಿ ರೈತರು ಈಗ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಯೋಜನೆ ಅಳವಡಿಸಿಕೊಳ್ಳುವುದರಿಂದ ಉತ್ತಮ ಫಲವತ್ತತೆ ಕಾಯ್ದುಕೊಳ್ಳುವುದರ ಜೊತೆಗೆ ಹೆಚ್ಚು ಇಳುವರಿ ಹೊಂದಲು ಸಾಧ್ಯವಿದೆ. ಮಳೆ ನೀರಿನಿಂದ ಮಣ್ಣು ಕೊಚ್ಚಿ ಹೋಗದಂತೆ ರೈತರು ಅಲ್ಲಲ್ಲಿ ಬದುಗಳನ್ನು ನಿರ್ಮಿಸಿಕೊಳ್ಳುವುದು ಬಹಳ ಅವಶ್ಯಕ. ಒಣಬೇಸಾಯಜಮೀನುಗಳಲ್ಲಿ ಕೃಷಿಹೊಂಡಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಶಾಸಕ ಲಕ್ಷ್ಮಣ ಸವದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭವಿಷ್ಯದ ದಿನಗಳಲ್ಲಿ ಸಾವಯುವ ಕೃಷಿಗೆ ಬಂಗಾರದ ಬೆಲೆ ಬರಲಿದೆ. ವಿದೇಶಗಳಲ್ಲಿ ಸಾವಯುವ ಕೃಷಿಗೆ ಮತ್ತು ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗುತ್ತಿರುವುದರಿಂದ ನಮ್ಮ ರೈತರು ಕೂಡ ಸಾವಯುವ ಕೃಷಿಯತ್ತ ಒಲವು ತರುವುದು ಇಂದಿನ ಅಗತ್ಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಸದಸ್ಯರಿಗೆ *5 ಲಕ್ಷ ಪರಿಹಾರ ಧನ ದೃಢೀಕರಣ ಪತ್ರ ವಿತರಿಸಲಾಯಿತು. ಗ್ರಾಮೀಣ ಡಿಜಿಟಲ್ ನಮ್ಮ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಳ್ಳದಿದ್ದರೇ ನಮ್ಮ ಮಕ್ಕಳಿಗೆ ಮುಂದಿನ ಜನಾಂಗಕ್ಕೆ ಭವಿಷ್ಯವಿಲ್ಲ. ಆದ್ದರಿಂದ ರೈತರು ಜಾಗೃತರಾಗಬೇಕು. ಸುಧಾರಿತ ಕೃಷಿಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು.

ಗ್ರಂಥಾಲಯಗಳಿಗೆ ಸ್ಮಾರ್ಟ್ ಬೋರ್ಡ್ ಮತ್ತು ಟ್ಯಾಬ್‌ಗಳನ್ನು ವಿತರಿಸಲಾಯಿತು. ವಿಶ್ವ ಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ಮಂಜೂರಾದ ಹನಿ ನೀರಾವರಿ ಸಲಕರಣೆಗಳನ್ನು ರೈತರಿಗೆ ವಿತರಿಸಲಾಯಿತು. ಶಿವನಗೌಡ ಪಾಟೀಲ, ಜಿಲ್ಲಾ ಜಂಟಿ ನಿರ್ದೇಶಕರು.

ಸರ್ಕಾರ ರೈತರ ಕೃಷಿ ಭೂಮಿ ಮತ್ತು ಮಣ್ಣಿನ ಸಂರಕ್ಷಣೆ ಮಾಡುವ ಉದ್ದೇಶದಿಂದ ವಿಶ್ವ ಬ್ಯಾಂಕ್ ರಿವಾರ್ಡ್ ಯೋಜನೆ ಅಡಿ ಪ್ರಾಯೋಗಿಕ ಹಂತವಾಗಿ ತಾಲೂಕಿನ ತೇಲಸಂಗ, ಹಾಲಳ್ಳಿ, ಅರಟಾಳ ಮತ್ತು ಬಾಡಗಿ ಗ್ರಾಮಗಳ 4800 ಹೆಕ್ಟೇ‌ರ್ ಕೃಷಿ ಭೂಮಿಯನ್ನು ಆಯ್ಕೆ ಮಾಡಿಕೊಂಡು ಸುಮಾರು ₹9 ಕೋಟಿ ವೆಚ್ಚದಲ್ಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯನ್ನು ಅಳವಡಿಸಲಾಗುತ್ತಿದೆ. ನಂತರದ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ಈ ಯೋಜನೆ ಒದಗಿಸಲಾಗುವುದು.

 

ರೈತರಿಗೆ ಫ್ರುಟ್ ಐಡಿ ಏಕೆ ಬೇಕು ಎಂಬುದನ್ನು ತಿಳಿಯೋಣ. ಮುಖ್ಯವಾಗಿ ಫ್ರುಟ್ ಐಡಿ ಇದ್ದರೆ ರೈತರು ತಮ್ಮ ಜಮೀನಿನ ಸಂಪೂರ್ಣ ಮಾಹಿತಿ ಹಾಗೂ ರೈತರು ಎಷ್ಟು ಸರ್ಕಾರದ ಯೋಜನೆ ಹಾಗೂ ಸರ್ಕಾರದ ಕಡೆಯಿಂದ ಯಾವ ಯಾವ ಬೀಜ, ಗೊಬ್ಬರ, ಹೊಸ ಹೊಸ ಯೋಜನೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದನ್ನು ಸುಲಭವಾಗಿ ನೋಡಬಹುದು. ಅದೇ ರೀತಿ ಫ್ರುಟ್ ಐಡಿಯಿಂದ ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸರ್ಕಾರವು ಸ್ಕಾಲರ್ಶಿಪ್ ಅನ್ನು ಅಂದರೆ ರೈತ ವಿದ್ಯಾನಿಧಿ ಹಣವನ್ನು ರೈತರ ಮಕ್ಕಳಿಗೆ ಅವರ ಫ್ರುಟ್ ಐಡಿ ಮೂಲಕ ಹಾಕುತ್ತಾರೆ.

 

ಫ್ರುಟ್ಸ ಐಡಿ/FID ಪಡೆಯಲು ಬೇಕಾಗುವ ದಾಖಲೆಗಳು –

• ಅರ್ಜಿ ಫಾರ್ಮ್

• ಆಧಾರ್ ಕಾರ್ಡ್

• ಉತಾರ (ಪಹಣಿ)

• ಇತ್ತೀಚೆಗೆ ತೆಗೆದುಕೊಂಡ ಭಾವಚಿತ್ರ

• ಬ್ಯಾಂಕ್ ಪಾಸ್ ಬುಕ್

Spread positive news

Leave a Reply

Your email address will not be published. Required fields are marked *