ಏನಿದು ಕೃಷಿ ಭಾಗ್ಯ ಯೋಜನೆ? ಯಾವ ಯಾವ ಲಾಭ ರೈತರಿಗೆ ದೊರೆಯಲಿದೆ ಎಂದು ನೋಡೋಣ ಬನ್ನಿ.
ಪ್ರೀಯ ರೈತರೇ ನಮ್ಮ ಕೃಷಿಜಾಗೃತಿ ಎಂಬ ಪುಟವೂ ರೈತರ ಸಲುವಾಗಿ ಹಾಗೂ ರೈತರಿಗೆ ತಾಂತ್ರಿಕ ಕೃಷಿ ಬಳಕೆಯಾಗಲಿ ಎಂಬ ದೃಷ್ಟಿಯಿಂದ ಈ ಪೇಜ್ ಅನ್ನು ತೆಗೆದಿದ್ದು ಇವತ್ತು ಇಲ್ಲಿ ಸರ್ಕಾರದ ಯೋಜನೆ ಬಗ್ಗೆ ತಿಳಿಯೋಣ ಬನ್ನಿ. ಹೌದು ಈಗಾಗಲೇ ಸರ್ಕಾರವು ರೈತರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಈಗ ಕೃಷಿ ಭಾಗ್ಯ ಯೋಜನೆ ಬಗ್ಗೆ ತಿಳಿಯೋಣ. ರೈತರು ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.
ಕೃಷಿ ಹೊಂಡಗಳು, ಇತರೆ ಕಾಮಗಾರಿಯನ್ನು ಅನುಷ್ಠಾನ ಮಾಡಿಕೊಳ್ಳಲು ಅರ್ಜಿ ಆಹ್ವಾನ ಕರೆಯಲಾಗಿದೆ. ಗೋಕಾಕ, ಮೂಡಲಗಿ ತಾಲೂಕಿನ ರೈತರಿಂದ ಅರ್ಜಿ ಕರೆದಿದ್ದು ಕೃಷಿಭಾಗ್ಯ ಯೋಜನೆಯು ಮರು ಜಾರಿಗೊಂಡಿದ್ದು ಗೋಕಾಕ ಮತ್ತು ಮೂಡಲಗಿ ತಾಲೂಕಿನ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತ ಬಾಂಧವರು ತಮ್ಮ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಈಗಾಗಲೇ 2014-15 ರಿಂದ 2019-20 ರವರೆಗೆ ಕೃಷಿ ಭಾಗ್ಯ ಯೋಜನೆಯಲ್ಲಿ ಸವಲತ್ತು ಪಡೆದಿರುವ ರೈತರು ಈಗ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಹಾಗೆಯೇ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆ ಹಾಗೂ ಗ್ರಾಮ ಪಂಚಾಯತಿಯಿಂದ ಯಾವುದೇ ಯೋಜನೆಯಲ್ಲಿ ಕೃಷಿ ಹೊಂಡ ಸೌಲಭ್ಯ ಪಡೆದಿರುವ ರೈತರು ಈಗ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿ ನಮೂನೆಯು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ಕೂಡಲೇ ಉಪಯೋಗ ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು –
* ತಮ್ಮ ಖಾತೆ, ಕಂಬೈನ್ಸ್ ಉತಾರ, ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಝರಾಕ್ಸ್ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಜಾತಿ ಪ್ರಮಾಣ ಪತ್ರ, ಮುಚ್ಚಳಿಕೆ ಪತ್ರ ಹಾಗೂ ತೋಟಗಾರಿಕೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಪಡೆದ ಎನ್‌ಒಸಿ ಪತ್ರವನ್ನು ಲಗತ್ತಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ –
ಡಿ.30ರೊಳಗೆ ಅರ್ಜಿ ಸಲ್ಲಿಸಲು ಸಹಾಯಕ ಕೃಷಿ ನಿರ್ದೇಶಕರು ಗೋಕಾಕ/ಮೂಡಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.