ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ರದ್ದು. ಏಕೆ ಎಂದು ಇಲ್ಲಿದೆ ನೋಡಿ.

ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ರದ್ದು ಮಾಡಲಾಗಿದೆ ಏಕೆ ಎಂದು ಕೂಡಲೇ ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ರೀಯ ಸಾರ್ವಜನಿಕರೇ ನಿಮಗೊಂದು ಮಹತ್ವದ ಸುದ್ದಿ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ. ಇವತ್ತು ರಾಜ್ಯ ಸರ್ಕಾರ ಸಾರ್ವಜನಿಕರ ಪರವಾಗಿ ನಿಂತು ಕೆಲಸ ಮಾಡುತ್ತಿದೆ ಹಾಗೂ ಈಗ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಆ ಯೋಜನೆ ಅಡಿಯಲ್ಲಿ ಸಾರ್ವಜನಿಕರಿಗೆ 10 ಕೆಜಿ ಅಕ್ಕಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಅದೇ ರೀತಿ ಅಕ್ಕಿ ಪೂರೈಕೆ ಕಡಿಮೆ ಇರುವುದರಿಂದ ಅಕ್ಕಿಯ ಬದಲು ಸರ್ಕಾರವು ಹಣ ನೀಡಲು ಮುಂದಾಗಿದೆ. ಅದೇ ರೀತಿ ನಿರಂತರವಾಗಿ ರೇಷನ್ ಪಡೆಯದೇ ಇದ್ದರೆ ಅಂತಹವರಿಗೆ ರೇಷನ್ ಬಂದ್ ಮಾಡುವ ಸಾಧ್ಯತೆ ಬಹಳಷ್ಟು ಇದೆ.

ಅದೇ ರೀತಿ ತಹಸಿಲ್ದಾರ್ ಪ್ರತಿ ಫಲಾನುಭವಿಗಳ ಮನೆಗೆ ಭೇಟಿ ರದ್ದಾದ ರೇಷನ್ ಕಾರ್ಡ್ ಬಗ್ಗೆ ಖುದ್ದು ಪರಿಶೀಲನೆ ಮಾಡಿ ಸತತ 6 ತಿಂಗಳಿಂದ ಯಾರು ರೇಷನ್ ಪಡೆದಿಲ್ಲ ಅಂತವರ ರೇಷನ್ ಒಮ್ಮೆಲೇ ಬಂದ್ ಆಗಿದ್ದರೆ ಅಂತವರು ಸರ್ಕಾರಕ್ಕೆ ಅಂದರೆ ತಹಸಿಲ್ದಾರ್ ಆಫಿಸಿಗೆ ರೇಷನ್ ಮರುಪರಿಶೀಲನೆ ನಡೆಸುವಂತೆ ಅರ್ಜಿ ಸಲ್ಲಿಸಬಹುದು. ಅದೇ ಅಂತಹ ಸಂದರ್ಭದಲ್ಲಿ ತಾಲೂಕಿನ ತಹಸಿಲ್ದಾರ್ ಆಫಿಸರ್ ಖುದ್ದು ಅವರ ಮನೆಗೆ ಭೇಟಿ ನೀಡಿ ರೇಷನ್ ಕಾರ್ಡ್ ಪರೀಶೀಲನೆ ನಡೆಸಿ ಅದರ ಬಗ್ಗೆ ಮಾಹಿತಿ ತಿಳಿದು ಸಮಸ್ಯೆ ನಿವಾರಣೆ ಮಾಡಬೇಕು.

 

ಅರ್ಜಿ ಏಕೆ ರದ್ದಾಗಿದೆ? 

• ಅತ್ತೆ, ಸೊಸೆ ಫಲಾನುಭವಿಗಳಾಗಲು ಫ್ಯಾನ್‌, ಡಿಲೀಟ್‌ಗೆ ಅರ್ಜಿ.

• ಕುಟುಂಬ ಸದಸ್ಯರು ಬೇರ್ಪಡೆ ತೋರಿಸಿರೋದು.

• ಸರ್ಕಾರಿ ಕೆಲಸದಲ್ಲಿದ್ದವರು ತಿದ್ದುಪಡಿಗೆ ಅರ್ಜಿ.

• ನಕಲಿ ವಿಳಾಸ ಬದಲಾವಣೆ ಅರ್ಜಿಗೆ ಸಲ್ಲಿಕೆ.

• ತಿದ್ದುಪಡಿ ಅರ್ಜಿ ಹಾಕಿದರಲ್ಲಿ ಒಂದು ಲಕ್ಷದಷ್ಟು ಅರ್ಜಿ ರಿಜೆಕ್ಟ್.

 

ರೇಷನ್ ಕಾರ್ಡ್ ಆನ್ಲೈನ್ ನಲ್ಲಿ ಹೇಗೆ ಪಡೆಯಬೇಕು?

ಮೊದಲಿಗೆ ಹೊಸ ಪಡಿತರ ಚೀಟಿಯನ್ನು ಆನ್ಲೈನ್ ನಲ್ಲಿ ಪಡೆಯಲು ನೀವು ಈ ಕೆಳಗಿನ ahara.kar.nic.in ಮೂಲಕ ಪಡೆಯಬಹುದಾಗಿದೆ.

• ಮೊದಲು ಈ ಮೇಲಿನ ಲಿಂಕ್‌ ಮೇಲೆ ಕ್ಲಿಕ್ ಮಾಡಿ ನಿಮಗೆ ಒಂದು ಹೊಸ ಮುಖಪುಟ ಕಂಡು ಬರುತ್ತದೆ ಅಲ್ಲಿ ಈ ಸೇವೆ ಎಂಬ ಮೆನುವು ಕಾಣಿಸುತ್ತದೆ.

• ನಂತರ ಅಲ್ಲಿ ಹೊಸ ರೇಷನ್ ಕಾರ್ಡ್ ಎಂಬ option ಬರುತ್ತದೆ,

• ಅದಾದ ನಂತರ ಹೊಸ ಕಾರ್ಡ್ ಪಡೆಯಲು ಅರ್ಜಿಗಾಗಿ ಕನ್ನಡ ಅಥವಾ ಇಂಗ್ಲೀಷನ್ನು ಆಯ್ಕೆ ಮಾಡಿಕೊಳ್ಳಬೇಕು.

• ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ಆಗ ಅಲ್ಲಿ ಆಧಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ನಂಬರ್ OTP ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ಅಲ್ಲಿ ನೀಡುವ ಕ್ಯಾಪ್ಟರ್ ಸರಿಯಾಗಿ ಟೈಪ ಮಾಡಿ Go ಮೇಲೆ ಕ್ಲಿಕ್ ಮಾಡಿ ನಂತರ ಹೆಸರು, ಜನನ ದಿನಾಂಕ, ಲಿಂಗ, ಛಾಯಾಚಿತ್ರ ಮೊದಲಾದವುಗಳು ಕಾಣುತ್ತವೆ.

• ನಂತರ ಅಲ್ಲಿ ನೀವು ಹಾಕಿರುವ ಆಧಾರ್ ಮಾಹಿತಿ ಸರಿಯಾಗಿ ಇದ್ದರೆ Add ಒತ್ತಿ , ಅಲ್ಲಿ ಕುಟುಂಬ ಸದಸ್ಯರ ಮಾಹಿತಿ ಹಾಗೂ ಕುಟುಂಬದ ಯಜಮಾನನಿಗೆ ಇರುವ ಸಂಬಂಧಗಳನ್ನು ಅಲ್ಲಿ ನಮೂದಿಸಿದ ನಂತರ ಅಪ್ಲಿಕೇಶನ್ ನಂಬರ್ ಜನರೇಟ್ ಆಗುತ್ತದೆ.

• ನಂತರ ನೀವು 70 ರೂಪಾಯಿ ಪಾವತಿಸಿ ಪಡೆಯಬೇಕು. ಇದು ಪೋಸ್ಟ್ ಮೂಲಕ ನಿಮ್ಮ ಮನೆಗೆ ಬರುತ್ತದೆ.

 

 

 

Spread positive news

Leave a Reply

Your email address will not be published. Required fields are marked *