ಆಧುನಿಕ ಕೃಷಿಯಲ್ಲಿ ಸದ್ದು ಮಾಡುತ್ತಿದೆ ಎರೆಜಲ! ಇಷ್ಟೊಂದು ಲಾಭಾನಾ?

ಎರೆಹುಳು ರೈತರ ಮಿತ್ರ ಎಂದೇ ಪ್ರಸಿದ್ಧಿ. ಎರೆಜಲವು ಎರೆಹುಳುಗಳಿಂದ ತಯಾರಾಗುವ ಬಹುಮುಖ್ಯ ಉತ್ಪನ್ನವಾಗಿದೆ. ಎರೆಹುಳುಗಳ ದೇಹದಿಂದ ತಯಾರಾಗುವ ಎರೆಜಲವು ಅಗತ್ಯ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಹಾರ್ಮೋನುಗಳು, ಕಿಣ್ವಗಳು, ಸೂಕ್ಷ್ಮಜೀವಿ ಪ್ರತಿರೋದಕ ಅಂಶಗಳು, ಬೆಳೆವಣಿಗೆ ನಿಯಂತ್ರಕ ಅಂಶಗಳು (ಆಕ್ಸಿನ್ ಹಾಗೂ ಸೈಟೊಕೈನಿನ್) ಮತ್ತು ಉಪಯುಕ್ತ ಸೂಕ್ಷ್ಮಜೀವಿಗಳನ್ನು ಒಳಗೊಂಡಿದ್ದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಾಗೂ ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಬಾಧೆಯನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ. ಎರೆಹುಳುಗಳ ದೇಹದ ಮೇಲಿನ ರಂಧ್ರಗಳಿಂದ ಬರುವ ಕೊಲೋಮಿಕ್ ದ್ರವವು ಶಿಲೀಂಧ್ರನಾಶಕ, ಅಣುಜೀವಿನಾಶಕ ಮತ್ತು ಕೀಟನಾಶಕ ಅಂಶಗಳನ್ನು ಹೊಂದಿದ್ದು, ರೈತನ ಬೆಳೆಗಳನ್ನು ರೋಗ ಮತ್ತು ಕೀಟಗಳಿಂದ ದೂರವಿಡಲು ಉಪಯುಕ್ತಕಾರಿಯಾಗಿದೆ.

ಎರೆಜಲ ತಯಾರಿಕಾ ವಿಧಾನ

ಸುಮಾರು 100 ಲೀಟರ್ ಬ್ಯಾರಲ್ ತೆಗೆದುಕೊಂಡು, ಅದರ ಕೆಳಭಾಗದಲ್ಲಿ ಒಂದು ನಲ್ಲಿಯನ್ನು ಕೂಡಿಸಬೇಕು. ದೊಡ್ಡ ಬ್ಯಾರಲ್ ಒಳಗೆ 10 ಲೀಟರ್ ಬಕೆಟ್ | ಅನ್ನು ತಲೆಕೆಳಗಾಗಿ ಮಾಡಿ ಇಡಬೇಕು. ಕೂರಿಸಿದ ನಲ್ಲಿಯು ಬ್ಯಾರಲ್ ಮತ್ತು ಬಕೆಟ್ ಎರಡಲ್ಲು ಸೇರುವಂತೆ ಹಾಕುವುದು, ಬ್ಯಾರಲ್ ಕೆಳಭಾಗದಲ್ಲಿ ಸುಮಾರು 25 ರಿಂದ 30 ಸೆಂ. ಮೀ. ವರೆಗೆ ಕಲ್ಲಿನ ಹರಳುಗಳನ್ನು ತುಂಬಿಸಬೇಕು, ಈ ಪದರದ ಮೇಲೆ 25 ಸೆಂ. ಮೀ. ನಷ್ಟು ಮರಳು ಸುರಿಯಬೇಕು. ಮರಳಿನ ಪದರದ ಮೇಲೆ ಉಳಿದ ಭಾಗದ ಶೇ. 60ರಷ್ಟು ಬೆಳೆಯ ನಿರುಪಯುಕ್ತ ವಸ್ತುಗಳನ್ನು (ಬೆಳೆಯ ಶೇಷ) ತುಂಬಿಸಬೇಕು. ನಂತರ ನೀರನ್ನು ಸಿಂಪಡಿಸಬೇಕು. ಈ ಪದರದ ಮೇಲೆ, ಶೇ. 25 ರಷ್ಟು ಭಾಗದಲ್ಲಿ ಸಗಣಿಯನ್ನು ತುಂಬಿಸಬೇಕು. ಸಗಣಿಯ ಮೇಲ್ಬಾಗದಲ್ಲಿ ಸುಮಾರು 1 ರಿಂದ 5 ಕೆ. ಜಿ.ಯಷ್ಟು ಎರೆಹುಳುಗಳನ್ನು ಬಿಡಬೇಕು. ಈ ಪದರದ ಮೇಲೆ ಬೆಳೆಯ ಶೇಷಗಳನ್ನು ತುಂಬಿಸಿ ಪ್ರತಿನಿತ್ಯ 1 ರಿಂದ 5 ಲೀ. ನೀರನ್ನು ಸಿಂಪಡಿಸಬೇಕು. ಬ್ಯಾರಲ್ ಒಳಗಡೆ ಎರೆಹುಳುಗಳು ಒತ್ತಡಕ್ಕೆ ಒಳಗಾಗಿ ಕೊಲೋಮಿಕ್ ದ್ರವವನ್ನು ಹೊರಹಾಕುತ್ತವೆ. ಸಿಂಪಡಿಸಿದ ನೀರು ಈ ದ್ರವದ ಜೊತೆಗೆ ಎರೆಹುಳುವಿನ ಹಿಕ್ಕೆಯ ಮುಖಾಂತರ ಎಲ್ಲಾ ಪದರಗಳ ಮೂಲಕ ಹರಿದು ಕೆಳಭಾಗದಲ್ಲಿ ಕೂರಿಸಿದ ಬಕೆಟ್‌ನಲ್ಲಿ ಶೇಖರಣೆಯಾಗಿ ಎರೆಜಲವಾಗಿ ನಲ್ಲಿಯ ಮುಖಾಂತರ ಹೊರಬರುತ್ತದೆ. ಎರೆಜಲ ಘಟಕ ಸ್ಥಾಪನೆಯಾಗಿನಿಂದ 15 ರಿಂದ 20 ದಿನಗಳ ನಂತರ ಎರೆಜಲವನ್ನು ಪ್ರತಿನಿತ್ಯ 5 ರಿಂದ 10 ಲೀ. ನಷ್ಟು ಪಡೆಯಬಹುದು.

ಮುಂಗಾರು ಬೆಳೆ ಸಮೀಕ್ಷೆ ವಿವರ ನಮೂದಿಸಲು ಈ ಕ್ರಮಗಳನ್ನು ಅನುಸರಿಸಿ

ಎರೆಜಲ ಉಪಯೋಗಿಸುವ ವಿಧಾನ

ಸುಮಾರು 10 ಲೀ. ಎರೆಜಲವನ್ನು 100 ಲೀ. ನೀರಿನಲ್ಲಿ ಬೆರೆಸಿ ಬೆಳೆಗಳ ಮೇಲೆ ಸಿಂಪರಣೆಯಾಗಿ ಅಥವಾ ಗಿಡಗಳ ಬುಡದ ಮಣ್ಣಿನಲ್ಲಿ ಹಾಯಿಸಬಹುದು.

ರೈತರಿಗೆ 10ಸಾವಿರ ರೂ ಜಮೆಯಾಗುವ ಹೊಸ ಯೋಜನೆ: ಸಿಎಂ

ಎರೆಜಲದ ಉಪಯೋಗಗಳು

ಎರೆಜಲವು ಅಗತ್ಯ ಪೋಷಕಾಂಶಗಳು, ಜೀವಸತ್ವಗಳು, ಖನಿಜಗಳು, ಹಾರ್ಮೋನುಗಳು, ಆಕ್ಸಿನ್ ಹಾಗೂ ಸೈಟೊಕೈನಿನ್‌ಗಳನ್ನು ಹೊಂದಿದ್ದು ಸಸ್ಯದ ಬೆಳೆವಣಿಗೆಗೆ ಸಹಕಾರಿಯಾಗಿದೆ.

ಬೆಳೆಗಳಲ್ಲಿ ರೋಗ ಮತ್ತು ಕೀಟ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಗಳನ್ನು ಅಭಿವೃದ್ಧಿಗೊಳಿಸಲು ಸಹಕಾರಿಯಾಗಿದೆ.

ಬೆಳೆ ಸಮೀಕ್ಷೆ ಆಯಪ್ ಕುರಿತು ರೈತರಿಗೆ ಹೊಸ ಅಪ್ಡೇಟ್

ನೀರಾವರಿ ಯೋಜನೆ ಸಬ್ಸಿಡಿಗಾಗಿ ರೈತರಿಂದ ಅರ್ಜಿ ಆಹ್ವಾನ

Spread positive news

Leave a Reply

Your email address will not be published. Required fields are marked *