200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ನೊಂದಣಿ ಆರಂಭ ಯಾವಾಗ? ಹಾಗಾದರೆ ಬನ್ನಿ ಹೇಗೆ ನೊಂದಣಿ ಮಾಡಬೇಕು ಎಂದು ತಿಳಿಯೋಣ.
ಪ್ರೀಯ ರೈತರೇ ನೀವು ನೋಡುತ್ತಿದ್ದಂತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಗ್ಯಾರಂಟಿ ಯೋಜನೆಗಳಿಗೆ ಗ್ರಿನ್ ಸಿಗ್ನಲ್ ನೀಡಿದ್ದು, ಈಗಾಗಲೇ ರಾಜ್ಯದಲ್ಲಿ ಇರುವ ಸಾರ್ವಜನಿಕರಿಗೆ 2೦0 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ನಾಳೆಯಿಂದ ಅಂದರೆ ಜೂನ್ 18 ರಿಂದ ನೊಂದಣಿ ಆರಂಭ ಆಗುತ್ತದೆ.
ಗೃಹ ಜ್ಯೋತಿನೋಂದಣಿ ಆರಂಭ ಯಾವಾಗ?
‘ಗೃಹಜ್ಯೋತಿ’ಯೋಜನೆಯ ನೋಂದಣಿ ಇದೇ ಜೂನ್ 18ರಿಂದ ಆರಂಭವಾಗಲಿದೆ.
ಗೃಹಜ್ಯೋತಿ’ಯೋಜನೆಯ ಅರ್ಜಿ ಸಲ್ಲಿಕೆ ಹೇಗೆ?
ಈ ಯೋಜನೆ ಲಾಭ ಪಡೆಯಲು ಸಾರ್ವಜನಿಕರಿಗೆ ವಿಶೇಷವಾಗಿ ಸೃಜಿಸಲಾಗಿರುವ ಸೇವಾ ಸಿಂಧು ಪೋರ್ಟಲ್‌ನಲ್ಲಿ (https://sevasindhugs.karnataka.gov.in/gruhajyothi) ನೋಂದಾಯಿಸಬೇಕು. ಈ ತಂತ್ರಾಂಶವನ್ನು ಮೊಬೈಲ್ ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್‌ನಲ್ಲಿಯೂ ಬಳಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
ಫಲಾನುಭವಿಗಳು ಆಧಾರ್ ಕಾರ್ಡ್, ವಿದ್ಯುತ್ ಖಾತೆ, RR ಸಂಖ್ಯೆಯ, ಬಾಡಿಗೆ ಮನೆ ಕರಾರು ಪತ್ರ ಹೀಗೆ ಮಾಹಿತಿಯನ್ನು ನೋಂದಣಿ ವೇಳೆ ನೀಡಬೇಕು. ಬೆಂಗಳೂರು ಒನ್, ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಅಥವಾ ಯಾವುದೇ ಎಸ್ಕಾಂಗಳ ಸ್ಥಳೀಯ ಕಚೇರಿಗಳಲ್ಲಿಯೂ ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಎಸ್ಕಾಂಗಳ ಸ್ಥಳೀಯ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ 24×7 ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಬಹುದು ಎಂದು ಇಂಧನ ಇಲಾಖೆ ತಿಳಿಸಿದೆ. ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಗರಿಷ್ಠ 200 ಯೂನಿಟ್‌ವರೆಗಿನ ಬಳಕೆಯ ಮಿತಿಯಲ್ಲಿ, .