ಮರೆತು ಹೋಗಿದ್ರಾ? ಆಧಾರ್‌ ಪ್ಯಾನ್‌ ಲಿಂಕ್‌ ಮಾಡಿಸಲು ಕೆಲವೇ ದಿನಗಳಷ್ಟೇ ಬಾಕಿ!

ಆಧಾರ್‌ ಪ್ಯಾನ್‌ ಲಿಂಕ್‌ ಕಡ್ಡಾಯದ ಗಡುವಿನ ದಿನಾಂಕ ಇದೀಗ ಹತ್ತಿರವಾಗಿದೆ. ನೀವು ನಾವೆಲ್ಲಾ ಮೊದಲಿಗೆ ಆಧಾರ್‌ ಪ್ಯಾನ್‌ ಲಿಂಕ್‌ ಆಗಿದೆಯಾ ಅಂತಾ ಚೆಕ್‌ ಮಾಡಿಕೊಳ್ಳುವುದು ಇದೀಗ ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರ ಆಧಾರ್‌ ಪ್ಯಾನ್‌ ಲಿಂಕ್‌ ಮಾಡಲು ನೀಡಿದ್ದ ಗಡುವು ಮುಗಿಯಲು ಇನ್ನೇನು ಕೆಲವು ದಿನಗಳಷ್ಟೇ ಬಾಕಿಯಿದೆ. ಎಲೆಕ್ಷನ್‌ಗೂ ಮುಂಚೆ ಸಾಕಷ್ಟು ಚರ್ಚೆಯಲ್ಲಿದ್ದ ವಿಚಾರವಿದೀಗ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಒಂದು ವೇಳೆ ನೀವು ನಿಗಧಿತ ಗಡುವು ದಿನಾಂಕದಂದು ಆಧಾರ್‌ ಪ್ಯಾನ್‌ಲಿಂಕ್‌ ಮಾಡದಿದ್ದರೆ ನಿಮ್ಮ ಪ್ಯಾನ್‌ ನಿಷ್ಕ್ರಿಯವಾಗಲಿದೆ. ಆದರಿಂದ ಇರುವ ಕೆಲವು ದಿನಗಳ ಅವಧಿಯಲ್ಲಿ ನಿಮ್ಮ ಪ್ಯಾನ್‌ ಆಧಾರ್‌ ಲಿಂಕ್‌ ಮಾಡಿಸಿ. ಹಾಗಾದ್ರೆ ಆಧಾರ್‌ ಪ್ಯಾನ್‌ ಲಿಂಕ್‌ ಕಡ್ಡಾಯಕ್ಕೆ ಕೊನೆ ದಿನಾಂಕ ಯಾವಾಗ ನೋಡಿ.

ಪ್ಯಾನ್‌ ಮತ್ತು ಆಧಾರ್‌ ಅನ್ನು ಲಿಂಕ್‌ ಮಾಡುವುದಕ್ಕೆ ಕೊನೆಯ ದಿನಾಂಕ ಜೂನ್‌ 30, 2023 ರವರೆಗೆ ವಿಸ್ತರಿಸಲಾಗಿದೆ. ಈ ಗಡುವಿನ ಅವಧಿಯಲ್ಲಿ ನೀವು ಪ್ಯಾನ್‌ ಆಧಾರ್‌ ಲಿಂಕ್‌ ಮಾಡದೇ ಹೋದರೆ ನಿಮ್ಮ ಪ್ಯಾನ್‌ ನಿಷ್ಕ್ರೀಯವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈಗಾಗಲೇ ನೀಡಿದ್ದ ಹಲವು ಗಡುವು ದಿನಾಂಕಗಳನ್ನು ತೆರಿಗೆದಾರರ ಅನುಕೂಲಕ್ಕಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (CBDT) ವಿಸ್ತರಣೆ ಮಾಡುತ್ತಾ ಬಂದಿತ್ತು. ಆದರೆ ಇದೀಗ ಮತ್ತೊಮ್ಮೆ ಗಡುವು ದಿನಾಂಕ ವಿಸ್ತರಣೆ ಮಾಡುವುದು ಡೌಟ್‌ ಎನ್ನಲಾಗಿದೆ.

ಪ್ಯಾನ್-ಆಧಾರ್ ಲಿಂಕ್ ಮಾಡುವುದಕ್ಕೆ ದಂಡ ಪಾವತಿಸಲೇಬೇಕು?

ಜೂನ್ 30, 2023ರ ತನಕ ನಿಮ್ಮ ಪ್ಯಾನ್ ಅನ್ನು ನಿಮ್ಮ ಆಧಾರ್‌ಗೆ ಲಿಂಕ್ ಮಾಡಿಸಲು ಅವಕಾಶವಿದೆ. ಹಾಗಂತ ದಂಡಪಾವತಿಸಿದ ಲಿಂಕ್‌ ಮಾಡಿಸುವುದಕ್ಕೆ ಅವಕಾಶ ನೀಡಿಲ್ಲ. ಏಕೆಂದರೆ ಈಗಾಗಲೇ ನಿಮಗೆ ಆಧಾರ್‌ ಪ್ಯಾನ್‌ ಲಿಂಕ್‌ ಮಾಡಿಸಲು ಉಚಿತವಾಗಿ ಅವಕಾಶ ನೀಡಲಾಗಿತ್ತು. ಆದರೆ ಈ ನಿರ್ದಿಷ್ಟ ಸಮಯದಲ್ಲಿ ನೀವು ಲಿಂಕ್‌ ಮಾಡಿಸದ ಕಾರಣಕ್ಕೆ 1,000ರೂ.ದಂಡವನ್ನು ಪಾವತಿಸುವುದು ಕಡ್ಡಾಯವಾಗಿದೆ.

ಲಿಂಕ್ ಮಾಡದಿದ್ದರೆ ಏನಾಗಲಿದೆ?

ಒಂದು ವೇಳೆ ನಿಮ್ಮ ಆಧಾರ್‌ ಜೊತೆಗೆ ಪ್ಯಾನ್‌ ಅನ್ನು ಲಿಂಕ್‌ ಮಾಡಿಸದೆ ಹೋದರೆ ನಿಮ್ಮ ಪ್ಯಾನ್‌ ನಿಷ್ಕ್ರೀಯವಾಗಲಿದೆ. ಅಂದರೆ ಜುಲೈ 1, 2023 ರಿಂದ ಆಧಾರ್‌ ಲಿಂಕ್‌ ಆಗದ ಪ್ಯಾನ್‌ ಕಾರ್ಡ್‌ಗಳ ಯಾವುದೇ ಕೆಲಸಕ್ಕೂ ಉಪಯೋಗಕ್ಕೆ ಬರುವುದಿಲ್ಲ ಎನ್ನಲಾಗಿದೆ.

ಆಧಾರ್‌ ಪ್ಯಾನ್‌ ಅನ್ನು ಯಾರೆಲ್ಲಾ ಲಿಂಕ್‌ ಮಾಡಬಹುದು?

ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 139AA ಪ್ರಕಾರ, ಜುಲೈ 1, 2017 ರಂತೆ PAN ಕಾರ್ಡ್‌ ಪಡೆದುಕೊಂಡಿರುವ ಮತ್ತು ಆಧಾರ್ ಸಂಖ್ಯೆಗೆ ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ನಿರ್ದಿಷ್ಟಪಡಿಸಿದ ರೀತಿಯಲ್ಲಿ ಲಿಂಕ್‌ ಮಾಡಿಸಬೇಕು.

ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ?

ಇನ್ನು ನೀವು ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಅನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಪ್ಯಾನ್ ‘ನಿಷ್ಕ್ರಿಯ’ ಆಗುತ್ತದೆ. ಪ್ಯಾನ್ ನಿಷ್ಕ್ರಿಯಗೊಂಡ ನಂತರ, ಒಬ್ಬರು ಹಲವಾರು ವಹಿವಾಟುಗಳಿಗೆ ಒಳಗಾಗಲು ಸಾಧ್ಯವಾಗುವುದಿಲ್ಲ, ಅಲ್ಲಿ ಪ್ಯಾನ್ ಅನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕಾಗುತ್ತದೆ. ಆದರಿಂದ ನೀವು ಕೂಡ ಪ್ಯಾನ್‌ ಅನ್ನು ಆಧಾರ್‌ ಜೊತೆಗೆ ಲಿಂಕ್‌ ಮಾಡಿಸುವುದು ಉತ್ತಮ. ಇನ್ನು ಪ್ಯಾನ್‌ ಅನ್ನು ಆಧಾರ್‌ ಜೊತೆ ಲಿಂಕ್‌ ಮಾಡುವುದಕ್ಕೆ ಎರಡು ಮಾರ್ಗಗಳಿವೆ. ಮೊದಲನೆಯದಾಗಿ ಎಸ್‌ಎಂಎಸ್ ಸೇವೆಯ ಮೂಲಕ, ಹಾಗೂ ಎರಡನೇಯದಾಗಿ ಆನ್‌ಲೈನ್‌ನಲ್ಲಿ ಆದಾಯ ತೆರಿಗೆ ತಾಣಕ್ಕೆ ಹೋಗಿ ಅಲ್ಲಿನ ಕ್ರಮಗಳನ್ನು ಅನುಸರಿಸುವ ಮೂಲಕ ಮಾಡಬಹುದಾಗಿದೆ.

Spread positive news

Leave a Reply

Your email address will not be published. Required fields are marked *