ಗೃಹ ಲಕ್ಷ್ಮಿ ಯೋಜನೆಯ 2000 ರೂಪಾಯಿ ಬರುವುದು ಡೌಟು ಚೆಕ್ ಮಾಡಿ!

ಗೃಹಲಕ್ಷ್ಮಿ ಯೋಜನೆ ಯಾವಾಗ ಪ್ರಾರಂಭ? ಸರ್ಕಾರದ ನಡೆ ಏನು?

ಪ್ರೀಯ ರೈತರೇ ರಾಜ್ಯದ ಪ್ರತಿ ಮಹಿಳೆಗೆ 2000 ಪ್ರತಿ ತಿಂಗಳಿಗೆ ನೀಡಲು ಸರ್ಕಾರವು ಗೃಹಲಕ್ಷ್ಮಿ ಯೋಜನೆ ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಇರುವ ಮನೆಯೊಡತಿ ಮಹಿಳೆಯರಿಗೆ ಉಚಿತ 2000 ರೂ ನೀಡಲು ಸರ್ಕಾರ ನಿರ್ಧರಿಸಿದೆ. ಇದೊಂದು ರಾಜ್ಯದ ಮಹಿಳೆಯರ ಹಿತದೃಷ್ಟಿಯಿಂದ ಹಾಗೂ ಮನೆ ನಡೆಸಲು ಆರ್ಥಿಕ ಉತ್ತೇಜನ ನೀಡಲು ಅಗತ್ಯ ವಸ್ತುಗಳ ಖರೀದಿಗೆ ಸಹಾಯವಾಗುತ್ತದೆ ಎಂಬ ದೃಷ್ಟಿಯಿಂದ ಈ ಯೋಜನೆ ಪ್ರಾರಂಭಿಸಲಾಗಿದೆ.

ಏನಿದು ಗೃಹ ಲಕ್ಷ್ಮಿ ಯೋಜನೆ? ಇದರ ಲಾಭವೇನು?
ಹೌದು ಇದೊಂದು ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಇದನ್ನು ಹೊಸದಾಗಿ ರಚಿಸಿದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಇದರಲ್ಲಿ ಈ ಯೋಜನೆಯ ಲಾಭವನ್ನು ರಾಜ್ಯದ ಎಲ್ಲಾ ಮನೆಯೊಡತಿ ಮಹಿಳೆಯರಿಗೆ ಉಚಿತ 200೦ ರೂಪಾಯಿ ನೀಡಲು ಸರ್ಕಾರವು ಮುಂದಾಗಿದೆ. ಹಾಗೂ ಮಹಿಳೆಯರಿಗೆ ಮನೆ ನಡೆಸಲು ಆರ್ಥಿಕ ಉತ್ತೇಜನ ನೀಡಲು ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು 2000 ರೂಪಾಯಿ ನೇರವಾಗಿ ಮಹಿಳೆಯರ ಅಕೌಂಟಿಗೆ ಜಮಾ ಆಗುವಂತೆ ಮಾಡಲು ಸರ್ಕಾರವು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

ಈಗಾಗಲೇ 5 ಗ್ಯಾರೆಂಟಿ ಯೋಜನೆಗಳನ್ನು ಹೇಳಿದ್ದು ಅದರಲ್ಲಿ ಈಗ ಎಲ್ಲ ಸೌಲಭ್ಯಗಳನ್ನು ಪಡೆಯಲು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಅಂದಾಗ ಮಾತ್ರ ಈ 5 ಗ್ಯಾರಂಟಿ ಲಭ್ಯವಾಗುತ್ತದೆ.
5 ಗ್ಯಾರಂಟಿ ಯೋಜನೆಗಳು ಯಾವುವು?
• ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.
• ಅನ್ನಭಾಗ್ಯ ಯೋಜನೆ 10 ಕೆಜಿ.
• ಯುವನಿಧಿ 3000ರೂಪಾಯಿ.
• 200 ಯೂನಿಟ್ ವಿದ್ಯುತ್.
• ಮಹಿಳೆಯರಿಗೆ ಉಚಿತ 2000 ರೂಪಾಯಿ ಮಾಸಿಕ.

ಅದೇ ರೀತಿ ಈಗಾಗಲೇ 3ಯೋಜನೆಗಳು ಪ್ರಾರಂಭವಾಗಿದೆ. ಅದೇ ರೀತಿ ಈಗ ಗೃಹ ಲಕ್ಷ್ಮಿ ಯೋಜನೆಯ ಆರಂಭಿಸಲು ಸರ್ಕಾರ ಮುಂದಾಗಿದ್ದು, ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಯೋಜನೆಯ ನೊಂದಣಿ ಪ್ರಕ್ರಿಯೆಯನ್ನು ಮುಂದೆ ಹಾಕಿದೆ. ಯೋಜನೆಯ ನೊಂದಣಿ ಮಾಡಲು ಸರ್ಕಾರವು ಹೊಸ ತಂತ್ರಾಂಶ ಆ್ಯಪ್ ರೂಪಿಸಲು ಮುಂದಾಗಿದೆ. ಇನ್ನೂ 4 -5 ದಿನಗಳ ವರೆಗೆ ನೊಂದಣಿ ಪ್ರಕ್ರಿಯೆ ಆರಂಭ ಆಗುವುದಿಲ್ಲ. ಹಾಗಾಗಿ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಯೋಜನೆಯ ನೊಂದಣಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Spread positive news

Leave a Reply

Your email address will not be published. Required fields are marked *